ಕಷ್ಟದಲ್ಲಿದ್ದಾಗ ದೇವರು ಯಾಕೆ ಒಳ್ಳೆಯವರಿಗೆ ಸಹಾಯ ಮಾಡುವುದಿಲ್ಲ ಅಂತ ನೀವು ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ಯೋಚಿಸುತ್ತೀರಾ ಅಂದುಕೊಂಡಿರುತ್ತೀರಿ ಹಾಗಾದರೆ ಯಾಕೆ ದೇವರು ಕಷ್ಟದಲ್ಲಿ ಇವರಿಗೆ ಸಹಾಯ ಮಾಡುವುದಿಲ್ಲ ಎಂಬ ವಿಚಾರವನ್ನು ನಾನು ನಿಮಗೆ ಈ ಮಾಹಿತಿಯಲ್ಲಿ ತಿಳಿಸುತ್ತೇನೆ.
ನಿಮಗೆ ಈ ಮಾಹಿತಿ ತಿಳಿದ ನಂತರ ಇದು ನಿಜ ಅನ್ನಿಸಿದರೆ ತಪ್ಪದ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ.ಹೌದು ದೇವರು ಯಾಕೆ ಒಳ್ಳೆಯವರಿಗೆ ಹೆಚ್ಚು ಕಷ್ಟ ಕೊಡುತ್ತಾನೆ .
ಕಷ್ಟ ಕೊಟ್ಟಾಗ ಯಾಕೆ ಮತ್ತೆ ಅವರಿಗೆ ಸಹಾಯ ಮಾಡುವುದಿಲ್ಲ, ನಾವು ಎಷ್ಟು ಒಳ್ಳೆಯವರಾಗಿದ್ದರೆನು ದೇವರು ಯಾಕೆ ನಮಗೆ ಸಹಾಯ ಮಾಡ್ತಾ ಇಲ್ಲ ಅಂತ ನೀವು ಗೋಳಾಡುತ್ತಿರುತ್ತೇರ ಆದರೆ ದೇವರು ನೀವು ಕಷ್ಟದಲ್ಲಿದ್ದಾಗ ಯಾಕೆ ನಿಮಗೆ ಸಹಾಯ ಮಾಡೋದಿಲ್ಲ ಅಂದರೆ ದೇವರ ನಿಶ್ಚಯ ಬೇರೆ ಇರುತ್ತದೆ .
ನೀವು ಕಷ್ಟದಲಿದ್ದರೆ ಅಂದರೆ ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಈ ದೇವರು ನಿಮ್ಮ ಸಹಾಯಕ್ಕೆ ಬರುತ್ತಿರುವುದೆಲ್ಲ ಅಷ್ಟೇ ನಿಮ್ಮನ್ನು ನಿಮ್ಮ ಜೀವನದಲ್ಲಿ ಬಲಪಡಿಸುವುದಕ್ಕಾಗಿ ಈ ರೀತಿ ಕಷ್ಟದ ಮೇಲೆ ಕಷ್ಟ ನೀಡುತ್ತಿರುತ್ತಾನೆ ಅಷ್ಟೇ.
ಈ ಒಂದು ವಿಚಾರಕ್ಕೆ ತಕ್ಕ ಕಥೆಯನ್ನು ಹೇಳ್ತೀನಿ ಆಗ ನಿಮಗೆ ಅನ್ಸತ್ತೆ ಹೌದು ದೇವರು ನಮಗೆ ಇದೇ ಕಾರಣಕ್ಕೆ ಕಷ್ಟ ಕೊಡುತ್ತಿರಬಹುದೇ ಅಂತ, ಒಮ್ಮೆ ಶ್ರೀಮಂತ ಕುಟುಂಬದಲ್ಲಿ ಒಂದು ಮಗು ಜನಿಸುತ್ತದೆ ಮಗು ಜನಿಸುತ್ತಲೇ ತಾಯಿ ನಿಧನರಾಗುತ್ತಾರೆ,
ತಾಯಿ ಇಲ್ಲದ ಮಗುವೆಂದು ಮಗುವನ್ನು ಬಹಳ ಪ್ರೀತಿಯಿಂದ ಬೆಳೆಸಿದ ತಂದೆ ಹೀಗೆ ಮೂಗು ಬೆಳೆದು ದೊಡ್ಡವನಾಗುತ್ತಾನೆ ಆತ ತನ್ನಲ್ಲಿ ಶ್ರೀಮಂತಿಕೆಯಿದೆ ಎಂದು ಯಾವ ಕೆಲಸ ಕಾರ್ಯಗಳನ್ನು ಮಾಡುತ್ತಿರಲಿಲ್ಲ ಪ್ರತಿಯೊಂದಕ್ಕೂ ಆಲಸ್ಯತನವನ್ನು ತೋರುತ್ತಿದ್ದ ಒಮ್ಮೆ ಒಂದು ದಿನ ಆತನ ತಂದೆ ಹೃದಯಾಘಾತದಿಂದ ಇಹಲೋಕ ತ್ಯಜಿಸುತ್ತಾರೆ.
ಮಗ ಒಬ್ಬನೇ ಇದ್ದ ಕಾರಣಕ್ಕೆ ಆತನ ಕುಟುಂಬದವರೆಲ್ಲ ಆತನ ಮನೆಯಲ್ಲಿಯೇ ಇದ್ದು ಅವನಿಗೆ ಸಾಂತ್ವನ ಹೇಳುತ್ತಿರುತ್ತಾರೆ ಸಾಂತ್ವನ ಹೇಳುವ ಜೊತೆಗೆ ಆತನ ತಲೆಕೆಡಿಸಿ ಎಲ್ಲ ಆಸ್ತಿಯನ್ನು ಲಪಟಾಯಿಸಿಕೊಂಡು ಬಿಡುತ್ತಾರೆ ಕೊನೆಗೆ ಆತನನ್ನು ಮನೆಯಿಂದ ಆಚೆಯೂ ಹಾಕುತ್ತಾರೆ,
ಬಹಳ ಬೇಸರದಿಂದ ಬೀದಿ ಬೀದಿ ಅಲೆಯುತ್ತಿದ್ದ ಈ ಹುಡುಗ ಮೊದಲೇ ಶ್ರೀಮಂತಿಕೆಯಿಂದ ಬೆಳೆದವನು ಹಸಿವು ತಾಳಲಾರದೆ ಹಣ್ಣಿನ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಬೀಳುತ್ತಾನೆ ತಪ್ಪಿಸಿಕೊಳ್ಳುವುದಕ್ಕಾಗಿ ಕಾಡಿನತ್ತ ಓಡಿ ಬಂದು ಕಾಡು ಸೇರುತ್ತಾನೆ.
ಈಗ ಮೃಗಗಳ ಲೋಕದಲ್ಲಿರುವ ಆ ಹುಡುಗ ಅಲ್ಲಿ ಒಂದು ಕುಂಟ ನಾಯಿಯನ್ನು ಕಾಣುತ್ತಾನೆ ಈ ಮೃಗಗಳ ನಡುವೆ ಈ ಸಾಧು ನಾಯಿ ಹೇಗೆ ಬದುಕಿದೆ ಎಂದು ತನ್ನಲ್ಲಿಯೇ ಯೋಚಿಸುತ್ತಾ ಇರುವಾಗ ದೂರದಲ್ಲಿ ಒಂದು ಹುಲಿಯ ಸದ್ದು ಕೇಳಿಸುತ್ತದೆ ಇನ್ನೇನು ಅದು ಇಲ್ಲಿ ಬಂದು ಬಿಡುತ್ತದೆ ಎಂದು ಮರ ಏರಿ ಕುಳಿತ.
ಆ ಹುಡುಗ ನಾಯಿಯನ್ನು ಕಾಪಾಡುವ ಹುಲಿಯಿಂದ ಎಂದು ಬೇಡಿ ಕೊಳ್ಳುತ್ತಿರುತ್ತಾರೆ ಕೊನೆಗೆ ಹುಲಿ ಒಂದು ಮೂಲೆಯನ್ನು ಕಚ್ಚಿಕೊಂಡು ಬಂದು ನಾಯಿಯ ಬಳಿ ಬಿಸಾಡಿ ಹೋಗಿಬಿಡುತ್ತದೆ.
ತನ್ನ ಬೇಡಿಕೆಯನ್ನು ದೇವರು ಒಪ್ಪಿದ್ದಾರೆಂದು ಖುಷಿಯಾಗಿ ತಾನು ಬೇಡಿದ್ದನ್ನು ನೀಡಿದ ದೇವರು ನನಗೆ ಕೂಡ ಸಹಾಯ ಮಾಡುತ್ತಾನೆ ನನಗೂ ತಿನ್ನಲು ಆಹಾರವನ್ನು ಕಳುಹಿಸಿಕೊಡುತ್ತಾನೆ.
ಎಂದು ಮತ್ತೆ ಬೇಡಿಕೊಳ್ಳುತ್ತಾ ರಾತ್ರಿಯೆಲ್ಲಾ ಕಳೆಯುತ್ತಾನೆ ಮಾರನೇ ದಿವಸವಾದರೂ ನಾನು ಎಷ್ಟು ಬೇಡಿಕೊಂಡರೂ ನಾನು ಇಷ್ಟು ಒಳ್ಳೆಯವರಾಗಿದ್ದರೂ ದೇವರು ನಮಗೆ ಸಹಾಯ ಮಾಡಲಿಲ್ಲವೆಂದು ಜೋರು ಜೋರಾಗಿ ಮಾತನಾಡುತ್ತಿರುತ್ತಾನೆ ಆಗ ಆ ಮಾತುಗಳನ್ನು ಕೇಳಿಸಿಕೊಂಡ ದ್ಯಾನದಲ್ಲಿದ್ದ ಋುಷಿ ಮುನಿಗಳು ಆ ಹುಡುಗನನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ.
ಅಲ್ಲಿ ಹುಡುಗನಿಗೆ ತಿನ್ನಲು ಹಣ್ಣನ್ನು ನೀಡಿತ್ತಾರೆ ಹಾಗೆ ಹುಡುಗನ ಕೆಲವೊಂದು ಪ್ರಶ್ನೆಗಳಿಗೆ ಋಷಿ ಮುನಿಗಳು ಈ ರೀತಿ ಉತ್ತರಿಸುತ್ತಾರೆ ಅದೇನೆಂದರೆ ದೇವರು ನಿನಗೆ ಕಷ್ಟ ಕೊಟ್ಟು ನೋಡುವುದು ಯಾಕೆ ಅಂದರೆ ನೀನು ನಿನ್ನ ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಬೇಕೆಂದು.
ನೀನು ಒಬ್ಬರಿಂದ ಬೇಡಿ ತಿನ್ನಬಾರದು ನೀನು ಒಬ್ಬರಿಗೆ ಊಟ ಕೊಡುವಂತಾವನಾಗಬೇಕು ಎಂಬ ಕಾರಣದಿಂದಾಗಿ ನಿನಗೆ ದೇವರು ಸಹಾಯಕ್ಕೆ ಬರುವುದಿಲ್ಲ, ನಾಯಿ ಅಸಹಾಯಕವಾಗಿತ್ತು ಆದ ಕಾರಣ ಅದಕ್ಕೆ ಆಹಾರವನ್ನು ಹೇಗೋ ಹೊಂಚಿ ಕೊಟ್ಟಿತ್ತು ಆದರೆ ಸಿಂಹ ಅದರ ಆಹಾರವನ್ನು ಅದೇ ಹುಡುಕಿಕೊಳ್ಳುತ್ತದೆ ಅದನ್ನು ಬೇರೆಯವರಿಗಾಗಿ ದಾನ ಕೂಡ ಮಾಡಬಲ್ಲದು.
ದೇವರ ದೃಷ್ಟಿಯಲ್ಲಿ ನೀನು ಹುಲಿ ಯಾಗಬೇಕು ನೀನು ನಿನ್ನ ಆಹಾರವನ್ನು ದುಡಿದು ತಿನ್ನಬೇಕು ಬೇರೆಯವರಿಗೆ ದಾನ ಮಾಡಬೇಕು ಎಂಬ ನಿಶ್ಚಯ ದೇವರಲ್ಲಿ ಇರುತ್ತದೆ ಅದಕ್ಕಾಗಿಯೇ ನಿನ್ನನ್ನು ಹುಲಿ ಮಾಡಬೇಕೆಂದು ನಿನ್ನ ಜೀವನದಲ್ಲಿ ಕಷ್ಟ ಕೊಡುತ್ತಿರುತ್ತಾನೆ ಎಂದು ಹೇಳುತ್ತಾರೆ ಋಷಿ ಮುನಿಗಳು ಆಗ ಹುಡುಗನಿಗೆ ತಾನು ದುಡಿದು ತಿನ್ನಬೇಕೆಂಬ ಅರಿವಾಗಿ ದೊಡ್ಡ ವ್ಯಕ್ತಿಯಾಗಬೇಕೆಂದು ಪೇಟೆಗೆ ಹೋಗಿ ದುಡಿಯಲು ಆರಂಭಿಸುತ್ತಾನೆ.