ಕ್ಷಯ ರೋಗದ ಲಕ್ಷಣಗಳು ಏನು ಹಾಗೂ ಈ ಕ್ಷಯ ರೋಗ ಬಂದರೆ ಏನೆಲ್ಲ ಬದಲಾವಣೆಗಳು ನಮ್ಮ ದೇಹದಲ್ಲಿ ಆಗುತ್ತದೆ ಅನ್ನುವುದನ್ನು ಈ ಮಾಹಿತಿಯಲ್ಲಿ ತಿಳಿಯೋಣ ಇದೊಂದು ಉಪಯುಕ್ತ ಮಾಹಿತಿ ಆದುದರಿಂದ ಪ್ರತಿಯೊಬ್ಬರಿಗೂ ಕೂಡಾ ಹೆಚ್ಚು ಹೆಚ್ಚು ಈ ಮಾಹಿತಿಯನ್ನು ಶೇರ್ ಮಾಡುವ ಮುಖಾಂತರ ಕ್ಷಯ ರೋಗದ ಲಕ್ಷಣಗಳು ಏನು ಅನ್ನೋದನ್ನು ಈಗ ತಿಳಿಯೋಣ .
ಮನುಷ್ಯ ಅಂದ ಮೇಲೆ ಸಣ್ಣಪುಟ್ಟ ಕಾಯಿಲೆಗಳು ಆಗಾಗ ಬರುವುದು ಸಾಮಾನ್ಯವಾಗಿ ಬಿಟ್ಟಿರುತ್ತದೆ ಇನ್ನು ಈ ಸಣ್ಣ ಕಾಯಿಲೆಗಳು ಅಂದರೆ ಕೆಮ್ಮು ಶೀತ ನೆಗಡಿ ಕಫ ಕಟ್ಟುವುದು ಜ್ವರ ಇಂತಹ ಸಮಸ್ಯೆಗಳು ಆದರೆ ಇಂತಹ ಸಮಸ್ಯೆಗಳು ಬಂದು ಸ್ವಲ್ಪ ದಿನಗಳಲ್ಲಿಯೇ ಹೋದರೆ ಅದು ಏನು ಸಮಸ್ಯೆ ಆಗುವುದಿಲ್ಲ .
ಆದರೆ ಈ ಚಿಕ್ಕಪುಟ್ಟ ಸಮಸ್ಯೆಗಳೇ ಹೆಚ್ಚು ದಿನಗಳು ಮನುಷ್ಯನಲ್ಲಿ ಉಳಿದುಬಿಟ್ಟರೆ ಆ ಕಾಯಿಲೆ ಮತ್ತೊಂದು ಕಾಯಿಲೆಗೆ ದಾರಿ ಮಾಡಿಕೊಡುತ್ತಿದೆ ಎಂದು ಅರ್ಥ .
ಯಾವುದೇ ಚಿಕ್ಕ ಪುಟ್ಟ ಕಾಯಿಲೆಗಳಾಗಲಿ ಹೆಚ್ಚು ದಿನಗಳವರೆಗೆ ಎಷ್ಟೇ ಚಿಕಿತ್ಸೆ ಪಡೆದರೂ ಪರಿಹಾರವಾಗುತ್ತಿಲ್ಲ ಅಂದರೆ ಅದನ್ನು ಮೊದಲು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಹಾಗೂ ಸಣ್ಣ ಸಮಸ್ಯೆಯಲ್ಲಿ ಅದನ್ನು ಬೇಗನೆ ಪರಿಹಾರ ಕೂಡ ಮಾಡಿಕೊಳ್ಳಬಹುದು .
ಇನ್ನು ಹಿಂದಿನ ದಿನಗಳಲ್ಲಿ ಯಾವುದೇ ದೊಡ್ಡ ಕಾಯಿಲೆಗಳಿಗೆ ಮಾತ್ರೆಗಳು ಚಿಕಿತ್ಸೆಗಳು ಸರಿಯಾದ ಸಮಯಕ್ಕೆ ಸರಿಯಾಗಿ ಸಿಗುತ್ತಾ ಇರಲಿಲ್ಲ ಅದಕ್ಕಾಗಿಯೇ ಕಾಯಿಲೆ ಬಂದು ಮನುಷ್ಯ ಸಾಯುತ್ತಿದ್ದಾನೆ ಹೊರತು ಆ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆತಿದ್ದರೆ ವಯಸ್ಸಿದ್ದಾಗಲೇ ಯಾವ ವ್ಯಕ್ತಿಗಳು ಕೂಡ ಸಾವನ್ನಪ್ಪುತ್ತಿರಲಿಲ್ಲ .
ಆದರೆ ಇಂದಿನ ದಿನಗಳಲ್ಲಿ ಹೇಗೆ ಆಗಿದೆ ಅಂದರೆ ಸರಿಯಾದ ಚಿಕಿತ್ಸೆ ದೊರೆತರೂ ಕೂಡ ವಯಸ್ಸಿದ್ದಾಗಲೇ ಜನರು ದೊಡ್ಡ ದೊಡ್ಡ ಕಾಯಿಲೆ ಬಂದು ಸಾಯುತ್ತಿದ್ದಾರೆ ಇದಕ್ಕೆ ಕಾರಣವೇನು ಅಂದರೆ ನಮ್ಮ ಆಹಾರ ಕ್ರಮದಲ್ಲಿ ವ್ಯತ್ಯಾಸ ವಾಗುತ್ತಿರುವ ಕಾರಣದಿಂದಾಗಿ , ಸರಿಯಾದ ಪೌಷ್ಟಿಕಾಂಶವುಳ್ಳ ಆಹಾರವನ್ನು ತೆಗೆದುಕೊಳ್ಳದೇ ಇರುವ ಕಾರಣದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಕಾಯಿಲೆಗಳು ಮನುಷ್ಯರಿಗೆ ಬರುತ್ತಿವೆ .
ಇನ್ನು ಕ್ಷಯ ರೋಗ ಬಂದರೆ ಏನೆಲ್ಲ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ದೇಹದಲ್ಲಿ ಆಗುವ ಬದಲಾವಣೆಗಳು ಏನು ಅನ್ನೋದಾದರೆ .
ಕೆಮ್ಮು ..
ಎರಡು ಮೂರು ವಾರಗಳವರೆಗೆ ಕೆಮ್ಮು ಸತತವಾಗಿ ಇರುತ್ತದೆ ಹಾಗೂ ಈ ಕೆಮ್ಮು ಎಷ್ಟೇ ಪ್ರಯತ್ನಿಸಿದರೂ ಕೂಡ ಹೋಗುತ್ತಿಲ್ಲವೆಂದರೆ ಅದು ಕ್ಷಯ ರೋಗದ ಲಕ್ಷಣವಾಗಿರುತ್ತದೆ ಕೂಡಲೇ ವೈದ್ಯರ ಬಳಿ ಹೋಗಿ ಟೆಸ್ಟ್ ಮಾಡಿಸುವುದು ಉತ್ತಮ .
ಸಂಜೆ ಸಮಯ ಜ್ವರ ಬರುವುದು …
ವ್ಯಕ್ತಿಗೆ ಕ್ಷಯರೋಗವು ಆಗಿದ್ದರೆ ಸಂಜೆ ಸಮಯದಲ್ಲಿ ಜ್ವರ ಬರುತ್ತದೆ ಹಾಗೂ ರಾತ್ರಿ ಸಮಯದಲ್ಲಿ ಮಲಗಿದ ವೇಳೆ ಹೆಚ್ಚು ಬೆವರು ಬರುವುದು ಇಂತಹ ಲಕ್ಷಣಗಳು ಕ್ಷಯರೋಗಕ್ಕೆ ಕಾರಣವಾಗಿರುತ್ತವೆ .
ಹಸಿವಾಗಲ್ಲ , ರಾತ್ರಿ ನಿದ್ರೆ ಬರುವುದಿಲ್ಲ …
ಕ್ಷಯರೋಗ ಸಮಸ್ಯೆ ವ್ಯಕ್ತಿಯಲ್ಲಿ ಇದ್ದರೆ ಅವನಿಗೆ ಹಸಿವಾಗುವುದಿಲ್ಲ ತೂಕ ಇದ್ದಕ್ಕಿದ್ದ ಹಾಗೆ ಕಡಿಮೆಯಾಗಿಬಿಡುತ್ತದೆ ಮತ್ತು ರಾತ್ರಿ ಸಮಯದಲ್ಲಿ ನಿದ್ರೆ ಬರುವುದಿಲ್ಲ .
ಈ ಎಲ್ಲ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರ ಬಳಿ ಹೋಗಿ ಅದನ್ನು ಟೆಸ್ಟ್ ಮಾಡಿಸುವುದು ಉತ್ತಮ ಈ ಕ್ಷಯ ರೋಗ ಎಂಬುದು ಹಿಂದಿನ ದಿನಗಳಲ್ಲಿ ಒಂದು ಚಿಕಿತ್ಸೆ ಸಿಗದ ಕಾಯಿಲೆಯಾದ ಕಾರಣದಿಂದಾಗಿ ಕ್ಷಯರೋಗ ಸಮಸ್ಯೆಯಿಂದಲೇ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ ಆದರೆ ಇದೀಗ ಈ ಕಾಯಿಲೆಗೆ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿದ್ದು ಈ ಲಕ್ಷಣಗಳನ್ನು ತಿಳಿದು ಬೇಗಾನೆ ಚಿಕಿತ್ಸೆ ಪಡೆದು ಕಾಯಿಲೆಯನ್ನು ಬೇಗನೆ ಪರಿಹರಿಸಿಕೊಳ್ಳಿ .