ದೇವಸ್ಥಾನದ ಒಳಗಡೆ ಹೋಗುವಾಗ ಬಾಳೆಹಣ್ಣು ಹಾಗೂ ತೆಂಗಿನಕಾಯಿಯನ್ನು ಯಾಕೆ ತೆಗೆದುಕೊಂಡು ಹೋಗುತ್ತೇವೆ ? ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂತಹ ವಿಚಾರಗಳು ಇಲ್ಲಿವೆ !!

515

ನಮ್ಮ ಹಿರಿಯರು ಯಾವ ಯಾವ ಪದ್ಧತಿ ಯನ್ನು ಮಾಡಿದ್ದಾರೆ ನೋಡಿ, ಇವರು ಮಾಡುವಂತಹ ಪದ್ಧತಿಯ ಹಿಂದೆ ಹಲವಾರು ಅರ್ಥಗಳು ಇರಬಹುದು ಹಾಗೂ ಹಲವಾರು ವೈಜ್ಞಾನಿಕ ಕಾರಣವೂ ಇರಬಹುದು. ಈವರೆಗೂ ನಾವು ನೋಡಿರುವ ಹಾಗೆ ನಮ್ಮ ಹಿರಿಯರು ಮಾಡಿರುವ ಆ ಸಂಪ್ರದಾಯದಲ್ಲಿ ವೈಜ್ಞಾನಿಕ ಕಾರಣವೂ ಕೂಡ ಅಡಗಿದೆ.

ದೇವಸ್ಥಾನ ಎನ್ನುವ ಪದ ಹಾಗೂ ಅಲ್ಲಿ ನಡೆಯುವಂತಹ ಎಲ್ಲಾ ಸಂಪ್ರದಾಯದ ಹಿನ್ನೆಲೆಯಲ್ಲಿ ಕೂಡ ಒಂದಲ್ಲ ಒಂದು ಕಾರಣಕ್ಕೆ ಮನುಷ್ಯನ ಆರೋಗ್ಯದ ಹಾಗೂ ಮನುಷ್ಯನ ಜೀವನದಲ್ಲಿ ಬದಲಾವಣೆಯ ಮಾಡುವಂತಹ ಅಂಶಗಳನ್ನು ನಮ್ಮ ಸಂಪ್ರದಾಯದಲ್ಲಿ ಹಾಕಲಾಗಿದೆ. ಇದಕ್ಕೆ ಉದಾಹರಣೆ ಎಂದರೆ ಉಪವಾಸ ಮಾಡುವುದು ವೈಜ್ಞಾನಿಕವಾಗಿ ವಾರಕ್ಕೆ ಒಂದು ಸಾರಿ ಉಪವಾಸ ಮಾಡಿದರೆ ದೇಹಕ್ಕೆ ತುಂಬಾ ಒಳ್ಳೆಯದು ಅಂತ ಹೇಳುತ್ತದೆ ವಿಜ್ಞಾನ.

ಅದೇ ತರಾನೇ ನಮ್ಮ ಪೂರ್ವಿಕರು ಹಬ್ಬಗಳನ್ನು ಮಾಡಿ ಅವತ್ತಿನ ದಿನ ಉಪವಾಸ ಮಾಡಬೇಕು ಎನ್ನುವ ಷರತ್ತನ್ನು ನಮ್ಮ ಜನರಿಗೆ ಹೇಳಿದ್ದಾರೆ, ಹೀಗೆ ನಾವು ನಮ್ಮ ಪೂರ್ವಿಕರನ್ನು ಹಾಗೂ ಅವರು ಮಾಡಿರುವಂತಹ ಸಂಪ್ರದಾಯವು ಒಂದಲ್ಲ ಒಂದು ಕಾರಣದಿಂದ ವೈಜ್ಞಾನಿಕತೆಯನ್ನು ಕೂಡ ಹೊಂದಿದೆ.

ಇವತ್ತು ನಾನು ನಿಮಗೆ ಇನ್ನೊಂದು ಇದೇ ತರ ಆದ ವಿಚಿತ್ರವಾದ ಸಂಪ್ರದಾಯದ ಬಗ್ಗೆ ಮಾತಾಡೋಕೆ ಬಂದಿದ್ದೇನೆ, ದೇವಸ್ಥಾನದ ಒಳಗಡೆ ಹೋಗುವಾಗ ಬಾಳೆಹಣ್ಣು ಹಾಗೂ ತೆಂಗಿನಕಾಯಿಯನ್ನು ಯಾಕೆ ತೆಗೆದುಕೊಂಡು ಹೋಗುತ್ತಾರೆ, ಇದರ ಮಹತ್ವವೇನು ಹಾಗೂ ವೈಜ್ಞಾನಿಕ ಕಾರಣವಾದರೂ ಇದೆಯಾ, ಈ ಸಂಪ್ರದಾಯವನ್ನು ಯಾಕೆ ತಂದಿದ್ದಾರೆ ಆದರೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇನೆ ಓದಿ ತಿಳಿದುಕೊಳ್ಳಿ.

ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ನಿಮ್ಮ ಮನೆಯಲ್ಲಿ ಸರ್ವೇಸಾಮಾನ್ಯವಾಗಿ ಹಣ್ಣು-ಕಾಯಿ ಮಾಡಿಸಿಕೊಂಡು ಬಾ ಎಂದು ಹೇಳುತ್ತಾರೆ, ಈ ರೀತಿ ಹೇಳಿದ್ದಕ್ಕೆ ಕಾರಣವೇನಾದರೂ ಏನು ಎಂದು ಯಾವಾಗಾದರೂ ಯೋಚನೆ ಮಾಡಿದ್ದೀರಾ. ಇದಕ್ಕೆ ಕಾರಣ ಇದೆ ಸ್ನೇಹಿತರೆ. ಇದಕ್ಕೆ ಸಂಪೂರ್ಣವಾದ ಕಾರಣವನ್ನು ಕೆಳಗಿನವು ಕಿರು ಟಿಪ್ಪಣಿ ಯ ಮೂಲಕ ಹೇಳಿದ್ದೇವೆ ನೋಡಿ .

ಬಾಳೆಹಣ್ಣನ್ನು ಹಾಗೂ ತೆಂಗಿನಕಾಯಿಯನ್ನು ದೇವರ ನೈವೇದ್ಯಕ್ಕೆ ಬಳಸುವುದಕ್ಕೆ ಇಲ್ಲಿದೆ ಕಾರಣ ?

ನಿಮಗೆ ಗೊತ್ತಿರಬಹುದು ಯಾವುದಾದರೂ ಹಣ್ಣುಗಳನ್ನು ತಿಂದಾಗ ಹತ್ತಿ ಪಕ್ಷಿಗಳು ಮಲವಿಸರ್ಜನೆ ಮಾಡಿದಾಗ ಬೀಜಗಳು ಎಲ್ಲಿ ಬಿದ್ದಿರುತ್ತವೆ ಅಲ್ಲಿ ಮರಗಳು ಹಾಗೂ ಗಿಡಗಳು ಬೆಳೆಯುವುದುಂಟು, ಆದರೆ ಒಂದು ಸಾರಿ ನೀವು ಬಾಳೆ ಹಣ್ಣನ್ನು ಸಿಪ್ಪೆ ಸುಲಿದು ತಿಂದಾಗ ಅಥವಾ ತೆಂಗಿನ ಕಾಯಿಯನ್ನು 2 ಮಾಡಿದಾಗ ಅವುಗಳು ಗಿಡವಾಗಿ ಮರವಾಗಿ ಇಲ್ಲ. ಹಾಗೆಯೇ ಮನುಷ್ಯನ ಜನ್ಮವು ಕೂಡ, ಯಾವುದೇ ಮನುಷ್ಯನ ಜನ್ಮ ಒಂದು ಸಾರಿ ನಮ್ಮ ದೇಹದಿಂದ ಆತ್ಮ ವಿಸಜನೆ ಆದಾಗ ಆ ಜನ್ಮದ ಮುಕ್ತಿಯನ್ನು ಬರುವುದಕ್ಕಾಗಿ ತೆಂಗಿನಕಾಯಿ ಹಾಗೂ ಬಾಳೆಹಣ್ಣಿನ ನೈವೇದ್ಯವನ್ನು ಈ ದೇವರಿಗೆ ಬಳಸಲಾಗುತ್ತದೆ.

ನಿಮಗೆ ಗೊತ್ತಾ ಬಾಳೆ ಮರದ ಹಣ್ಣನ್ನು ಬೀಜವಾಗಿ ಬಳಸಲಾಗುವುದಿಲ್ಲ ಹಾಗೂ ಹಣ್ಣಿನಿಂದ ಯಾವುದೇ ಮರ ಬೆಳೆಯುವುದಿಲ್ಲ, ಬಾಳೆ ಮರದಲ್ಲಿ ಹುಡ್ಕೊಂಡ್ ಇರುವಂತಹ ದಿಂಡಿನಿಂದ ಇನ್ನೊಂದು ಬಾಳೆ ಮರ ಆಗುತ್ತದೆ, ಈ ತರನಾಗಿ ತೆಂಗಿನಕಾಯಿ ಕೂಡ ತೆಂಗಿನಕಾಯಿಯನ್ನು ಎರಡು ಹೋಳು ಮಾಡಿ ನೆಲದಲ್ಲಿ ಹಾಕಿದ್ದಾರೆ ತೆಂಗಿನ ಮರ ಬೆಳೆಯುವುದಿಲ್ಲ. ಸಂಪೂರ್ಣವಾಗಿ ತೆಂಗಿನಕಾಯಿಯನ್ನು ನೆಲದಲ್ಲಿ ಹೂತು ಹಾಕಿದರೆ ಅದರ ಮುಖಾಂತರ ತೆಂಗಿನ ಮರ ಬೆಳೆಯುತ್ತದೆ.

ತೆಂಗಿನ ಮರದ ಎಲ್ಲಾ ಭಾಗದ ಪದಾರ್ಥಗಳು ಕೂಡ ಆ ದೇವರಿಗೆ ನೈವೇದ್ಯವಾಗಿ ನಾವು ಬಳಸುತ್ತೇವೆ ಅಂದರೆ ಬೇರೆಯವರಿಗೆ ಸಹಾಯ ಮಾಡುವಂತಹ ಪರಿ ಗುಣವನ್ನು ಹೊಂದಿರಬೇಕು ಎನ್ನುವ ಅರ್ಥ ಇದರಲ್ಲಿ ಇದೆ, ತೆಂಗಿನ ಕಾಯಿಯನ್ನು ದೇವರ ಮುಂದೆ ಹೊಡೆಯುವುದರಿಂದ ನಮ್ಮಲ್ಲಿರುವಂತಹ ಪಾಪಕರ್ಮಗಳು ನಿವಾರಣೆಯಾಗುತ್ತವೆ ಎಂದು ಪುರಾಣ ಹೇಳಿವೆ ಹಾಗೂ ಇದನ್ನು ಕಲ್ಪವೃಕ್ಷ ಎಂದು ಕೂಡ ಕರೆಯುತ್ತಾರೆ. ನಿಮಗೆ ಗೊತ್ತಾ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ಅಂತಹ ಜಿಲ್ಲೆ ಒಂದು ಇದೆ ಆ ಜಿಲ್ಲೆಯ ಹೆಸರು ತುಮಕೂರು, ಈ ತುಮಕೂರಿನಲ್ಲಿ ತೆಂಗಿನಕಾಯಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ ಆದ್ದರಿಂದ ಈ ಜಿಲ್ಲೆಯನ್ನು ಕಲ್ಪರುಕ್ಷ ತವರೂರು ಎಂದು ಕೂಡ ಕರೆಯುತ್ತಾರೆ,

ಗೊತ್ತಾದರೆ ತೆಂಗಿನಕಾಯಿಯ ಹಾಗೂ ಬಾಳೆ ಹಣ್ಣಿನ ಮಹತ್ವ ಏನು ಎಂದು, ಈ ಲೇಖನ ವೇನಾದರು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ ನಾವು ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಬಟನ್ ಅನ್ನು ಕ್ಲಿಕ್ ಮಾಡಿ ಈ ಪೇಜ್ ಅನ್ನು ಲೈಕ್ ಮಾಡಿ.ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

LEAVE A REPLY

Please enter your comment!
Please enter your name here