ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದಂತಹ ಕೆಲವೊಂದು ಸಮಸ್ಯೆಗಳಿರುತ್ತವೆ ಆ ಸಮಸ್ಯೆಗಳಿಗೆ ಅನುಗುಣವಾಗಿ ಎಲ್ಲರೂ ಕೂಡಾ ಪರಿಹಾರಗಳನ್ನು ಹುಡುಕಲು ಹೊರಟಿರುತ್ತಾರೆ. ಆದರೆ ಈಗ ನಾವು ನಿಮಗೆ ಕೆಲವೊಂದು ಮುಖ್ಯವಾದ ವಿಷಯಗಳನ್ನು ಹೇಳುತ್ತೇನೆ
ಮರೆತು ಕೂಡ ಈ ವಿಷಯಗಳನ್ನ ಬೇರೆಯವರೊಂದಿಗೆ ಹಂಚಿಕೊಳ್ಳದಿರಿ ಏಕೆಂದರೆ ಇವು ನಿಮ್ಮ ಖಾಸಗಿ ವಿಷಯಗಳಾಗಿರುತ್ತವೆ ಈ ವಿಷಯಗಳನ್ನು ನೀವು ಬೇರೆಯವರೊಂದಿಗೆ ಎಂದು ಕೂಡ ಮಾತನಾಡಬಾರದು ಆ ರೀತಿ ಮಾತನಾಡಿದರೆ ನಿಮಗೆ ಸಮಸ್ಯೆಗಳು ಖಂಡಿತ.
ಆದ್ದರಿಂದ ಈ ರೀತಿ ವಿಷಯಗಳ ಕಡೆ ಹೆಚ್ಚು ಗಮನ ವಹಿಸಿ ನಾವು ಕೆಲವೊಬ್ಬರು ಆತ್ಮೀಯರೆಂದು ಕೊಂಡು ಅವರ ಬಳಿ ನಮ್ಮ ಎಲ್ಲಾ ವಿಷಯಗಳನ್ನೂ ಕೂಡ ಹಂಚಿಕೊಳ್ಳುತ್ತೇವೆ ಆದರೆ ಆ ರೀತಿ ನೀವು ಎಂದಿಗೂ ಮಾಡಬಾರದು ಕೆಲವೊಂದು ವಿಷಯಗಳನ್ನು ನಾವು ಬೇರೆಯವರ ಮುಂದೆ ಪ್ರಸ್ತಾಪಿಸಿದರೆ ಅದರಿಂದ ನಮಗೆ ಕೆಡುಕಾಗುವುದೆಂದೂ ಖಂಡಿತ
ಅವರು ನಮಗೆ ಎಷ್ಟೇ ಆತ್ಮೀಯರಾದರೂ ಕೂಡ ಕೆಲವೊಂದು ವಿಷಯಗಳನ್ನು ಯಾರ ಬಳಿಯೂ ಹೇಳಿಕೊಳ್ಳಬಾರದು ಎಂದು ಚಾಣಕ್ಯ ಹೇಳಿದ್ದಾರೆ.ಚಾಣಕ್ಯ ಎಂದರೆ ಎಲ್ಲರಿಗೂ ತಿಳಿದಿದೆ ಅಲ್ಲದೆ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು ಸಾಮ್ರಾಜ್ಯ ಸ್ಥಾಪನೆ ಮಾಡಲು ಸಹಾಯ ಮಾಡಿದ ಚಂದ್ರಗುಪ್ತ ಮೌರ್ಯನ ಮಂತ್ರಿ ಅವರನ್ನ ಕೌಟಿಲ್ಯ
ಎಂದು ಕೂಡ ಕರೆಯುತ್ತಾರೆ ಆದರೆ ಅವರು ಹೇಳಿರುವ ನೀತಿಗಳನ್ನು ಚಾಣಕ್ಯ ನೀತಿ ಎಂದು ಕರೆಯುವುದು ವಾಡಿಕೆಯಲ್ಲಿದೆ ಆ ನೀತಿಗಳಲ್ಲಿ ಪ್ರಮುಖವಾದ ತಪ್ಪುಗಳ ಬಗ್ಗೆ ಈ ದಿನ ನಾವು ಚರ್ಚಿಸೋಣ.ಸಾಮಾನ್ಯವಾಗಿ ಪ್ರತಿಯೊಂದು ವ್ಯಕ್ತಿಯಲ್ಲೂ ಕೂಡ ನಕಾರಾತ್ಮಕ ಮತ್ತು ಸಕಾರಾತ್ಮಕ ಅಂಶಗಳು ಎಂಬುದು ಇರುತ್ತವೆ ಎಂದು ಕೂಡ ನೀವು ಯಾರ ಬಳಿಯೂ ನಕಾರಾತ್ಮಕ ಅಂಶಗಳನ್ನು ಹೇಳಿಕೊಳ್ಳಬೇಡಿ
ಯಾವಾಗಲೂ ಕೂಡ ಒಳ್ಳೆಯ ಸಕಾರಾತ್ಮಕ ಅಂಶಗಳನ್ನು ಹೇಳಿಕೊಳ್ಳುವ ಪ್ರಯತ್ನವನ್ನ ಮಾಡಿ ಅದರ ಜೊತೆಯಲ್ಲಿ ಮತ್ತೊಂದು ಪ್ರಮುಖವಾದ ವಿಷಯವನ್ನು ಕೂಡ ಚಾಣಕ್ಯರು ಪ್ರಸ್ತಾಪಿಸಿದ್ದಾರೆ ಅದೇನೆಂದರೆ ಎಂದೂ ಕೂಡ ನೀವು ನಿಮ್ಮ ಸಂಸಾರದ ವಿಷಯಗಳನ್ನ ಬೇರೆಯವರ ಬಳಿ ಹೇಳಿಕೊಳ್ಳಬಾರದು
ಅಂದರೆ ಗಂಡ ಹೆಂಡತಿ ಮಕ್ಕಳು ನಿಮ್ಮ ನಡುವಿನ ಜಗಳವನ್ನು ಬೇರೆಯವರ ಬಳಿ ಎಂದೂ ಕೂಡ ಹೇಳಿಕೊಳ್ಳಬಾರದು ಈ ರೀತಿ ಬೇರೆಯವರ ಬಳಿ ಹೇಳಿಕೊಳ್ಳುವುದರಿಂದ ಅವರು ಅಪಹಾಸ್ಯ ಮಾಡಿ ಬೇರೊಬ್ಬರ ಬಳಿ ಆ ವಿಚಾರಗಳನ್ನು ತಿರುಚಿ ಹೇಳುವ ಸಾಧ್ಯತೆಗಳು ಇರುತ್ತದೆ
ಆದ್ದರಿಂದ ಆ ವಿಷಯಗಳನ್ನು ಎಂದು ಕೂಡ ಪ್ರಸ್ತಾಪಿಸಬೇಡಿ ಮತ್ತು ನಿಮ್ಮ ಹೆಂಡತಿಯ ಗುಣ ನಡತೆ ಚಾರಿತ್ರ್ಯದ ಬಗ್ಗೆ ಕೂಡ ಬೇರೆಯವರ ಬಳಿ ಪ್ರಸ್ತಾಪಿಸಬಾರದು ಆ ರೀತಿ ಪ್ರಸ್ತಾಪ ಮಾಡಿದ್ದೆ ಆದರೆ ನಿಮ್ಮ ಹೆಂಡತಿ ಟೀಕೆ ಕೆಟ್ಟ ಕಳಂಕ ಬರುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ
ಮತ್ತು ನಿಮ್ಮ ಮನೇಲಿ ನಡೆಯುವಂತಹ ಸಣ್ಣಪುಟ್ಟ ಜಗಳಗಳು ಸಣ್ಣಪುಟ್ಟ ಮಾತುಕತೆಗಳು ಇವುಗಳನ್ನು ಎಂದೂ ಕೂಡ ನಿಮ್ಮ ಸ್ನೇಹಿತರ ಬಳಿ ಸಂಬಂಧಿಕರ ಬಳಿ ಚರ್ಚಿಸಬಾರದು ಆ ರೀತಿ ಚರ್ಚಿಸುತ್ತಾ ಹೋದರೆ ಆ ಸಮಸ್ಯೆಗಳು ಇನ್ನೂ ದೊಡ್ಡವಾಗುತ್ತವೆ ಹೊರತು ಸಣ್ಣವಾಗುವುದಿಲ್ಲಾ.
ಇದು ಚಾಣಕ್ಯ ಅವರು ಹೇಳಿರುವ ಪ್ರಮುಖವಾದಂತಹ ಅಂಶಗಳು ಇವುಗಳನ್ನು ಮರೆತು ಕೂಡ ಬೇರೆಯವರ ಬಳಿ ಪ್ರಸ್ತಾಪಿಸಬಾರದು ಏಕೆಂದರೆ ಗಾದೆಮಾತೇ ಇದೆ ಸಂಸಾರದ ಗುಟ್ಟು ವ್ಯಾಧಿ ರಟ್ಟು ಎಂದು ಅಂದರೆ ಕಾಯಿಲೆಯನ್ನ ಮತ್ತು ಗುಟ್ಟನ್ನ ಎಂದು ಕೂಡ ಬೇರೆಯವರ ಬಳಿ ಪ್ರಸ್ತಾಪಿಸಬಾರದು ಎಂಬುದು ಇದರ ಅರ್ಥ ಈ ಮಾಹಿತಿ ನೀವು ತಿಳಿದುಕೊಳ್ಳಿ ಮತ್ತು ಬೇರೆಯವರಿಗೂ ಕೂಡ ತಮ್ಮ ಸಂಸಾರದ ಸುಖವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿ ಧನ್ಯವಾದ.