Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೂಪವನ್ನು ನೀವು ಮನೆಯಲ್ಲಿ ಹಚ್ಚುವಾಗ ಈ ಜಾಗಗಳಲ್ಲಿ ಯಾವತ್ತು ಕೂಡ ಇಟ್ಟು ಹಚ್ಚಬಾರದು ಹಾಗೇನಾದ್ರೂ ಹಚ್ಚಿದರೆ ನಿಮಗೆ ಒಂದಲ್ಲ ಒಂದು ಕಷ್ಟಗಳು ಎದುರಾಗುತ್ತೆ …!!!

ಧೂಪಗಳನ್ನು ಹಚ್ಚುವುದರಿಂದ ಆಗುವ ಲಾಭವೇನು ಹಾಗೂ ಯಾವ ರೀತಿಯಾದ ಧೂಪಗಳನ್ನು ಮನೆಯಲ್ಲಿ ಬೆಳಗಿಸುವುದರ ಏನು ಲಾಭ ಎಂದು ತಿಳಿದುಕೊಳ್ಳಿ.
ಹಾಯ್ ಸ್ನೇಹಿತರೆ ದೇವರನ್ನು ನಂಬಿ ಪೂಜೆ ಮಾಡುವುದರಿಂದ ನಾವು ಸಾಕಷ್ಟು ನೆಮ್ಮದಿಯನ್ನು ಪಡೆದುಕೊಳ್ಳುತ್ತೇವೆ. ಪ್ರತಿನಿತ್ಯ ಸ್ನಾನ ಮಾಡಿ ಪೂಜೆ ಮಾಡಿದ ಮೇಲೆ ನಮ್ಮ ಮನಸ್ಸು ಹಾಗೂ ದೇಹ ಶಾಂತವಾಗುತ್ತದೆ. ಪೂಜೆ ಮಾಡಿದ ನಂತರ ಊದಬತ್ತಿ ಹಚ್ಚಿ ಹಾಗೂ ಲೋಬಾನವನ್ನು ಹಾಕಿ ಕರ್ಪೂರವನ್ನು ಬೆಳಗುತ್ತೇವೆ ಇದರಿಂದ ಮನೆಯಲ್ಲಿ ಸುಗಂಧ ಭರಿತವಾದ ವಾಸನೆ ಹರಡುತ್ತದೆ. ಆಗ ನಮ್ಮ ಮನಸ್ಸು ಶಾಂತಿಯಿಂದ ಕೂಡಿ ಹೊಸ ಉಲ್ಲಾಸ ಉತ್ಸಾಹ ಬರುತ್ತದೆ. ದುಃಖವನ್ನು ಬೆಳಗುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ಹಾಗೆಯೇ ಯಾರ ಮನೆಯಲ್ಲಿ ವಾಸ್ತು ದೋಷ ಇರುತ್ತದೆ ಅಂದರೆ ನಿಮ್ಮ ಮನೆಯ ಮುಖ್ಯದ್ವಾರ ಅಥವಾ ಮೆಟ್ಟಿಲುಗಳು ಅಥವಾ ಶೌಚಾಲಯ ಇವೆಲ್ಲರ ವಾಸ್ತುಗಳು ಸರಿಯಾಗಿರದಿದ್ದರೆ ಮೆಟ್ಟಿಲುಗಳ ಹತ್ತಿರ ಅಥವಾ ಮುಖ್ಯದ್ವಾರದ ಬಳಿ ಒಂದೊಂದು ಕರ್ಪೂರವನ್ನು ಇಡಿ. ಆದರೆ ಇದನ್ನು ಬೆಂಕಿಗೆ ತಾಕದಂತೆ ನೋಡಿಕೊಳ್ಳಬೇಕು ಏಕೆಂದರೆ ಕರ್ಪೂರ ಬೆಂಕಿಯನ್ನು ಬೇಗ ಆಕರ್ಷಣೆ ಮಾಡುತ್ತದೆ. ಎಲ್ಲಾ ಶುಭ ಕಾರ್ಯಕ್ರಮಗಳಲ್ಲಿ ಹಾಗೂ ಪೂಜೆಗಳಲ್ಲಿ ಕೊನೆಯದಾಗಿ ಕರ್ಪೂರದ ಆರತಿಯನ್ನು ಬೆಳಗಿ ಮಂಗಳಾರತಿ ಮಾಡುತ್ತಾರೆ ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಹಾಗಾದರೆ ಸ್ನೇಹಿತರೇ ಯಾವ ಯಾವ ತರಹದ ಧೂಪಗಳನ್ನು ಬೆಳಗುವುದರಿಂದ ಏನು ಪ್ರಯೋಜನ ಆಗುತ್ತದೆ ಎಂದು ಈಗ ತಿಳಿಯೋಣ.

ಕರ್ಪೂರದ ದೀಪದ ಬಗ್ಗೆ ಮೊದಲು ತಿಳಿಯೋಣ ಯಾರಿಗಾದರೂ ಮನೆಯಲ್ಲಿ ಮಲಗಿದರೆ ನಿದ್ದೆ ಬರದ ಹಾಗೆ ತೊಂದರೆಯಾಗುತ್ತಿದ್ದರೆ ಹಾಗೂ ಅತ್ತ ಇತ್ತ ಮಾಡಿ ಮೈಯೆಲ್ಲಾ ನೋವು ಬರುವಂತೆ ಆಗುತ್ತದೆ ಇಂತಹ ಸಮಸ್ಯೆ ಇದ್ದವರು ಒಂದು ದಿನ ಕರ್ಪೂರವನ್ನು ತುಪ್ಪದಲ್ಲಿ ನೆನೆಸಿ ಸಾಯಂಕಾಲದ ವೇಳೆ ಅದನ್ನು ದೇವರ ಮುಂದೆ ಹಚ್ಚಿ ಅದರ ವಾಸನೆಯನ್ನು ತೆಗೆದುಕೊಂಡರೆ ಇಂತಹ ಸಮಸ್ಯೆ ದೂರವಾಗುತ್ತದೆ ಆದರೆ ಇದನ್ನು ತಿಂಗಳಿಗೆ ಒಂದು ಸಲ ಮಾತ್ರ ಮಾಡಬೇಕು. ಕರ್ಪೂರದ ಧೂಪ ಮುಖ್ಯವಾಗಿ ವಾಸ್ತುದೋಷದ ಹಾಗೂ ದೇವರ ದೋಷ ಇದ್ದರೆ ಹೆಚ್ಚಾಗಿ ಬಳಸಬಹುದು. ಇನ್ನು ಪಿತೃ ದೋಷ ಇರುವವರು ಕೂಡ ಕರ್ಪೂರದ ಧೂಪವನ್ನು ಮನೆಯಲ್ಲಿ ಬೆಳಗಿಸಬೇಕು.

ಎರಡನೆಯದಾಗಿ ಗುಗ್ಗಳದ ಧೂಪ ಇದು ಧೂಪವನ್ನು ಬೆಳಗಿಸುವ ಮೊದಲು ಅಶ್ವತ ಮರದಿಂದ ಎಲೆಯನ್ನು ತಂದು ಗೋಮೂತ್ರದಲ್ಲಿ ಎದ್ದಿ ಮನೆಯ ಸುತ್ತಮುತ್ತಲಿನ ಭಾಗಗಳಿಗೆ ಸಿಂಪಡಿಸಿ ಹೀಗೆ ಏಳು ದಿನ ಮಾಡಿ ಎಂಟನೇ ದಿನ ಗುಗ್ಗಳದ ಧೂಪವನ್ನು ಬೆಳಗಿಸಬೇಕು ಹೀಗೆ ಮಾಡುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳು ದೂರ ಆಗುತ್ತದೆ. ಮನೆಯಲ್ಲಿ ಕಲಹಗಳು ಜಗಳಗಳು ಹಾಗೂ ಅಶಾಂತಿ ಇದ್ದರೆ ಗುಗ್ಗಳದ ಧೂಪವನ್ನು ಬೆಳಗಿಸಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದನ್ನು ವಾರಕ್ಕೆ ಒಂದು ಬಾರಿ ಮಾಡಿದರೆ ಸಾಕು. ಇನ್ನೂ ಲೋಬಾನದ ಧೂಪ ಇದಕ್ಕೆ ನವದುರ್ಗ ಧೂಪ ಎಂದು ಸಹ ಹೇಳುತ್ತಾರೆ. ಇದನ್ನು ಹೆಚ್ಚಾಗಿ ದುರ್ಗಾದೇವಿಗೆ ಹಾಕುತ್ತಾರೆ.

ಲೋಬಾನ ಹಾಕುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ ಇದನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಹಾಕಬೇಕು. ಇದರಿಂದ ಸ್ಮರಣ ಶಕ್ತಿ ಕೂಡ ಹೆಚ್ಚುತ್ತದೆ. ಇನ್ನು ವಿಶೇಷವಾದ ಧೂಪ ಯಾವುದೆಂದರೆ ತುಪ್ಪ ಹಾಗೂ ಬೆಲ್ಲದ ಧೂಪ ಹೌದು ಸ್ನೇಹಿತರೆ ಆಕಳ ಸಗಣಿಯಿಂದ ಮಾಡಿದ ಕುಳ್ಳಿನ ಮೇಲೆ ಬೆಲ್ಲ ಹಾಗೂ ತುಪ್ಪವನ್ನು ಧೂಪ ಹಾಕುವುದರಿಂದ ಗ್ರಹಗಳ ದೋಷ ದೂರ ಆಗುತ್ತದೆ ಎನ್ನುವ ನಂಬಿಕೆ ಇದೆ ಹಾಗೂ ಇದನ್ನು ಗುರುವಾರ ಮಾಡುವುದರಿಂದ ವಿಶೇಷವಾದ ಫಲ ನಿಮಗೆ ಸಿಗುತ್ತದೆ.

ಕೊನೆಯದಾಗಿ ಬೇವಿನ ಎಲೆಗಳನ್ನು ಧೂಪ ಹಾಕುವುದರಿಂದ ನಿಮ್ಮ ಮನೆಯಲ್ಲಿರುವ ಕ್ರಿಮಿಕೀಟಗಳು ದೂರವಾಗುತ್ತವೆ ಇದರಿಂದ ಮನೆಯಲ್ಲಿ ಆರೋಗ್ಯ ಹೆಚ್ಚುತ್ತದೆ ಇದನ್ನು ವಾರದಲ್ಲಿ ಎರಡು ಬಾರಿ ಮಾಡಬಹುದು ಇದರಿಂದ ಕೂಡ ಮನೆಯಲ್ಲಿರುವ ದೋಷ ದೂರವಾಗುತ್ತದೆ. ಸ್ನೇಹಿತರೆ ಹಾಗಾದರೆ ಧೂಪಗಳ ವಿಶೇಷವಾದ ಮಾಹಿತಿ ನಿಮಗೆ ಈಗ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ