ಆಧ್ಯಾತ್ಮಿಕವಾಗಿ ವೈಜ್ಞಾನಿಕವಾಗಿಯೂ ವಿಶೇಷವಾದ ಸ್ಥಾನವನ್ನು ಹೊಂದಿರುವ ತುಳಸಿ ಗಿಡದ ಬಗ್ಗೆ ಈಗಾಗಲೇ ಅನೇಕ ಮಾಹಿತಿಗಳನ್ನು ನಾನು ನಿಮಗೆ ತಿಳಿಸಿಕೊಟ್ಟಿದ್ದೇನೆ .
ಇದರ ಜೊತೆಗೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ತುಳಸಿ ಗಿಡವನ್ನು ಪೂಜಿಸುವಾಗ ಪಠಿಸ ಬೇಕಾಗಿರುವ ಒಂದು ಮಂತ್ರವನ್ನು ತಿಳಿಸಿಕೊಡುತ್ತೇನೆ ಇದನ್ನು ನೀವು ತುಳಸಿ ಮಾತೆಯನ್ನು ಪೂಜಿಸುವಾಗ ಪ್ರತಿದಿನ ಪಠಿಸಿ ಇದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ .
ಹಾಗೆ ಈ ಒಂದು ಮಂತ್ರ ಯಾವುದು ಇದನ್ನು ಹೇಗೆ ಯಾವಾಗ ಪಠಿಸಬೇಕು ಎಂಬುದನ್ನು ತಿಳಿಸುತ್ತೇನೆ ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.
ಹೌದು ತುಳಸಿ ಮಾತೆಯಾದ ಈ ತುಳಸಿ ಗಿಡದಲ್ಲಿ ವಿಷ್ಣು ನೆಲೆಸಿರುತ್ತಾರೆ ಎಂಬ ನಂಬಿಕೆಯಿದೆ ಹಾಗೆ ತುಳಸಿ ಗಿಡವನ್ನು ಎಲ್ಲೆಂದರೆ ಅಲ್ಲಿ ಇಡಬಾರದು ಇದರಿಂದ ಪವಿತ್ರವಾದ ತುಳಸಿಗೆ ಅಗೌರವ ಸೂಚಿಸಿದ ಹಾಗೆ ಆಗುತ್ತದೆ ಆದ್ದರಿಂದ ಪವಿತ್ರವಾದ ಸ್ಥಳಗಳಲ್ಲಿ ತುಳಸಿ ಗಿಡವನ್ನು ಇಟ್ಟು ಪೂಜಿಸುವುದು ಒಳ್ಳೆಯದು.
ತುಳಸಿ ಗಿಡವನ್ನು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪೂಜಿಸಬೇಕು ಬೆಳಗ್ಗೆ ಸಮಯದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ತುಳಸಿ ಗಿಡವನ್ನು ಪೂಜಿಸುವುದು ಶ್ರೇಷ್ಠ ಹಾಗೇ ಸಂಜೆ ಸಮಯದಲ್ಲಿ ಗೋಧೂಳಿ ಸಮಯ ಅಂದರೆ ಸೂರ್ಯಾಸ್ತವಾಗುವ ಸಮಯದಲ್ಲಿ ಬಳಸಿ ಮಾತೆಯನ್ನು ಪೂಜಿಸಬೇಕು.
ತುಳಸಿ ಗಿಡವನ್ನು ಪೊರಕೆಯಿಂದ ಆಗಲಿ ಅಥವಾ ಕಾರಿನಿಂದ ಆಗಲೇ ಸೊಕಿಸಬಾರದು, ಹಾಗೆ ಪರಮ ಪವಿತ್ರವಾದ ತುಳಸಿ ದೇವಿಯನ್ನು ಈ ಒಂದು ಮಂತ್ರವನ್ನು ಪಠಿಸುತ್ತಾ ದೇವಿಯನ್ನು ಆರಾಧಿಸ ಬೇಕಾಗುತ್ತದೆ ಹಾಗಾದರೆ ತುಳಸಿ ದೇವಿಯನ್ನು ಪೂಜಿಸುವಾಗ ಪಡಿಸ ಬೇಕಾಗಿರುವ ಆ ಮಂತ್ರ ಯಾವುದು ಎಂದು ತಿಳಿಸುತ್ತೇನೆ ಕೇಳಿ.
” ಏನ್ಮೂಲೆ ಸರ್ವ ತೀರ್ಥಾನಿ ಏನ್ಮಧ್ಯೆ ಸರ್ವ ದೇವತಾಃ ಯಾದಾಗ್ರೆ ಸರ್ವ ವೇದಾಸ್ಚ ತುಳಸಿ ತ್ವಾಂ ನಮಾಮ್ಯಂ” ಈ ಮಂತ್ರವನ್ನು ತುಳಸಿ ದೇವಿಯನ್ನು ತುಳಸಿ ಗಿಡವನ್ನು ಪೂಜಿಸುವಾಗ ಪಠಿಸಿ ಹಾಗೆ ತುಳಸಿ ದೇವಿಯನ್ನು ಪೂಜಿಸುವಾಗ ತುಳಸಿ ಗಿಡದಿಂದ ತುಳಸಿ ದಳಗಳನ್ನು ಕೀಳಬಾರದು.
ಹಾಗೆ ತುಳಸಿ ದಳವನ್ನು ಕೇಳುವಂತಹ ಸಂದರ್ಭದಲ್ಲಿ ರಾಮ ರಾಮಾಯ ನಮಃ ಅಥವಾ ಓಂ ವಿಷ್ಣವೇ ನಮಃ ಎಂಬ ಮಂತ್ರವನ್ನು ಪಠಿಸುತ್ತಾ ದಳಗಳನ್ನು ಕೀಳುವುದು ಶ್ರೇಷ್ಠ .
ತುಳಸಿ ಎಲೆಗಳನ್ನು ಭಾನುವಾರ ಶುಕ್ರವಾರ ಮತ್ತು ಸೋಮವಾರ ದಿವಸ ದಂದು ಕೀಳಬಾರದು ಹಾಗೆ ತುಳಸಿ ಗಿಡಕ್ಕೆ ಪ್ರತಿದಿನ ಬೆಳಗ್ಗೆ ನೀರನ್ನು ಹಾಕಬೇಕು ಮತ್ತು ಸಂಜೆಯ ಸಮಯದಲ್ಲಿ ದೇವಿಯ ಆರಾಧನೆ ಮಾಡುತ್ತಾ ತುಪ್ಪದ ದೀಪವನ್ನು ತುಳಸಿ ಗಿಡದ ಮುಂದೆ ಹಚ್ಚಬೇಕು.
ಹಾಗೆ ಹಚ್ಚಿದಂಥ ದೀಪವನ್ನು ತುಳಸಿ ಗಿಡದಿಂದ ಸ್ವಲ್ಪ ದೂರವಿಡುವುದು ಒಳ್ಳೆಯದು ಯಾಕೆ ಅಂದರೆ ದೀಪದ ಶಾಖಾ ತುಳಸಿ ಗಿಡದ ಎಲೆಗಳನ್ನು ಮಾಡುವಂತೆ ಮಾಡುತ್ತದೆ.
ಹೀಗೆ ತುಳಸಿ ಗಿಡವನ್ನು ಪ್ರತಿ ದಿನ ಪೂಜಿಸಿ ಮತ್ತು ತುಳಸಿ ಮಾತೆಯ ಆಶೀರ್ವಾದಕ್ಕೆ ಪಾತ್ರರಾಗಿ ನಿಮಗೆ ಒಂದು ಮಾಹಿತಿ ಇಷ್ಟವಾಗಿದೆ ಅಂತಲೇ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ .
ಇನ್ನು ಅನೇಕ ಶಾಸ್ತ್ರ ಸಂಪ್ರದಾಯ ಆಚಾರ ವಿಚಾರಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಾಗಿ ಇಂಟರೆಸ್ಟಿಂಗ್ ವಿಚಾರಗಳನ್ನು ಕುರಿತು ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಶುಭ ದಿನ ಧನ್ಯವಾದ