ದೇವಿರಮ್ಮನ ಬಗ್ಗೆ ನಾನು ಒಂದು ಚಿಕ್ಕದಾದ ವಿವರವನ್ನು ನಿಮಗೆ ಕೊಡಲಿದ್ದೇನೆ, ಈ ದೇವಿರಮ್ಮ ನೆಲೆಸಿರುವ ಅಂತಹ ಜಾಗ ಯಾವಾಗಲೂ ಚಳಿಗಾಲದಿಂದ ಕೂಡಿರುತ್ತದೆ, ಹಾಗೆಯೇ ಚಿಕ್ಕದಾಗಿ ಮಳೆಯ ಹನಿಗಳು ಬೀಳುತ್ತಲೇ ಇರುತ್ತವೆ. ಈ ಬೆಟ್ಟ ಹತ್ತಬೇಕಾದರೆ ನಿಮಗೆ ನಿಜವಾಗಲೂ ಧೈರ್ಯ ಇರಬೇಕು, ಆದರೆ ಈ ದೇವಿಗಾಗಿ ಹಾಗೂ ಈ ದೇವಿಯ ಸ್ಮರಣೆ ಮಾಡುವುದಕ್ಕಾಗಿ ಹಲವಾರು ಜನರು ಬೆಟ್ಟಗುಡ್ಡಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ದೇಹವನ್ನು ಸರಿಯಾಗಿ ದಂಡಿಸಿ ಭಕ್ತಿಯಿಂದ ಬೆಟ್ಟಗುಡ್ಡಗಳನ್ನು ಮೈ ಕೊರೆಯುವ ಚಳಿಯಲ್ಲಿ ಬರಿಗಾಲಿನಲ್ಲಿ ಬೆಟ್ಟ ಹತ್ತುತ್ತಾರೆ. ಇದಕ್ಕೆ ಕಾರಣ ಏನಪ್ಪಾ ಅಂದರೆ ವರ್ಷಕ್ಕೆ ಒಂದೇ ಸಾರಿ ಈ ದೇವಿಯ ದರ್ಶನವನ್ನು ಕೊಡುವುದರಿಂದ , ದೇವಿಯನ್ನು ನೋಡಲು ಹಲವಾರು ಜನರು ಇಲ್ಲಿಗೆ ಸಾಲುಸಾಲಾಗಿ ಬರುತ್ತಾರೆ. ಈ ದೇವಿರಮ್ಮ ದೇವಿ ಇಲ್ಲಿ ನೆಲೆಸಿದ್ದಾಳೆ ಯಾವ ಜಿಲ್ಲೆಯಲ್ಲಿ ನೆಲಸಿದ್ದಾರೆ ಹಾಗೂ ಅವಳು ಮಾಡುವಂತಹ ಪವಾಡ ವಾದರೆ ಏನು, ಅಲ್ಲಿ ಯಾವ ತರದ ಪರಿಹಾರ ನಿಮಗೆ ಸಿಗುತ್ತದೆ ಎಂದು ತಿಳಿಯಲು ಮುಂದೆ ಓದಿ.
ಈ ಪ್ರದೇಶ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ನಮ್ಮ ರಾಜ್ಯದಲ್ಲಿ ಅತಿ ಎತ್ತರದ ಶಿಖರ ಶ್ರೇಣಿ ಎಂದು ಹೆಸರಾಗಿರುವ ಅಂತಹ ಮುಳ್ಳಯ್ಯನಗಿರಿ ಪಕ್ಕದಲ್ಲಿ ಇರುವಂತಹ ದೇವಿರಮ್ಮ ಬೆಟ್ಟ. ಇದು ಇರುವುದು ಚಿಕ್ಕಮಂಗಳೂರು ಜಿಲ್ಲೆ ಯಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿ ಮಲ್ಲೇನಹಳ್ಳಿ ಗ್ರಾಮದಿಂದ ಸುಮಾರು ಮೂರು ಸಾವಿರ ಅಡಿಗಳಷ್ಟು ಎತ್ತರದಲ್ಲಿ ಇರುವಂತಹ ಪ್ರದೇಶದಲ್ಲಿ ದೇವಿರಮ್ಮನ ಬೆಟ್ಟ ಇದೆ. ಈ ಬೆಟ್ಟವನ್ನು ಹತ್ತಬೇಕಾದರೆ ನಿಮಗೆ ನಿಜವಾಗಲು ಧೈರ್ಯ ಇರಲೇಬೇಕು ಯಾಕಂದರೆ ಏನು ಚಿಕ್ಕಮಗಳೂರು ಜಿಲ್ಲೆ ನಿಮಗೆ ಗೊತ್ತಿರಲೇಬೇಕು ಇಲ್ಲಿ ಯಾವಾಗಲೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ ಇಲ್ಲಿ ಅರಣ್ಯ ತುಂಬಾ ಜಾಸ್ತಿ ಹಾಗೆ ಇಲ್ಲಿ ಯಾವಾಗಲೂ ಮೈಮರೆಯುವಂತಹ ಚಳಿಯ ಹಾಗೂ ಚಿಕ್ಕದಾದ ಮಳೆ ಬರುತ್ತಲೇ ಇರುತ್ತದೆ.
ಭಕ್ತರ ಇಷ್ಟಾರ್ಥವನ್ನು ನಿವಾರಣೆ ಮಾಡುವಂತಹ ಈ ದೇವಿರಮ್ಮ ದೇವಿ ನೋಡುವುದಕ್ಕಾಗಿ ಹಲವಾರು ಜನರು ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿ ವರ್ಷಕ್ಕೆ ಒಮ್ಮೆ ಈ ದೇವಿಯ ದರ್ಶನ ನೀಡುವುದರಿಂದ ಅದರಲ್ಲೂ ನರಕ ಚತುರ್ದಶಿ ಟೈಮಿನಲ್ಲಿ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಸಾವಿರಾರು ಜನರು ಈ ಪ್ರದೇಶಕ್ಕೆ ಬಂದು ದೇವಿಯ ದರ್ಶನವನ್ನು ಮಾಡಿ ಕೊಂಡು ಹೋಗುತ್ತಾರೆ.
ಈ ದೇವಿಯ ವಿಶೇಷತೆ ಏನು ಅಂತ ಗೊತ್ತಾ ?
ಈ ದೇವಿಯ ವಿಶೇಷತೆ ಏನ್ ಅಂತ ಕೇಳಿದರೆ ನಿಜವಾಗಲೂ ನಿಮಗೆ ಆಶ್ಚರ್ಯವೇ ಆಗಬಹುದು, ಹಬ್ಬದ ಮಾರನೇ ದಿನ ಬಂದು ಈ ದೇವಿಯ ದೇವಸ್ಥಾನದ ಬಾಗಿಲು ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ ಯಂತೆ. ಆದ್ದರಿಂದ ಈ ತರದ ಪವಾಡಗಳು ಸೃಷ್ಟಿ ಮಾಡುತ್ತಿರುವಂತಹ ಈ ದೇವರ್ ಅಮ್ಮನ ದರ್ಶನಕ್ಕಾಗಿ ಸಾವಿರಾರು ಜನರು ತಮ್ಮ ದೇಹವನ್ನು ದಂಡಿಸಿ ಕೊಂಡು ಮೈ ಕೊರೆಯುವ ಚಳಿಯಲ್ಲಿ ಈ ದೇವಸ್ಥಾನಕ್ಕೆ ಬಂದು ಅಮ್ಮನ ದರ್ಶನ ಮಾಡಿಕೊಂಡು ಹೋಗುತ್ತಾರೆ.
ಇಲ್ಲಿಗೆ ಬರುವಂತಹ ಜನರು ಬೆಟ್ಟವನ್ನು ಏರುವ ಮೊದಲು ಉಪವಾಸ ಮಾಡುತ್ತಾರೆ ಹೀಗೆ ಉಪವಾಸ ಮಾಡಿದಂತಹ ಭಕ್ತರು ಒಂದು ಸಾರಿ ಅಮ್ಮನ ದರ್ಶನವನ್ನು ಪಡೆದು ಕೊಂಡ ನಂತರ ಮನೆಗೆ ಬಂದು ಊಟವನ್ನು ಮಾಡುತ್ತಾರೆ. ಹೀಗೆ ಮಾಡಿದರೆ ತಮಗೆ ಇರುವಂತಹ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿಂದ ಈ ತರದ ಉಪವಾಸವನ್ನು ಮಾಡುತ್ತಾರೆ.
ಗೊತ್ತಾಯ್ತಲ್ಲ ಸ್ನೇಹಿತರೆ ಈ ಕ್ಷೇತ್ರದ ಬಗ್ಗೆ, ಇನ್ನು ನೀವು ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ನಿಮಗೆ ಕಾಣಿಸುತ್ತಿರುವ ಅಂತಹ ಪೇಜ್ ಲೈಕ್ ಮಾಡಿ ನಮ್ಮನ್ನು ಹಿಂಬಾಲಿಸಿ . ಇಂತಿ ನಿಮ್ಮ ಪ್ರೀತಿಯ ರಶ್ಮಿ ಮಂಡ್ಯ ದ ಹುಡುಗಿ.