Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೀಪದಿಂದ ನಿಮ್ಮ ಮನೆಯಲ್ಲಿ ಅದೃಷ್ಟ ಪ್ರಾಪ್ತಿಯಾಗಬೇಕೆಂದರೆ ..ದೀಪ ಹಚ್ಚಿದ ನಂತರ ಈ ಒಂದು ವಸ್ತುವನ್ನು ದೀಪಕ್ಕೆ ಹಾಕಿ ಆಮೇಲೆ ನೋಡಿ !!!

ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಪೂಜೆಯನ್ನು ಮಾಡುತ್ತಾರೆ ಹಾಗೆ ಪ್ರತಿ ದಿನ ಎರಡು ಬಾರಿ ಮನೆಯಲ್ಲಿ ದೀಪವನ್ನು ಆರಾಧನೆಯನ್ನು ಮಾಡಬೇಕು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದೀಪವನ್ನು ಹಚ್ಚಿ ಮನೆಯಲ್ಲಿ ಪೂಜೆಯನ್ನು ಮಾಡಬೇಕು .

ಇದರಿಂದ ಮನೆಯಲ್ಲಿ ಸಕಾರಾತ್ಮಕತೆಯು ಹೆಚ್ಚುತ್ತದೆ ಹಾಗೇ ಪ್ರತಿಯೊಬ್ಬರಿಗೂ ತಿಳಿಯಬೇಕಾದ ವಿಚಾರವೇನು ಅಂದರೆ ,ನಮ್ಮ ಮನೆಗೆ ಸಕಾರಾತ್ಮಕ ಶಕ್ತಿ ಬರುವುದು ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ನೆಲೆಸುವುದೇ ಮನೆಯಲ್ಲಿ ಪೂಜೆಯನ್ನು ಕೈಗೊಳ್ಳುವುದರಿಂದ ನಾವು ಮನೆಯಲ್ಲಿ ಎಷ್ಟು ಪೂಜೆಯನ್ನು ಮಾಡುತ್ತೇವೆ ಅಷ್ಟು ಸಾತ್ವಿಕತೆ ನಮ್ಮ ಮನೆಯಲ್ಲಿ ನೆಲೆಸುತ್ತದೆ ಎಂದು ನಂಬಲಾಗಿದೆ ಹಾಗೂ ಇದು ಒಂದು ನಿಜವಾದ ವಿಚಾರವೂ ಕೂಡ.

ಹಾಗಾದರೆ ದೇವರಿಗೆ ಪೂಜೆಯನ್ನು ಸಲ್ಲಿಸುವಾಗ ದೀಪಾರಾಧನೆ ಮಾಡುವಾಗ ಅನುಸರಿಸಬೇಕಾದ ಕೆಲವೊಂದು ನಿಯಮಗಳು ಏನು ದೀಪವನ್ನು ಹೇಗೆ ಕ್ರಮಬದ್ಧವಾಗಿ ಹಚ್ಚಬೇಕು.

ಶಾಸ್ತ್ರದ ಪ್ರಕಾರ ದೀಪವನ್ನು ಯಾವ ಸಮಯದಲ್ಲಿ ಹಚ್ಚಬೇಕು ಹೇಗೆ ಹಚ್ಚಬೇಕು ಯಾವ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬೇಕು ಇವೆಲ್ಲವೂ ಕೂಡಾ ಕಾರಣವಾಗುತ್ತದೆ.

ನಾವು ದೀಪಾರಾಧನೆ ಅನ್ನು ಮಾಡುವ ಸಮಯದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡುತ್ತೇವೆ ಆ ಕಾರಣಕ್ಕಾಗಿಯೇ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ನೀವು ಮಾಡುವ ಕೆಲವೊಂದು ಸಣ್ಣಪುಟ್ಟ ತಪ್ಪುಗಳನ್ನು ಸರಿ ಮಾಡಿಕೊಳ್ಳಿ.

ಹಾಗೆ ಈ ದಿನ ತಿಳಿಸುವ ಕ್ರಮದಲ್ಲಿ ಪೂಜೆಯನ್ನು ಸಲ್ಲಿಸಿ, ಈ ಮಾಹಿತಿ ನಿಮಗೆ ಸರಿ ಅನ್ನಿಸಿದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಇನ್ನು ಮುಂದೆ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ.

ಮನೆಯಲ್ಲಿ ಹೆಣ್ಣು ಮಕ್ಕಳಾಗಲಿ ,ಗಂಡು ಮಕ್ಕಳಾಗಲಿ ಮೊದಲು ದೀಪಕ್ಕೆ ಬತ್ತಿಯನ್ನು ಹಾಕಿ ಆ ನಂತರ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚುತ್ತಾರೆ ಆದರೆ ಈ ಕ್ರಮ ತಪ್ಪು, ಮೊದಲಿಗೆ ದೀಪಕ್ಕೆ ಎಣ್ಣೆಯನ್ನು ಹಾಕಿ ನಂತರ ಅದಕ್ಕೆ ಬತ್ತಿಯನ್ನು ಹಾಕಬೇಕು, ನಂತರ ದೀಪವನ್ನು ಹಚ್ಚಬೇಕು ಹಾಗೆ.

ಈ ದೀಪದಲ್ಲಿ ಬಳಸುವ ಬತ್ತಿ ಒಂದು ಎಳೆಯ ಬತ್ತಿ ಆಗಿರಬಾರದು ಎರಡು ಬತ್ತಿಯನ್ನು ತೆಗೆದುಕೊಂಡು ಅದನ್ನು ಜೋಡಿಸಿ ಈ ಎರಡು ಎಳೆಯ ಬತ್ತಿಯನ್ನು ಬಳಸಿ ದೀಪವನ್ನು ಹಚ್ಚಬೇಕು,

ಇನ್ನು ಮನೆಯಲ್ಲಿ ಗಂಡ ಹೆಂಡತಿಯ ಕಲಹ ಆಗುತ್ತಿದ್ದರೆ ಆ ಮನೆಯಲ್ಲಿ ಹಳದಿ ಬಣ್ಣದ ಬತ್ತಿಯನ್ನು ಬಳಸಿ ದೀಪವನ್ನು ಹಚ್ಚಬೇಕು. ಹಳದಿ ಬಣ್ಣದ ಬತ್ತಿ ಅಂದರೆ ಆ ಬತ್ತಿಗೆ ಸ್ವಲ್ಪ ಅರಿಶಿನವನ್ನು ಹಚ್ಚಿ ನಂತರ ಅದನ್ನು ದೀಪಕ್ಕೆ ಜೋಡಿಸಿ ಈ ದೀಪವನ್ನು ಹಚ್ಚಬೇಕು.

ಇದಿಷ್ಟು ಒಂದೆಡೆಯ ವಿಚಾರವಾದರೆ ದೀಪವನ್ನು ಹಚ್ಚುವಾಗ ಎಳ್ಳೆಣ್ಣೆಯನ್ನು ಬಳಸಬಾರದು ಹಾಗೆ ದೀಪವನ್ನು ಹಚ್ಚುವಾಗ ಕೊಬ್ಬರಿ ಎಣ್ಣೆ ಅಥವಾ ಕಡಲೆಕಾಯಿ ಎಣ್ಣೆ ಬಳಸಿ ದೀಪವನ್ನು ಹಚ್ಚಬಹುದು ಹಾಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಬಹಳಾನೇ ಶ್ರೇಷ್ಠ ಎಂದು ಹೇಳಲಾಗಿದ್ದು,

ದೀಪಾರಾಧನೆ ಮಾಡುವಾಗ ದೇವರ ಮುಂದೆ ಇಟ್ಟ ಅಕ್ಷತೆ ಕಾಳುಗಳನ್ನು ಸ್ವಲ್ಪವೇ ದೀಪಕ್ಕೂ ಹಾಕಿ ಉರಿಸಬೇಕು, ನಂತರ ಈ ದೀಪ ಉರಿದ ಮೇಲೆ ದೀಪದಲ್ಲಿ ಉಳಿದ ಅಕ್ಷತೆ ಕಾಳು ಅಲ್ಲಿಯೇ ಉಳಿಯುತ್ತದೆ, ಅದನ್ನು ಶೇಖರಿಸಿ ಇಡುತ್ತಾ ಒಮ್ಮೆಲೇ ಅದನ್ನು ತೆಗೆದುಕೊಂಡು ಹೋಗಿ ಅರಳಿ ಮರದ ಬುಡಕ್ಕೆ ಹಾಕಿ ಬರಬೇಕು.

ಈ ರೀತಿ ನೀವು ದೀಪಾರಾಧನೆ ಮಾಡುವಾಗ ಕೆಲವೊಂದು ನಿಯಮವನ್ನು ಅನುಸರಿಸಿ ಹಾಗೇ ದೀಪಾರಾಧನೆ ಅನ್ನು ಮಾಡುವಾಗ ದೀಪದೊಂದಿಗೆ ಲವಂಗವನ್ನು ಹಾಕಿ ಉರಿಸಬೇಕು ಎಂದು ಕಳೆದ ಮಾಹಿತಿಯಲ್ಲಿ ತಿಳಿಸಿಕೊಟ್ಟಿದ್ದೆವು

ಈ ರೀತಿ ಮಂಗಳವಾರ ಮತ್ತು ಶುಕ್ರವಾರದ ದಿವಸದಂದು ದೀಪಕ್ಕೆ ಲವಂಗವನ್ನು ಹಾಕಿ ಉರಿಸಬೇಕು, ಮಿಕ್ಕಿದ ದಿನಗಳಲ್ಲಿ ದೀಪಕ್ಕೆ ಸ್ವಲ್ಪ ಅಕ್ಷತೆ ಕಾಳುಗಳನ್ನು ಹಾಕಿ ದೀಪ ಆರಾಧನೆಯನ್ನು ಮಾಡುವುದರಿಂದ ಶ್ರೇಷ್ಠ ಎನ್ನಲಾಗಿದೆ.

Leave a Reply

Your email address will not be published. Required fields are marked *