ಜೇಷ್ಠಮಧುವಿನ ಪವರ್ ಫುಲ್ ಆರೋಗ್ಯಕರ ಪ್ರಯೋಜನಗಳು… ನಿಮ್ಮ ಮೆದುಳು ಸಕತ್ ಶಾರ್ಪ್ ಆಗುತ್ತೆ

87

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ನಾವು ಸಾಕಷ್ಟು ಔಷಧೀಯ ಗುಣ ಇರುವಂತಹ ಮರಗಿಡಗಳನ್ನು ನೋಡಬಹುದು ಇನ್ನು ಅವುಗಳ ತೊಗಟೆ ಎಲೆಗಳು ಕಡ್ಡಿಗಳ ಸಹಾಯದಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳ ಬಹುದಾಗಿದೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಜೇಷ್ಠ ಮಧು ಎಂಬ ಸಣ್ಣ ಕಡ್ಡಿಯ ಬಗ್ಗೆ .

ಇದು ನೋಡಲು ಸಣ್ಣ ಕಡ್ಡಿಯಂತೆ ಇರಬಹುದು ನೀವು ಈ ಜೇಷ್ಠ ಮಧುವನ್ನು ಗ್ರಂಥಿಕೆ ಅಂಗಡಿಗಳಲ್ಲಿ ಕೊಂಡುಕೊಳ್ಳಬಹುದು ಅಥವಾ ನೀವು ಇದನ್ನು ಆನ್ ಲೈನ್ ನಲ್ಲಿ ಕೂಡ ತರಿಸಿಕೊಂಡು ಬಳಸಬಹುದಾಗಿದೆ . ಈ ಜ್ಯೇಷ್ಠ ಮಧುವಿನ ಸಹಾಯದಿಂದ ನಾವು ನಾನಾ ತರಹದ ಆರೋಗ್ಯಕರ ತರಹ ನಗಳನ್ನು ಪಡೆದುಕೊಳ್ಳಬಹುದು ಹಾಗಾದರೆ ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಜ್ಯೇಷ್ಠ ಮದುವೇನಾ ನಾನಾ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು .

ಮೊದಲಿಗೆ ಜೇಷ್ಠಾ ಮಧುವನ್ನು ಬಳಸಿ ಕೂದಲುದುರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ ಹೌದು ಸ್ನೇಹಿತರ ಈ ಕೂದಲುದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಲಿಂಗ ಭೇದವಿಲ್ಲದೆ ಗಂಡು ಮತ್ತು ಹೆಣ್ಣು ಇಬ್ಬರಲ್ಲಿಯೂ ಕೂಡ ಕಾಡುತ್ತಿರುವುದು ಈ ಕೂದಲು ದರ ಸಮಸ್ಯೆ ಇದಕ್ಕಾಗಿ ಜೇಷ್ಠಮಧುವನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ .

ಇನ್ನು ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಈ ಜ್ಯೇಷ್ಠ ಮಧು ಹೌದು ಪ್ರತಿ ವಾರಕ್ಕೊಮ್ಮೆ ಹತ್ತು ಗ್ರಾಂ ಜೇಷ್ಠ ಮಧುವಿನ ಪುಡಿಯನ್ನು ಹಾಲಿನೊಂದಿಗೆ ಅಥವಾ ನೀರಿನೊಂದಿಗೆ ಬೆರೆಸಿ ಕುಡಿಸುವುದರಿಂದ ಮಕ್ಕಳಲ್ಲಿ ಮೆಮೊರಿ ಪವರ್ ಹೆಚ್ಚುತ್ತದೆ ಹಾಗೂ ಮಕ್ಕಳು ಆ್ಯಕ್ಟೀವ್ ಆಗಿರಲು ಸಹಕರಿಸುತ್ತದೆ .

ತಲೆನೋವು ಶೀತ ಕೆಮ್ಮು ಜ್ವರ ಇಂತಹ ಸಮಸ್ಯೆಗಳಿಗೆ ಬೇಗನೆ ಪರಿಹಾರ ನೀಡುತ್ತದೆ ಈ ಜೇಷ್ಠಮಧು , ಹೌದು ಇಂತಹ ಕೆಲವೊಂದು ಸಣ್ಣ ಸಣ್ಣ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿಯೇ ಜೇಷ್ಠ ಮಧುವಿನ ಸಹಾಯದಿಂದ ಕಷಾಯದ ರೀತಿ ಅಥವಾ ಇದನ್ನು ತೇಯ್ದು ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ .

ಅಜೀರ್ಣ ಗಂಟಲು ನೋವಿನ ಸಮಸ್ಯೆ ಗಂಟಲು ತುರಿಕೆ ಬ್ರಾಂಕೈಟಿಸ್ ಕೆಮ್ಮು ಗಂಟಲು ವಾಗುವುದು ಉಸಿರಾಟದ ಸಮಸ್ಯೆಗಳಿಗೆ ಕೂಡ ಇದು ಉತ್ತಮ ಮನೆ ಮದ್ದು ಅಂತಾನೇ ಹೇಳಬಹುದಾಗಿದೆ . ಶುಂಠಿ ಜೇಷ್ಠಮಧು ಮತ್ತು ಅಮೃತ ಬಳ್ಳಿ ಈ ಮೂರು ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರಿನಲ್ಲಿ ಕುದಿಸಿ ನೀರನ್ನು ಶೋಧಿಸಿ ಕುಡಿಯುವುದರಿಂದ ಮತ್ತು ಇದರ ಜೊತೆಗೆ ಇದರಿಂದ ಪಥ್ಯವನ್ನು ಮಾಡುವುದರಿಂದ ಆಮವಾತ ಕಡಿಮೆಯಾಗುತ್ತದೆ .

ನೈಸರ್ಗಿಕ ಇಸ್ಟ್ರೋಜನ್ ಉತ್ಪತ್ತಿ ಮಾಡುತ್ತದೆ ಜ್ಯೇಷ್ಠ ಮಧು ಹಾಗೂ ಹೆಣ್ಣು ಮಕ್ಕಳಲ್ಲಿ ಮೆನೋಪಾಸ್ ಸಮಸ್ಯೆಗೆ ಇದು ಉತ್ತಮ ಪರಿಹಾರವನ್ನು ನೀಡುತ್ತದೆ .ಇನ್ನು ಪುರುಷರ ಆರೋಗ್ಯ ವೃದ್ಧಿ ಸುವುದರಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ ಈ ಜೇಷ್ಠ ಮಧುವನ್ನು ವಾರಕ್ಕೊಮ್ಮೆ ಬಳಸುವುದರಿಂದ ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ .

ಸ್ಕಿನ್ ಅಲರ್ಜಿ ಆಮಶಂಕೆ ಮತ್ತು ಅಸ್ತಮಾದಂತಹ ಸಮಸ್ಯೆಗಳನ್ನು ಕೂಡ ಪರಿಹರಿಸುತ್ತದೆ ಈ ಜೇಷ್ಠ ಮಧು ಆದ್ದರಿಂದ ಈ ಜ್ಯೇಷ್ಠ ಮಧುವಿನಲ್ಲಿ ಇಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳು ಇರುವ ಕಾರಣದಿಂದಾಗಿ ಇದನ್ನು ಬಳಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ .

ಕೊಲೆಸ್ಟ್ರಾಲ್ ಕರಗಿಸುವಲ್ಲಿ ಇದು ಹೆಚ್ಚು ಸಹಕಾರಿಯಾಗಿದ್ದು ಹೃದಯದ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ ಮತ್ತು ಉತ್ತಮ ಆ್ಯಂಟಿ ಆಕ್ಸಿಡೆಂಟ್ಸ್ ಗಳ ಉತ್ಪತ್ತಿ ಮಾಡಲು ಇದು ಹೆಚ್ಚು ಸಹಕಾರಿಯಾಗುತ್ತದೆ .ಈ ರೀತಿಯಾಗಿ ಜೇಷ್ಠಮಧು ಸಣ್ಣ ಕಡ್ಡಿ ಆಗಿದ್ದರೂ ಕೂಡ ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ಇದು ಹೊಂದಿರುತ್ತದೆ .

LEAVE A REPLY

Please enter your comment!
Please enter your name here