ದುಬೈ ಯಾಕೆ ಅಷ್ಟು ಶ್ರೀಮಂತ ರಾಜ್ಯವಾಗಿದೆ ಹಾಗೆ ದುಬಾಯಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಇನ್ನು ದುಬೈನ ಬಗ್ಗೆ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿಯುವುದಕ್ಕಾಗಿ ತಪ್ಪದೇ ಈ ಲೇಖನವನ್ನು ಪೂರ್ತಿಯಾಗಿ ತಿಳಿದು ಹಾಗೆಯೇ ದುಬಾಯಿ ನಿಮಗೆ ಇಷ್ಟಾನೊ ಇಲ್ಲವೋ ಅನ್ನೋದನ್ನು ಕೂಡ ಕಮೆಂಟ್ ಮಾಡಿ ತಿಳಿಸಿ .
U.A.E ದೇಶಕ್ಕೆ ಸೇರಿರುವ ದುಬೈ ರಾಜ್ಯವೂ ಈ ದೇಶದಲ್ಲಿ ಏಳು ರಾಜ್ಯಗಳನ್ನು ಇವೆ ಮತ್ತು ಈ ಏಳು ರಾಜ್ಯಗಳನ್ನು ಸೆವೆನ್ ಎಮಿರೇಟ್ಸ್ ಎಂದು ಕರೆಯಲಾಗುತ್ತದೆ ,
ಈ ದೇಶದಲ್ಲಿ ಎರಡು ಕ್ಯಾಪಿಟಲ್ ಸಿಟಿಗಳು ಒಂದು ಅಬುಧಾಬಿ ಮತ್ತು ದುಬೈ . ಈ ದೇಶದಲ್ಲಿಯೇ ಅಬುಧಾಬಿ ಮತ್ತು ದುಬೈ ಎರಡು ರಾಜ್ಯಗಳ ಮಧ್ಯೆ ಸಖತ್ ಕಾಂಪಿಟೇಷನ್ ಇರುತ್ತದೆ , ಈ ದೇಶದಲ್ಲಿ ಇಸ್ಲಾಂ ಧರ್ಮವು ಹೆಚ್ಚು ಮತ್ತು ಈ ದೇಶದ ಕರೆನ್ಸಿ ದಿರಾಮ್ ಎಂದು .
2008 ರಲ್ಲಿ ಆದಂತಹ ಜಾಗತಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ದುಬಾಯಿ ರಾಜ್ಯವು ಕೂಡ ನಷ್ಟವನ್ನು ಅನುಭವಿಸಿತು ಮತ್ತು ಆ ಸಮಯದಲ್ಲಿ ಈ ರಾಜ್ಯದಲ್ಲಿ ನಿರ್ಮಾಣವೂ ನಿಂತು ಹೋಗಿತ್ತು ಮತ್ತು ರೆವೆನ್ಯೂ ಕೂಡ ಕಡಿಮೆಯಾಗಿತ್ತು . 1966 ನೇ ವರ್ಷಕ್ಕೂ ಮೊದಲು ದುಬಾಯಿ ಫಿಷಿಂಗ್ ಟ್ರೇಡ್ ನಲ್ಲಿ ಹೆಚ್ಚು ಗಮನವನ್ನು ವಹಿಸುತ್ತಿತ್ತು ಆದರೆ ನಂತರದ ವರ್ಷಗಳಲ್ಲಿ ದುಬೈ ಟ್ರೇಡ್ ಟೂರಿಸಂ ಮತ್ತು ಫೈನಾನ್ಸ್ ನಲ್ಲಿ ಹೆಚ್ಚು ಆಸಕ್ತಿಯನ್ನು ತೋರಿ ತನ್ನ ಆರ್ಥಿಕ ಪರಿಸ್ಥಿತಿಯನ್ನು ಇಮ್ಮಡಿಗೊಳಿಸಿಕೊಂಡಿತು .
ಒಮ್ಮೆ ದುಬಾಯಿ ತನ್ನ ಆರ್ಥಿಕ ಪರಿಸ್ಥಿತಿಯಲ್ಲಿ ತುಂಬಾನೇ ನಷ್ಟ ಹೊಂದಿದ್ದ ಕಾರಣದಿಂದಾಗಿ ಅಬುದಾಬಿ ರಾಜ್ಯದಿಂದ ಸಹಾಯವನ್ನು ಪಡೆದುಕೊಂಡು ತನ್ನ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಂಡಿತು . 1958 ರಲ್ಲಿ ದುಬೈನ ಲೀಡರ್ ಆಗಿದ್ದಂತಹ ಖಾದರ್ ಶೇಖ್ ರಶೀದ್ ಬಿನ್ನ್ ಸಯ್ಯದಲ್ ಮುಕ್ತನ್ ಅವರು ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚು ಮಾಡಲು ದುಬೈನಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಬಗ್ಗೆ ಹೆಚ್ಚು ಗಮನವನ್ನು ಹರಿಸಿ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಗಳನ್ನು ಪರಿಹರಿಸಿದರು .
ಟ್ರೇಡ್ ಟೂರಿಸಂ ಮತ್ತು ಫೈನಾನ್ಸ್ ಈ ೩ ರೀಸನ್ಗಳೇ ದುಬಾಯಿಗೆ ಹೆಚ್ಚು ಹಣ ಬರಲು ಆಧಾರವಾಗಿದೆ ಅದು ಹೇಗೆ ಅನ್ನುವುದನ್ನು ಈ ಮುಂದಿನ ಮಾಹಿತಿಯಲ್ಲಿ ತಿಳಿಯೋಣ . ದುಬೈಗೆ ಹೆಚ್ಚು ಇನ್ಕಮ್ ಆಗುತ್ತಿರುವುದು ಯಾವ ಕಾರಣಕ್ಕಾಗಿ ಅಂತ ಕೇಳಿದರೆ ಜನರು ಅಲ್ಲಿರುವ ಕ್ರೂಡ್ ಅಯಿಲ್ಲಿಂದ ಅಲ್ಲಿಗೆ ಹೆಚ್ಚು ಇನ್ಕಂ ಬರುತ್ತಿದೆ ಅಂತ , ಆದರೆ ಕೇವಲ 1% ಇನ್ಕಂ ಮಾತ್ರ ಈ ಆಯಿಲ್ ಇಂದ ಬರುತ್ತಿದೆ ಅಷ್ಟೇ ಉಳಿದ 99% ಇನ್ಕಂ ಇಲ್ಲಿಯ ಬಿಸಿನೆಸ್ ಮತ್ತು ಟೂರಿಸಂನಿಂದ ಬರುತ್ತಿದೆ .
ಪ್ರಪಂಚದಲ್ಲಿಯೇ ಅತಿ ಹೆಚ್ಚು ಹೂಡಿಕೆದಾರರು ಮತ್ತು ಹೂಡಿಕೆ ಮಾಡಿರುವಂತಹ ವ್ಯವಹಾರ ನಡೆಯುವುದು ದುಬೈನಲ್ಲಿ ಯಾಕೆ ಅಂತ ಹೇಳುವುದಾದರೆ ಇಲ್ಲಿಯ ಟ್ರೇಡ್ ಗೆ ಅಷ್ಟೇ ವ್ಯಾಲ್ಯೂ ಇದೆ ಮತ್ತು ಇಲ್ಲಿ ಇರುವಂತಹ ಜಫ್ಸ ಎಂಬ ಸೀಪೋರ್ಟ್ ದುಬೈನ ವ್ಯಾಲ್ಯೂಬಲ್ ಅಸೆಟ್ ಆಗಿದೆ ಮತ್ತು 1985 ರಲ್ಲಿ ಜಬಲ್ ಅಲ್ಲಿ ಎಕೊನಾಮಿಕ್ ಫ್ರೀ ಜೋನ್ ಅನ್ನು ಡೆವಲಪ್ ಮಾಡಲಾಗಿದೆ .
ಈ ಒಂದು ಎಕಾನಾಮಿಕ್ ಫ್ರೀ ಜೋನ್ ನಲ್ಲಿ ಒಂದು ಲಕ್ಷದ ಐವತ್ತು ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ ಹಾಗೆ ವರುಷಕ್ಕೆ 80ಬಿಲಿಯನ್ ಡಾಲರ್ ಇನ್ಕಮ್ ಅನ್ನು ಜನರೇಟ್ ಮಾಡಲಾಗುತ್ತದೆ ಈ ದುಬೈನಲ್ಲಿ .ಸುಮಾರು ಐವತ್ತೇಳು ಚದುರ ಕಿಲೋ ಮೀಟರ್ನಲ್ಲಿ ವಿಸ್ತೀರ್ಣವಿರುವ ಈ ಒಂದು ಬಿಸಿನೆಸ್ ಏರಿಯಾ ವಿಶ್ವದಲ್ಲಿ ಅತಿ ದೊಡ್ಡ ಮತ್ತು ನಂಬರ್ ಒನ್ ಬಿಸಿನೆಸ್ ಏರಿಯಾ ಎಂದು ಕರೆಸಿಕೊಂಡಿದೆ .
ಸಿ ಸ್ಪೋರ್ಟ್ ಬಳಿಯೇ ಈ ಒಂದು ಎಕಾನಾಮಿಕ್ ಫ್ರೀ ಜೋನ್ ಇರುವ ಕಾರಣದಿಂದಾಗಿ ಟ್ರೇಡಿಂಗ್ ಮತ್ತು ಟ್ರಾನ್ಸ್ಪೋರ್ಟ್ ಮಾಡುವುದಕ್ಕೆ ಉತ್ತಮವಾಗಿದೆ ಹಾಗೆಯೇ ಹೆಚ್ಚು ಹೂಡಿಕೆದಾರರನ್ನು ಸೆಳೆಯುವ ಈ ಒಂದು ದುಬೈನಲ್ಲಿ ನೋಡಲು ಕೂಡ ಸುಂದರವಾದ ಮಾನವ ನಿರ್ಮಿತ ಐಲೆಂಡ್ ಮತ್ತು ಜಗತ್ತಿನಲ್ಲಿಯೇ ಅತಿ ದೊಡ್ಡ ಬಿಲ್ಡಿಂಗ್ ಅತಿ ದೊಡ್ಡ 5star ಹೋಟೆಲ್ ಎಲ್ಲಾ ಇರುವುದು ದುಬೈನಲ್ಲಿಯೇ .
ಟ್ರೆಂಡಿಂಗ್ ಟೂರಿಸಂ ಮತ್ತು ಟ್ರಾನ್ಸ್ ಪೋರ್ಟ್ ಈ ಎಲ್ಲಾ ಕ್ಷೇತ್ರಗಳಲ್ಲಿಯೂ ದುಬೈ ಹೆಚ್ಚು ಮುಂದುವರಿದಿದ್ದು ಈ ದುಬೈನಲ್ಲಿ ಒಂದು ಶಾಪಿಂಗ್ ಕಾಂಪ್ಲೆಕ್ಸ್ ಇದೆ ಇದು ಅತಿ ದೊಡ್ಡದಾದ ಶಾಪಿಂಗ್ ಕಾಂಪ್ಲೆಕ್ಸ್ ಅಂತಾನೇ ಹೇಳಬಹುದಾಗಿದೆ ಇದಕ್ಕೆ ಸುಮಾರು ಸಾವಿರದ ಇನ್ನೂರು ಔಟ್ಲೆಟ್ ಇರುತ್ತದೆ ಮತ್ತು ಡಿಸ್ನಿ ಪಾರ್ಕ್ ಗಿಂತ ಹತ್ತು ಪಟ್ಟು ದೊಡ್ಡದಿರುವ ಥೀಮ್ ಪಾರ್ಕ್ ದುಬೈನಲ್ಲಿ ಕಾಣಬಹುದಾಗಿದೆ .
ಈ ಕಾರಣದಿಂದಾಗಿಯೇ ದುಬಾಯಿ ಜಗತ್ತಿನಲ್ಲಿ ಹೆಚ್ಚು ಇನ್ಕಮ್ ಹೊಂದಿರುವಂತಹ ರಾಜ್ಯವಾಗಿದ್ದು ಟ್ರೇಡ್ ಟ್ರಾನ್ಸ್ಪೋರ್ಟ್ ಮತ್ತು ಟೂರಿಸಂ ಕ್ಷೇತ್ರಗಳಿಂದ ದುಬೈನಲ್ಲಿ ಇನ್ಕಮ್ ಹೆಚ್ಚಾಗಿ ಬರುತ್ತದೆ ಅಂತ ಹೇಳಬಹುದಾಗಿದೆ .