ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ನಿಮಗೆ ಆಗುವ ಚಮತ್ಕಾರಿ ಪ್ರಯೋಜನಗಳು ಯಾವುವು ಎಂದು ತಿಳಿದುಕೊಳ್ಳಲು ಈ ಮಾಹಿತಿಯನ್ನು ನೋಡಿ.ಹಾಯ್ ಫ್ರೆಂಡ್ಸ್ ನಾವು ಪ್ರತಿದಿನ ದೇವರನ್ನು ಪೂಜಿಸುತ್ತೇವೆ ದೇವರನ್ನು ಪೂಜೆ ಮಾಡುವಾಗ ನಾವು ಮೊದಲು ಅಂಟಿಸುವುದು ದೇವರ ದೀಪ. ಹಿಂದೂ ಪುರಾಣದ ಪ್ರಕಾರ ದೀಪಕ್ಕೆ ತುಂಬಾ ಮಹತ್ವವಿದೆ. ಒಂದು ಸಲ ಮನೆಯಲ್ಲಿ ದೀಪವನ್ನು ಅಂಟಿಸಿದರೆ ಅಥವಾ ಹಚ್ಚಿದರೆ ಜೀವನದಲ್ಲಿ ನಿಮಗೆ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿನಿತ್ಯ ನಾವು ತುಪ್ಪದ ದೀಪವನ್ನು ಹಚ್ಚುವುದಕ್ಕೆ ಆಗುವುದಿಲ್ಲ ತುಂಬಾ ಜನರು ಹಬ್ಬಗಳಲ್ಲಿ ಹಾಗೂ ಮನೆಯ ಯಾವುದಾದರೂ ಕಾರ್ಯಕ್ರಮಗಳಲ್ಲಿ ತುಪ್ಪದ ದೀಪವನ್ನು ಹಾಗೂ ಆರತಿಯನ್ನು ಬೆಳಗುತ್ತಾರೆ.
ತುಪ್ಪದ ದೀಪವನ್ನು ಹಚ್ಚಿದರೆ ಅದರಿಂದ ಹೊರಗೆ ಬರುವ ಸುವಾಸನೆಯೂ ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಹಾಗೆ ಮನೆಯಲ್ಲಿರುವ ಎಲ್ಲ ಕೆಟ್ಟ ಕ್ರಿಮಿಗಳನ್ನು ಸಹಿಸುವ ಶಕ್ತಿ ಈ ತುಪ್ಪದ ದೀಪದ ಸುವಾಸನೆಯಲ್ಲಿ ಇರುತ್ತದೆ. ಸ್ನೇಹಿತರೆ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ಹಾಗೂ ಅಷ್ಟಲಕ್ಷ್ಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ಹಾಗಾದರೆ ಬನ್ನಿ ನೋಡೋಣ ಈ ತುಪ್ಪದ ದೀಪದಿಂದ ಆಗುವ ಚಮತ್ಕಾರಿ ಬದಲಾವಣೆಗಳು ಹಾಗೂ ಇದರ ಮಹತ್ವಗಳು ಯಾವವು ಮತ್ತು ಹೇಗೆ ದೀಪವನ್ನು ಹಚ್ಚಬೇಕು ಎಂಬುದನ್ನು ನೋಡೋಣ.
ಸ್ನೇಹಿತರೆ ಸ್ನಾನ ಮಾಡಿದ ನಂತರ ದೇವರಿಗೆ ಪೂಜೆ ಮಾಡುವಾಗ ನೀವು ಕುಳಿತುಕೊಂಡೇ ದೀಪವನ್ನು ಹಚ್ಚಬೇಕು ಯಾವುದೇ ಕಾರಣಕ್ಕೂ ನಿಂತು ದೀಪವನ್ನು ಹಚ್ಚಬಾರದು. ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಮಹಾಲಕ್ಷ್ಮಿಯ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಹಾಗೆ ನಾಗದೇವತೆ ಮತ್ತು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಹಚ್ಚಿದರೆ ಯಾವುದೇ ಸರ್ಪದೋಷ ನಿಮಗೆ ಆಗುವುದಿಲ್ಲ. ಇನ್ನು ನಿಮ್ಮ ಜಾತಕದಲ್ಲಿ ಏನಾದರೂ ಕುಜದೋಷ ಇದ್ದರೆ ದೇವಿ ದೇವಸ್ಥಾನಗಳಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ತುಪ್ಪದ ದೀಪವನ್ನು ಹಚ್ಚುವುದರಿಂದ ನೀವು ಕುಜ ದೋಷದಿಂದ ಮುಕ್ತರಾಗುತ್ತಿರಿ.
ನೀವೇನಾದರೂ ಯಾತ್ರಾ ಸ್ಥಳಕ್ಕೆ ಹೋದಾಗ ಅಥವಾ ತೀರ್ಥಕ್ಷೇತ್ರಗಳಿಗೆ ಹೋದಾಗ ತುಪ್ಪದ ದೀಪವನ್ನು ಹಚ್ಚಿದರೆ ಅಲ್ಲಿನ ದೇವರ ಸಂಪೂರ್ಣ ಆಶೀರ್ವಾದ ನಿಮಗೆ ಸಿಗುತ್ತದೆ. ಇನ್ನು ಮನೆಯಲ್ಲಿ ಹೆಣ್ಣು ಸಂತಾನ ಬೇಕು ಎನ್ನುವವರು ತಾಯಿ ದುರ್ಗಾದೇವಿಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ತುಪ್ಪದ ದೀಪವನ್ನು ಹಚ್ಚಬೇಕು ಈ ರೀತಿಯಾಗಿ ಮಾಡಿದರೆ ವರ್ಷದ ಒಳಗಡೆ ನಿಮಗೆ ಹೆಣ್ಣು ಮಗುವಿನ ಸಂತಾನ ಹಾಗೂ ಅದರ ಆರೋಗ್ಯ ಎಲ್ಲಾ ಸಿಗುತ್ತದೆ. ಎಲ್ಲಾ ದೇವರಲ್ಲಿ ತುಪ್ಪದ ದೀಪವನ್ನು ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಬೇಕು ಆಗ ನೀವು ಮನಸ್ಸಿನಲ್ಲಿ ನಿಮ್ಮ ಆಸೆಗಳನ್ನು ನೆನೆಯಬೇಕು ಹೀಗೆ ಮಾಡಿ ತುಪ್ಪವನ್ನು ಹಚ್ಚಿದರೆ ಎಲ್ಲಾ ಆಸೆಗಳು ನೆರವೇರುತ್ತವೆ.
ಸ್ನೇಹಿತರ ಪ್ರತಿದಿನ ಮಧ್ಯಾಹ್ನ ಮಹಿಳೆಯರು ರೇಷ್ಮೆ ಸೀರೆಯನ್ನುಟ್ಟು ತುಪ್ಪದ ದೀಪವನ್ನು ಹಚ್ಚಿದರೆ ಪಿತೃದೋಷ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ನೀವು ತುಪ್ಪದ ದೀಪವನ್ನು ಹಚ್ಚಿ ಆ ದೀಪದ ಜ್ವಾಲೆಯನ್ನು ಪೂರ್ವ ದಿಕ್ಕಿನೆಡೆಗೆ ಇಟ್ಟರೆ ನಿಮ್ಮ ಆಯಸ್ಸು ವೃದ್ಧಿಯಾಗುತ್ತದೆ. ಪಶ್ಚಿಮ ದಿಕ್ಕಿಗೆ ಯಾವುದೇ ಕಾರಣಕ್ಕೂ ದೀಪದ ಜ್ವಾಲೆ ಹೋಗುವಂತೆ ಮಾಡಬಾರದು ಉತ್ತರ ದಿಕ್ಕಿಗೆ ಹೊರಟರೆ ನಿಮ್ಮ ಮನೆಯಲ್ಲಿ ನೆಮ್ಮದಿ ಸದಾ ಇರುತ್ತದೆ. ಇನ್ನೂ ದಕ್ಷಿಣ ದಿಕ್ಕಿಗೆ ದೀಪದ ಜ್ವಾಲೆ ಇದ್ದರೆ ನಿಮ್ಮ ಮನೆಯಲ್ಲಿ ನಷ್ಟಗಳು ಉಂಟಾಗುತ್ತವೆ. ತುಪ್ಪದ ದೀಪವನ್ನು ಮನೆಯಲ್ಲಿ ಹಚ್ಚಿದಾಗ ಅದರಿಂದ ಉದಬತ್ತಿಯನ್ನು ಹಚ್ಚಬಾರದು.
ಹಾಗೆ ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು ಹೀಗೆ ಮಾಡಿದರೆ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಇನ್ನೂ ಬೆಂಕಿ ಪೊಟ್ಟಣದಿಂದ ದೀಪವನ್ನು ಹಚ್ಚಿದ ಮೇಲೆ ಕಡ್ಡಿಯನ್ನು ಬಾಯಿಂದ ಊದಿ ಕಳೆಯಬಾರದು ಬದಲಾಗಿ ಕೈಯಿಂದ ಅದನ್ನು ನಂದಿಸಿ ಬೇಕು. ಬಾಯಿಂದ ಊದಿದರೆ ಲಕ್ಷ್ಮೀದೇವಿಯು ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ ಎನ್ನುವ ನಂಬಿಕೆ ಇದೆ. ಇನ್ನೂ ತುಪ್ಪದ ದೀಪವನ್ನು ಹಚ್ಚುವಾಗ ಎಷ್ಟು ಎಳೆಗಳನ್ನು ತೆಗೆದುಕೊಂಡರೆ ನಿಮಗೆ ಏನು ಲಾಭ ಸಿಗುತ್ತದೆ ಎಂಬ ವಿಷಯವನ್ನು ಈಗ ತಿಳಿಸುತ್ತೇನೆ ಒಂದು ಎಳೆಯ ತುಪ್ಪದ ದೀಪವನ್ನು ಹಾಕಿದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚುತ್ತದೆ
ಹಾಗೆಯೇ ಕುಟುಂಬದವರಿಗೆ ಬುದ್ಧಿ ಹೆಚ್ಚಾಗಿ ಇರುತ್ತದೆ. ಹಾಗೆ ನಿರುದ್ಯೋಗ ಸಮಸ್ಯೆಗಳು ಮನೆಯಲ್ಲಿ ಇರುವುದಿಲ್ಲ. ಇನ್ನು ಮನೆಯಲ್ಲಿ 5 ಎಳೆಯ ತುಪ್ಪದ ದೀಪವನ್ನು ಹಚ್ಚುವುದರಿಂದ ವಿಶೇಷ ಶಕ್ತಿ ನಿಮ್ಮ ಮನೆಗೆ ಸಿಗುತ್ತದೆ ಇದು ನಿಮಗೆ ಕುಬೇರ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ಮನೆಯಲ್ಲಿ ಎಂದಿಗೂ ಆರ್ಥಿಕ ಪರಿಸ್ಥಿತಿ ತೊಂದರೆಯಿರುವುದಿಲ್ಲ ಲಕ್ಷ್ಮೀದೇವಿಯು ಸದಾ ಇವರ ಮನೆಯಲ್ಲಿ ನೆಲೆಸುತ್ತಾಳೆ ಹಾಗಾದರೆ ಸ್ನೇಹಿತರೆ ತುಪ್ಪದ ದೀಪದ ಮಹತ್ವ ಹಾಗೂ ರಹಸ್ಯಗಳು ಮಾಹಿತಿಯಲ್ಲಿ ನಿಮಗೆ ತಿಳಿದರೆ ಹಾಗೂ ಇಷ್ಟ ಆದರೆ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಧನ್ಯವಾದಗಳು