Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕೋಲಾರ ಜಿಲ್ಲೆಯಲ್ಲಿ ಇರುವಂತಹ ವಿಶ್ವದ ಏಕೈಕ ಗರುಡ ದೇವಸ್ಥಾನ ಇದೆ … ಅಲ್ಲಿ ನೀವೇನಾದರೂ ಭೇಟಿ ನೀಡಿದ್ದೆ ಆಗಿದ್ದಲ್ಲಿ ಯಾವುದೇ ತರಹದ ದೂರವಿರಲಿ ಅದರಲ್ಲೂ ಸರ್ಪದೋಷ ವಿರಲಿ ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ಈ ಪುಣ್ಯಕ್ಷೇತ್ರಕ್ಕೆ ಇದೆ…. ಇದರ ಕೆಲವೊಂದು ಮಾಹಿತಿ ನೋಡಿ….

ವಿಶೇಷವಾಗಿ ಗರುಡನ ಎನ್ನುವಂತಹ ಪಕ್ಷಿಗೆ ಯಾವುದೇ ದೇವಸ್ಥಾನ ಇಲ್ಲ ಅದನ್ನು ನೀವು ಹೋಗಿ ನಮ್ಮ ಕರ್ನಾಟಕದಲ್ಲಿ ಇರುವಂತಹ ಕೋಲಾರ ಜಿಲ್ಲೆಯಲ್ಲಿ ನಾವು ನೋಡಬಹುದಾಗಿದೆ. ಒಂದೊಂದು ದೇವಸ್ಥಾನವು ಅದರದ್ದೇ ಆದಂತಹ ಕೆಲವೊಂದು ವಿಶೇಷತೆ ಹಾಗೂ ಮಹತ್ವವನ್ನು ಬಂದಿರುತ್ತವೆ .ಅದರಲ್ಲೂ ವಿಶೇಷವಾಗಿ ಪ್ರಸಿದ್ಧಿ ಹೊಂದಿರುವಂತಹ ಈ ತರದ ದೇವಸ್ಥಾನಗಳು ಅಗಾಧ ಶಕ್ತಿಯನ್ನು ಹೊಂದಿರುತ್ತವೆ ಹಾಗೂ ಯಾವುದೇ ತರನಾದ ಪರಿಹಾರ ಅಥವಾ ತೊಂದರೆಗಳನ್ನು ಸಂಪೂರ್ಣವಾಗಿ ಎ ನಿವಾರಣೆ ಮಾಡುವಂತಹ ಶಕ್ತಿ ಈ ದೇವಸ್ಥಾನಗಳಿಗೆ ಇರುತ್ತದೆ. ಹಾಗಾದರೆ ಬನ್ನಿ ಈ ರೀತಿಯಾಗಿ ನಮ್ಮ ವಿಶ್ವದಲ್ಲಿ ಏಕೈಕ ಗರುಡ ದೇವಸ್ಥಾನ ಅನಿಸಿಕೊಂಡಿರುವ ಅಂತಹ ಈ ದೇವಸ್ಥಾನದ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಸರ್ಪದೋಷ ಅಂದರೆ ನಾವು ನಾಗರಹಾವಿಗೆ ಸಂಬಂಧಪಟ್ಟಂತಹ ಅಥವಾ ಸರ್ಪ ಗೆ ಸಂಬಂಧಪಟ್ಟಂತಹ ದೇವರಿಗೆ ಹೋಗಿ ನಾವು ಹರಕೆಯನ್ನು ಮಾಡಿಕೊಳ್ಳುತ್ತೇವೆ ಅಥವಾ ಪೂಜೆ ಹವನಗಳನ್ನು ಮಾಡುತ್ತೇವೆ ಹಾಗೆ ನಮಗೆ ಇರುವಂತಹ ಕಷ್ಟಗಳನ್ನು ಅಥವಾ ಏನಾದರೂ ಇದ್ದಲ್ಲಿ ನಾವು ಜ್ಯೋತಿಷಿಗಳು ಹೇಳುವ ಹಾಗೆ ಕೆಲವೊಂದು ದೇವಸ್ಥಾನಕ್ಕೆ ಹೋಗಿ ಅಭಿಷೇಕವನ್ನು ಮಾಡಿಸಿಕೊಂಡು ಬರುತ್ತೇವೆ.ಆದರೆ ಇಲ್ಲಿರುವಂತಹ ಈ ದೇವಸ್ಥಾನ ಅಂದರೆ ಕೋಲಾರ ಜಿಲ್ಲೆಯಲ್ಲಿ ಇರುವಂತಹ ವಿಶ್ವದ ಏಕೈಕ ದೇವಸ್ಥಾನಕ್ಕೆ ನೀವೇನಾದರೂ ಬಂದು ಪೂಜೆ ಮಾಡಿ ನಿಮ್ಮ ಹರಕೆಯನ್ನು ಅಥವಾ ನಿಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದೆ ಆದಲ್ಲಿ ನಿಮ್ಮ ಕಷ್ಟಗಳನ್ನು ದೂರ ಮಾಡುವಂತಹ ಶಕ್ತಿ ಈ ದೇವಸ್ಥಾನದಲ್ಲಿ ಇದೆ ಎನ್ನುವುದು ಭಕ್ತರ ನಂಬಿಕೆ.

ಈ ದೇವಸ್ಥಾನ ಇರುವುದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಎನ್ನುವಂತಹ ಗ್ರಾಮದಲ್ಲಿ. ಪುರಾಣವನ್ನು ನಾವು ಸ್ವಲ್ಪ ನೋಡಿದರೆ ಅರ್ಜುನನ ಇಲ್ಲಿ ಗರುಡ ದೇವನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ ಎನ್ನುವಂತಹ ಪ್ರತೀತಿಯಿದೆ. ಈ ಪುಣ್ಯಕ್ಷೇತ್ರ ರಾಮಾಯಣ ಹಾಗೂ ಮಹಾಭಾರತದ ಹಿನ್ನೆಲೆಯನ್ನ ಹೊಂದಿರುವಂತಹ ಒಂದು ಪುಣ್ಯಕ್ಷೇತ್ರ ಅಂತ ಕೂಡ ಕರೆಯುತ್ತಾರೆ.ಶತಮಾನಗಳ ಹಿಂದೆ ಬ್ರಗ ಮಹಾಋಷಿಗಳು ಈ ದೇವಸ್ಥಾನಕ್ಕೆ ಕೊಲದೇವಿ ಎನ್ನುವಂತಹ ಹೆಸರನ್ನು ಕೂಡ ಇಟ್ಟಿದ್ದಾರೆ ಎನ್ನುವಂತಹ ಮಾಹಿತಿ ಕೂಡ ಇದೆ. ಈ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಕೆಲವೊಂದು ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ವಿಷ್ಣುವು ಹನುಮಂತನಿಗೆ ವರವನ್ನು ಕೊಟ್ಟು ಹೋಗು ಲೋಕಕ್ಕೆ ಹೋಗುವೆನು ವಂತಹ ವಿಚಾರವನ್ನು ಹೇಳುತ್ತಾನೆ ಆದುದರಿಂದ ಇಲ್ಲಿ ಹನುಮಂತನ ಕೂಡ ಇಲ್ಲಿ ನೆಲೆಸಿದ್ದಾನೆ ಎನ್ನುವಂತಹ ಮಾಹಿತಿ ಕೂಡ ಇದೆ.

ಈ ಕ್ಷೇತ್ರದಲ್ಲಿ ಇರುವಂತಹ ಗರುಡದೇವರು ಒಂದು ಕೈಯಲ್ಲಿ ನಾರಾಯಣ ಹಾಗೂ ಇನ್ನೊಂದು ಕೈಯಲ್ಲಿ ಲಕ್ಷ್ಮಿಯನ್ನು ಹೊಂದಿರುವಂತಹ ಒಂದು ಸುಂದರವಾದ ಮೂರ್ತಿಯನ್ನು ಕಾಣಬಹುದಾಗಿದೆ. ಇದಕ್ಕೆ ಒಂದು ವಿಶೇಷವಾದಂತಹ ಕತೆಯೂ ಕೂಡ ನಾವು ನೆನಪು ಮಾಡಿಕೊಳ್ಳಬಹುದು ರಾಮಾಯಣದ ಸಂಧರ್ಭದಲ್ಲಿ ಸೀತೆಯನ್ನು ರಾವಣ ಪಾಲಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಗರುಡ ಬಂತು ಸ್ಥಿತಿಯನ್ನು ಕಾಪಾಡಲು ಪ್ರಯತ್ನಿಸುತ್ತದೆ ಆದರೆ ಅದರ ರೆಕ್ಕೆಯನ್ನು ಕತ್ತರಿಸಿ ರಾವಣ ಬಿಡುತ್ತಾನೆ ಹಾಗೆ ಕತ್ತರಿಸಿ ದಂತಹ ಹಾರೈಕೆಗಳು ಈ ಪ್ರದೇಶದಲ್ಲಿ ಬಿದ್ದವು ಎನ್ನುವಂತಹ ಮಾಹಿತಿ ಕೂಡ ಇದೆ.ಗರುಡ ದೇವನ ಬಿದ್ದಂತಹ ತಳದಲ್ಲಿ ಹನುಮಂತ ದೇವರು ಇಲ್ಲಿ ನೆಲೆಸಿದ್ದಾರೆ ಎನ್ನುವಂತಹ ಮಾಹಿತಿ ಪ್ರತಿಯೊಬ್ಬ ಭಕ್ತರೂ ಕೂಡ ಆಗಾಧವಾಗಿ ತುಂಬಿಹೋಗಿದೆ ಅದಲ್ಲದೆ ಹನುಮಂತನ ತನ್ನ ಹಲ್ಲಿನಲ್ಲಿ ಹಾಗೂ ತನ್ನ ಕೈಯಲ್ಲಿ ಬ್ರಹ್ಮಾಸ್ತ್ರವನ್ನು ನಡೆದುಕೊಂಡಿದ್ದಾರೆ ಎನ್ನುವಂತಹ ಮಾಹಿತಿ ಕೂಡ ಇದೆ. ಇಲ್ಲಿರುವಂತಹ ದರ್ಶನ ದಿನದಂದು ನಾವು ಮಾಡಿದ್ಯಾ ಆಗಲಿ ನಮ್ಮ ಅದೃಷ್ಟವೋ ಚೇಂಜ್ ಆಗುತ್ತದೆ ಹಾಗೂ ನಮ್ಮ ಜೀವನದಲ್ಲಿ ನಾವು ಯಾವುದೇ ಒಂದು ಸಾಧನೆ ಮಾಡಬೇಕಾದರೆ ಈ ದೇವಸ್ಥಾನದ ಹತ್ತಿರ ಬಂದು ಬೇಡಿದಾಗ ಬೇಡಿ ಕೊಟ್ಟಂತಹ ಭಕ್ತರು ಉನ್ನತ ಸ್ಥಾನಕ್ಕೆ ಹೋಗುವುದು ಖಂಡಿತ.

ಇಂತಹ ಅನೇಕ ಭಕ್ತರು ಸರ್ಪ ದೋಷಕ್ಕೆ ಸಂಬಂಧಪಟ್ಟಂತಹ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳಲು ಇಲ್ಲಿಗೆ ಹೆಚ್ಚಾಗಿ ನ ಜನ ಇಲ್ಲಿಗೆ ಬರುತ್ತಾರೆ ಇಲ್ಲಿ ಹೀಗೆ ಎಂಟು ಸರ್ಪ ದೋಷಕ್ಕೆ ಸಂಬಂಧಪಟ್ಟಂತಹ ಪೂಜೆ ಹವನಗಳನ್ನು ಎಲ್ಲಿ ಮಾಡಲಾಗುತ್ತದೆ. ಹಾಗೂ ಮಾಟ-ಮಂತ್ರಕ್ಕೆ ಸಂಬಂಧಪಟ್ಟಂತಹ ವಿಚಾರಗಳು ಕೂಡ ಈ ದೇವಸ್ಥಾನ ಸಿಕ್ಕಾಪಟ್ಟೆ ಪ್ರಸಿದ್ಧಿಯನ್ನು ಹೊಂದಿರುವಂತಹ ದೇವಸ್ಥಾನ ಅಂತ ನಾವು ಹೇಳಬಹುದು. ಇಲ್ಲಿಗೆ ಬಂದಂತಹ ಸಾವಿರಾರು ಜನರು ತಮ್ಮ ಒಳಿತನ್ನ ಕಂಡುಕೊಂಡಿದ್ದಾರೆ. ಈ ದೇವಸ್ಥಾನಕ್ಕೆ ಕೇವಲ ಕರ್ನಾಟಕದ ಭಕ್ತರು ಮಾತ್ರವಲ್ಲ ನಮ್ಮ ನೆರೆರಾಜ್ಯ ಆಗಿರುವಂತಹ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕೂಡ ಹಲವಾರು ದಿನದಿನಕ್ಕೆ ಬರುತ್ತಾರೆ ಇಲ್ಲಿ. ಈ ಲೇಖನವೇ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ