Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೆಲವೊಬ್ಬರಿಗೆ ಬಂಗಾರ ಆಗಿ ಬರುವುದಿಲ್ಲ ಅಂಥವರು ಎಂತಹ ಸಂದರ್ಭದಲ್ಲಿಯೂ ಕೂಡ ಬಂಗಾರವನ್ನು ಹಾಕಿಕೊಳ್ಳಬಾರದು ಹಾಗೇನಾದ್ರೂ ಹಾಕಿಕೊಂಡರೆ ನೀವು ಜೀವನದಲ್ಲಿ ಬಹಳ ಕಷ್ಟಪಡಬೇಕಾಗುತ್ತದೆ ಯಾರು ಬಂಗಾರವನ್ನ ಹಾಕಿಕೊಳ್ಳಬಾರದು ಗೊತ್ತ …!!!

ಚಿನ್ನ ಎಲ್ಲರಿಗೂ ಒಳ್ಳೆಯದಲ್ಲ ಹಾಗಾದರೆ ಚಿನ್ನಾ ಯಾರಿಗೆ ಒಳ್ಳೆಯದು ಮತ್ತು ಯಾವಾಗ ಇದನ್ನು ಹಾಕಿಕೊಳ್ಳಬೇಕು ಎಂಬುದನ್ನು ತಿಳಿಯಲು ಈ ಮಾಹಿತಿ ನೋಡಿ.ಹಾಯ್ ಸ್ನೇಹಿತರೆ ಚಿನ್ನ ಅಂದ ತಕ್ಷಣ ಎಲ್ಲರೂ ನನಗೂ ಇಷ್ಟ ನನಗೆ ಇಷ್ಟ ಎಂದು ಹೇಳುತ್ತಾರೆ ಚಿನ್ನವನ್ನು ಇಷ್ಟಪಡದವರು ಯಾರು ಇಲ್ಲ. ಅದರಲ್ಲೂ ಮಹಿಳೆಯರು ಚಿನ್ನವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಚಿನ್ನವನ್ನು ಮಾಡಿಸಿಕೊಳ್ಳಲು ಅದೆಷ್ಟು ದಿನಗಳಿಂದ ದುಡ್ಡನ್ನು ಕುಡಿತ ಇಟ್ಟುಕೊಂಡಿರುತ್ತಾರೆ. ಚಿನ್ನ ಕೂಡ ಒಂದು ಲೋಹವಾಗಿದೆ. ಇದನ್ನು ಹಾಕಿಕೊಳ್ಳುವುದರಿಂದ ಹೃದ್ರೋಗ ಸಂಬಂಧಪಟ್ಟ ಕಾಯಿಲೆಗಳು ಬರುವುದಿಲ್ಲ ಎಂದು ಪರಿಗಣಿಸಿದ್ದಾರೆ. ಹಾಗಂತ ಇದು ಎಲ್ಲರಿಗೂ ಒಳ್ಳೆಯದಲ್ಲ. ನಿಮಗೆ ಅನಿಸುತ್ತಿರಬಹುದು ಏಕೆ ಎಲ್ಲರೂ ಚಿನ್ನವನ್ನು ಹಾಕಿಕೊಳ್ಳಬಾರದು

ಇದರಿಂದ ಏನು ತೊಂದರೆ ಎಂದು ನೀವು ಯೋಚಿಸುತ್ತಿರಬಹುದು ಇದಕ್ಕೆಲ್ಲಾ ನಾನು ನಿಮಗೆ ಉತ್ತರಿಸುತ್ತೇನೆ. ಚಿನ್ನವು ಕೆಲವೊಂದು ರಾಶಿಗಳಿಗೆ ವಿರುದ್ಧವಾದ ಲೋಹವಾಗಿದೆ. ತುಲಾ ರಾಶಿ ಹಾಗೂ ಮಿಥುನ ರಾಶಿಯವರಿಗೆ ಚಿನ್ನ ಒಳ್ಳೆಯದಲ್ಲ ಇವರ ಹತ್ತಿರ ಹೆಚ್ಚಾಗಿ ಚಿನ್ನ ಇದ್ದರೆ ಅದು ಅವರಿಗೆ ಅದೃಷ್ಟ ಅಲ್ಲ ಇನ್ನು ಕುಂಭ ಕನ್ಯಾ ಋಷಭ ಹಾಗೂ ಮಕರ ರಾಶಿಯವರಿಗೆ ಕೂಡ ಇದು ಒಳ್ಳೆಯದಲ್ಲ. ಉಳಿದ ಎಲ್ಲಾ ರಾಶಿಯವರಿಗೆ ಚಿನ್ನ ಒಳ್ಳೆಯ ಲಾಭವನ್ನು ಕೊಡುತ್ತದೆ. ಅತಿಯಾದ ಕೋಪ ಇರುವ ವ್ಯಕ್ತಿಗಳು ಕೂಡ ಚಿನ್ನವನ್ನು ಧರಿಸಬಾರದು. ಹಾಗೂ ಗುರು ಗ್ರಹದ ದೋಷ ಇರುವವರು ಕೂಡ ಚಿನ್ನವನ್ನು ಹೆಚ್ಚಾಗಿ ಉಪಯೋಗಿಸಬಾರದು. ಚಿನ್ನವು ಮಹಾಲಕ್ಷ್ಮಿ ದೇವಿಯ ಸಂಕೇತವಾಗಿದೆ.

ಇದನ್ನು ಸೊಂಟ ಹಾಗೂ ಸೊಂಟದಿಂದ ಕೆಳಗೆ ಹಾಕಿಕೊಳ್ಳಬಾರದು. ಕಾಲಿಗೆ ಬಂಗಾರದ ಚೈನ್ ಗಳನ್ನು ಹಾಕಿಕೊಳ್ಳಬಾರದು ಇದು ಕೂಡ ಲಕ್ಷ್ಮೀದೇವಿಯನ್ನು ಅವಮಾನಿಸಿದಂತೆ ಆಗುತ್ತದೆ. ದೊಡ್ಡದಾದ ಹೊಟ್ಟೆ ಇರುವವರು ಅಂದರೆ ಬೊಜ್ಜು ಇರುವವರು ಮತ್ತು ಗರ್ಭಿಣಿ ಇರುವವರು ಹೆಚ್ಚಿನ ಬಂಗಾರವನ್ನು ಉಪಯೋಗಿಸಬಾರದು. ಇದರಿಂದ ಅವರಿಗೆ ಹೊಟ್ಟೆಯಲ್ಲಿ ಜೀರ್ಣಾಂಗದ ಸಮಸ್ಯೆ ಆಗಬಹುದು. ಕೆಲವೊಬ್ಬರು ರಾತ್ರಿ ಮಲಗುವಾಗ ಬಂಗಾರವನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಾರೆ ಇದರಿಂದ ಅವರ ನಿದ್ದೆಗೆ ಸಮಸ್ಯೆ ಕೂಡ ಆಗಬಹುದು ಹಾಗಾಗಿ ಇಂತಹ ಅಭ್ಯಾಸಗಳನ್ನು ಮಾಡಿಕೊಳ್ಳಬಾರದು. ಇನ್ನು ನೀವು ಬಂಗಾರವನ್ನು ಖರೀದಿಸಬೇಕು ಎಂದರೆ ಹಾಗೂ ಅದನ್ನು ಉಪಯೋಗಿಸಬೇಕು ಎಂದರೆ ಬುಧವಾರ ಭಾನುವಾರ ಗುರುವಾರ ಹಾಗೂ ಶುಕ್ರವಾರ ಒಳ್ಳೆಯ ದಿನಗಳು.

ಚಿನ್ನವನ್ನು ನೀವು ಇಷ್ಟಪಟ್ಟು ಹಾಕಿಕೊಳ್ಳಬಹುದು ಆದರೆ ಅದು ಎಲ್ಲರಿಗೂ ಅದೃಷ್ಟವನ್ನು ತರುವುದಿಲ್ಲ. ಒಬ್ಬೊಬ್ಬರ ಜಾತಕದ ಮೇಲೆಯವರಿಗೆ ತಕ್ಕಹಾಗೆ ವಿಧವಿಧವಾದ ಲೋಹಗಳು ಅಂದರೆ ತಾಮ್ರ ಹಿತ್ತಾಳೆ ಬೆಳ್ಳಿ ಇವುಗಳು ಕೂಡ ಅದೃಷ್ಟವನ್ನು ತಂದುಕೊಡುತ್ತವೆ. ವೈಜ್ಞಾನಿಕವಾಗಿ ಬಂಗಾರದ ಮೂಗುಬಟ್ಟು ಹಾಗೂ ಕಿವಿಗೆ ಬಂಗಾರದ ಓಲೆಗಳು ಮತ್ತು ಕೊರಳಿಗೆ ಮಾಂಗಲ್ಯ ಹಾಕಿಕೊಳ್ಳಲು ಕಾರಣಗಳಿವೆ. ಚಿಕ್ಕ ಮಕ್ಕಳಿಗೆ ಬಂಗಾರವನ್ನು ಹಾಕುವುದು ಕೂಡ ಒಳಿತಲ್ಲ ಇದರಿಂದ ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆಗಳು ಇರುತ್ತವೆ. ಬಂಗಾರದ ಮೇಲೆ ಆಸೆ ಇದ್ದರೆ ತೆಗೆದುಕೊಂಡು ನಿಮ್ಮ ಕೆಲಸಕ್ಕಾಗಿ ಬಳಸಿಕೊಳ್ಳಿ. ಬಂಗಾರವನ್ನು ಮಾಡಿಸಿಕೊಳ್ಳುವುದು ಮತ್ತು ಅದನ್ನು ಕಷ್ಟದ ಸಮಯ ಇರುವಾಗ ಉಪಯೋಗಿಸುವುದು ಒಳ್ಳೆಯದು

ಹಾಗಂತ ಎಲ್ಲರೂ ಅದನ್ನೇ ಹೆಚ್ಚಾಗಿ ಮಾಡಿ ನಷ್ಟವನ್ನು ಕೂಡ ಮಾಡಿಕೊಳ್ಳಬೇಡಿ. ನಿಮ್ಮ ಜಾತಕದ ಅನುಸಾರವಾಗಿ ನಿಮ್ಮ ಲೋಹದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಉತ್ತಮ. ಸ್ನೇಹಿತರೆ ಹಾಗಾದರೆ ಈ ಚಿನ್ನದ ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ನಾನು ಕೂಡ ಭಾವಿಸುತ್ತೇನೆ. ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ನಿಮ್ಮ ಪ್ರೀತಿಪಾತ್ರರಿಗೂ ತಿಳಿಸಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ