Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಗಂಡ ಹೆಂಡತಿ ಮದ್ಯೆ ಸುಖಾ ಸುಮ್ಮನೆ ಪದೇ ಪದೇ ಜಗಳಗಳು ಆಗುತ್ತಿವೆಯೇ ಹಾಗಾದ್ರೆ ಗೆಜ್ಜೆ ಮತ್ತು ಉಡುದಾರದಿಂದ ಹೀಗೆ ಮಾಡಿದರೆ ಸಾಕು ಗಂಡ-ಹೆಂಡತಿ ಅನ್ಯೋನ್ಯವಾಗಿ ಅದ್ಭುತ ಐಷಾರಾಮಿ ಜೀವನವನ್ನು ಸಾಗಿಸುತ್ತಾರೆ…!!!

ಗೆಜ್ಜೆ ಹಾಗೂ ಉಡುದಾರದಿಂದ ಗಂಡ-ಹೆಂಡತಿ ಅನ್ಯೋನ್ಯವಾಗಿ ಜೀವನ ನಡೆಸಬಹುದು ಮತ್ತು ಇವರು ಐಷಾರಾಮಿ ಜೀವನವನ್ನು ನಡೆಸಲು ಇವೆರಡು ತುಂಬಾ ಮುಖ್ಯವಾಗಿದೆ.ಹಾಯ್ ಸ್ನೇಹಿತರೆ ಗಂಡ ಹೆಂಡತಿಯ ಜೀವನ ತುಂಬಾ ಚೆನ್ನಾಗಿರಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ.ಆದರೆ ನಾವು ಮಾಡುವ ಕೆಲವೊಂದು ತಪ್ಪುಗಳಿಂದ ನಮ್ಮ ಆಸೆಗಳು ನೆರವೇರುವುದಿಲ್ಲ. ಗಂಡ-ಹೆಂಡತಿಯ ಬಂಧನ ಯಾವಾಗಲೂ ತುಂಬಾ ಚೆನ್ನಾಗಿರಬೇಕು ಅಂದಾಗ ಮಾತ್ರ ಜೀವನದಲ್ಲಿ ನೆಮ್ಮದಿ ಇರುತ್ತದೆ ಗಂಡ-ಹೆಂಡತಿಯ ನಡುವೆ ಜಗಳವಾದರೆ ಪ್ರತಿದಿನ ನರಕವನ್ನು ನೋಡಬೇಕಾಗುತ್ತದೆ. ಅಂದರೆ ಜೀವನದಲ್ಲಿ ಇಬ್ಬರಿಗೂ ನೆಮ್ಮದಿ ಇರುವುದಿಲ್ಲ ಆಗ ಇಬ್ಬರ ಜೀವನವೂ ಹಾಳಾಗಿ ಹೋಗುತ್ತದೆ.

ಗಂಡ ಹೆಂಡತಿ ಜಗಳ ಆಡಿದರೆ ಉಂಡು ಮಲಗುವ ತನಕ ಮಾತ್ರ ಇರಬೇಕು ಎಂದು ಹಿರಿಯರು ಹೇಳಿದ್ದಾರೆ ಆದರೆ ಈಗಿನ ಕಾಲದಲ್ಲಿ ಗಂಡ-ಹೆಂಡತಿ ನಡುವೆ ಒಂದು ಜಗಳವಾದರೆ ಇನ್ನೊಂದು ಜಗಳಕ್ಕೆ ಬರುವವರೆಗೂ ಮುನಿಸು ಇರುತ್ತದೆ. ಸ್ನೇಹಿತರೆ ಮದುವೆಯೆಂಬುದು ಎಲ್ಲರೂ ಮಾಡಿಕೊಳ್ಳುವ ಒಂದು ಸಿಹಿಯಾದ ಬಂಧನ ಆದರೆ ಇದೇ ನಮ್ಮ ಜೀವನವನ್ನು ಕಹಿ ಮಾಡಬಾರದು. ಎಲ್ಲಾ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳಿಗೂ ಮದುವೆಯಾದ ಮೇಲೆ ದಾಂಪತ್ಯ ಜೀವನ ಚೆನ್ನಾಗಿರಬೇಕು ಹೆಂಡತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ನನ್ನನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಗಂಡುಮಕ್ಕಳು ಆಸೆ ಪಟ್ಟಿರುತ್ತಾರೆ ಅದೇ ರೀತಿಯಾಗಿ ಹೆಣ್ಣುಮಕ್ಕಳು ಗಂಡನ ಜೊತೆ ಸಂತೋಷದಿಂದ ನೆಮ್ಮದಿಯಿಂದ ಜೀವನವನ್ನು ಕಳೆಯಬೇಕು ಎಂದು ಆಸೆ ಪಟ್ಟಿರುತ್ತಾಳೆ.

ಇಂತಹ ಆಸೆಗಳು ಎಲ್ಲರಲ್ಲೂ ಇರುತ್ತವೆ ಆದರೆ ಎಲ್ಲರೂ ಹೀಗೆ ಇರುವುದಕ್ಕೆ ಆಗುವುದಿಲ್ಲ ಇದಕ್ಕೆ ಕಾರಣ ಮನೆಯಲ್ಲಿರುವ ಕಷ್ಟಗಳು ಅಥವಾ ಅವರ ಗ್ರಹಗತಿಗಳ ಕಾಟವು ಇನ್ನೂ ಹಲವಾರು ರೀತಿಯ ಕಾರಣಗಳಿಂದಾಗಿ ಒಬ್ಬೊಬ್ಬರಿಗೆ ದಾಂಪತ್ಯದಲ್ಲಿ ಬಿರುಕುಗಳು ಬರುತ್ತವೆ. ಆಗ ಅವರು ದುಡುಕಿ ನಿರ್ಧಾರವನ್ನು ಮಾಡದೆ ತಾಳ್ಮೆಯಿಂದ ತಮಗೆ ತಾವೇ ಪರಿಹಾರವನ್ನು ಹುಡುಕಿಕೊಳ್ಳಬೇಕು ಸ್ನೇಹಿತರೆ ಇನ್ನೊಂದು ವಿಷಯವೇನೆಂದರೆ ಗಂಡ-ಹೆಂಡತಿಯ ನಡುವೆ ಏನಾದರೂ ಸಮಸ್ಯೆಗಳು ಬಂದರೆ ನೀವು ಯಾರೊಬ್ಬರ ಬಳಿಯೂ ಹೇಳಬಾರದು ಏಕೆಂದರೆ ನಮ್ಮ ಕಷ್ಟಗಳನ್ನು ಕೇಳಿ ಸಹಾಯ ಮಾಡುವವರಿಗಿಂತ ನಮ್ಮನ್ನು ಕೀಳಾಗಿ ನೋಡುವವರು ಹೆಚ್ಚಿದ್ದಾರೆ ಹಾಗೆ ಇಂತಹ ಜಗಳಗಳು ಎಂದಿಗೂ ಮೂರನೆಯವರಿಗೆ ತಲುಪಬಾರದು

ಏನಿದ್ದರೂ ಗಂಡ-ಹೆಂಡತಿ ಬಗೆಹರಿಸಿಕೊಳ್ಳಬೇಕು. ಮೊದಮೊದಲು ಅಂದರೆ ಮದುವೆಯಾದ ಒಂದು ಅಥವಾ ಎರಡನೆಯ ವರ್ಷ ಇಬ್ಬರು ಅನ್ಯೋನ್ಯವಾಗಿ ಇರುತ್ತಾರೆ ಆದರೆ ಮುಂಬರುವ ದಿನಗಳಲ್ಲಿ ಒಂದೊಂದೇ ಸಮಸ್ಯೆಗಳನ್ನು ಎದುರಿಸುತ್ತಾ ತಮ್ಮತಮ್ಮಲ್ಲೇ ಜಗಳಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ. ಕೆಲವೊಬ್ಬರು ತುಂಬಾ ದುಡುಕಿ ಡ್ರೈವರ್ಸ್ ಕೂಡ ಹೋಗುತ್ತಾರೆ. ಆಗ ಇಬ್ಬರ ಜೀವನವೂ ಹಾಳಾಗುತ್ತದೆ. ಇಂತಹ ಸಮಸ್ಯೆಗಳು ಇರುವುದನ್ನು ನಾವು ಹೆಚ್ಚಾಗಿ ನೋಡಿದ್ದೇವೆ. ಆದರೆ ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಈ ಒಂದು ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಿದೆ. ಈ ಒಂದು ಪರಿಹಾರಕ್ಕೆ ಯಾವುದೇ ಪೂಜೆ ಮಾಡಬೇಕಾಗಿಲ್ಲ. ಮದುವೆಯಾದ ಮೇಲೆ ಪುರುಷನು ಉಡುದಾರವನ್ನು ಹಾಕಲೇಬೇಕು

ಅದರಲ್ಲೂ ಬೆಳ್ಳಿ ಉಡುದಾರವನ್ನು ಹಾಕುವುದು ತುಂಬಾ ಶ್ರೇಷ್ಠವಾದದ್ದು. ಅದೇ ರೀತಿಯಾಗಿ ಮಹಿಳೆಯು ಕಾಲಿಗೆ ಗೆಜ್ಜೆಗಳನ್ನು ಹಾಕುವುದು ತುಂಬಾ ಉತ್ತಮ. ಆದರೆ ಈಗಿನ ಮಹಿಳೆಯರು ಅಥವಾ ಪುರುಷರು ಇವುಗಳನ್ನು ಹಾಕಲು ಹಿಂಜರಿಯುತ್ತಾರೆ. ಹೀಗೆ ಮಾಡುವುದರಿಂದ ನಮಗೆ ಸಮಸ್ಯೆಗಳು ಉಂಟಾಗಬಹುದು. ಅದರಲ್ಲೂ ಗಂಡನಿಗೆ ಹೆಂಡತಿ ಉಡುದಾರವನ್ನು ಕೊಡಿಸುವುದು ಮತ್ತು ಹೆಂಡತಿಗೆ ಗಂಡನ ಕಾಲ್ಗೆಜ್ಜೆ ಕೊಡಿಸುವುದು ಅವರಿಗೆ ಜೀವನದಲ್ಲಿ ತುಂಬಾ ಒಳ್ಳೆಯದನ್ನು ಮಾಡುತ್ತದೆ. ಇದಕ್ಕಿಂತ ದೊಡ್ಡ ಉಡುಗೊರೆ ಯಾವುದು ಇಲ್ಲ.

ಸ್ನೇಹಿತರೆ ಕೆಲವೊಬ್ಬರು ಕಾಲಿಗೆ ಬಂಗಾರವನ್ನು ಹಾಕುತ್ತಾರೆ ಆದರೆ ಇದು ತುಂಬಾ ದೊಡ್ಡ ತಪ್ಪು ಯಾವುದೇ ಕಾರಣಕ್ಕೂ ಪುರುಷರು ಹಾಗೂ ಮಹಿಳೆಯರು ಸೊಂಟದಿಂದ ಕೆಳಗಡೆ ಬಂಗಾರವನ್ನು ಹಾಕಿಕೊಳ್ಳಬಾರದು. ಬೆಳ್ಳಿ ತುಂಬಾ ಶ್ರೇಷ್ಠವಾದದ್ದು ಹಾಗಾಗಿ ಬೆಳ್ಳಿಯ ಕಾಲ್ಗೆಜ್ಜೆ ಹಾಗೂ ಉಡುದಾರವನ್ನು ನೀವು ಹಾಕಿಕೊಳ್ಳಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಮೇಲೆ ಹೆಣ್ಣು ಮಗಳು ಹಣೆಗೆ ಕುಂಕುಮ ಮೂಗಿಗೆ ಮೂಗುತಿ ಹಾಗೂ ಕೊರಳಿಗೆ ತಾಳಿ ಕಾಲಿಗೆ ಉಂಗುರ ಹಾಕುತ್ತಾರೆ. ಇವೆಲ್ಲದಕ್ಕೂ ಒಂದೊಂದು ಕಾರಣ ಇದೆ.

ಆದರೆ ಈಗಿನ ಕಾಲದಲ್ಲಿ ಇಂಥವುಗಳನ್ನೆಲ್ಲ ಹಾಕಿಕೊಳ್ಳಲು ಹಿಂಜರಿಯುತ್ತಾರೆ ಹೀಗಾಗಿ ತುಂಬಾ ಸಮಸ್ಯೆಗಳು ಈಗಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ ಹಿರಿಯರು ಮಾಡಿದ್ದು ಯಾವಾಗಲೂ ಒಳ್ಳೆಯದೇ ಆಗಿರುತ್ತದೆ ಇಂತಹ ಸಂಪ್ರದಾಯಗಳನ್ನು ನೀವು ಕೂಡ ಮರೆಯದೆ ಪಾಲಿಸಬೇಕು ಹಾಗೂ ಮುಂದಿನ ಪೀಳಿಗೆಗೆ ಹೇಳಬೇಕು ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ