ದೇವರ ಆರಾಧನಾ ಸಮಯದಲ್ಲಿ ದೀಪವನ್ನು ಹಚ್ಚುವುದು ಒಂದು ಸಂಪ್ರದಾಯ ಅದರ ಹಿಂದೆ ಧಾರ್ಮಿಕ ಪದ್ಧತಿಯೂ ಹೌದು, ಶಾಸ್ತ್ರದಲ್ಲಿ ಹೇಳುವಂತೆ ದೀಪ ಹಚ್ಚುವ ಸಮಯದಲ್ಲಿ ಮನೆಯಲ್ಲಿ ಯಾರು ಮಲಗಬಾರದು,
ಕೂದಲನ್ನು ಬಾಚಬಾರದು, ದೀಪ ಹಚ್ಚುವ ಸಮಯದಲ್ಲಿ ಮನೆಯನ್ನು ಸ್ವಚ್ಛ ಮಾಡಬಾರದು, ಹಾಗೂ ಬಹುಮುಖ್ಯವಾಗಿ ನಿಮ್ಮ ಮನೆಯ ಹಿಂದೆ ಮತ್ತೊಂದು ಬಾಗಿಲಿದ್ದರೆ ಅದನ್ನು ಮುಚ್ಚಿಡಬೇಕು.
ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಅಂದರೆ ನಾವು ಮನೆಯನ್ನು ಬಹಳ ಸ್ವಚ್ಛವಾಗಿ ಇಟ್ಟು ನಾವು ಕೂಡ ಸ್ವಚ್ಛವಾಗಿ ಶುಭ್ರ ಬಟ್ಟೆ ಗಳನ್ನು ತೊಟ್ಟು ಬರುವ ಅತಿಥಿಗಳಿಗೆ ಸ್ವಾಗತವನ್ನು ಕೋರುತ್ತೇವೆ,
ಅದೇ ರೀತಿಯಲ್ಲಿ ಮನೆಗೆ ಲಕ್ಷ್ಮಿಯನ್ನು ಬರ ಮಾಡಿಕೊಳ್ಳಬೇಕಾದರೆ, ಮನೆಯ ಸ್ವಚ್ಛತೆ ಬಹಳ ಪ್ರಾಮುಖ್ಯವನ್ನು ವಹಿಸುತ್ತದೆ, ಮನೆಯ ಮುಂಬಾಗಿಲಿನಿಂದ ಲಕ್ಷ್ಮಿಯು ಬಂದರೆ ಮನೆಯ ಹಿಂಬಾಗಿಲಿನಿಂದ ದರಿದ್ರ ಲಕ್ಷ್ಮಿ ಯು ಬರುತ್ತಾಳೆ, ಆದ್ದರಿಂದಲೇ ಮನೆಯಲ್ಲಿ ದೇವರಿಗೆ ದೀಪ ಹಚ್ಚುವ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಮುಚ್ಚಿಟ್ಟು ಮನೆಯ ಮುಂಬಾಗಿಲು ತೆರೆದು ಲಕ್ಷ್ಮಿ ಅವಕಾಶ ಮಾಡಿಕೊಡಬೇಕು.
ನಮ್ಮ ಸಂಪ್ರದಾಯದಲ್ಲಿ ಬಂದಿರುವ ಹಾಗೆ ಎಲ್ಲಾ ವಿಚಾರ ಹಾಗೂ ಪದ್ಧತಿಗಳಿಗೂ ಅದರದೇ ಆದ ಕಾರಣಗಳು ಅಲ್ಲದೆ ವೈಜ್ಞಾನಿಕ ಕಾರಣಗಳು ಇದ್ದೆ ಇರುತ್ತದೆ ಅದರಂತೆಯೇ ಈ ಸಣ್ಣದಾದರೂ ಅತಿ ಮುಖ್ಯವಾದ ವಿಚಾರವನ್ನು ಹಂಚಿಕೊಂಡಿದ್ದೇವೆ, ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ನೀವು ಸಹ ಹಂಚಿಕೊಳ್ಳಿ.
ಜೊತೆಯಲ್ಲಿ ಇದನ್ನು ಓದಿ ಬಾದಾಮಿಯ ಆರೋಗ್ಯ ಲಾಭಗಳು.
ಮೆದುಳಿನ ಸಾಮರ್ಥ್ಯ ಹೆಚ್ಚುವುದು: ಬಾದಾಮಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಸೂಪರ್‌ಫುಡ್ ಆಗಿದೆ. ಬಾದಾಮಿಯಲ್ಲಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ
ತೂಕ ಇಳಿಕೆಗೆ ಸಹಕಾರಿ: ಕಡಿಮೆ ಕ್ಯಾಲೋರಿಯ ಬಾದಾಮಿ ಹಸಿವನ್ನು ಇಂಗಿಸುತ್ತದೆ. ಇದರಿಂದ ತೂಕ ಇಳಿಕೆಗೆ ಸಹಕಾರಿ.
ಹೃದಯಾಘಾತ ಅಪಾಯ ಕಡಿಮೆ ಮಾಡುತ್ತದೆ :ವಾರದಲ್ಲಿ 5 ಬಾರಿ ಬಾದಾಮಿ ತಿಂದರೆ ಹೃದಯಾಘಾತ ಆಗುವ ಬರುವ ಸಾಧ್ಯತೆ 50% ಕಡಿಮೆಯಾಗುತ್ತದೆ.
ಮೂಳೆಯನ್ನು ಬಲಪಡಿಸುತ್ತದೆ: ಬಾದಾಮಿಯಲ್ಲಿರುವ ರಂಜಕ ಹಾಗೂ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ :ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದು: ಗರ್ಭಿಣಿಯರು ಬಾದಾಮಿಯನ್ನು ತಮ್ಮ ಡಯಟ್‌ನಲ್ಲಿ ಸೇರಿಸುವುದರಿಂದ ಗರ್ಭದಲ್ಲಿರುವ ಮಗುವಿನ ಹಾಗೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಪ್ರಸವಪೂರ್ವ ತೊಂದರೆ ಉಂಟಾಗುವುದಿಲ್ಲ.
ಬಾದಾಮಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅತ್ಯುತ್ತಮವಾದ ಔಷಧಿಯಾಗಿದೆ. ಮೆದುಳು ಸಾಮರ್ಥ್ಯ ಹೆಚ್ಚಿಸಬೇಕೆಂದು ಬಯಸುವುದಾದರೆ ದಿನಾ ನಾಲ್ಕು ಬಾದಾಮಿ ಮಿಸ್ ಮಾಡದೆ ತಿನ್ನಿ.