ಖರ್ಚಿಲ್ಲದೆ ಬಂಜೆತನ ಸಮಸ್ಯೆಗೆ ಮನೆಮದ್ದು ಇಲ್ಲಿದೆ ನೋಡಿ!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತನ್ನು ಕೇಳಿರುತ್ತೀರಾ ಆದರೆ ಕಳೆ ಎಂದು ಬಿಸಾಡುವಂತಹ ಈ ಗಿಡದಲ್ಲಿ ಇರುವಂತಹ ಅದೆಷ್ಟೋ ಆರೋಗ್ಯಕರ ಪ್ರಯೋಜನಗಳು ಅನೇಕ ರೋಗಗಳಿಗೆ ಮದ್ದಾಗಿದೆ.

ಆ ಗಿಡ ಯಾವುದು ಅಂತ ಹೇಳ್ತೀವಿ ತಪ್ಪದೇ ಈ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇದು ಆರೋಗ್ಯಕರ ಮಾಹಿತಿ ಆಗಿರುವುದರಿಂದ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯೆಲ್ಲ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಮೆಂಟ್ ಮಾಡಿ .

ನಮ್ಮ ಸುತ್ತಮುತ್ತಲೇ ಅನೇಕ ಔಷಧೀಯ ಗುಣ ಇರುವಂತಹ ಗಿಡಮೂಲಿಕೆಗಳನ್ನು ನಾವು ಪ್ರತಿದಿನ ಕಾಣುತ್ತಿರುತ್ತೇವೆ ಆದರೆ ಅದರ ಉಪಯೋಗಗಳು ಮಾತ್ರ ನಾವು ತಿಳಿದಿರುವುದಿಲ್ಲ ಅಷ್ಟೇ .

ನಾವು ಈ ದಿನ ಹೇಳಲು ಹೊರಟಿರುವಂತಹ ಆ ಒಂದು ಗಿಡವೂ ಯಾವುದು ಅಂದರೆ ಉತ್ತರಾಣಿ ಗಿಡ ಹೌದು ಈ ಉತ್ತರಾಣಿಯು ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತಾಳೆ , ಆ ಗಿಡದ ಪ್ರಯೋಜನಗಳೇನು ಅನ್ನೋದನ್ನು ತಿಳಿಯೋಣ .

ಹಳ್ಳಿ ಕಡೆ ಜನರು ಈ ಉತ್ತರಾಣಿ ಗಿಡವನ್ನು ಕಳೆ ಎಂದು ಕಿತ್ತು ಒಗೆಯುತ್ತಾರೆ , ನೀವು ಸಾಮಾನ್ಯವಾಗಿಯೇ ನೋಡಿರಬಹುದು ಹಳ್ಳಿ ಕಡೆ ನೆಲದ ಮೇಲೆ ಕುಳಿತಾಗ ನಿಮ್ಮ ಬಟ್ಟೆಗೆ ಮುಳ್ಳಿನ ರೀತಿಯಲ್ಲಿ ಸಣ್ಣ ಬೀಜಗಳು ಅಂಟಿಕೊಂಡಿರುತ್ತವೆ ಇವುಗಳನ್ನು ಉತ್ತರಾಣಿಯ ಅಕ್ಕಿ ಎಂದು ಕರೆಯಲಾಗುತ್ತದೆ ಇದರಲ್ಲಿಯೂ ಕೂಡ ಔಷಧೀಯ ಗುಣವಿರುತ್ತದೆ .ಜಾಂಡೀಸ್ಗೆ ಉತ್ತಮ ಈ ಉತ್ತರಾಣಿ …

ಜಾಂಡೀಸ್ ಬಂದಂತಹ ವ್ಯಕ್ತಿಗಳಿಗೆ ಈ ಉತ್ತರಾಣಿ ಗಿಡದ ಬೇರಿನ ಕಷಾಯ ಅಥವಾ ಈ ಉತ್ತರಾಣಿಯ ಅಕ್ಕಿಯನ್ನು ಬಳಸಿ ಔಷಧೀಯ ರೂಪದಲ್ಲಿ ನೀಡುತ್ತಾ ಬಂದರೆ ಜಾಂಡೀಸ್ ಬೇಗಾನೆ ಪರಿಹಾರಗೊಳ್ಳುತ್ತದೆ .

ಇಸುಬಿನ ಸಮಸ್ಯೆಯನ್ನು ಪರಿಹರಿಸುತ್ತದೆ.ಹೌದು ಇತ್ತೀಚೆಗೆ ಸಾಕಷ್ಟು ಜನರು ಈ ಇಸುಬಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತಹವರು ಉತ್ತರಾಣಿ ಬೇರನ್ನು ಬಳಸಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ .

ಇಂತಹ ಚರ್ಮಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಮಾತ್ರೆಯ ಮುಖಾಂತರ ಬೇಗನೆ ಪರಿಹಾರ ದೊರೆಯುವುದಿಲ್ಲ , ಆದರೆ ಈ ಉತ್ತರಾಣಿ ಬೇರಿನಲ್ಲಿ ಸಾಕಷ್ಟು ಔಷಧೀಯ ಗುಣವಿದ್ದು ಇದನ್ನು ಹೇಗೆ ಬಳಸಬೇಕೆಂದರೆ .

ಉತ್ತರಾಣಿ ಬೇರನ್ನು ತೆಗೆದುಕೊಂಡು ಅದನ್ನು ಸುಟ್ಟು ಇಪ್ಪತ್ತು ಗ್ರಾಂ ಬೂದಿಯೊಂದಿಗೆ ಐದು ಗ್ರಾಂ ಸುಣ್ಣ ಮತ್ತು ಐದು ಗ್ರಾಂ ಅರಿಶಿಣವನ್ನು ಬೆರೆಸಿ ಹಚ್ಚುವುದರಿಂದ ಬೇಗನೆ ಸಮಸ್ಯೆ ಪರಿಹಾರಗೊಳ್ಳುತ್ತವೆ .

ಬಂಜೆತನವನ್ನು ದೂರ ಮಾಡುವುದರಲ್ಲಿ ಉತ್ತರಾಣಿ ಸಹಾಯಕಾರಿ.ಉತ್ತರಾಣಿಯ ಬೇರನ್ನು ಎಮ್ಮೆ ಹಾಲಿನೊಂದಿಗೆ ತೇಯ್ದು ನಂತರ ಅದನ್ನು ಬಟ್ಟೆಯಲ್ಲಿ ಶೋಧಿಸಿ , ಹತ್ತು ಗ್ರಾಂ ಹಾಲನ್ನು ಪ್ರತಿ ದಿನ ಸೇವಿಸುತ್ತಾ ಬಂದಲ್ಲಿ ಬಂಜೆತನವೂ ದೂರವಾಗುತ್ತದೆ .

ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ ..ಗಾಯವಾಗಿ ರಕ್ತಸ್ರಾವ ಹೆಚ್ಚಾಗಿ ಆಗುತ್ತಿದ್ದರೆ ಅದಕ್ಕೆ ಉತ್ತರಾಣಿ ಗಿಡದ ಎಲೆ ಅನ್ನು ತೆಗೆದುಕೊಂಡು ಅದರ ರಸವನ್ನು ಹಾಕುವುದರಿಂದ ರಕ್ತ ಸ್ರಾವ ಬೇಗನೆ ಕಡಿಮೆಯಾಗುತ್ತದೆ .

ಹೀಗೆ ಉತ್ತರಾಣಿ ಗಿಡದಿಂದ ನಾನಾ ತರಹದ ಸಮಸ್ಯೆಗಳು ಪರಿಹಾರವಾಗುತ್ತದೆ ಕೇವಲ ಕಳೆ ಎಂದು ಬಿಸಾಡುವ ಈ ಗಿಡದಲ್ಲಿ ಇಷ್ಟೆಲ್ಲಾ ಉತ್ತಮವಾದ ಪ್ರಯೋಜನವೂ ಇರುತ್ತದೆ ಅಂದರೆ ನಿಜಕ್ಕೂ ನಾವು ಈ ನೆಲದಲ್ಲಿ ಹುಟ್ಟಿರುವುದು ಪುಣ್ಯ ಅಂತಾನೇ ಹೇಳಬಹುದು .

ಈ ಮಾಹಿತಿ ನಿಮಗೆ ಇಷ್ಟವಾಗಿದೆ ಅಂದರೆ ತಪ್ಪದೇ ಮಾಹಿತಿಯನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಹಾಗೂ ಇಂತಹ ಇನ್ನೂ ಅನೇಕ ಉಪಯುಕ್ತ ಮಾಹಿತಿಗೆ ನಮ್ಮ ಪೇಜ್ ಲೈಕ್ ಮಾಡಿ .

Leave a Reply

Your email address will not be published. Required fields are marked *