Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದಿನನಿತ್ಯ ನಿಮ್ಮ ಜೀವನದಲ್ಲಿ ನಿಮ್ಮ ಮನೆಯ ಮುಂದೆ ಕಾಗೆ ಬಂದು ನೀಡುವ ಕೆಲವು ಸೂಕ್ಷ್ಮ ಸೂಚನೆಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ !!!

ಕಾಗೆಯನ್ನು ಶನಿದೇವನ ವಾಹನ ಅಂತ ಹೇಳ್ತಾರ ಈ ಕಾಗೆಯನ್ನು ಯಾರು ಕೂಡ ಪೂಜೆ ಮಾಡುವುದಿಲ್ಲ ಆದರೆ ಶನಿದೇವನ ವಾಹನ ಅಂತ ಇದಕ್ಕೆ ಕೌರವ ನೀಡ್ತಾರೆ ಆದರೆ ಶನಿದೇವನ ವಾಹನ ಆಗಿರುವ ಈ ಕಾಗೆಯ ಕೆಲವೊಂದು ವರ್ತನೆ ಮನುಷ್ಯನ ಜೀವನಕ್ಕೆ ಕೆಲವೊಂದು ಸೂಚನೆಗಳನ್ನು ನೀಡುತ್ತಾ ಇರುತ್ತದೆ

ಅದು ಶುಭವೇ ಆಗಿರಬಹುದು ಅಶುಭವೇ ಆಗಿರಬಹುದು ಆ ಕೆಲವೊಂದು ಕಾಗೆಯ ವರ್ತನೆಯನ್ನ ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಅದು ನಿಮಗೆ ಶುಭವನ್ನು ತಿಳಿಸುತ್ತಾ ಇರುತ್ತದೆಯೊ ಅಥವಾ ಅಶುಭವನ್ನು ತಿಳಿಸುತ್ತಾ ಇರುತ್ತದೆಯೊ ಅಂತ ಸಂಪೂರ್ಣ ಮಾಹಿತಿಯನ್ನ ತಿಳಿಯಿರಿ

ಹಾಗೆ ನಿಮಗೆ ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡೋದನ್ನ ಮರೆಯದಿರಿ ಜೊತೆಗೆ ನಿಮ್ಮ ಅನಿಸಿಕೆ ಅನ್ನು ಕೂಡ ಕಾಮೆಂಟ್ ಮಾಡಿ.

ಈ ಒಂದು ಮಾಹಿತಿ ಶಕುನ ಶಾಸ್ತ್ರದಲ್ಲಿ ಉಲ್ಲೇಖವನ್ನು ಪಡೆದುಕೊಂಡಿತು ಇಂದಿನ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ಹಾಗೆ ಕಾಗೆಯ ಈ ಕೆಲವೊಂದು ಸೂಚನೆಗಳು ಶಕುನ ಶಾಸ್ತ್ರದ ಪ್ರಕಾರ ಏನೋ ಆಗಿರುತ್ತದೆ ಅನ್ನೋದನ್ನ ತಪ್ಪದೆ ತಿಳಿಯಿರಿ ಹಾಗೆ ನೀವೂ ಕೂಡ ಎಂದಾದರೂ ಈ ರೀತಿಯ ವರ್ತನೆ ವನ್ನ ಕಂಡಿದ್ದರೆ ತಪ್ಪದೇ ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಮೊದಲನೆಯದಾಗಿ ನೀವು ಮಾರ್ಗದಲ್ಲಿ ಹೋಗುವಾಗ ಅಥವಾ ಯಾತ್ರೆಗೆ ತೆರಳುವಾಗ ನಿಮ್ಮ ಎದುರು ಅಥವಾ ನೀವು ಹೋಗುವ ದಾರಿಯಲ್ಲಿ ಕಾಗೆ ಏನಾದರೂ 1ಬಿಂದಿಗೆಯಲ್ಲಿ

ಅಥವಾ ಪಾತ್ರೆಯೊಳಗೆ ನೀರನ್ನು ಕುಡಿಯುವ ಸನ್ನಿವೇಶವನ್ನು ನೀವೇನಾದರೂ ಕಂಡರೆ ಅದು ನಿಮಗೆ ಶುಭದ ಸಂಕೇತವಾಗಿರುತ್ತದೆ ನೀವು ಹೋಗುವ ಕೆಲಸ ಶುಭಕಾರಿಯಾಗಿ ಜರುಗುತ್ತದೆ ಎಂಬುದರ ಸೂಚನೆ ಇದಾಗಿರುತ್ತದೆ.

ಎರಡನೆಯದಾಗಿ ನೀವು ಹೋಗುವ ದಾರಿಯಲ್ಲಿ ಕಾಗೆ ಏನಾದರೂ ರೊಟ್ಟಿಯನ್ನ ಹಿಡಿದು ಹಾರುತ್ತಾ ಇರುವ ಒಂದು ಸನ್ನಿವೇಶ ನಿಮ್ಮ ಕಣ್ಣಿಗೆ ಬಿದ್ದರೆ ನಿಮಗೆ ಅದು ಶುಭದ ಸಂಕೇತ ಆಗಿದ್ದು ನಿಮ್ಮ ಇಚ್ಛೆಗಳು ನೆರವೇರುತ್ತದೆ ಎಂಬುದರ ಸೂಚನೆ ಇದಾಗಿರುತ್ತದೆ.

ಅಷ್ಟೇ ಅಲ್ಲ ನೀವೇನಾದರೂ ಪ್ರಾತಃ ಕಾಲದಲ್ಲಿ ಎದ್ದಾಗ ಪ್ರಾತಃ ಕಾಲದಲ್ಲಿ ನಿಮಗೆ ಈ ಕಾಗೆ ನಿಮ್ಮನ್ನು ಸ್ಪರ್ಶಿಸಿದರೆ ಹೌದು ಕಾಗೆಯ ಕಾಲು ಏನಾದರೂ ನಿಮ್ಮನ್ನು ಸ್ಪರ್ಶ ಮಾಡಿದರೆ ಅದು ಕೂಡ ನಿಮಗೆ ಶುಭದ ಸಂಕೇತವಾಗಿರುತ್ತದೆ. ನಿಮಗೆ ಮುಂದಿನ ದಿನಗಳಲ್ಲಿ ನಿಮ್ಮ ಕಷ್ಟಗಳು ಪರಿಹಾರ ಆಗಲಿದೆ ಎಂಬುದನ್ನು ಇದು ಸೂಚಿಸುತ್ತದೆ.

ಕಾಗೆ ಏನಾದರೂ ಬಟ್ಟೆಯ ತುಂಡನ್ನು ಹೊತ್ತುಕೊಂಡು ಹೋಗುವ ಹಾಗೆ ನಿಮ್ಮ ಕಣ್ಣಿಗೆ ಕಾಣಿಸಿಕೊಂಡಿದ್ದಲ್ಲಿ ಅದು ಕೂಡ ಶುಭದ ಸಂಕೇತವಾಗಿರುತ್ತದೆ ಮತ್ತು ಕಾಗೆಗಳು ಪೂರ್ವ ದಿಕ್ಕಿನಲ್ಲಿ ಅಥವಾ ಉತ್ತರ ದಿಕ್ಕಿನಲ್ಲಿ ಹಾರುವ ಒಂದು ದೃಶ್ಯವನ್ನು ನೀವು ಕಂಡಿದ್ದೇ ಆದಲ್ಲಿ ಅದು ಕೂಡಾ ನಿಮಗೆ ಶುಭದ ಸಂಕೇತವಾಗಿರುತ್ತದೆ.

ಸ್ತ್ರೀಯರು ಬಿಂದಿಗೆಯನ್ನು ಹೊತ್ತು ಕೊಂಡು ಹೋಗುವಾಗ ಆ ಬಿಂದಿಗೆಯ ಮೇಲೆ ಅಕಸ್ಮಾತಾಗಿ ಕಾಗೆ ಕುಳಿತರೆ ನಿಮಗೆ ಮುಂದಿನ ದಿನಗಳಲ್ಲಿ ಬಹಳ ಅದೃಷ್ಟ ಒಲಿದು ಬರಲಿದೆ ಎಂಬುದನ್ನು ಶಕುನಶಾಸ್ತ್ರ ಹೇಳುತ್ತಿದೆ.

ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಮರ ಇತ್ತು ಆ ಮರದಲ್ಲಿ ಕಾಗೆಯನ್ನಾದರೂ ಕಟ್ಟುತ್ತಿದ್ದರೆ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ಜರುಗಲಿದೆ ಅಥವಾ ನಿಮ್ಮ ಮನೆಯಲ್ಲಿ ಆದಷ್ಟು ಬೇಗ ತೊಟ್ಟಿಲು ಕಟ್ಟುತ್ತೀರಾ ಎಂಬುದರ ಸೂಚನೆ ಇದರ ವರ್ತನೆ ಆಗಿರುತ್ತದೆ. ಇಂದಿನ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *