ನಮಸ್ಕಾರ ಸ್ನೇಹಿತರೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಅದು ಕೂಡ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಒಂದು ಉತ್ತಮವಾದಂತಹ ಪದಾರ್ಥವಾಗಿದೆ. ಹೌದು ಸ್ನೇಹಿತರೆ. ಪದಾರ್ಥ ಯಾವುದೆಂದರೆ ಅಡುಗೆಮನೆಯಲ್ಲೇ ಇರುವಂತಹ ಕಾಳುಮೆಣಸು ಅಥವಾ ಕರಿಮೆಣಸು.
ಖಾರದ ರಾಣಿ ಎಂದು ಹೆಸರುವಾಸಿಯಾಗಿರುವ ಕರಿಮೆಣಸು ನಮ್ಮ ಆರೋಗ್ಯದ ಮೇಲೆ ಹೆಚ್ಚು ಉತ್ತಮ ಪರಿಣಾಮವನ್ನು ಬೀರುತ್ತದೆ.ಹಾಗೂ ಕರಿಮೆಣಸನ್ನು ನಾವು ನಮ್ಮ ದಿನನಿತ್ಯ ಆಹಾರದಲ್ಲಿ ಉಪಯೋಗಿಸುತ್ತಾ ಬಂದರೆ ನಮ್ಮ ದೇಹದಲ್ಲಿ ಅನೇಕ ರೀತಿಯ ಉತ್ತಮ ಬದಲಾವಣೆಗಳು ಉಂಟಾಗುತ್ತವೆ.
ಈ ಕರಿಮೆಣಸು ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ನಮ್ಮ ದೇಹ ಗಟ್ಟಿಮುಟ್ಟಾಗಿ ಇರುವಂತೆ ನೋಡಿಕೊಳ್ಳುತ್ತದೆ. ಈ ಕಾಳು ಮೆಣಸಿನಲ್ಲಿ ಪೋಷಕಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ತುಂಬಾನೇ ಹೆಚ್ಚಾಗಿರುತ್ತವೆ.
ಮುಖ್ಯವಾಗಿ ಸ್ನೇಹಿತರೆ ಈ ಕಾಳು ಮೆಣಸಿನಲ್ಲಿ ಕ್ಯಾಲ್ಸಿಯಂ ಮತ್ತು ಅಮೈನೋ ಆಸಿಡ್ ಎಂಬುದು ಹೆಚ್ಚಾಗಿರುತ್ತದೆ. ಇವು ನಮ್ಮ ಶರೀರಕ್ಕೆ ಒಂದು ಒಳ್ಳೆಯ ಆಂಟಿಆಕ್ಸಿಡೆಂಟ್ ಗಳಾಗಿ ಉಪಯೋಗವಾಗುತ್ತವೆ.
ಇವುಗಳನ್ನು ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಂಡು ಆಹಾರವನ್ನು ಸೇವಿಸುವುದರಿಂದ ಬಹಳಷ್ಟು ಕಾಯಿಲೆಗಳಿಂದ ನಾವು ದೂರವಿರಬಹುದು. ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಈ ಕಾಳುಮೆಣಸನ್ನು ಉಪಯೋಗಿಸುತ್ತಾರೆ.
ಹೌದು ಸ್ನೇಹಿತರೆ ನೀವೇನಾದರೂ ಪ್ರತಿದಿನ ಎರಡು ಅಥವಾ ಮೂರು ಕಾಳು ಮೆಣಸನ್ನು ತಿಂದರೆ ಆಗುವ ಪ್ರಯೋಜನಗಳ ಬಗ್ಗೆ ಇಂದು ಅಂದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ.ಬಹಳಷ್ಟು ಜನ ತಿಂದ ಆಹಾರ ಜೀರ್ಣವಾಗುವುದಿಲ್ಲ ಹಾಗೆ ಹಸಿವು ಕೂಡ ಆಗುವುದಿಲ್ಲ ಎಂದು ಹೇಳುತ್ತಿರುತ್ತಾರೆ.
ಇವೆಲ್ಲವಕ್ಕೂ ಆಯುರ್ವೇದ ಶಾಸ್ತ್ರದಲ್ಲಿ ಬಹುಮುಖ್ಯವಾದ ಕಾಳುಮೆಣಸು ಇದೆಲ್ಲದಕ್ಕೂ ಪರಿಹಾರ ಅಂತನೇ ಹೇಳಬಹುದು ಫ್ರೆಂಡ್ಸ್.ನಿಮಗೇನಾದರೂ ಹೊಟ್ಟೆ ಹಸಿವು ಆಗದೇ ಇದ್ದಾಗ ಹಾಗೂ ನೀವು ತಿಂದ ಆಹಾರ ಜೀರ್ಣವಾಗಿ ಇದ್ದಾಗ ಒಂದೆರಡು ಕಾಳುಮೆಣಸನ್ನು ತಿಂದರೆ ,ನಿಮ್ಮ ತಿಂದ ಆಹಾರ ಸಲೀಸಾಗಿ ಜೀರ್ಣವಾಗುತ್ತದೆ ಹಾಗೂ ಹೊಟ್ಟೆ ಹಸಿವು ಕೂಡ ಆಗುತ್ತದೆ.
ಬಹಳಷ್ಟು ಜನರು ಈ ಕಾಳುಮೆಣಸು ಕೆಮ್ಮು ಅಥವಾ ನೆಗಡಿ ಬಂದಾಗ ಮಾತ್ರ ಕೆಲಸ ಮಾಡುತ್ತದೆ ಎಂದು ಅಂದುಕೊಂಡಿರುತ್ತಾರೆ. ಅದಲ್ಲದೆ ಕಾಳುಮೆಣಸು ಎಷ್ಟು ವಿಧದಲ್ಲಿ ನಮಗೆ ಆರೋಗ್ಯ ಚೆನ್ನಾಗಿರಲು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.ಇಷ್ಟಲ್ಲದೆ ಸ್ನೇಹಿತರೆ ಶರೀರದಲ್ಲಿರುವ ಅಂದರೆ ರಕ್ತದಲ್ಲಿ ಸೇರಿರುವ ಕೊಬ್ಬನ್ನು ಕಡಿಮೆ ಮಾಡಲು ಕೂಡ ಈ ಕಾಳುಮೆಣಸು ಉಪಯೋಗವಾಗಿದೆ.
ಅಜೀರ್ಣ ತೆಯ ಸಮಸ್ಯೆಯನ್ನು ಎದುರಿಸುತ್ತಿರುವವರು ಕಾಳುಮೆಣಸನ್ನು ಪುಡಿಮಾಡಿಕೊಂಡು ಅದರ ಜೊತೆಗೆ ಬೆಲ್ಲವನ್ನು ಸೇರಿಸಿ ಅದನ್ನು ಉಂಡೆ ರೂಪದಲ್ಲಿ ಮಾಡಿಕೊಂಡು ಪ್ರತಿದಿನ ಸೇವಿಸುತ್ತಾ ಬಂದರೆ ಅಜೀರ್ಣದ ಸಮಸ್ಯೆ ಕಡಿಮೆಯಾಗುತ್ತದೆ.
ಇದನ್ನು ಊಟ ಮಾಡುವುದಕ್ಕಿಂತ ಮುಂಚೇನೆ ತೆಗೆದುಕೊಂಡರೆ ಊಟ ಮಾಡಿದಂತಹ ಆಹಾರ ಜೀರ್ಣವಾಗಲು ಸಹಾಯಕವಾಗುತ್ತದೆ.ಸ್ನೇಹಿತರೆ ಕೆಲವೊಂದು ಸಾರಿ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ಉಂಟಾದರೆ ಅದಕ್ಕೆ ಕಾಳುಮೆಣಸಿನ ಜೊತೆಗೆ ಮಜ್ಜಿಗೆಯನ್ನು ಸೇರಿಸಿ ಕುಡಿದರೆ ಹೊಟ್ಟೆಯಲ್ಲಿ ಗ್ಯಾಸ್ ಕಡಿಮೆಯಾಗುತ್ತದೆ.
ಅದಲ್ಲದೆ ಸ್ನೇಹಿತರೆ ನಿಮ್ಮ ಶರೀರದಲ್ಲಿ ಇರುವಂತಹ ಮಾಂಸಖಂಡಗಳಲ್ಲಿ ನೋವು ಉಂಟಾದಾಗ ಕಾಳು ಮೆಣಸಿನ ಪುಡಿಯೊಂದಿಗೆ ಬಾದಾಮಿಯನ್ನು ಸೇವಿಸುವುದರಿಂದ ನಿಮ್ಮ ಮಾಂಸಖಂಡಗಳಲ್ಲಿ ಇರುವ ನೋವು ಕಡಿಮೆಯಾಗುತ್ತದೆ.
ಕೆಮ್ಮು ಕಫ ಮತ್ತು ನೆಗಡಿಯಿಂದ ಬಳಲುತ್ತಿರುವವರು ಹಾಗೆಯೇ ತೂಕ ಹೆಚ್ಚಾಗಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಕಾಳುಮೆಣಸಿನ ಜೊತೆಗೆ ಜೇನುತುಪ್ಪವನ್ನು ಸೇರಿಸಿಕೊಂಡು ಊಟಕ್ಕಿಂತ ಮುಂಚೆ ತಿಂದರೆ ಈ ಸಮಸ್ಯೆ ನಿಮಗೆ ಪರಿಹಾರವಾಗುತ್ತದೆ.
ಹಾಗೆಯೇ ನಿಮಗೆ ಕೆಮ್ಮು ನೆಗಡಿ ಶೀತ ಹೆಚ್ಚಾದಾಗ ಕಾಳುಮೆಣಸಿನ ಪುಡಿಯನ್ನು ಅರಿಶಿನ ಜೊತೆಗೆ ಕುದಿಸಿ ಕುಡಿಯುವುದರಿಂದ ನಿಮ್ಮ ಕೆಮ್ಮು ಮತ್ತು ನೆಗಡಿ ಶೀತ ಕಮ್ಮಿಯಾಗುತ್ತದೆ. ಇದರಿಂದ ಕೆಮ್ಮು-ಶೀತ ಕಫ ಯಾವುದೇ ಇದ್ದರೂ ಬೇಗನೇ ಗುಣವಾಗುತ್ತದೆ.
ಹೀಗೆ ಕಾಳುಮೆಣಸು ನಮ್ಮದೇ ಏಕೆ ಹಲವಾರು ಪ್ರಯೋಜನಗಳನ್ನು ಮಾಡುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಶುಭದಿನ.