ದಿನಕೊಂದು ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತ … ಮನುಶ್ಯನ ದೇಹಕ್ಕೆ ಬೇಕಾಗುವ ಅತ್ಯವಶ್ಯಕ ಹಣ್ಣು ಇದು..

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಕೀವಿ ಹಣ್ಣು ನಮ್ಮ ದೇಶದ ಹಣ್ಣು ಅಲ್ಲವಾದರೂ ಇದು ಪ್ರಪಂಚದ ಪ್ರತಿಯಿಂದು ದೇಶದಲ್ಲೂ ದೊರೆಯುವ ಹಣ್ಣು ಹಾಗೆಯೇ ನಮ ನಮ್ಮದೇಹಸದಲ್ಲೂ ಹೆಚ್ಚಾಗಿಯೇ ದೊರೆಯುತ್ತದೆ, ಈ ಹಣ್ಣಿ ನಲ್ಲಿ ಕ್ಯಾಲರಿಗಳು ಹಾಗು ಪ್ರೊಟೀನ್ ಗಳು ಅತಿ ಹೆಚ್ಚಿದೆ ಎನ್ನಲಾಗುತ್ತದೆ ಇನ್ನು ಕೃಷಿ ಇಲಾಖೆಯ ಹೇಳುವ ಪ್ರಕಾರ 100 ಗ್ರಾಂ ಕೀವಿ ಹಣ್ಣಿನಲ್ಲಿ 61 ಗ್ರಾಂ ಕ್ಯಾಲರಿ, 14.66 ಗ್ರಾಂ ಕಾರ್ಬೋಹೈಡ್ರೇಟ್​, 1.14 ಗ್ರಾಂ ಪ್ರೊಟೀನ್​, 0.52 ಗ್ರಾಂ ಫ್ಯಾಟ್​ ಮತ್ತು 3 ಗ್ರಾಂ ಫ್ಯಾಟ್​ ಅಂಶವಿದೆಯಂತೆ.

ಪ್ರತಿ ನಿತ್ಯ ಒಂದು ಕೀವಿ ಹಣ್ಣು ಸೇವಿಸುವುದರಿಂದ ಏನಾಗುತ್ತೆ ಅನ್ನೋದನ್ನ ಒಮ್ಮೆ ನೋಡೋಣ.

ರೋಗ ಪ್ರತಿರೋಧಕ : ಕಿತ್ತಳೆ, ನಿಂಬೆಹಣ್ಣಿಗೆ ಹೋಲಿಕೆಯಲ್ಲಿ ಕೀವಿ ಹಣ್ಣಿನಲ್ಲಿ ಬಹಳ ಜಾಸ್ತಿ ವಿಟಮಿನ್​ ಸಿ ಅಂಶ ಇದೆಯಂತೆ, ಆದ್ದರಿಂದ ಈ ಹಣ್ಣು ಉತ್ತಮ ಆ್ಯಂಟಿ ಆಕ್ಸಿಡೆಂಟ್ ಗುಣವೊಂದಿದ್ದು ಮತ್ತು ಇದು ಫ್ರೀ ರಾಡಿಕಲ್ಸ್​ನ್ನು ತೆಗೆದುಹಾಕಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋದನೆಗಳು ತಿಳಿಸಿವೆ.

ನಿದ್ದೆ ಕೊರತೆ ನೀಗಿಸುತ್ತದೆ : ರಾತ್ರಿ ನೀವು ಮಲಗುವ ಮುನ್ನ ಒಂದು ಕೀವಿ ಹಣ್ಣನ್ನು ಸೇವಿಸುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆಯಂತೆ, ಕೀವಿ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಮತ್ತು ಸೆರೊಟೊನಿನ್​ ಅಂಶ ನಿದ್ದೆ ಸಮಸ್ಯೆಗೆ ರಾಮ ಬಾಣ ವಾಗಿದ್ದು ಉತ್ತಮ ಪರಿಹಾರ ನೀಡುತ್ತದೆ.

ಸಕ್ಕರೆ ರೋಗಿಗಳಿಗೆ ಉತ್ತಮ : ಈ ಹಣ್ಣನ್ನು ತಿನ್ನುವುದರಿಂದ ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಡಯೇಟ್ರಿ ಫೈಬರ್ ಅಂಶ ದೊರೆಯುತ್ತದೆ ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣವಾಗುತ್ತದೆ, ಫೈಬರ್​ ಅಧಿಕವಾಗಿರುವ ಈ ಹಣ್ಣು ಸೇವಿಸುವುದರಿಂದ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಿ ಮತ್ತು ದೇಹದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ಉತ್ತಮ ಜೀರ್ಣಕ್ರಿಯೆ : ತಿಂದಿದ್ದು ನಿದಾನವಾಗಿ ಕರಗಿ ಹೊಟ್ಟೆ ಊದಿಕೊಳ್ಳುವಂತಹ ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೀವಿ ಹಣ್ಣು ಉತ್ತಮ ಎನ್ನಲಾಗಿದೆ, ಇದರಲ್ಲಿರುವ ಡಯೆಟ್ರಿ ಫೈಬರ್​ ಅಂಶ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ, ಹಾಗು ಹಸಿವನ್ನು ಹೆಚ್ಚಿಸುತ್ತದೆ.

ತ್ವಚೆಯ ಕಾಂತಿ : ಕೀವಿ ಹಣ್ಣು, ಜಂಕ್​ಫುಡ್ಸ್​ ಸೇವನೆಯಿಂದ ಉಂಟಾಗುವ ಆ್ಯಸಿಡಿಕ್ ಅಂಶವನ್ನು ತೆಗೆದುಹಾಕಿ ದೇಹದಲ್ಲಿ ಪಿಹೆಚ್​ ಮಟ್ಟವನ್ನು ನಿಯಂತ್ರಿಸುತ್ತದೆಯಂತೆ, ಜೊತೆಗೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ ಗುಣವಿರುವುದರಿಂದ ತ್ವಚೆಯ ಪ್ರಾಯ ಕರೆದುಕೊಳ್ಳುವುದನ್ನು ನಿಯಂತ್ರಿಸಿ, ಸುಕ್ಕುಗಟ್ಟುವುದು, ನೆರಿಗೆ, ಕಲೆಗಳನ್ನು ತಡೆಯುತ್ತದೆ.​

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *