ಚಿನ್ನಾರಿ ಮುತ್ತಾ ಎಂದೇ ಪ್ರಖ್ಯಾತರಾದ ವಿಜಯ ರಾಘವೇಂದ್ರ ಅವರ ಹೆಂಡತಿ ನಿಜಕ್ಕೂ ಯಾರು ಗೊತ್ತ ….ಇಲ್ಲಿದೆ ಅಸಲೀ ಮಾಹಿತಿ !!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಸ್ಯಾಂಡಲ್ ವುಡ್ ನ ಚಿನ್ನಾರಿಮುತ್ತ ಇವರು ರಾಜಣ್ಣ ಅವರ ಅಭಿನಯದ ಪ್ರಖ್ಯಾತ ಸಿನಿಮಾವಾಗಿರುವ ಹಾಗೂ ಕಪ್ಪು ಸುಂದರಿ ಅಂತಾನೇ ಫೇಮಸ್ ಆಗಿರುವ ನಟಿ ಸರಿತಾ ಅವರು ಇಬ್ಬರು ಸೇರಿ ಅಭಿನಯ ಮಾಡಿರುವ ಚಲಿಸುವ ಮೋಡ ಎಂಬ ಸಿನಿಮಾ ಮೂಲಕ ಬಾಲನಟನಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಇದೀಗ ಕನ್ನಡ ಸಿನಿಮಾರಂಗದ ಫೇಮಸ್ ನಟರು ಗಳಲ್ಲಿ ಒಬ್ಬರಾಗಿದ್ದಾರೆ ಹೌದು ಅವರೇ ನಟ ವಿಜಯ ರಾಘವೇಂದ್ರ. ಹೌದು ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದುಕೊಂಡಿರುವ ಇವರು ಚಿನ್ನಾರಿ ಮುತ್ತ ಚಿತ್ರದ ಅಭಿನಯಕ್ಕಾಗಿ ತಮ್ಮ ಬಾಲ್ಯದಲ್ಲಿಯೇ ರಾಜ್ಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡವರು. ಇನ್ನೂ ಕೊಟ್ರೇಶಿ ಕನಸು ಎಂಬ ಚಿತ್ರದಲ್ಲಿ ನಟನೆ ಮಾಡಿರುವುದಕ್ಕೆ ಇವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ನಟ ವಿಜಯ ರಾಘವೇಂದ್ರ ಅವರು ‘ನಿನಗಾಗಿ’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ವಿಜಯ ರಾಘವೇಂದ್ರ ಅವರು ಈವರೆಗೆ ಬರೋಬ್ಬರಿ 50 ಕ್ಕೂ ಹೆಚ್ಚು ಸಿನಿಮಾಗಳನ್ನು ನಟನೆ ಮಾಡಿದ್ದಾರೆ.

ಒಂದು ಕಾಲದಲ್ಲಿ ಕನ್ನಡದ ಲವರ್ ಬಾಯ್ ಚಿನ್ನಾರಿಮುತ್ತ ಎಂದೇ ಪ್ರಖ್ಯಾತಿ ಗಳಿಸಿದ ವಿಜಯ ರಾಘವೇಂದ್ರ ಅವರು ಬೆಳ್ಳಿತೆರೆ ಮಾತ್ರವಲ್ಲದೇ ಕಿರುತೆರೆ ಅಲ್ಲಿಯೂ ಕೂಡ ಕೆಲವೊಂದು ಶೋಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ ಅಷ್ಟೇ ಅಲ್ಲ ನಿರೂಪಣೆ ಅಲ್ಲಿಯೂ ಸಹ ಹೆಚ್ಚು ಫೇಮಸ್ ವಿಜಯ ರಾಘವೇಂದ್ರ ಅವರು. ಗಳಿಸಿದ್ದರು. ಡ್ರಾಮಾ ಜೂನಿಯರ್ಸ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇನ್ನು ಮುಂತಾದ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿರುವ ವಿಜಯ ರಾಘವೇಂದ್ರ ಅವರು ಅವರ ಮುಗ್ಧತೆಗೆ ಪ್ರತಿಯೊಬ್ಬರೂ ಸಹ ಫಿದಾ ಆಗಿದ್ದಾರೆ. ಇನ್ನು ನಿನಗಾಗಿ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೂ ಅವರು ಅಭಿನಯಿಸಿರುವ ಒಂದೊಂದು ಸಿನಿಮಾಗಳು ಹಾಗೂ ಒಂದೊಂದು ಪಾತ್ರಗಳು ಸಹ ನೆನಪಿನಲ್ಲಿ ಉಳಿಯುವಂಥದ್ದೆ ಆಗಿದೆ.

ಸ್ಯಾಂಡಲ್ ವುಡ್ ನ ಲವರ್ ಬಾಯ್ ಅಂತಾನೇ ಫೇಮಸ್ ಆಗಿರುವ ವಿಜಯ ರಾಘವೇಂದ್ರ ಅವರು ಇವತ್ತಿಗೂ ತಮ್ಮ ಫಿಸಿಕ್ ಮೆಂಟೇನ್ ಮಾಡಿಕೊಳ್ಳುವ ಮೂಲಕ ಹಲವರ ಕ್ರಶ್ ಆಗಿದ್ದಾರೆ ಅಂತ ಹೇಳಬಹುದು. ಅದರಲ್ಲೂ ವಿಜಯ್ ರಾಘವೇಂದ್ರ ಅವರ ವಿವಾಹ ಆದಾಗ ಇವರ ಬಹಳಷ್ಟು ಗರ್ಲ್ ಫ್ಯಾನ್ಸ್ ಗಳು ಬಹಳ ಬೇಸರ ಮಾಡಿಕೊಂಡಿದ್ದರಂತೆ. ಸಾಮಾನ್ಯವಾಗಿ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂಧನಾ ಎಂಬುದು ತಮಗೆ ತಿಳಿದಿದೆ, ಆದರೆ ಅವರ ಹಿನ್ನಲೇ ಏನು ಇವರ ನಡುವೆ ಪ್ರೀತಿ ಪ್ರಾರಂಭವಾಗಿದ್ದು ಹೇಗೆ ಎಂದು ಮೊದಲಬಾರಿಗೆ ತಿಳಿಸುತ್ತೇವೆ ಮುಂದೇ ಓದಿ.

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಪ್ರಖ್ಯಾತ ನಿಷ್ಠಾವಂತ ಅಧಿಕಾರಿಯ ಮಗಳಾಗಿದ್ದು, ಇವರು ನಿರ್ಮಾಪಕಿ ಕೂಡ ಹೌದು ನಟ ವಿಜಯ ರಾಘವೇಂದ್ರ ಅವರು 2004ರಲ್ಲಿ ಮಲ್ಲೇಶ್ವರಂ ನ ಕಾಫಿ ಡೇ ಅಲ್ಲಿ ಸ್ಪಂದನ ಅವರನ್ನು ಮೊದಲ ಬಾರಿ ನೋಡುತ್ತಾರೆ ಆ ನಂತರ ಅವರನ್ನು ಸಂಗೀತದ ವಿಚಾರವಾಗಿ ಭೇಟಿ ಮಾಡಿ ಇವರಿಬ್ಬರ ನಡುವೆ ಸ್ವಲ್ಪ ಮಾತಿನ ಚಕಮಕಿಯಾಯಿತು ಆದರೆ ನಂತರ ಎರಡನೇ ಬಾರಿ 2007ರಲ್ಲಿ ಶೇಷಾದ್ರಿಪುರಂ ಕಾಫಿಡೇಯಲ್ಲಿ ಇವರಿಬ್ಬರ ಭೇಟಿ ಮತ್ತೆ ಆಗಿದಂದು ಎರಡನೇ ಭೇಟಿಯಲ್ಲಿ ಸ್ಪಂದನಾ ಅವರನ್ನು ವಿಜಯ್ ಮಾತನಾಡಿಸುತ್ತಾರೆ. ಅದಾಗಲೇ ವಿಜಯ್ ಗೆ ಪ್ರೇತಿ ಚಿಗುರಿದ್ದು ಮತ್ತೆ ಬೇಟಿಯಾದಗ ಸ್ಪಂದನಾ ಅವರ ಬಳಿ ತಮ್ಮ ಪ್ರೀತಿ ವಿಚಾರ ಹೇಳಿಕೊಳ್ಳಬೇಕೆನಿಸಿತ್ತು.

ಈ ವಿಚಾರವನ್ನು ತಂದೆ ಚೆನ್ನೇಗೌಡರ ಬಳಿ ಕೂಡ ಮಾತನಾಡಿರುತ್ತಾರೆ ವಿಜಯ್ ಹೌದು ಅದಾಗಲೇ ಸ್ಪಂದನಾ ಬಳಿ ವಿಜಯ್ ನ ಮದುವೆಯಾಗ್ತೀಯಾ ಎಂದು ಅವರ ತಂದೆ ಕೇಳಿದ್ದು ಸ್ಪಂದನಾ ತಂದೆ ಕೂಡ ಚೆನ್ನೇಗೌಡರಿಗೆ ಪರಿಚಯವಿದ್ದ ಕಾರಣ ಇವರಿಬ್ಬರ ಮದುವೆ ಮಾತುಕತೆ ಮಾಡಿದರು. ಅದಾಗಲೇ ವಿಜಯ್ ಸ್ಪಂದನಾ ಗೆ ಪ್ರಪೋಸ್ ಮಾಡಿದ್ದು ಅವರು ಕೂಡ ಒಪ್ಪಿಕೊಂಡಿರುತ್ತಾರೆ. ಇನ್ನು ಮನೆಯಲ್ಲಿ ಇವರಿಬ್ಬರ ವಿಚಾರ ಗೊತ್ತಾಗಿ ಒಂದೇ ತಿಂಗಳಿಗೆ ಮದುವೆಯಾಗಿದ್ದು ಆಗಸ್ಟ್ ೨೦೦೭ ರಲ್ಲಿ.ಸ್ಪಂದಾನಾ ಅವರ ತಂದೆ ಪೊಲೀಸ್ ಅಸಿಸ್ಟೆಂಟ್ ಕಮಿಷನರ್ ಆಗಿದ್ದರು. ಸ್ಪಂದನ ಹಾಗೂ ವಿಜಯ ರಾಘವೇಂದ್ರ ಅವರಿಗೆ ಶೌರ್ಯ ಹೆಸರಿನ ಮುದ್ದು ಮಗ ಇದ್ದಾನೆ. ಸದ್ಯ ದಂಪತಿಗಳು ಕುಟುಂಬದ ಜೊತೆ ನೆಮ್ಮದುಯಾಗಿದ್ದು ಇತ್ತೀಚೆಗಷ್ಟೇ ಈ ವಿವಾಹ ವಾರ್ಷಿಕೋತ್ಸವದಂದು ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆದಿತ್ತು. ತಮ್ಮ ಪತ್ನಿಯನ್ನು ಬಹಳ ಪ್ರೀತಿಸುವ ವಿಜಯ್ ಈ ದಂಪತಿಗಳ ಫೋಟೋವನ್ನ ಇಲ್ಲಿ ನೀವು ಕಾಣಬಹುದು.

Leave a Reply

Your email address will not be published. Required fields are marked *