ತುಳಸಿ ಗಿಡದ ಐದು ಎಲೆಗಳನ್ನು ನಿಮ್ಮ ಮನೆಯ ಇಲ್ಲಿ ರಹಸ್ಯವಾಗಿ ಈ ಒಂದು ಸ್ಥಳದಲ್ಲಿ ಇಟ್ಟರೆ ನಿಮಗೆ ಕುಬೇರರಾಗುವ ಯೋಗ ಒಲಿದು ಬರುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ತುಳಸಿ ಎಲೆಗಳಿಂದ ಈ ಒಂದು ಪರಿಹಾರವನ್ನು ಕೈಗೊಳ್ಳುವುದರಿಂದ ಮನೆಗೆ ಎದುರಾಗುವ ಕಷ್ಟ ಕಾರ್ಪಣ್ಯಗಳು ತೊಂದರೆಗಳು ನಿವಾರಣೆಯಾಗುತ್ತದೆ, ಹಾಗೆ ಕಷ್ಟ ಎಂಬುದು ಯಾರಿಗೆ ಇರುವುದಿಲ್ಲ ಹೇಳಿ,ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ಕಷ್ಟ ಇದ್ದೇ ಇರುತ್ತದೆ ಕಷ್ಟ ಇಲ್ಲದೇ ಇರುವ ಮನುಷ್ಯನ ಜೀವನವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯ ಇಲ್ಲ, ಬಿಡಿ ಯಾವುದಾದರೂ ಒಂದು ಬಗೆಯ ಕಷ್ಟಗಳು ಮನುಷ್ಯನಿಗೆ ಎದುರಾಗುತ್ತಲೇ ಇರುತ್ತದೆ.

ಹಾಗಾದರೆ ಈ ಕಷ್ಟಗಳು ಎದುರಾದಾಗ ಏನು ಮಾಡಬೇಕು ಚಿಕ್ಕಪುಟ್ಟ ಸಮಸ್ಯೆಗಳು ಎದುರಾದಾಗ ಅದಕ್ಕೆ ಬೇಗಾನೆ ಪರಿಹಾರವನ್ನು ಕಂಡುಕೊಂಡು ಬಿಡಬಹುದು ಆದರೆ ಪದೇ ಪದೆ ಕಷ್ಟಗಳು ಎದುರಾಗುತ್ತಿದ್ದರೆ ಎಲ್ಲವೂ ಕೂಡ ಸರಿಯಿದೆ ಅನ್ನುವ ಸಮಯದಲ್ಲಿಯೇ ಮತ್ತೊಂದು ಕಷ್ಟಗಳು ಎದುರಾಗಿ ಬಿಡುತ್ತದೆ,ಅಂತಹ ಒಂದು ಕಷ್ಟಕ್ಕೆ ಈ ದಿನದ ಮಾಹಿತಿಯಲ್ಲಿ ಸುಲಭವಾದ ಪರಿಹಾರವನ್ನ ಮಾಡಿ ಕೇವಲ ಐದು ತುಳಸಿ ಎಲೆಯಿಂದ ಈ ಒಂದು ಚಿಕ್ಕ ಪರಿಹಾರವನ್ನು ಕೈಗೊಳ್ಳಿ ಸಾಕು.ಹೌದು ತುಳಸಿ ನಮ್ಮ ಭಾರತ ದೇಶದಲ್ಲಿ ಒಂದು ಪೂಜನೀಯ ಸ್ಥಾನವನ್ನು ಪಡೆದುಕೊಂಡಿದೆ .

ವೈಜ್ಞಾನಿಕವಾಗಿ ಮಾತ್ರವಲ್ಲದೆ ಆಧ್ಯಾತ್ಮಿಕವಾಗಿಯೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ತುಳಸಿ ಎಲೆ ಮನುಷ್ಯನ ಜೀವನದಲ್ಲಿ ಎದುರಾಗುವ ಕಷ್ಟಗಳಿಗೆ ಪರಿಹಾರಗಳನ್ನು ನೀಡುವುದರೊಂದಿಗೆ, ಈ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ.ಹಾಗಾದರೆ ಜೀವನದಲ್ಲಿ ಬರುವ ಕಷ್ಟಗಳಿಗೆ ತುಳಸಿ ಎಲೆಗಳನ್ನು ಬಳಸಿ ಹೇಗೆ ಪರಿಹಾರವನ್ನು ಕಂಡುಕೊಳ್ಳುವುದು ಎಂಬುದನ್ನು ತಿಳಿಯೋಣ ವನ್ನು ಇಂದಿನ ಮಾಹಿತಿಯಲ್ಲಿ ಈ ಒಂದು ಪರಿಹಾರವನ್ನು ಮಾಡುವುದಕ್ಕೆ ಬೇಕಾಗಿರುವುದು ಒಂದು ಬಿಳಿ ಬಣ್ಣದ ಶುದ್ಧವಾದ ವಸ್ತ್ರ,

ಈ ಬಿಳಿ ಬಣ್ಣದ ವಸ್ತ್ರದ ಮೇಲೆ ಅರಿಶಿಣದ ನೀರನ್ನು ಹಾಕಿ ಹಳದಿ ವಸ್ತ್ರವನ್ನಾಗಿಸಿಕೊಳ್ಳಬೇಕು, ಈ ವಸ್ತ್ರವನ್ನು ತೆಗೆದುಕೊಂಡು ಅದರ ಮೇಲೆ ಅದು ತುಳಸಿ ದಳಗಳನ್ನು ಹಾಕಬೇಕು ನಂತರ ಈ ವಸ್ತ್ರವನ್ನು ಕಟ್ಟಿ ದೇವರ ಮುಂದೆ ಇಡಬೇಕು.ಈ ವಸ್ತ್ರವನ್ನು ದೇವರ ಮನೆಯಲ್ಲಿ ಇಟ್ಟು ಪ್ರತಿ ದಿನ ಇದಕ್ಕೆ ಪೂಜೆಯನ್ನು ಸಲ್ಲಿಸಬೇಕು. ಹೇಗೆ ಪ್ರತಿ ದಿನ ದೇವರಿಗೆ ಪೂಜೆ ಅನ್ನು ಸಲ್ಲಿಸುತ್ತೇವೆಯೊ ಅದೇ ರೀತಿಯಲ್ಲಿ ಈ ವಸ್ತ್ರದಲ್ಲಿ ಕಟ್ಟಿರುವಂತಹ ಪದಾರ್ಥಗಳಿಗೂ ಪ್ರತಿ ದಿನ ಪೂಜೆಯನ್ನು ಸಲ್ಲಿಸಬೇಕು, ಹದಿನೈದು ದಿನಗಳ ವರೆಗೂ ಈ ವಸ್ತ್ರಕ್ಕೆ ಪ್ರತಿ ದಿನ ಪೂಜೆಯನ್ನು ಸಲ್ಲಿಸಬೇಕಾಗುತ್ತದೆ.

ನಂತರ ಈ ಹಳದಿ ವಸ್ತ್ರದಲ್ಲಿ ಇರುವ ಪದಾರ್ಥಗಳನ್ನು ಹರಿಯುವ ನೀರಿಗೆ ಬಿಡಬೇಕು, ಈ ಪರಿಹಾರವನ್ನು ನೀವು ಕೈಗೊಳ್ಳುವುದರಿಂದ ನಿಮ್ಮ ಮನಸ್ಸಿನಲ್ಲಿ ಮಾಡಿಕೊಂಡಿರುವ ಸಂಕಲ್ಪವೂ ನೆರವೇರುತ್ತದೆ.ಹಾಗೆಯೇ ನಿಮಗೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ ಅದಕ್ಕಾಗಿಯೇ ಏನು ಮಾಡಬೇಕು ಅಂದರೆ, ಒಂದು ಬಿಳಿ ವಸ್ತ್ರವನ್ನು ತೆಗೆದುಕೊಂಡು ಅದರಲ್ಲಿ ಐದು ತುಳಸಿ ಎಲೆಯನ್ನು ಹಾಕಬೇಕು, ಈ ಬಟ್ಟೆಯನ್ನು ಕಟ್ಟಿ ನೀವು ಮಲಗುವ ಕೋಣೆಯಲ್ಲಿ, ನಿಮ್ಮ ದಿಂಬಿನ ಕೆಳಗೆ ಅಥವಾ ಹಾಸಿಗೆಯ ಕೆಳಗೆ ಇಟ್ಟುಕೊಂಡು ಮಲಗಬೇಕು, ಇದರಿಂದ ಕೆಟ್ಟ ಕನಸುಗಳು ಬೀಳುವುದಿಲ್ಲ.

ನೀವು ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುತ್ತಿಲ್ಲ ಅನ್ನುವುದಾದರೆ ಮಂಗಳವಾರ ಅಥವಾ ಶನಿವಾರದ ದಿವಸದಂದು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಕಡಲೆಕಾಳು ಮತ್ತು ಬೆಲ್ಲವನ್ನು ದಾನವಾಗಿ ನೀಡುವುದರಿಂದ, ನೀವು ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ. ಈ ದಿನ ತಿಳಿಸಿದಂತಹ ಪರಿಹಾರವೂ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *