Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ತೆಂಗಿನ ಕಾಯಿ ಸಿಪ್ಪೆ ಯನ್ನು ಬಿಸಾಡುವ ಮುನ್ನ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ !!!!

ನಿಮಗೇನಾದರೂ ಗಾರ್ಡನಿಂಗ್ ಮಾಡುವುದರಲ್ಲಿ ಬಹಳಾನೇ ಆಸಕ್ತಿ ಇದ್ದರೆ ನಿಮಗೆ ಗಿಡಗಳನ್ನು ಬೆಳೆಸುವ ಆಸೆ ಇದ್ದರೆ ಇಂದಿನ ಮಾಹಿತಿಯನ್ನು ನೀವು ತಪ್ಪದೆ ತಿಳಿಯಲೇಬೇಕು .

ಹೇಗೆ ಬೇಡದೆ ಇರುವ ವಸ್ತುವಿನಿಂದ ಗಿಡಗಳ ಬೆಳವಣಿಗೆಯನ್ನು ಚೆನ್ನಾಗಿ ಮಾಡಬಹುದು ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಮಾಹಿತಿಯಲ್ಲಿ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೆ ಈ ಮಾಹಿತಿಗೆ ಉಪಯುಕ್ತವಾಗಿದೆ ಅನ್ನಿಸಿದಲ್ಲಿ ಮಾಹಿತಿಗೆ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ.

ಹೌದು ನಾನು ಈ ಮೇಲೆ ತಿಳಿಸಿದ ಹಾಗೆ ಬೇಡದೆ ಇರುವ ಪದಾರ್ಥ ಅಂದರೆ ಏನು ಅಂತ ನೀವು ಯೋಚನೆ ಮಾಡ್ತಾ ಇದ್ರೆ ಅದು ತೆಂಗಿನ ಕಾಯಿಯ ನಾರು ತೆಂಗಿನ ಕಾಯಿಯ ಸಿಪ್ಪೆ ತೆಂಗಿನ ಕಾಯಿಯ ಚಿಪ್ಪು, ಇವನ್ನೆಲ್ಲ ಬಳಸಿಯೇ ನೀವು ಆರಾಮವಾಗಿ ಗಿಡವನ್ನು ಸುಲಭವಾಗಿ ಬೆಳೆಸಬಹುದು ಗಿಡಗಳನ್ನು ಒಣಗದೇ ಇರುವ ಹಾಗೆ ನೋಡಿಕೊಳ್ಳಬಹುದು.

ಪ್ರತಿಯೊಬ್ಬರ ಮನೆಯಲ್ಲಿ ತೆಂಗಿನಕಾಯಿಯನ್ನು ಬಳಸುತ್ತಿರುತ್ತಾರೆ ಈ ತೆಂಗಿನ ಕಾಯಿಯನ್ನು ಸಿಪ್ಪೆಯಿಂದ ಸುಲಿದಾಗ ಆ ತೆಂಗಿನಕಾಯಿಯ ಸಿಪ್ಪೆ ವ್ಯರ್ಥ ಅಂತಾನೇ ಆದರೆ ಇದು ಇದೀಗ ವ್ಯರ್ಥವಲ್ಲ ಇದರ ಸಹಾಯದಿಂದ ನೀವು ಆರಾಮವಾಗಿ ಕೋಕೊ ಪಾಟ್ ಅನ್ನು ತಯಾರಿಸಿ ಗಿಡಗಳಿಗೆ ಇಡುವುದರಿಂದ ಗಿಡಗಳು ಒಣಗದಂತೆ ಬೆಳೆಯುತ್ತದೆ.

ಹಾಗೂ ಪ್ರತಿ ದಿನ ನೀರನ್ನು ಹಾಕಬೇಕಲ್ಲ ಮರೆತೇ ಹೋಗುತ್ತದೆ ಅಂತ ಅಂದುಕೊಳ್ಳುವವರು ಈ ರೀತಿ ನಾರಿನ ಸಹಾಯದಿಂದ ಈ ಕೊಕೊ ಪಾಟ್ ನ ಮಾಡಿ ಗಿಡಗಳಿಗೆ ಇಡುವುದರಿಂದ ಒಂದು ದಿನ ಗಿಡಗಳಿಗೆ ನೀರು ಹಾಕುವುದನ್ನು ಮರೆತರೂ ಗಿಡಗಳು ಒಣಗದೆ ಚೆನ್ನಾಗಿರುತ್ತದೆ.

ಕೋಕೊಪಿಟ್ ಮಾರುಕಟ್ಟೆಯಲ್ಲಿ ಸಿಗುತ್ತದೆ ಆನ್ ಲೈನ್ ನಲ್ಲಿ ನೀವು ಶಾಪ್ ಮಾಡಬಹುದು ಈ ಕೊಕೊಪಿಟ್ ನ ಬೆಲೆ ಸುಮಾರು ನೂರೈವತ್ತರಿಂದ ಇನ್ನೂರು ರೂಪಾಯಿಗಳವರೆಗೂ ಇರುತ್ತದೆ,

ಆದರೆ ತೆಂಗಿನ ನಾರಿನ ಸಿಪ್ಪೆಯಿಂದ ಮಾಡುವ ಈ ಕೊಕೊ ಪಿಟ್ ಸುಲಭವಾಗಿ ಮಾಡಿ ಎಷ್ಟು ದಿನಗಳವರೆಗೆ ಬೇಕಾದರೂ ಶೇಖರಿಸಿಟ್ಟು ಆಗಾಗ ಗಿಡಗಳಿಗೆ ಹಾಕುವುದರಿಂದ ಇದು ಒಳ್ಳೆಯ ಫಲಿತಾಂಶವನ್ನು ನೀಡುವುದಲ್ಲದೆ ಮಣ್ಣಿನ ತೇವಾಂಶವನ್ನು ಕಾಪಾಡುವುದರಲ್ಲಿ ಸಹಕರಿಸುತ್ತದೆ.

ಕೋಕೋ ಪೆಟ್ಟನ್ನು ತಯಾರಿಸುವ ವಿಧಾನವೂ ಹೇಗೆ ಅಂದರೆ ತೆಂಗಿನ ನಾರನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಎಳೆ ಎಳೆಯಾಗಿ ತೆಗೆದುಕೊಳ್ಳಬೇಕು ಇದೀಗ ಮೃದುವಾಗಿರುವ ಸಿಪ್ಪೆಯನ್ನು ಜಾರಿ ನೊಳಗೆ ಹಾಕಿ ಇದನ್ನು ಎಷ್ಟು ಸಾಧ್ಯವೋ ಅಷ್ಟು ಸಣ್ಣದಾಗಿ ಪುಡಿ ಮಾಡಿಕೊಂಡು ನೀರಿನ ಸಹಾಯದಿಂದ ಮತ್ತು ಸ್ವಲ್ಪ ಮಣ್ಣನ್ನು ಹಾಕಿ ಮುದ್ದೆಯ ರೀತಿ ಮಾಡಿಕೊಳ್ಳಬೇಕು.

ಇದೀಗ ಈ ಕೋಕೊ ಪಿಟ್ ಅನ್ನು ಪಾರ್ಟ್ ನೊಳಗೆ ಹಾಕುವುದರಿಂದ ಮಣ್ಣು ಬೇಗನೆ ತೇವಾಂಶ ಕಳೆದುಕೊಳ್ಳುವುದಿಲ್ಲ ಇದರಿಂದ ಗಿಡಗಳು ಒಣಗುವುದಿಲ್ಲ ಮತ್ತು ಗಿಡಗಳನ್ನು ನೆಟ್ಟಿದ್ದರೆ ಅಥವಾ ಕಾಳುಗಳನ್ನು ಹಾಕಿ ಗಿಡವನ್ನು ಬೆಳೆಸಬೇಕು ಅಂತಿದ್ದರೆ ಈ ರೀತಿ ಕೋಕೊ ಪಿಟ್ ಅನ್ನು ಅಂದರೆ ನಾರಿನ ಪುಡಿಯಿಂದ ಮಾಡಿರುವ ಈ ಕೋಕೊಪಿಟ್ ಬೇಗನೆ ಮೊಳಕೆ ಬರಲು ಸಹಕರಿಸುತ್ತದೆ ಹಾಗೆ ನೀವು ಹಾಕಿದ ಗೊಬ್ಬರದ ಅಂಶವನ್ನು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಹಾಗಾದರೆ ಇಂದೆ ನಿಮ್ಮ ಮನೆಯಲ್ಲಿ ನಿಮಗೆ ಬಿಡುವಿನ ಸಮಯ ಸಿಕ್ಕಾಗ ಇದನ್ನು ಪ್ರಯತ್ನ ಮಾಡಿ ನೋಡಿ ಹಾಗೆ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಧನ್ಯವಾದ ಶುಭ ದಿನ.

Leave a Reply

Your email address will not be published. Required fields are marked *