ನಮ್ಮ ಹಿಂದೂ ಧರ್ಮದಲ್ಲಿ ಸತ್ತವರನ್ನು ಸಂಸ್ಕಾರ ಮಾಡುವುದು ಹೇಗೆ? ದಹನ ಕ್ರಿಯೆ ಯನ್ನು ಯಾಕೆ ಮಾಡಬೇಕು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಅಂತಹ ವಿಚಾರ ಇಲ್ಲಿದೆ!!!

436

ಅವರವರ ಜಾತಿಯಲ್ಲಿ ಅವರದೇ ಆದಂತಹ ಒಂದೊಂದು ವಿಶೇಷವಾದಂತಹ ಸಂಸ್ಕಾರಗಳು ಇದ್ದೇ ಇರುತ್ತವೆ ಅವರವರ ಜಾತಿಯ ತಕ್ಕ ಹಾಗೆ ಅವರ ನಡತೆ ಕೂಡ ಇರುತ್ತದೆ.

ಹಲವಾರು ಜಾತಿ ಯಲ್ಲಿ ಒಬ್ಬ ಮನುಷ್ಯನ ಸತ್ತ ನಂತರ ಅವರನ್ನು  ನೆಲದಲ್ಲಿ ಹೂಳುವುದು ಹಾಗೂ ಕೆಲವರನ್ನು ದಹನ ಮಾಡುವಂತಹ ಕ್ರಿಯೆಯನ್ನು ನೀವು ನೋಡಬಹುದಾಗಿದೆ. ಆದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಬ್ಬ ವ್ಯಕ್ತಿಯ ಸತ್ತ ನಂತರ ಅವರನ್ನು ವಿಶೇಷವಾಗಿ ಮಾಡುವಂತಹ ಪ್ರಕ್ರಿಯೆ ನಮ್ಮ ಹಿಂದೂ ಧರ್ಮದಲ್ಲಿ ಇದೆ.

ಹಾಗಾದರೆ ನಮ್ಮ ಹಿಂದೂ ಧರ್ಮದಲ್ಲಿ ಯಾಕೆ ಮನುಷ್ಯನ ಸತ್ತ ನಂತರ ಅವನನ್ನು ದಹನ ಕ್ರಿಯೆ ಎನ್ನುವ ಒಂದು ಸಂಪ್ರದಾಯವನ್ನು ನಾವು ಅಳವಡಿಸಿಕೊಂಡಿದ್ದೇವೆ ಎನ್ನುವುದು ನಾವು ತಿಳಿದುಕೊಳ್ಳಲೇಬೇಕಾದ ಅಂತಹ ಒಂದು ವಿಚಾರವಾಗಿದೆ. ಹಾಗಾದರೆ ಬನ್ನಿ ಇವತ್ತು ಇದರ ಬಗ್ಗೆ ಸಂಪೂರ್ಣವಾದ ವಿಚಾರವನ್ನು ನಾವು ಮಾಡೋಣ.

ಇದಕ್ಕೆ ನಾವು ಸಿಂಪಲ್ಲಾಗಿ ಒಂದು ಉತ್ತರವನ್ನು ನೀಡಬಹುದು ಅದು ಏನಪ್ಪಾ ಅಂದರೆ ಮನುಷ್ಯನು ಬದುಕಿರುವ ಸಂದರ್ಭದಲ್ಲಿ ಹಲವಾರು ಪಾಪ ಕರ್ಮಗಳನ್ನು ಮಾಡುತ್ತಾನೆ ಅವನು ಗೊತ್ತಿಲ್ಲ ಅಥವಾ ಗೊತ್ತಿದ್ದೂ ಹಲವಾರು ಜನರಿಗೆ ಮೋಸ ಹಾಗೂ ವಂಚನೆಗಳನ್ನು ಮಾಡಿರುತ್ತಾನೆ.

ಆದ್ದರಿಂದ ಮುಂದಿನ ಜನ್ಮ ಆದರೂ ಅವನಿಗೆ ಒಳ್ಳೆಯ ಹುಟ್ಟು ದೊರಕಲಿ ಎನ್ನುವ ಕಾರಣದಿಂದಾಗಿ ಅವನನ್ನು ದಹನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅವನು ಪರಿಶುದ್ಧವಾಗಿ ಇನ್ನೊಂದು ಜನ್ಮದಲ್ಲಿ ಹುಟ್ಟುತ್ತಾನೆ ಎನ್ನುವುದೂ ನಮ್ಮ ಸಂಪ್ರದಾಯದ ಒಂದು ನಂಬಿಕೆಯಾಗಿದೆ.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಸತ್ತ ಮನುಷ್ಯನ ಆತ್ಮ ಅವನ ಹತ್ತಿರ ಇರುತ್ತದೆ ಅವರನ್ನು ದಹನ ಮಾಡಿದರು ಕೂಡ ಆತ್ಮವು ಅಲ್ಲೇ ಇರುತ್ತದೆ. ಹೀಗೆ ದಹನ ಮಾಡಿದ ನಂತರ ಆತ್ಮವು ಅವರ ದೇಹದಿಂದ  ಹೊರಗೆ ಬಂದು ದೇವರ ಸನ್ನಿಧಿಯನ್ನು ಸೇರಿಕೊಳ್ಳುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಸತ್ತವರನ್ನು ಯಾವುದಾದರೂ ನದಿ ಅಥವಾ ಕೆರೆಯ ಪಕ್ಕದಲ್ಲೇ ಸುಡುತ್ತಾರೆ ಯಾಕೆಂದರೆ ದೇಹದಿಂದ ಬೇರ್ಪಟ್ಟು ಅಂತಹ ಆತ್ಮ ನೀರಿನಲ್ಲಿಯೇ ಪರಿಶುದ್ಧವಾಗಿ ಹೊರಗಡೆ ಹೋಗುತ್ತದೆ ಎನ್ನುವುದು ಒಂದು ನಂಬಿಕೆಯಾಗಿದೆ.

ಆದ್ದರಿಂದಲೇ ಸತ್ ಅಂತಹ ವ್ಯಕ್ತಿಯ ಬೂದಿಯನ್ನು ನದಿಯಲ್ಲಿ ಬಿಡಲಾಗುತ್ತದೆ ಹೀಗೆ ಬಿಟ್ಟರೆ ಅವನ ಆತ್ಮ ಪರಿಶುದ್ಧವಾಗುತ್ತದೆ ಹಾಗೂ ಅವರು ಪಂಚಭೂತಗಳಲ್ಲಿ ಲೀನವಾಗುತ್ತಾನೆ ಇರುವುದು ನಮ್ಮ ಹಿಂದೂ ಸಂಪ್ರದಾಯದ ಒಂದು ನಂಬಿಕೆಯಾಗಿದೆ. ಅದಲ್ಲದೆ ಯಾವುದಾದರೂ ವ್ಯಕ್ತಿ ಸತ್ತ ನಂತರ ಮೂರು ದಿನಗಳ ನಂತರ ಪಿಂಡ ಪ್ರದಾನ ಅವು ಕೂಡ ಮಾಡಲಾಗುತ್ತದೆ, ಇದರಿಂದ ಅವರ ಆತ್ಮಕ್ಕೆ ಹೆಮ್ ಮುಕ್ತಿ ನೀಡುವಂತಹ ಪ್ರಕ್ರಿಯೆಗಳನ್ನು ಈ ಸಂದರ್ಭದಲ್ಲಿ ಮಾಡಲಾಗುತ್ತದೆ.

ಕೊನೆಯದಾಗಿ ನಾವು ಹೇಳಬೇಕಾದರೆ  ಎಲ್ಲ ಪ್ರಕ್ರಿಯೆಗಳಿಗೆ ನಾವು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಎಂದು ನಾವು ಕರೆಯುತ್ತೇವೆ.  ಈ ಲೇಖನವು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಿಮ್ಮ ಬಂಧು ಬಾಂಧವರ ಜೊತೆಗೆ ಶೇರ್ ಮಾಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here