ಖಳನಾಯಕಿಯ ಪಾತ್ರದಲ್ಲಿ ಚಿರಪರಿಚಿತರಾಗಿದ್ದ ಮಾರಿಮುತ್ತು ಸರೋಜಮ್ಮ ಅವರು ಸಿನಿರಂಗಕ್ಕೆ ಬರುವುದಕ್ಕಿಂತ ಮುಂಚೆ ಏನು ಕೆಲಸ ಮಾಡ್ಕೊಂಡಿದ್ರು ಗೊತ್ತ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈಗ ಸ್ಯಾಂಡಲ್ ವುಡ್ ನಲ್ಲಿ ಖಳ ನಾಯಕರ ಹೆಸರನ್ನು ಪಟ್ಟಿ ಮಾಡುತ್ತಾ ಹೋದರೆ ಆ ಖಳ ನಾಯಕರ ಪಟ್ಟಿಯಲ್ಲಿ ಸಾಕಷ್ಟು ನಟರ ಹೆಸರನ್ನು ನಾವು ಕಾಣಬಹುದು ಆದರೆ ಸ್ಯಾಂಡಲ್ ವುಡ್ ನಲ್ಲಿ ಖಳನಾಯಕಿಯ ಪಾತ್ರದಲ್ಲಿ ಅಭಿನಯ ಮಾಡಿದವರ ಹೆಸರನ್ನು ಪಟ್ಟಿ ಮಾಡುತ್ತಾ ಹೋದರೆ ಅಂತಹ ಪಟ್ಟಿಯಲ್ಲಿ ನಮಗೆ ಸ್ವಲ್ಪ ಹೆಸರುಗಳು ನೆನಪಿಗೆ ಬರುತ್ತದೆ. ಹೌದು ಸ್ಯಾಂಡಲ್ ವುಡ್ ನಲ್ಲಿ ಖಳನಾಯಕರು ಎಷ್ಟೋ ಜನರು ಅದ್ಭುತವಾಗಿ ನಟನೆ ಮಾಡುವ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ ಆದರೆ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡು ಕೆಲವರು ಮಾತ್ರ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಅಂಥವರಲ್ಲಿ ನಾವು ಉಮಾಶ್ರೀ ಹಾಗೂ ಮಾರಿಮುತ್ತು ಅವರ ಹೆಸರನ್ನು ಇಲ್ಲಿ ತೆಗೆದುಕೊಳ್ಳಬಹುದು.

ನಟಿ ಉಮಾಶ್ರೀ ಅವರ ಬಗ್ಗೆ ಹೇಳೋದೇ ಬೇಡ ಇವರು ಕಾಮಿಡಿಯನ್ ಪಾತ್ರಕ್ಕೂ ಸೈ ವಿಲನ್ ಪಾತ್ರಕ್ಕೂ ಸೈ ಎರಡನ್ನೂ ಕೂಡ ಅದ್ಭುತವಾಗಿ ನಟನೆ ಮಾಡುವಂತಹ ನಟಿ ಇವರು ಇವರಂತೆ ಕನ್ನಡ ಸಿನಿಮಾರಂಗದಲ್ಲಿ ಮತ್ತೊಬ್ಬ ಹಾಸ್ಯ ಕಲಾವಿದೆಯಾಗಲಿ ಅಥವಾ ಖಳನಾಯಕಿಯ ಆಗಲೇ ಮುಂದೆ ಬರಲು ಸಾಧ್ಯವಿಲ್ಲ ಎನ್ನುವ ಮಾರಿಮುತ್ತು ಅವರ ಬಗ್ಗೆ ಹೇಳಬೇಕೆಂದರೆ ಇವರ ಬಗ್ಗೆ ಹಾಗೂ ಇವರ ನಟನೆಯ ಬಗ್ಗೆ ಮಾತನಾಡಲು ಕೂಡ ಗಟ್ಸ್ ಬೇಕು ಹೌದು ಅದೊಂದು ಕಾಲದಲ್ಲಿ ಮಾರಿಮುತ್ತು ಅಂದರೆ ಯಾರು ಅಂತಾನೇ ತಿಳಿಯದೇ ಇರುವ ಜನರು ಇವತ್ತಿನ ದಿವಸಗಳಲ್ಲಿ ಮಾರಿಮುತ್ತು ಅಂದ ಕೂಡಲೇ ಅವರು ಸ್ಯಾಂಡಲ್ ವುಡ್ ನ ಖಳ ನಾಯಕಿ ಅವರ ಪಾತ್ರ ಅಯ್ಯೋ ಬಿಡಿ ಅನ್ನೋ ಅಷ್ಟು ಫೇಮಸ್ ಇವರ ನಟನೆ.

ಹೌದು ಇವರ ಅಭಿನಯ ಅದೆಷ್ಟು ಗಾರ್ಡ್ಸ್ ನಿಂದ ಕೂಡಿರುತ್ತಿತ್ತು ಅಂದರೆ ಮಾರಿಮುತ್ತು ಅವರು ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಅಭಿನಯದಿಂದ ಬಹಳ ಪ್ರಖ್ಯಾತಿ ಪಡೆದುಕೊಂಡಿದ್ದರೂ ಅಷ್ಟೇ ಅಲ್ಲ ಅವರ ಧ್ವನಿ ಕೂಡ ಅವರ ಅಭಿನಯಕ್ಕೆ ತಕ್ಕಂತೆ ಇತ್ತು ನಟಿ ಮಾರಿಮುತ್ತು ಅವರನ್ನ ಕನ್ನಡ ಸಿನಿಮಾರಂಗಕ್ಕೆ ಕರೆತಂದದ್ದು ನಟ ಉಪೇಂದ್ರ ಅವರು. ಹೌದು ಮಾರಿಮುತ್ತು ಅವರು ಉಪೇಂದ್ರ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ.

ಹಾಗಾದರೆ ಸಿನಿಮಾ ರಂಗಕ್ಕೆ ಬರುವ ಮುನ್ನ ನಟಿ ಮಾರಿಮುತ್ತು ಅವರು ಏನು ಮಾಡುತ್ತಿದ್ದರು ಎಂಬ ಕುತೂಹಲಕಾರಿ ಪ್ರಶ್ನೆ ಎಷ್ಟೋ ಜನರಲ್ಲಿ ಇರುತ್ತದೆ. ನೀನು ಮಾರಿಮುತ್ತು ಅವರ ಮೊದಲ ಹೆಸರು ಸರೋಜಮ್ಮ ಎಂದು. ಈ ದಿನದ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ ನಟಿ ಮಾರಿಮುತ್ತು ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಏನು ಮಾಡುತ್ತಿದ್ದರು ಎಂದು ಹೌದು ಈ ವಿಚಾರವನ್ನು ಮಾರಿಮುತ್ತು ಅವರ ಮೊಮ್ಮಗಳು ಆಗಿರುವ ಜಯಶ್ರೀ ಆರಾಧ್ಯ ಅವರು ಹೇಳಿಕೊಂಡಿದ್ದು ನಮ್ಮ ಅಜ್ಜಿ ಯವರಾದ ಮಾರಿಮುತ್ತು ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ವಿಧಾನ ಸೌಧದಲ್ಲಿ ಕೆಲಸ ಮಾಡುತ್ತಾ ಇದ್ದರೂ.

ಅಲ್ಲಿ ನಟ ಉಪೇಂದ್ರ ಅವರ ಪರಿಚಯವಾಗಿ ಉಪೇಂದ್ರ ಅವರು ಮಾರಿಮುತ್ತು ಅವರನ್ನು ಸಿನಿಮಾ ರಂಗಕ್ಕೆ ಕರೆ ತಂದರು ಇನ್ನು ನಟಿ ಮಾರಿಮುತ್ತು ಅವರು ಖಳನಾಯಕಿಯಾಗಿ ಮತ್ತು ಪೋಷಕ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇವರು ಕಾಮಿಡಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದು ಹೆಚ್ಚಿನ ಚಲನಚಿತ್ರಗಳಲ್ಲಿ ಮಾರಿಮುತ್ತು ಅವರು ಖಳ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಅಭಿನಯ ಕನ್ನಡ ಸಿನಿಮಾರಂಗ ಎಂದಿಗೂ ಮರೆಯುವುದಿಲ್ಲ ಹಾಗೆ ಸ್ವಲ್ಪ ವರ್ಷಗಳ ಹಿಂದೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಮಾರಿಮುತ್ತು ಅವರು ಇದೀಗ ಇವರ ಮೊಮ್ಮಗಳು ಕನ್ನಡ ಸಿನಿಮಾರಂಗದಲ್ಲಿ ನಟಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ದಿವಸಗಳಲ್ಲಿ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *