Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ತವರು ಮನೆ ಬಿಟ್ಟು ಹೋಗ್ತಿದ್ದೇನೆ ಎಂದು ಮೈಸೂರನ್ನು ಬಿಟ್ಟು ಹೋಗುವಾಗ ರೋಹಿಣಿ ಸಿಂಧೂರಿ ಭಾವುಕರಾಗಿದ್ದು ಯಾಕೆ ಗೊತ್ತ …!!!

ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ವಿಚಾರ ಇದೀಗ ರಾಜ್ಯದೆಲ್ಲೆಡೆ ವೈರಲ್ ಆಗಿದೆ ಹಾಗೂ ರೋಹಿಣಿ ಸಿಂಧೂರಿ ಅವರು ಈ ಕುರಿತು ಮಾಧ್ಯಮದವರೊಡನೆ ಪ್ರತಿಕ್ರಿಯೆ ನೀಡಿರುವ ಪ್ರಕಾರ ವಿಚಾರ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ ಈ ಮಾಹಿತಿ ಮೂಲಕ ಸಂಪೂರ್ಣವಾಗಿ ಈ ಲೇಖನವನ್ನ ತಿಳಿಯಿರಿ ಹಾಗೂ ರೋಹಿಣಿ ಸಿಂಧೂರಿ ಅವರ ಕರ್ತವ್ಯ ನಿಷ್ಠೆ ನಿಮಗೂ ಕೂಡ ಒಪ್ಪಿಗೆ ಆಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಹೌದು ಈಗಾಗಲೇ ರಾತ್ರೋರಾತ್ರಿ ವರ್ಗಾವಣೆ ಆಗಿರುವ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಅನ್ನೂ ರದ್ದುಗೊಳಿಸಬೇಕಾಗಿ ಮೈಸೂರಿನ ಡಿಸಿ ರೋಹಿಣಿ ಅವರು ಸಿಎಂ ಅವರನ್ನು ಭೇಟಿ ನೀಡಿ ಮನವಿ ಮಾಡಿದ್ದರು. ಆದರೆ ಇದಕ್ಕೆ ಬಿಲ್ಕುಲ್ ಒಪ್ಪದ ಮುಖ್ಯಮಂತ್ರಿ ಅವರು, ಬರಿಗೈನಲ್ಲಿ ವಾಪಸ್ಸು ಹಿಂದಿರುಗಿದ್ದಾರೆ ರೋಹಿಣಿ ಸಿಂಧೂರಿ. ಇನ್ನೂ ರೋಹಿಣಿ ಸಿಂಧೂರಿ ಅವರ ಜೊತೆಗೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.

ರೋಹಿಣಿ ಸಿಂಧೂರಿ ಅವರ ವರ್ಗಾವಣೆಯ ನಂತರ ಮೈಸೂರಿಗೆ ಹಿಂದಿರುಗಿ ಮಾಧ್ಯಮಗೋಷ್ಠಿ ಅಲ್ಲಿ ಹೇಳಿಕೆ ನೀಡುವ ಸಮಯದಲ್ಲಿ ಹೀಗೆಂದು ಹೇಳಿಕೊಂಡಿದ್ದಾರೆ ಹೊಸ ಡಿಸಿ ಅವರಿಗೆ ಶುಭ ಹಾರೈಸುವುದಕ್ಕಾಗಿ ಬಂದಿದ್ದೇನೆ ಮತ್ತು ಕೋವಿಂದ್ ಕೆಲಸಗಳು ಮತ್ತು ಇನ್ನಿತರೆ ವಿಚಾರಗಳ ಬಗ್ಗೆ ಇನ್ನಿತರ ಕೆಲಸಗಳ ಬಗ್ಗೆ ಮಾಹಿತಿ ನೀಡಲೆಂದು ಬಂದಿದ್ದೇನೆ ಈ ಮೈಸೂರು ತನಗೆ ತವರುಮನೆ ಹಾಗೆ ಇತ್ತು ಇಲ್ಲಿಯ ಜನರು ನನಗೆ ಮಗಳ ಸ್ಥಾನವನ್ನು ನೀಡಿ, ಮಗಳ ಪ್ರೀತಿಯನ್ನು ನೀಡಿದ್ದರು. ಒಳ್ಳೆಯ ಕೆಲಸಗಳು ನಡೆಯುವ ಸಮಯದಲ್ಲಿ ವರ್ಗಾವಣೆ ಮಾಡಲಾಗಿದೆ, ವರ್ಗಾವಣೆ ಮಾಡಿದ ತಕ್ಷಣ ಮಿಷನ್ ಸ್ಟಾಪ್ ಆಗುತ್ತದೆ ಅಂತ ಏನೂ ಇಲ್ಲ ಯಾವ ಕಚೇರಿಯಲ್ಲಿಯೂ ಕೂಡ ಈ ರೀತಿ ವರ್ಗಾವಣೆ ನಡೆದರೆ ಯಲ್ಲಿಯೂ ಬೆಳವಣಿಗೆ ಸಾಧ್ಯವಿಲ್ಲ ಎಂದು ರೋಹಿಣಿ ಸಿಂಧೂರಿ ಅವರು ಹೇಳಿಕೆ ನೀಡಿದ್ದಾರೆ.

ಇನ್ನೂ ರೋಹಿಣಿ ಸಿಂಧೂರಿ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, ಭೂ ಮಾಫಿಯಾಗೆ ಬಲಿಯಾದ್ರಾ ಎಂಬ ಪ್ರಶ್ನೆಗೆ ರೋಹಿಣಿ ಸಿಂಧೂರಿ ಅವರು ನೀಡಿರುವ ಉತ್ತರ ನೋ ಕಮೆಂಟ್ಸ್ ಎಂದು. ಇನ್ನು ಕೋವಿಡ್ ಕೆಲಸ ನಿರ್ವಹಣೆ ಅಲ್ಲಿ ಜಿಲ್ಲೆ ವಿಫಲವಾಗಿದೆ ಎಂದು ಶಿಲ್ಪಾ ನಾಗ್ ಅವರನ್ನು ಪ್ರಶ್ನಿಸಿದಾಗ ಡಿಸಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವೆ ಜಗಳ ನಡೆದಿತ್ತು ಈ ಸಮಯದಲ್ಲಿ ಶಿಲ್ಪಾನಾಗ್ ಅವರು ರಾಜಿನಾಮೆ ಸಲ್ಲಿಸಿ ರೋಹಿಣಿ ಅವರ ಕೆಲಸದ ವೈಖರಿ ಕುರಿತು ಅಲ್ಲಗೆಳೆದಿದ್ದರು. ಇವರಿಬ್ಬರ ನಡುವಿನ ಜಗಳ ಸರ್ಕಾರದ ದೊಡ್ಡ ತಲೆನೋವಾಗಿತ್ತು, ಈ ಸಲುವಾಗಿ ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಇವರಿಬ್ಬರ ನಡುವಿನ ಜಗಳಕ್ಕೆ ತೆರೆ ಎಳೆದಿದೆ ಸರಕಾರ.

ಪ್ರಸ್ತುತ ಮೈಸೂರು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಅಧಿಕಾರಿಯಾಗಿದ್ದ ಡಾ ಬಗಾದಿ ಗೌತಮ್ ಅವರನ್ನು ನೇಮಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಡಳಿತ ವ್ಯವಸ್ಥಾಪಕರಾದ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ಮೈಸೂರು ಮಹಾನಗರಪಾಲಿಕೆಯ ಆಯುಕ್ತರನ್ನಾಗಿ ನೇಮಿಸಿಲಾಗಿದೆ. ಈ ಇಬ್ಬರು ಅಧಿಕಾರಿಗಳು ನಿನ್ನೆ ದಿವಸ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ