Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕೆಲವು ತಿಂಗಳ ಹಿಂದೆ ಪ್ರವಾಹದ ಪರಿಸ್ಥಿತಿ ಬಂದಾಗ ಈ ಊರಿನ ಜನರು ಅಲ್ಲಿಂದ ಹೇಗೆ ಪಾರಾಗಿದ್ದರು ಗೊತ್ತ ನಿಜ ಇವರೇ ಗ್ರೇಟ್ ಕಣ್ರೀ …!!!

ಪ್ರವಾಹದಲ್ಲಿ ಸಿಲುಕಿಕೊಂಡಿರುವ ಇವರು ಮಾಡಿದ್ದಾದರೂ ಏನು ನೀವೇ ನೋಡಿ ಪ್ರಾಣವನ್ನು ರಕ್ಷಿಸಿಕೊಳ್ಳಲು ಎಂತಹ ಉಪಾಯವನ್ನು ಮಾಡಿದ್ದಾರೆ ಎಂದು ತಿಳಿದುಕೊಳ್ಳಿ.ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಿಂದ ನೀವು ಎಷ್ಟೇ ತೊಂದರೆಗಳು ಬಂದರೂ ಹೇಗೆ ಎದುರಿಸಬೇಕೆಂಬುದನ್ನು ತಿಳಿದುಕೊಳ್ಳುತ್ತಿರಾ.ಸ್ನೇಹಿತರೆ ತೊಂದರೆಗಳು ಯಾವ ಕಡೆಯಿಂದ ಆದರೂ ಬರಬಹುದು ಯಾವ ರೀತಿ ಇಂದಾದರೂ ಬರಬಹುದು ಆದರೆ ನಾವು ಸಮಯಕ್ಕೆ ತಕ್ಕಂತೆ ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ಬದುಕುವ ಮಾರ್ಗವನ್ನು ನೋಡಿಕೊಳ್ಳಬೇಕು ಹಾಗೂ ಇತರರನ್ನು ಕೂಡ ರಕ್ಷಿಸಿಬೇಕು.

.ಅತಿಯಾದ ಮಳೆ ಬಂದರೂ ಕಷ್ಟ ಬರದಿದ್ದರೂ ಕಷ್ಟ ಒಂದು ವರ್ಷ ಅತಿವೃಷ್ಟಿಯಾದರೆ ಒಂದು ವರ್ಷ ಅನಾರುಷ್ಟಿ ಆಗಿರುತ್ತದೆ. ಪ್ರಕೃತಿ ವಿಕೋಪವಾದರೆ ಇಂತಹ ಪ್ರವಾಹಗಳು ಆಗುತ್ತವೆ. ಇಂತಹ ಪ್ರವಾಹಗಳಿಗೆ ನಾವು ಕೂಡ ಕಾರಣವಾಗಿದ್ದೇವೆ ಅತಿಯಾದ ವಾಹನಗಳ ಬಳಕೆ ಹಾಗೂ ಅತಿಯಾದ ಮರಗಳ ಕಡೆಯುವಿಕೆ ನಾವೆಲ್ಲ ಮಾಡುತ್ತಿದ್ದೇವೆ. ಇನ್ನಾದರೂ ನಾವು ಜಾಣರಾಗಿ ಇಂತಹ ಕ್ರೂರ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಬೇಕು ನಮ್ಮ ಪ್ರಕೃತಿಯನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಅಂದರೆ ಹಾನಿ ಮಾಡದೆ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ.

ಸ್ನೇಹಿತರೆ ನಾವು ನೋಡಿದ ಹಾಗೆ ಪ್ರವಾಹದಿಂದ ತುಂಬಾ ಕುಟುಂಬಗಳು ತಮ್ಮ ಜೀವನವನ್ನು ನಡೆಸಲು ಕಷ್ಟವಾಗದ ಪರಿಸ್ಥಿತಿಯಲ್ಲಿ ಇವೆ. ಕೆಲವೊಬ್ಬರು ಮಲಗಲು ಜಾಗವಿಲ್ಲದೆ ಊಟ ಮಾಡಲು ಊಟವಿಲ್ಲದೆ ತುಂಬಾ ಸಂಕಷ್ಟಗಳನ್ನು ಪಟ್ಟಿರುತ್ತಾರೆ. ಪ್ರವಾಹವು ಯಾವಾಗ ಬೇಕಾದರೂ ಬರಬಹುದು ಮಳೆ ಹೆಚ್ಚಾದರೆ ಅತಿಯಾಗಿ ಪ್ರವಾಹವು ಆಗುತ್ತದೆ. ಒಂದು ಸಲ ಮಳೆ ಬೇಕು ಬೇಕು ಎನ್ನುತ್ತೇವೆ ಅದೇ ಮಳೆರಾಯ ಅತಿಹೆಚ್ಚಾಗಿ ಮಳೆಯನ್ನು ಸುರಿಸಿದರೆ ಹೀಗೆ ಪ್ರವಾಹದಿಂದ ಸಿಲುಕುವಂತೆ ಆಗುತ್ತದೆ.

ರೈತರಿಗೆ ಮಳೆ ಬೇಕೆನ್ನುವ ಸಮಯದಲ್ಲಿ ಮಳೆಯೂ ಬರುವುದಿಲ್ಲ ಆದರೆ ಹೊಲದಲ್ಲಿ ಬೆಳೆ ಇನ್ನೇನು ಬರುತ್ತದೆ ಎನ್ನುವಷ್ಟರಲ್ಲಿ ಅತಿಯಾದ ಮಳೆಯಿಂದಾಗಿ ಬೆಳೆಗಳು ನಾಶವಾಗುತ್ತವೆ. ಸರ್ಕಾರವು ಮನೆಯ ನಿರ್ಮಾಣಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಮಾಡಿಕೊಟ್ಟಿದೆ ಪ್ರವಾಹದಿಂದ ಸಿಲುಕಿದವರಿಗೆ ಹಣದ ವ್ಯವಸ್ಥೆಯನ್ನು ಕೂಡ ಮಾಡಿದೆ ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ಮನೆಯ ಹಾಗೂ ಮನೆಯವರ ಪರಿಸ್ಥಿತಿ ಎಷ್ಟೇ ಹಣವಿದ್ದರೂ ಮೊದಲಿನಂತೆ ಆಗುವುದಿಲ್ಲ. ಮೊನ್ನೆಮೊನ್ನೆಯಷ್ಟೇ ನಾವೆಲ್ಲ ನೋಡಿದ್ದೇವೆ

ಉತ್ತರ ಕನ್ನಡ ಬೆಳಗಾವಿ ಕಾರವಾರ ಶಿವಮೊಗ್ಗ ಬೆಂಗಳೂರು ಇನ್ನೂ ಕೆಲವು ಸ್ಥಳಗಳಲ್ಲಿ ತುಂಬಾನೇ ಪ್ರವಾಹಗಳು ಆಗಿವೆ ಇದರಿಂದಾಗಿ ಜನರು ಓಡಾಡಲು ಕಷ್ಟ ಆಗಿತ್ತು ಆದರೆ ಒಂದು ದಿನದ ಊಟಕ್ಕಾಗಿಯೇ ದುಡಿಯುವ ಜನರಿಗೆ ಇದರಿಂದಾಗಿ ತುಂಬಾ ಸಮಸ್ಯೆ ಹಾಗೂ ತೊಂದರೆಗಳು ಆಗಿದ್ದವು. ಅದೇ ರೀತಿಯಾಗಿ ಕಾರವಾರದಲ್ಲಿ ಡ್ಯಾಮ್ನ ಅತಿಯಾದ ನೀರಿನಿಂದ ಪ್ರವಾಹವಾಗಿ ಜನರಲ್ಲಿ ಭಯ ಮೂಡಿಸುವಂತಹ ಭಯಾನಕ ನೀರು ಊರನ್ನೇ ಆವರಿಸಿತ್ತು ಎಷ್ಟೋ ಜನ ನೀರಿನಲ್ಲಿ ಬಿದ್ದು ಒದ್ದಾಡಿದರು. ಹಾಗೆಯೇ ಎಷ್ಟು ಮನೆಗಳು ನಾಶವಾದವು ಲೆಕ್ಕಕ್ಕಿಲ್ಲ.

ನೀರಿನಿಂದ ಮನೆಗಳೆಲ್ಲ ತುಂಬಿ ತುಳುಕಿದವು ಜನರು ಕಂಗಾಲಾಗಿ ಇದ್ದರು. ಅದರಲ್ಲೂ ಒಂದು ಮನೆಯಲ್ಲಿ ನೀರು ತುಂಬಾನೇ ಹೋಗಿ ಮನೆಯವರಲ್ಲಿ ಆತಂಕ ಸೃಷ್ಟಿಯಾಗಿತ್ತು ಆಗ ಅವರು ಮನೆಯಲ್ಲಿರುವ ಒಂದು ಕೊಲನ್ನು ಬಳಸಿ ಮನೆಯ ಮೇಲೆ ಒಬ್ಬೊಬ್ಬರನ್ನೇ ಕೂರಿಸಿದರು. ಎಲ್ಲರೂ ಮನೆಯ ಮೇಲೆ ಕುಳಿತು ತಮ್ಮನ್ನು ತಾವು ರಕ್ಷಿಸಿಕೊಂಡರು. ನೋಡಿರಿ ಸ್ನೇಹಿತರೆ ಇಂತಹ ಸಮಯದಲ್ಲಿ ದಿಕ್ಕೇ ತೋಚದಂತಾಗುತ್ತದೆ. ಆದರೆ ಇಲ್ಲಿನ ಜನರು ಧೈರ್ಯದಿಂದ ಇಂತಹ ಕಾರ್ಯಗಳನ್ನು ಮಾಡಿ ತಮ್ಮ ಜೀವವನ್ನು ರಕ್ಷಣೆ ಮಾಡಿಕೊಂಡಿದ್ದಾರೆ ಇದನ್ನು ನೋಡಿದ ಪೊಲೀಸ್ ಅಧಿಕಾರಿಗಳು ಅವರನ್ನು ರಕ್ಷಿಸಿ ಹೊರಗೆ ತಂದಿದ್ದಾರೆ.

ಹಾಗೆ ಅಲ್ಲಿರುವ ಎಲ್ಲರ ಮನೆ ಚಿತ್ರಗಳನ್ನು ತೆಗೆದು ಸರ್ಕಾರದ ಮುಂದೆ ತೋರಿಸಿದರು. ಸರ್ಕಾರ ಅವರಿಗೆ ಪರಿಹಾರವನ್ನು ನೀಡಲಿ ಎಂದು ನಾವು ಆಶಿಸೋಣ. ಜೀವನವು ಎಷ್ಟೇ ಕಷ್ಟವಾದರೂ ಎದುರಿಸುತ್ತೇವೆ ಎಂಬ ಶಕ್ತಿ ನಮ್ಮಲ್ಲಿರಬೇಕು ಅಂದಾಗ ಮಾತ್ರ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯ. ಆ ಕ್ಷಣದಲ್ಲಿ ಅವರಿಗೆ ಧೈರ್ಯವಿಲ್ಲದಿದ್ದರೆ ಎಷ್ಟೋ ಜನಗಳ ಪ್ರಾಣವು ಇರುತ್ತಿರಲಿಲ್ಲ. ಸ್ನೇಹಿತರೇ ಇಂತಹ ಪರಿಸ್ಥಿತಿ ಯಾರಿಗಾದರೂ ಯಾವಾಗಾದರೂ ಕೂಡ ಬರಬಹುದು ಇಂತಹ ಸಮಯದಲ್ಲಿ ನೀವು ಧೈರ್ಯಗೆಡದೆ ನಿಮ್ಮ ಬುದ್ಧಿ ಶಕ್ತಿಯನ್ನು ಉಪಯೋಗಿಸಿ ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ