ಕಾಳ ಸರ್ಪದೋಷವಿದ್ದರೆ ತಪ್ಪದೇ ಈ ದೇವಸ್ಥಾನಗಳಿಗೆ ಭೇಟಿ ನೀಡಿದರೆ ನಿಮಗೆ ಪರಿಹಾರ ಸಿಗುತ್ತದೆ ಒಮ್ಮೆ ಭೇಟಿ ನೀಡಿ !!!

215

ಸರ್ಪದೋಷ ಇರುವವರು ಅವರ ಜೀವನದಲ್ಲಿ ಸಾಕಷ್ಡು ಕಷ್ಟಗಳನ್ನು ಅನುಭವಿಸುತ್ತಾರೆ.ಸರ್ಪದೋಷಗಳಲ್ಲಿ ಕಾಳ ಸರ್ಪದೋಷವು ಅತ್ಯಂತ ನಕಾರಾತ್ಮಕ ದೋಷವಾಗಿದೆ.

ಈ‌ ದೋಷಗಳನ್ನು ನಮ್ಮ ಜಾತಕ ಹಾಗೂ ಕುಂಡಲಿಗಳ ಮೂಲದ ಜ್ಯೋತಿಷಿಗಳು ಇದೆಯೋ ಇಲ್ಲವೋ ಎಂದು ಖಚಿತಪಡಿಸುತ್ತಾರೆ.ಈ ತರಹದ ದೋಷಗಳು ಇದ್ದರೆ ಕೂಡಲೆ ಬಹೆಹರಿಸಿಕೊಳ್ಳುವುದು ಒಳ್ಳೆಯದು.

ಇಲ್ಲವಾದಲ್ಲಿ ಜೀವನದಲ್ಲಿ ತೊಂದರೆಗಳು ತಪ್ಪಿದ್ದಲ್ಲ.ಈ ದೋಷ ಯಾವ ವ್ಯಕ್ತಿಗೆ ಇರುತ್ತದೋ ಅವರು ಅತ್ಯಂತ ಭೀಕರವಾದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ದೋಷದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

ಕೆಲವರು ಇದೆಲ್ಲಾ ಮೂಡಬಂಬಿಕೆ ಎಂದು ತಳ್ಳಿಹಾಕುತ್ತಾರೆ ಬುದ್ದಿ ಕಲಿತ ಮೇಲೆ ದೇವರು ಎಂದು ಓಡೋಡಿ ಬರುತ್ತಾರೆ.ಈ ಕಾಳ ಸರ್ಪ ದೋಷ ಇದೆ ಎಂದು ಹೇಗೆ ತಿಳಿಯುತ್ತದೆ ಗೊತ್ತಾ.

ನಿದ್ರೆಯಲ್ಲಿ ಹಾವಿನ ಕನಸು ಹೆಚ್ಚಾಗಿ ಬೀಳುವುದು.ಹಾವು ಕನಸಿನಲ್ಲಿ ಬಂದು ಕಚ್ಚಿದಂತೆ ಭಾಸವಾಗುವುದು.ಕನಸಿನಲ್ಲಿ ಸ್ವಂತ ಮನೆ,ನೀರು ಹೆಚ್ಚಾಗಿ ಕಾಣಿಸುವುದು.ಹೀಗೆ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ‌.

ಈ ದೋಷ ಏನಾದರು ನಿಮಗೆ ಇದ್ದರೆ ತಪ್ಪದೇ ಈ ದೇವಸ್ಥಾನಗಳಿಗೆ ಭೇಟಿ ನೀಡಿ.ಯಾವ ಯಾವ ದೇಗುಲಗಳೆಂದು ತಿಳಿದುಕೊಳ್ಳೊಣ ಬನ್ನಿ.ಮೊದಲನೆಯದಾಗಿ ಮನ್ನಾರಸಲ ದೇಗುಲ.ಈ ದೇಗುಲವು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ.

ಸರ್ಪ ದೇವರ ದೇಗುಲ ಎಂದೆ ಪ್ರಸಿದ್ಧ. ಅಲ್ಹಪುಳ ಜಿಲ್ಲೆಯಿಂದ ನಲವತ್ತು ಕಿಲೋಮೀಟರ್ ದೂರದಲ್ಲಿದೆ.ಪರಶುರಾಮ ಈ ಸ್ಥಳವನ್ನು ಆವಿಷ್ಕರಿಸಿದ ಎಂದು ಹೇಳಲಾಗುತ್ತದೆ.ಈ ದೇಗುಲದಲ್ಲಿ ಮೂವತ್ತು ಸಾವಿರ ಹಾವುಗಳಿಗೆ ಎನ್ನಲಾಗುತ್ತದೆ.

ನಾಗನು ಯಕ್ಷಿ ದೇವಿಯೊಂದಿಗೆ ಇರುವ ನಾಗದೇವರನ್ನು ಈ ದೇಗುಲದಲ್ಲಿ ಪೂಜಿಸಲಾಗುತ್ತದೆ.ಈ ದೇಗುಲಕ್ಕೆ ಬಂದು ನಾಗದೇವರ ಪೋಟೊ ನೀಡುತ್ತೇನೆ ಎಂದು ಹರಕೆ ಹೊತ್ತುಕೊಂಡರೆ ಸಕಲ ದೋಷಗಳು ಇಲ್ಲಿ ನಿವಾರಣೆಯಾಗುತ್ತದೆ. ಎರಡನೆಯದಾಗಿ ನಾಗವಾಸುಕಿ ದೇಗುಲ.

ಈ ದೇಗುಲವು ಉತ್ತರ ಪ್ರದೇಶದ ಅಲಹಬಾದ್ ಜಿಲ್ಲೆಯ ಗಂಗಾನದಿಯ ದಡದಲ್ಲಿದೆ.ಈ ದೇಗುಲದಲ್ಲಿ ನಾಗದೇವತೆ,ಶಿವ ಪಾರ್ವತಿ, ಗಣಪತಿ,ಪಾಂಡವರ ಚಿಕ್ಕಪ್ಪ,ಭೀಷ್ಮಾ ಚಿತ್ರಗಳು ಇರುವುದನ್ನು ನಾವು ಕಾಣಬಹುದು.

ಈ ದೇಗುಲವು ಸರ್ಪಗಳ ರಾಜ ಎಂದು ಕರೆಯುವ ರಾಜ ವಾಸುಕಿಗೆ ಸಮರ್ಪಿತ.ಈ ದೇಗುಲದ ಬಗ್ಗೆ ಮತ್ಸ್ಯ ಪುರಾಣಗಳಲ್ಲಿ ವಿಶೇಷವಾಗಿ ಉಲ್ಲೇಖವಿದೆ.

ಮೂರನೆಯದಾಗಿ ಸೆಮ್ ಮುಖೇಮ್ ನಾಗರಾಜ ದೇಗುಲ.ಸೆಮ್ ಮುಖೇಮ್ ನಾಗರಾಜ ದೇಗುಲವು ಉತ್ತರಖಾಂಡದ ತೆಹ್ರೀ ಜಿಲ್ಲೆಯಲ್ಲಿರುತ್ತದೆ.ದ್ವಾರಕ ನಗರವು ನೀರಿನಲ್ಲಿ ಮುಳುಗಿ ಹೋದ ನಂತರ ಕೃಷ್ಟ ಅಲ್ಲು ಹಾವಿನ ದೇವತೆಯಾಗಿ ಎಲ್ಲರಿಗೂ ಕಾಣಿಸಿಕೊಂಡನು.

ಈ ದೇಗುಲದಲ್ಲಿ ವಿಶೇಷವಾಗಿ ನಾಗದೇವರನ್ನು ಆರಾಧಿಸಲಾಗುತ್ತದೆ. ಪುರಾತನ ಶೈಲಿಯಲ್ಲಿ ಈ ದೇಗುಲವನ್ನು ಕಟ್ಟಿಸಲಾಗಿದೆ.ಈ ದೇಗುಲದ ಪ್ರತಿ ಬಾಗಲಿನ ಮೇಲೆ ಕೃಷ್ಣ ಹಾವಿನ ನಿಂತು ಕೊಳಲು ಊದುವ ಚಿತ್ರಗಳನ್ನು ಕೆತ್ತಲಾಗಿದೆ.

ಈ ದೇಗುಲಕ್ಕೆ ಬಂದು ಭಕ್ತಿಯಿಂದ ಬೇಡಿದರೆ ಕಾಳಸರ್ಪದೋಷ ನಿವಾರಣೆಯಾಗುತ್ತದೆ. ನಾಲ್ಕನೆಯದಾಗಿ ನಾಗಚಂದ್ರೇಶ್ವರ ದೇಗುಲ.ಈ ದೇಗುಲವು ಮಧ್ಯಪ್ರದೇಶದ ಉಜ್ಜನಿಯಲ್ಲಿರುವ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರದಲ್ಲಿ ಈ ದೇಗುಲವು ಇದೆ.

ಈ ದೇಗುಲದಲ್ಲಿ ಬಂದು ಭಕ್ತಿಯಿಂದ ಬೇಡಿದರೆ ಹಾವಿನ ಅಧಿಪತಿಯು ಆಶೀರ್ವದಿಸುವನು ಎಂದು ಪ್ರತೀತಿ ಇದೆ.ಈ ದೇಗುಲಕ್ಕೆ ನಾಗಪಂಚಮಿ ದಿನದಂದು ಬಂದು ಪೂಜೆ ಸಲ್ಲಿಸಿದರೆ ಎಂತಹ ನಾಗದೋಷ,ಕಾಳಸರ್ಪದೋಷ ಇದ್ದರು ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here