ದಿನಾಲೂ ನೀವು ಹಲ್ಲನ್ನು ಉಜ್ಜದೇ ನೀರು ಕುಡಿಯುತ್ತೀರಾ ಹಾಗಾದ್ರೆ ನಿಮ್ಮ ದೇಹದಲ್ಲಿ ಎಷ್ಟೆಲ್ಲ ಬದಲಾವಣೆ ಆಗುತ್ತೆ ಗೊತ್ತ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಾವು ಊಟ ಇಲ್ಲದೆ ಸ್ವಲ್ಪ ದಿನ ಇರಬಹುದು ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ನೀರು ಮನುಷ್ಯನ ಜೀವನಕ್ಕೆ ಎಷ್ಟು ಮುಖ್ಯ ಎಂದರೆ ಅವನ ಜೀವವೇ ನೀರಲ್ಲೇ ಇದ್ದಹಾಗೆ. ನೀರು ಕುಡಿಯುದರಿಂದ ಮನುಷ್ಯನ ಸಕಲ ಕಾಯಿಲೆಗಳು ಕೂಡ ಸರ್ವನಾಶವಾಗುತ್ತದೆ. ಇಂತಹ ನೀರನ್ನು ನಾವು ಯಾವಾಗ ಕುಡಿಬೇಕು ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು ಅನ್ನುವುದೇ ಮುಖ್ಯ.ಅದರಲ್ಲೂ ಕೂಡ ಸ್ನೇಹಿತರೆ ನೀರನ್ನು ಬೆಳಗ್ಗೆ ಎದ್ದ ತಕ್ಷಣ ಕುಡಿಯಬೇಕು. ಬೆಳಗ್ಗೆ ಎದ್ದ ತಕ್ಷಣ ಹಲ್ಲುಉಜ್ಜಿದೆ ನೀರನ್ನು ಕುಡಿದರೆ ಬಹಳ ಒಳ್ಳೆಯದು. ಬಾಯನ್ನು ನೀರಿಂದ ತೊಳೆಯದೇ ಹಾಗೇ ನೀರನ್ನು ಕುಡಿಯಬೇಕು.

ಯಾಕೆಂದರೆ ನಮ್ಮ ಬಾಯಿಯಲ್ಲಿರುವ ಲಾಲಾರಸ ನೀರಿನೊಂದಿಗೆ ನಮ್ಮ ದೇಹದೊಳಗೆ ಹೋಗಬೇಕು. ರಾತ್ರಿ ನಾವು ಮಲಗಿದಾಗ ನಮ್ಮ ದೇಹದಲ್ಲಿ ತುಂಬಾನೇ ಆಸಿಡ್ ಗಳು ಉತ್ಪತ್ತಿಯಾಗುತ್ತದೆ. ಜೊತೆಗೆ ನಮ್ಮ ಬಾಯಿಯಲ್ಲಿ ಲಾಲಾರಸ ಕೂಡ ಉತ್ಪತ್ತಿಯಾಗುತ್ತದೆ. ಬೆಳಗ್ಗೆ ಎದ್ದು ನೀರು ಕುಡಿದರೆ ಆ ನೀರಿನ ಜೊತೆಗೆ ಲಾಲಾರಸ ದೇಹದೊಳಗೆ ಹೋದರೆ ನಮಗೆ ತುಂಬಾನೇ ಹಲವಾರು ಉಪಯೋಗಗಳಿವೆ.

ಇದರಿಂದ ನಾವು ಹಲವಾರು ಕಾಯಿಲೆಗಳನ್ನು ತಡೆಗಟ್ಟಬಹುದು. ನಮ್ಮಲ್ಲಿ ಉಂಟಾದ ಕಾಯಿಲೆಗಳನ್ನು ಬರದಂತೆ ಹಾಗೂ ಬಂದ ಕಾಯಿಲೆಗಳನ್ನು ಹೋಗಲಾಡಿಸಬಹುದು.ಈ ಕಾಯಿಲೆಗಳನ್ನು ಹೋಗಲಾಡಿಸುವ ಗುಣ ಲಾಲಾರಸ ದಲ್ಲಿದೆ. ಬೆಳಗ್ಗೆ ಎದ್ದು ತಕ್ಷಣ ನೀರನ್ನು ಕುಡಿಯುದರಿಂದ ಮೂಲ್ಯ ಮೂಲವ್ಯಾಧಿಯನ್ನು ಕೂಡ ತಡೆಗಟ್ಟಬಹುದು. ಇನ್ನೊಂದು ಸ್ನೇಹಿತರೆ ಬಾಯಿಯಲ್ಲಿ ಬರುವ ಲಾಲಾರಸ ಅಂದರೆ ನಾರ್ಮಲ್ ಭಾಷೆಯಲ್ಲಿ ಎಂಜಲು ಅಂತ ಹೇಳುತ್ತಾರೆ, ಕೆಲವರು ಅದನ್ನು ಪದೇ ಪದೇ ಉಗುಳುತ್ತಾ ಇರುತ್ತಾರೆ.

ಅಂತವರಿಗೆ ಜಾಸ್ತಿ ಅನಾರೋಗ್ಯ ಉಂಟಾಗುತ್ತದೆ .ನಮ್ಮ ದೇಹದಲ್ಲಿರುವ ಲಾಲಾರಸ ನಮ್ಮ ದೇಹದಲ್ಲಿ ಇದ್ದರೆ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಶಕ್ತಿಯೂ ಬರುತ್ತದೆ. ಒಂದು ಸಂಶೋಧನೆ ಪ್ರಕಾರ ಲಾಲರಸ ದಲ್ಲಿ ನೋವುನಿವಾರಕ ಕೂಡ ಇರುತ್ತದೆ ಎಂದು ಹೇಳಬಹುದು.ಸಣ್ಣ ಪುಟ್ಟ ಗಾಯಗಳು ಲಾಲಾರಸ ಹಚ್ಚುವುದರಿಂದ ವಾಸಿಯಾಗುತ್ತದೆ ಎಂದು ಹೇಳುತ್ತಾರೆ.ಬೆಳಗ್ಗೆ ಎದ್ದು ನಾವು ನೀರನ್ನು ಕುಡಿಯುವುದರಿಂದ ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಮುಖದಲ್ಲಿರುವ ಕಲೆಗಳನ್ನು ವಾಸಿಯಾಗುತ್ತವೆ.

ಕಪ್ಪು ಕಲೆಗಳು ಕೆಂಪು ಕಲೆಗಳು ಹಾಗೂ ಆಯಿಲ್ ಸ್ಕಿನ್ ಕೂಡಾ ನಿವಾರಣೆಯಾಗುತ್ತದೆ. ಸ್ಕಿನ್ ಅಲರ್ಜಿ ಗಜಕರಣ, ತುರಿಕೆ ಕಜ್ಜಿ ಇವೆಲ್ಲವನ್ನೂ ನೀರು ಕೊಡುವುದರಿಂದ ತಡೆಗಟ್ಟಬಹುದು.ಕಣ್ಣಿನ ಸುತ್ತ ಕಪ್ಪು ಕಲೆಯನ್ನು ಲಾಲಾರಸ ಹಚ್ಚುವುದರಿಂದ ನಿವಾರಣೆ ಮಾಡಬಹುದು. ಹೀಗೆ ನಮ್ಮ ಚರ್ಮಕ್ಕೆ ಲಾಲಾರಸ ದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಸ್ನೇಹಿತರೆ.

ಹಾಗೂ ಹಲ್ಲುಜ್ಜದೇ ನಾವು ನೀರು ಕುಡಿಯುದರಿಂದ ನಮ್ಮ ಮೆದುಳಿನ ಒತ್ತಡ ಕೂಡ ಕಡಿಮೆಯಾಗುತ್ತದೆ. ಮೆದುಳಿಗೆ ಆಕ್ಸಿಜನ್ ಚೆನ್ನಾಗಿ ಸಪ್ಲೈ ಯಾಗುತ್ತದೆ.ಬೆಳಿಗ್ಗೆ ಹಲ್ಲುಜ್ಜ ದೇ ನೀರನ್ನು ಕುಡಿಯುವುದರಿಂದ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಹಾಗೂ ನೀರನ್ನು ಕುಡಿಯುವುದರಿಂದ ನಮ್ಮ ಕಿಡ್ನಿ ಕೂಡ ಫ್ರೆಶ್ ಆಗುತ್ತದೆ. ಹಾಗೂ ಕಿಡ್ನಿ ಕಲ್ಲುಗಳನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು.ಹಾಗೂ ರಕ್ತ ಕೂಡ ಪರಿಶುದ್ಧವಾಗುತ್ತದೆ.ಬೆಳಗ್ಗೆ ಹಲ್ಲು ಉಜ್ಜದೆ ಕುಡಿಯುದರಿಂದ ನಮ್ಮ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೊರಗಿಂದ ಬರುವ ರೋಗಾಣುಗಳ ಅಪಾಯದಿಂದ ನಾವು ತಪ್ಪಿಸಿಕೊಳ್ಳಬಹುದು.

ಬೆಳಗ್ಗೆ ಎದ್ದ ತಕ್ಷಣ ಸ್ನೇಹಿತರೆ ಎರಡು ಲೋಟ ನೀರನ್ನು ಕುಡಿಯಬೇಕು. ನೀವು ಹಾಗೇನೇ ಕುಡಿಬಹುದು ಆದ ಹಾಗೆ ಅಥವಾ ಉಗುರು ಬೆಚ್ಚಗಿನ ನೀರನ್ನು ಕೂಡ ಕುಡಿಯಬಹುದು.ಹೀಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಇನ್ನೂ ಒಳ್ಳೆ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದು. ಇಲ್ಲ ಅಂದರೆ ಸ್ನೇಹಿತರ ನೀವು ನಾಲ್ಕು ಗ್ಲಾಸ್ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಇನ್ನೂ ತುಂಬಾನೆ ಒಳ್ಳೆಯದು. ಇನ್ನೊಂದು ಸ್ನೇಹಿತರೆ ನೀರನ್ನು ಯಾವಾಗಲೂ ಫಾಸ್ಟಾಗಿ ಕುಡಿಯಬಾರದು. ನಿಧಾನವಾಗಿ ಕುಡಿಯಬೇಕು.

ಹಾಗೆಯೇ ವೇಗವಾಗಿ ನೀರನ್ನು ಕುಡಿದರೆ ಅದು ನಮ್ಮ ಮೂಳೆಗಳಿಗೆ ತೊಂದರೆಯನ್ನುಂಟುಮಾಡುತ್ತದೆ.ಈ ರೀತಿಯಾಗಿ ನಾವು ಬೆಳಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜುವ ಮುನ್ನ ನೀರನ್ನು ಕುಡಿಯುವುದರಿಂದ ಹಲವಾರು ರೋಗಗಳಿಂದ ಮುಕ್ತಿಯನ್ನು ಹೊಂದಬಹುದು ಸ್ನೇಹಿತರೆ,ನೋಡಿದ್ರಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *