ಕಷ್ಟದಲ್ಲಿ ದೇವರು ಯಾವಾಗಲೂ ನಮ್ಮ ಜೊತೆ ಇರುತ್ತಾನೆ ಎನ್ನುವುದಕ್ಕೆ ಇದೆ ಉದಾಹರಣೆ ನೋಡಿ .. ತಪ್ಪದೇ ಈ ಒಂದು ಚಿಕ್ಕ ಕಥೆಯನ್ನು ಓದಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಕೆಲವರಿಗೆ ದೇವರು ಎಂದರೆ ನಂಬಿಕೆ ಇರುವುದಿಲ್ಲ ..ಆದರೆ ದೇವರು ನಮಗೆ ಕಷ್ಟ ಕಾಲ ಬಂದಾಗ ನಮಗೆ ಗೊತ್ತಾಗದ ರೀತಿಯಲ್ಲಿ ಸಹಾಯ ಮಾಡುತ್ತಿರುತ್ತಾರೆ . ದೇವರನ್ನು ನಂಬಿದರೆ ಯಾವತ್ತು ಕೂಡ ನಮ್ಮನ್ನು ಕೈ ಬಿಡುವುದಿಲ್ಲ .ಹಾಗಾಗಿ ದೇವರು ನಮ್ಮ ಕಷ್ಟಕಾಲದಲ್ಲಿ ಯಾವಾಗಲು ಒಂದಲ್ಲ ಒಂದು ರೂಪದಲ್ಲಿ ನಮ್ಮ ಜೊತೆ ಇರುತ್ತಾರೆ .ಹೌದು ಸ್ನೇಹಿತರೇ ದೇವರನ್ನು ನಂಬಿದರೆ ನಮಗೆ ಯಾವತ್ತೂ ಕೂಡ ದೇವರು ಮೋಸ ಮಾಡುವುದಿಲ್ಲ .ಕಷ್ಟದಲ್ಲಿ ದೇವರು ಹೇಗೆ ನಮ್ಮ ಜೊತೆ ಇರುತ್ತಾನೆ ಎನ್ನುವ ಮಾಹಿತಿಯನ್ನು ಒಂದು ಚಿಕ್ಕ ಕಥೆಯೊಂದಿಗೆ ಸಂಪೂರ್ಣ ವಿವರಣೆ ಈ ಮಾಹಿತಿಯಲ್ಲಿ ನೀಡುತ್ತೇನೆ . ಒಂದು ಊರಿನಲ್ಲಿ ಒಬ್ಬ ಭಕ್ತ ಇರುತ್ತಾನೆ ಭಕ್ತನಿಗೆ ಹಲವಾರು ಸಮಸ್ಯೆಗಳು ಇರುತ್ತವೆ, ಈ ಸಮಸ್ಯೆಗಳಿಂದ ಹೊರಬರಲು ದೇವರ ಮೊರೆ ಹೋಗುತ್ತಾನೆ, ಹೀಗೆ ಮೋರೆ ಹೋದಂತಹ ಈ ಭಕ್ತ ಎಷ್ಟೇ ಧ್ಯಾನ ಮಾಡಿದರೂ ಎಷ್ಟೇ ಕಷ್ಟ ಪಟ್ಟು ತಪಸ್ಸು ಮಾಡಿದರು .ದೇವರು ಪ್ರತ್ಯಕ್ಷವಾಗುವುದು ಇಲ್ಲ. ಎಲ್ಲಿಂದಲೋ ಹೋಗುತ್ತಾನೆ ಒಂದು ದಿನ ದೇವರ ಬಳಿ ಹೋಗಿ ಕೆಟ್ಟದಾಗಿ ಕೇಳಿಕೊಳ್ಳುತ್ತಾನೆ ನಾನು ಎಷ್ಟು ನಿನ್ನ ಕುರಿತು ಧ್ಯಾನ ಮಾಡಿದರೂ ಕೂಡ ನೀನು ನನಗೆ ಪ್ರತ್ಯಕ್ಷ ವಾಗುತ್ತಿಲ್ಲ.

 

ಇದು ಸರಿನಾ ಎಂದು ತನ್ನ ಅಳಲನ್ನು ತೋಡಿಕೊಳ್ಳುತ್ತಾನೆ. ಒಂದು ಸಾರಿಯಾದರೂ ನೀನು ನನ್ನ ಜೊತೆಗೆ ಇದೆಯಾ ಎಂದು ನನಗೆ ಒಂದು ಅನುಭೂತಿಯನ್ನು ತೋರಿಸು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.ಹೀಗೆ ಈ ಭಕ್ತನ ಆಸೆಯನ್ನು ಕೇಳಿಸಿಕೊಂಡ ಅಂತಹ ದೇವರು ಅಶರೀರವಾಣಿ ಹೇಳುತ್ತದೆ ನಾನು ನಿನ್ನ ಜೊತೆಗೆ ಇದೇನ್ ಎನ್ನುವುದಕ್ಕೆ ಹೇಳಿಕೊಳ್ಳುತ್ತೇನೆ ನಾನು ಹೇಳಿದ ಹಾಗೆ ಮಾಡಬೇಕು ಎಂದು ಹೇಳುತ್ತಾರೆ,ಅದು ಏನಪ್ಪ ಅಂದರೆ ನೀನು ಸಮುದ್ರದ ಕಿನಾರೆಯಲ್ಲಿ ನಡೆಯುತ್ತಿರುವಾಗ ಎರಡು ಹೆಜ್ಜೆಗಳು ನಿನ್ನದಾದರೆ ನಿನ್ನ ಜೊತೆಗೆ ಇನ್ನೆರಡು ಹೆಜ್ಜೆಗಳು ನನ್ನದಾಗುತ್ತದೆ, ಅವಾಗ ನೀವು ಅಂದುಕೊಳ್ಳಬಹುದು ನಿನ್ನ ಜೊತೆ ನಾನು ನಡೆದುಕೊಂಡು ಹೋಗುತ್ತೇನೆ ಹಾಗೂ ನಿನ್ನ ಜೊತೆ ನಾನಿದ್ದೇನೆ ಎಂದು ಅರ್ಥ.

ಇದಕ್ಕೆ ಸರಿ ಅಂತಹ ಭಕ್ತ ಅವತ್ತಿನಿಂದ ಸಮುದ್ರದ ಹತ್ತಿರ ಮರಳಿನ ಮೇಲೆ ನಡೆದು ಕೊಂಡು ಹೋಗುತ್ತಾನೆ ಹೀಗೆ ಹೋಗುತ್ತಿರುವಾಗ ಎರಡು ಹೆಜ್ಜೆ ಅವನದು ಆದರೆ ಇನ್ನೆರಡು ಹೆಜ್ಜೆ ದೇವರಾದ ಹೆಜ್ಜೆ ಗಳಾಗಿರುತ್ತವೆ. ಹೀಗೆ ಗಮನಿಸಿ ದಂತಹ ಈ ಭಕ್ತ ಹೌದು ನನ್ನ ಜೊತೆಗೆ ಇನ್ನೂ ಎರಡು ಹೆಜ್ಜೆಗಳು ಬರುತ್ತವೆ ಎಂದರೆ ಅದು ದೇವರ ಹೆಜ್ಜೆ ಆಗಿರುತ್ತದೆ ಎಂದು ಅರ್ಥ ಅಂದುಕೊಳ್ಳುತ್ತಾನೆ.ಇದಾದ ಕೆಲವು ದಿನಗಳ ಬಳಿಕ ಇವನ ಬದುಕಿನಲ್ಲಿ ಕಷ್ಟಗಳು ಎದುರಾಗುತ್ತವೆ ವ್ಯವಹಾರಗಳಲ್ಲಿ ಕಷ್ಟಗಳು ಬರುತ್ತವೆ, ತುಂಬಾ ದುಡ್ಡು ನಷ್ಟವಾಗಿ ರೋಡಿಗೆ ಬರುವಂತಹ ಪರಿಸ್ಥಿತಿ ಇವನಿಗೆ ಬರುತ್ತದೆ. ಇದರಿಂದ ಅವನ ಹತ್ತಿರ ಇರುವಂತಹ ಬಂಧುಗಳು ಕೂಡ ದೂರವಾಗುತ್ತಾರೆ,ಹೀಗೆ ಈ ರೀತಿಯ ಸಮಯದಲ್ಲಿ ವಿಶ್ರಾಂತಿಯನ್ನು ಪಡೆಯಲು ಹಾಗೂ ಮನಸ್ಸಿನ ನೋವು ಗಳನ್ನು ಹಂಚಿಕೊಳ್ಳಲು ಸಮುದ್ರ ಕಿನಾರೆಯ ಹತ್ತಿರ ಹೋಗುತ್ತಾನೆ, ಹೋಗುತ್ತಿರುವ ಸಂದರ್ಭದಲ್ಲಿ ಇವರ ಜೊತೆಗೆ ಬರ ಬೇಕಾದಂತಹ ಇನ್ನೆರಡು ಹೆಜ್ಜೆಗಳು ಬರುವುದಿಲ್ಲ,

ಇದನ್ನು ನೋಡಿದಂತಹ ಭಕ್ತ ಕೇವಲ ನಾವು ಕಷ್ಟದಲ್ಲಿರುವಾಗ ನೆಂಟರು ಮಾತ್ರವೇ ನಮ್ಮನ್ನು ಬಿಡುತ್ತಾರೆ , ಆದರೆ ದೇವರು ಕೂಡ ನಮ್ಮ ಜೊತೆಗಿರುವುದಿಲ್ಲ ಎಂದು ತುಂಬಾ ಅವನಿಗೆ ನೋವಾಗುತ್ತದೆ.ಹೀಗೆ ಒಂದು ದಿನ ಎರಡು ದಿನ ಮೂರು ದಿನ ಆದರೂ ಕೂಡ ದೇವರ ಇನ್ನೆರಡು ಹೆಜ್ಜೆಗಳು ಅವನ ಜೊತೆ ಬರುವುದಿಲ್ಲ, ಕೆಲವು ತಿಂಗಳಾದ ಬಳಿಕ ಅವನ ವ್ಯವಹಾರದಲ್ಲಿ ಚೇತರಿಕೆ ಕಂಡು ಮತ್ತೆ ಮೊದಲ ಹೇಗಿದ್ದರೂ ಹಾಗೆ ಆಗುತ್ತಾನೆ. ಅವಾಗ ಅವರನ್ನು ದೂರ ಮಾಡಿದಂತಹ ನೆಂಟರು ಕೂಡ ಅವರ ಹತ್ತಿರ ಬರುತ್ತಾರೆ.ಇದಾದ ಮೇಲೆ ಮತ್ತೆ ಅವನು ಸಮುದ್ರದ ಕಿನಾರೆಯಲ್ಲಿ ನಡೆಯಲು ಪ್ರಾರಂಭ ಮಾಡುತ್ತಾನೆ ಹೀಗೆ ನಡೆಯುತ್ತಿರುವಾಗ ಅವನ ಹೆಜ್ಜೆಯ ಜೊತೆಗೆ ಇನ್ನೂ ಎರಡು ಹೆಜ್ಜೆಗಳು ಬರುತ್ತವೆ. ಇದನ್ನು ನೋಡಿ ಸಹಿಸಲಾಗದೆ ದೇವರಿಗೆ ಬಯ್ಯಲು ಶುರು ಮಾಡುತ್ತಾನೆ .

ನಾನು ಕೇವಲ ಮನುಷ್ಯರಿಗೆ ಮಾತ್ರವೇ ಈ ತರದ ಕೆಟ್ಟ ಮನೋಭಾವನೆ ಇರುತ್ತದೆ ಎಂದು ಅಂದುಕೊಂಡಿದ್ದೆ ,ಆದರೆ ದೇವರು ಕೂಡ ಈ ರೀತಿಯ ಮನೋಭಾವನೆ ಇದೆ ಎಂದು ಇವತ್ತು ಗೊತ್ತಾಗಿದೆ ಎಂದು ಹೇಳುತ್ತಾನೆ.ಇವನ ಈ ನುಡಿಯನ್ನು ಕೇಳಿಸಿಕೊಂಡು ಅಂತಹ ಭಗವಂತನು ಒಂದು ವಿಷಯವನ್ನು ಹೇಳುತ್ತಾನೆ, ನೀನು ಕಷ್ಟದ ಕಾಲದಲ್ಲಿ ನಡೆಯುತ್ತಿರುವಾಗ ನಿನ್ನ ಜೊತೆಯಲ್ಲಿ ನಾನು ಇದ್ದೆ ಅದು ಹೇಗೆ ಅಂತೀಯಾ, ನೀನು ಸಮುದ್ರದ ಕಿನಾರೆಯಲ್ಲಿ ನಡೆದುಕೊಂಡು ಹೋಗುವಾಗ ಕೇವಲ ಎರಡು ಹೆಜ್ಜೆಗಳು ಮಾತ್ರವೇ ಬರುತ್ತವೆ .ಎಂದು ನೀನು ಅಂದುಕೊಂಡಿದ್ದೆ, ಆದರೆ ಆ ಹೆಜ್ಜೆಗಳು ನಿಂದಲ್ಲ ಅದು ನಂದು. ಹೇಗೆ ಅಂತೀಯಾ, ನಿನ್ನ ಕಷ್ಟಕಾಲದಲ್ಲಿ ನಡೆಯುತ್ತಿರುವಾಗ ನಿನ್ನನ್ನು ನಾನು ಮಗುವಿನ ಹಾಗೆ ಎತ್ತುಕೊಂಡು ನಡೆದು ಹೋಗುತ್ತಿದ್ದೆ ಆದ್ದರಿಂದ ನಿನ್ನ ಎರಡು ಹೆಜ್ಜೆಗಳು ಕಾಣುತ್ತಿರಲಿಲ್ಲ ಅದು ನನ್ನ ಎರಡು ಹೆಜ್ಜೆಗಳು . ಭಕ್ತನು ಅಥವಾ ಭಕ್ತರು ಕಷ್ಟದಲ್ಲಿರುವಾಗ ದೇವರು ಅವರನ್ನು ತಮ್ಮ ಮಡಿಲಿಗೆ ಹಾಕಿಕೊಂಡು ಕಷ್ಟವನ್ನು ನಿವಾರಣೆ ಮಾಡುವ ವರೆಗೂ ಅವರನ್ನು ಕೈಹಿಡಿದು ನಡೆಸುತ್ತಾರೆ .

ಹಾಗೂ ಅವರನ್ನು ಎತ್ತಿಕೊಂಡು ಅವರ ಕಷ್ಟವನ್ನು ನಿವಾರಣೆ ಮಾಡುವ ವರೆಗೂ ಅವರನ್ನು ಕಾಪಾಡುತ್ತಾನೆ ಎಂದು ಅರ್ಥ. ಹೀಗೆ ಈ ಮಾತನ್ನು ಕೇಳಿಸಿಕೊಂಡ ಅಂತಹ ಭಕ್ತರು ದೇವರಲ್ಲಿ ಕ್ಷಮೆ ಕೇಳಿಕೊಂಡು ಮತ್ತೆ ಸಮುದ್ರದ ಕಿನಾರೆಯಲ್ಲಿ ಹೆಜ್ಜೇನು ಹಾಕುತ್ತ ಮುಂದೆ ಸಾಗುತ್ತಾನೆ.ಹೇಗಿದೆ ಸ್ನೇಹಿತರೆ ಈ ಕಥೆ ಅರ್ಥ ಆಯ್ತಲ್ಲ ಭಗವಂತನು ಯಾವಾಗಲೂ ನಮ್ಮ ಜೊತೆ ಇರುತ್ತಾನೆ ಆದರೆ ಕಷ್ಟಪಟ್ಟು ದುಡಿಯುವುದು ನಮ್ಮ ಕರ್ತವ್ಯವಾಗಿರಬೇಕು ,ಮನೆಯಲ್ಲಿ ಕೂತು ದೇವರ ಜಪ ಮಾಡುವುದು ಹಾಗೂ ಓದದೇ ಬರೆಯದೆ ಒಂದು ಪೆನ್ನನ್ನು ದೇವರ ಹತ್ತಿರ ಪೂಜೆ ಮಾಡಿಸಿ ನಾನು ಫಸ್ಟ್ ರ್ಯಾಂಕ್ ಬರಬೇಕು ಎಂದುಕೊಂಡರೆ ಆಗುವುದಿಲ್ಲ,

ಯಾವುದೇ ಮಂತ್ರಕ್ಕೆ ಮಾವಿನಕಾಯಿ ಬೀಳುವುದಿಲ್ಲ, ಕಷ್ಟಪಟ್ಟು ದುಡಿದರೆ ಮಾತ್ರ ಫಲ ಇರುತ್ತದೆ ಆ ದೇವರು ನಿಮ್ಮ ಜೊತೆ ಇರುತ್ತಾನೆ ಎಂದು ಅರ್ಥ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತ ಜೊತೆ ಹಂಚಿಕೊಳ್ಳಿ ಹಾಗೂ ನೀವು ನಮ್ಮ ಪೇಜ್ ಅನ್ನು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಮೇಲೆ ಅಥವ ಕೆಳಗೆ ಕಳಸು ತರುವಂತಹ ಬಟನ್ ಅನ್ನು ಕ್ಲಿಕ್ ಮಾಡಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ.

Leave a Reply

Your email address will not be published. Required fields are marked *