ಕೇರಳ ಹುಡುಗೀರು ಅಷ್ಟೊಂದು ಚೆಂದ ಕಾಣುವುದಕ್ಕೆ ಈ ಎಣ್ಣೆ ಕಾರಣವಂತೆ … ಹಾಗಾದ್ರೆ ಆ ಎಣ್ಣೆ ಆದ್ರೂ ಯಾವುದು ಅಂತ ಗೊತ್ತಾಗಬೇಕಾ

1341

ಕೇರಳ ಮಂದಿ ಇಷ್ಟು ಆರೋಗ್ಯವಾಗಿರಲು ಕಾರಣವೇನು ಅಂತ ತಿಳದರೆ ನೀವು ಆಶ್ಚರ್ಯ ಪಡುತ್ತೀರಿ , ಈ ಮಾಹಿತಿಯನ್ನು ತಿಳಿದು ಇಂತಹ ಆರೋಗ್ಯಕರ ಪದ್ಧತಿಯನ್ನು ನೀವು ಕೂಡ ಅಳವಡಿಸುವ ಮುಖಾಂತರ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳುವ ಜೊತೆಗೆ ಸೌಂದರ್ಯವನ್ನು ಕೂಡ ಪಡೆದುಕೊಳ್ಳಿ ,

ಇವರು ಆರೋಗ್ಯಕರವಾಗಿರಲು ಮುಖ್ಯ ಕಾರಣವೆಂದರೆ ಇವರು ತಮ್ಮ ಪ್ರತಿದಿನದ ಆಹಾರ ಪದ್ಧತಿಯಲ್ಲಿ ರಿಫೈಂಡ್ ಆಯಿಲ್ ಅಥವಾ ಯಾವುದೇ ಅಡುಗೆ ಎಣ್ಣೆಯನ್ನು ಬಳಸದೇ ಇವರು ಕೊಬ್ಬರಿ ಎಣ್ಣೆಯನ್ನು ಬಳಸುವುದೇ ಕಾರಣ .

ಮೊದಲಿಗೆ ಕೊಬ್ಬರಿ ಎಣ್ಣೆಯ ಉಪಯೋಗಗಳನ್ನು ತಿಳಿದುಕೊಳ್ಳುವುದಾದರೂ ಇದನ್ನು ಸಾಮಾನ್ಯವಾಗಿ ಕೂದಲಿನ ಹಾರೈಕೆ ಮಾಡಿಕೊಳ್ಳಲು ಕೂದಲಿಗೆ ಹಚ್ಚಿಕೊಳ್ಳುತ್ತಾರೆ , ಇಷ್ಟೇ ಅಲ್ಲದೆ ಇದನ್ನು ಅಡುಗೆ ಮಾಡಲು ಬಳಸುತ್ತಾರೆ ಎಂಬುದು ಸಾಕಷ್ಟು ಜನರಿಗೆ ತಿಳಿಯದೇ ಇರುವ ಮಾಹಿತಿ ಹಾಕಿದೆ .

ಈ ಒಂದು ಕೊಬ್ಬರಿ ಎಣ್ಣೆಯಿಂದ ಅಡುಗೆ ಮಾಡಿ ತಿನ್ನುವುದರಿಂದಲೇ ಕೇರಳದ ಮಂದಿ ಇಷ್ಟು ಆರೋಗ್ಯಕರವಾಗಿ ಇರುವುದು ಜೊತೆಗೆ ಸೌಂದರ್ಯವಾಗಿ ಕಾಣಿಸುವುದು ಅಷ್ಟೇ ಅಲ್ಲದೇ ಕೊಬ್ಬರಿ ಎಣ್ಣೆಯಿಂದ ಅಡುಗೆ ಮಾಡಿ ಪ್ರತಿದಿನ ತಿನ್ನುವುದರಿಂದ ಹೃದ್ರೋಗ ಸಮಸ್ಯೆ ಬರುವುದಿಲ್ಲ .

ಹೌದು ಇದಕ್ಕಾಗಿ ನಾವು ಕೇರಳದಲ್ಲಿ ನೋಡಬಹುದು ಯಾರೂ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಲಿತಿರುವುದಿಲ್ಲ ಇದಕ್ಕೆ ಕಾರಣವೆಂದರೆ ಕೊಬ್ಬರಿ ಎಣ್ಣೆ ಹೌದು ಅಡುಗೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಅನಗತ್ಯ ಕೊಬ್ಬಿನಂಶ ನಮ್ಮಲ್ಲಿ ಶೇಖರಣೆಯಾಗುವುದಿಲ್ಲ ಹಾಗೂ ದೇಹಕ್ಕೆ ಬೇಕಾಗಿರುವ ಆರೋಗ್ಯಕರ ಕೊಬ್ಬಿನ ಅಂಶವನ್ನು ನಾವು ಪಡೆದುಕೊಳ್ಳಬಹುದು .

ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಎಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳಿವೆ ಎಂದು ತಿಳಿಯುವುದಾದರೆ ಮೊದಲಿಗೆ ಕೊಬ್ಬರಿ ಎಣ್ಣೆಯನ್ನು ತಿನ್ನುವುದರಿಂದ ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಿ ತೂಕವನ್ನು ಇಳಿಸಲು ಇದು ಸಹಾಯ ಮಾಡುತ್ತದೆ ಮತ್ತು ಅದರಲ್ಲಿರುವಂತೆ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ಸ್ ಗಳು ಹೃದಯದ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚಿನ ಸಹಾಯಕಾರಿಯಾಗಿದೆ .
ಆದ್ದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ದಿನನಿತ್ಯ ಆಹಾರ ಕ್ರಮದಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಹೆಚ್ಚಿನ ಆರೋಗ್ಯವನ್ನು ಪಡೆದುಕೊಳ್ಳಬಹುದು .

ಇದರಲ್ಲಿರುವಂತಹ ಲ್ಯಾರಿಕ್ ಅಸಿಡ್ ರಕ್ತದಲ್ಲಿ ಇರುವಂತಹ ಕೊಬ್ಬಿನಂಶವನ್ನು ಕರಗಿಸಿ ರಕ್ತದೊತ್ತಡದಿಂದ ಬರುವಂತಹ ಅನೇಕ ಸಮಸ್ಯೆಗಳನ್ನು ತಡೆಯುತ್ತದೆ ಕೊಬ್ಬರಿ ಎಣ್ಣೆ . ಕೊಬ್ಬರಿ ಎಣ್ಣೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಹಾಗೂ ಆ್ಯಂಟಿ ಫಂಗಲ್ ಗುಣಗಳು ಇರುವ ಕಾರಣದಿಂದಾಗಿ ಹಾಗೆಯೇ ಇದರಲ್ಲಿರುವಂತಹ ಲ್ಯಾರಿಕ್ ಆಸಿಡ್ ಅಂಶವು ಬ್ಯಾಕ್ಟೀರಿಯಾ ಫಂಗಲ್ ಇನ್ಫೆಕ್ಷನ್ ಇಂತಹ ಸಮಸ್ಯೆಗಳಿಂದ ದೇಹವನ್ನು ರಕ್ಷಿಸುತ್ತದೆ .

ಅನೇಕ ರೋಗಗಳನ್ನು ನಿವಾರಣೆ ಮಾಡುವುದರಲ್ಲಿ ಕೊಬ್ಬರಿ ಎಣ್ಣೆ ಹೆಚ್ಚಿನ ಸಹಾಯಕಾರಿಯಾಗಿದ್ದು ಇದನ್ನು ಪ್ರತಿದಿನ ಸೇವನೆ ಮಾಡುವುದರಿಂದ ಇಮ್ಯೂನಿಟಿ ಪವರ್ ಅಂದರೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ .
ಕೊಬ್ಬರಿ ಎಣ್ಣೆಯನ್ನು ಆಹಾರದ ಕ್ರಮದಲ್ಲಿ ಅಳವಡಿಸಿಕೊಳ್ಳುವುದರಿಂದ ಉದರ ಸಂಬಂಧಿ ಸಮಸ್ಯೆಗಳು ಹಾಗೆ ಕರುಳಿನ ಸಂಬಂಧಿ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ .

ಯಾರೂ ಥೈರಾಯ್ಡ್ ಸಮಸ್ಯೆಯಿಂದ ಅಥವಾ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತಹವರು ಈ ಒಂದು ಕೊಬ್ಬರಿ ಎಣ್ಣೆಯನ್ನು ಪ್ರತಿದಿನ ತಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಈ ಸಮಸ್ಯೆಗಳು ಪರಿಹಾರಗೊಳ್ಳುವುದರ ಜೊತೆಗೆ ಹೆಚ್ಚಿನ ಉಪಯೋಗವನ್ನು ಪಡೆದುಕೊಳ್ಳಬಹುದು .

ಬೆಳ್ಳಗಾಗಲು ಬಯಸುವವರು ಅಥವಾ ಸೌಂದರ್ಯ ವೃದ್ಧಿಸಿಕೊಳ್ಳಲು ಆಸೆ ಪಡುವವರು ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಪ್ರತಿದಿನ ಮಸಾಜ್ ಮಾಡಿಕೊಳ್ಳುವುದರಿಂದ ಕಾಂತಿಯುತ ತ್ವಚೆಯನ್ನು ಪಡೆದುಕೊಳ್ಳಬಹುದು .
ಈ ಕಾರಣದಿಂದಾಗಿಯೇ ಕೇರಳದಲ್ಲಿ ವಾಸಿಸುವ ಜನರು ಆರೋಗ್ಯಕರವಾಗಿರುತ್ತಾರೆ , ನೀವು ಕೂಡ ನಿಮ್ಮ ಪ್ರತಿದಿನ ಆಹಾರ ಪದ್ಧತಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ .

LEAVE A REPLY

Please enter your comment!
Please enter your name here