Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ದೇಹದಲ್ಲಿ ಆಗುವ ಹೆಚ್ಚು ಉಷ್ಣತೆಯನ್ನು ಕಡಿಮೆ ಮಾಡಲು ಇದನ್ನು ಹೀಗೆ ಮಾಡಿ ಕುಡಿಯಿರಿ ದೇಹದ ಉಷ್ಣಾಂಶ ಸಮತೋಲನದಲಿರುತ್ತದೆ !!!!

ಬೇಸಿಗೆ ಬಿಸಿಲಿನಿಂದ ಮನುಷ್ಯನ ಶರೀರದ ಉಷ್ಣಾಂಶ ಜಾಸ್ತಿಯಾಗುತ್ತದೆ.ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ನಾವು ಎಷ್ಟೇ ಫ್ಯಾನ್ ಗಾಳಿ ಅಥವಾ ಕೂಲರ್ ಗಾಳಿಯನ್ನು ಬಳಸಿದರೂ ಸಹ ನಮ್ಮ ಶರೀರದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಈ ಶರೀರದ ಉಷ್ಣಾಂಶದಿಂದ ಹಲವಾರು ತೊಂದರೆಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ನಾವು ಎಷ್ಟೊಂದು ನೀರು ಕುಡಿದರೂ ಸಹ ನಮ್ಮ ಶರೀರದಲ್ಲಿ ಉಷ್ಣಾಂಶವು ಜಾಸ್ತಿಯಾಗುತ್ತದೆ.

ಶರೀರದ ಉಷ್ಣಾಂಶವು ಹೆಚ್ಚಾಗಲು ಹಲವಾರು ಕಾರಣಗಳಿವೆ ಅವು ಯಾವುವೆಂದರೆ ನಾವು ದಿನನಿತ್ಯ ಬಳಸುವ ಪದಾರ್ಥಗಳು ಅಂದರೆ ತುಂಬಾ ಖಾರವಿರುವ ಆಹಾರವನ್ನು ತೆಗೆದುಕೊಳ್ಳುವುದು, ಮಸಾಲೆಯುಕ್ತ ಪದಾರ್ಥಗಳನ್ನು ನಾವು ಹೆಚ್ಚಾಗಿ ಸೇವಿಸುವುದು,ಇವೆಲ್ಲವುಗಳ ಕಾರಣದಿಂದಾಗಿ ನಮ್ಮ ಶರೀರದ ಉಷ್ಣಾಂಶ ಹೆಚ್ಚಾಗುತ್ತದೆ.

ನಮ್ಮ ದೈನಂದಿನ ಜೀವನದಲ್ಲಿ ನಾವು ಹೆಚ್ಚಾಗಿ ನೀರನ್ನು ಕುಡಿಯದೆ ಇರುವುದರಿಂದ ನಮ್ಮ ಶರೀರದ ಉಷ್ಣಾಂಶವು ಜಾಸ್ತಿಯಾಗುತ್ತದೆ. ಮಳೆಗಾಲದಲ್ಲೂ ಕೂಡ ಹಾಗೂ ಚಳಿಗಾಲದಲ್ಲಿಯೂ ನಾವು ವಾತಾವರಣ ತಂಪಾಗಿದೆ ಎಂದು ನೀರನ್ನು ಕುಡಿಯುವುದು ಕಮ್ಮಿ ಮಾಡುತ್ತೇವೆ,

ಆದರೆ ಶರೀರದ ಉಷ್ಣಾಂಶ ವಾತಾವರಣಕ್ಕೆ ಅನುಗುಣವಾಗಿ ಬದಲಾಗುವುದಿಲ್ಲ ಹಾಗಾಗಿ ನಾವು ಏನು ಮಾಡಬೇಕೆಂದರೆ ಯಾವಾಗಲೂ ಅಂದರೆ ದಿನನಿತ್ಯ ನಾವು ನೀರನ್ನು ಕುಡಿಯುತ್ತಿರಬೇಕು.ಸರಿಯಾದ ಪ್ರಮಾಣದಲ್ಲಿ ನಾವು ನೀರನ್ನು ಕುಡಿಯದೇ ಇದ್ದರೆ ನಮ್ಮ ದೇಹದ ಉಷ್ಣಾಂಶ ಜಾಸ್ತಿಯಾಗಿ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ.

ನಾವು ಒಂದೇ ಸ್ಥಳದಲ್ಲಿ ಕೂತು ಕೆಲಸ ಮಾಡುವುದರಿಂದ ನಮ್ಮ ಶರೀರದ ಉಷ್ಣಾಂಶವು ಜಾಸ್ತಿಯಾಗುತ್ತದೆ. ಇನ್ನು ಹಲವಾರು ಕಾರಣಗಳಿಂದ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ.ಉಷ್ಣಾಂಶ ಜಾಸ್ತಿಯಾಗುವುದರಿಂದ ನಮ್ಮ ದೇಹದಲ್ಲಿ ಅನೇಕ ತೊಂದರೆಗಳು ಉಂಟಾಗುತ್ತವೆ.

ಅಂದರೆ ಬಾಯಿಯಲ್ಲಿ ಹುಣ್ಣು ಆಗುವುದು ದೇಹದ ಉಷ್ಣಾಂಶ ಅಧಿಕವಾಗಿದ್ದರೆ ಉರಿಮೂತ್ರ ಸಹ ನಮ್ಮ ಶರೀರದಲ್ಲಿ ಉಂಟಾಗುತ್ತದೆ ಇದರ ಜೊತೆಗೆ ಹೊಟ್ಟೆ ನೋವು ಕೂಡ ಬರಬಹುದು ಕಣ್ಣಿನ ಸುತ್ತ ಕಪ್ಪಾಗುವುದು ಕಣ್ಣಿನಲ್ಲಿ ಕಡಿಮೆಯಾಗುವುದು ಹಾಗೂ ಕಣ್ಣಿನಲ್ಲಿ ಉರಿ ಬರುವುದು ಉಂಟಾಗುತ್ತದೆ.

ಅದರ ಜೊತೆಗೆ ಕೂದಲು ಉದುರುವುದು ಕೂಡ ಜಾಸ್ತಿಯಾಗುವುದು. ಇದರ ಜೊತೆಗೆ ಚರ್ಮ ಒಣಗುತ್ತದೆ. ಮೊಡವೆ ಗಳು ಉಂಟಾಗುತ್ತದೆ. ಇವೆಲ್ಲ ತೊಂದರೆಗಳು ನಮ್ಮ ಶರೀರದ ಉಷ್ಣಾಂಶವು ಹೆಚ್ಚಾಗುವುದರಿಂದ ಉಂಟಾಗುತ್ತವೆ.

ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಲು ನಾವು ಮನೆಯಲ್ಲಿ ತಯಾರಿಸಿದ ಮನೆಮದ್ದನ್ನು ಉಪಯೋಗಿಸಿಕೊಂಡು ನಮ್ಮ ಶರೀರದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು. ಮೂರು ರೀತಿಯ ಪಾನೀಯಗಳನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ಒಂದು ಪರಿಶುದ್ಧವಾದ ಒಂದು ಲೋಟ ನೀರನ್ನು ತೆಗೆದುಕೊಂಡು ನೀರಿಗೆ ಒಂದು ಸ್ಪೂನ್ ನಷ್ಟು ಜೀರಿಗೆಯನ್ನು ಹಾಕಬೇಕು ಇದಕ್ಕೆ 2 ಚಮಚದಷ್ಟು ಕೆಂಪು ಕಲ್ಲು ಸಕ್ಕರೆಯನ್ನು ಹಾಕಬೇಕು. ಕೆಂಪು ಕಲ್ಲುಸಕ್ಕರೆಯ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ನಂತರ ಮಿಶ್ರಣವನ್ನು ಚೆನ್ನಾಗಿ ಕಲಕಬೇಕು.

ನೀವು ಈ ಪಾನಿಯನ್ನು ಕುಡಿಯಬೇಕು ಎಂದರೆ ಇದನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಕುಡಿಯಬೇಕು. ಈ ರೀತಿ ಜೀರಿಗೆ ಮಿಶ್ರಣ ಮಾಡಿಕೊಂಡು ಕುಡಿಯುವಂತಹ ಪಾನೀಯ ಉರಿಮೂತ್ರಕ್ಕೆ ತುಂಬಾನೆ ಒಳ್ಳೆಯದು.

ಈ ರೀತಿಯಾಗಿ ಉರಿಮುತ್ರ ಇರುವವರು ಇದನ್ನು ಎರಡು ಬಾರಿ ಕುಡಿಯಬೇಕು ಅಂದರೆ ಬೆಳಗ್ಗೆ ಒಂದು ಬಾರಿ ಮತ್ತು ಸಂಜೆ ಒಂದು ಬಾರಿ ಕುಡಿಯಬೇಕು. ಮಧುಮೇಹ ಇರುವವರು ಜೀರಿಗೆಯನ್ನು ಮಾತ್ರ ನೆನೆಸಿ ಕುಡಿಯಬೇಕು.

ಎರಡನೇ ಮನೆಮದ್ದು ಏನಂದರೆ ಒಂದು ಲೋಟ ಪರಿಶುದ್ಧವಾದ ನೀರಿಗೆ ಒಂದು ಚಮಚದಷ್ಟು ಕಾಮಕಸ್ತೂರಿ ಬೀಜ ವನ್ನು ನೀರಿಗೆ ಹಾಕಬೇಕು.ಇದನ್ನು ನೀವು ರಾತ್ರಿ ಮಲಗುವ ಸಮಯದಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಕುಡಿಯಬೇಕು.

ಇದು ನಮ್ಮ ದೇಹದ ಉಷ್ಣಾಂಶವನ್ನು ಬೇಗನೆ ಕಡಿಮೆ ಮಾಡುತ್ತದೆ.ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವುದಲ್ಲದೆ ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ ಹಾಗೂ ನಮ್ಮ ದೇಹ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ಈ ನಮ್ಮ ಉಪಯುಕ್ತ ಆರೋಗ್ಯ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *