Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕಷ್ಟಗಳ ಮೇಲೆ ಕಷ್ಟಗಳನ್ನು ನೀವು ಅನುಭವಿಸುತ್ತಿದ್ದೀರಾ .. ಈ ಒಂದು ಚಿಕ್ಕ ಪರಿಹಾರವನ್ನು ಮಾಡ್ಕೊಳಿ ಸಾಕು …!!!!!

ನಿಮಗೆ ಶತ್ರುಗಳ ಕಾಟ ಇದ್ದರೆ ಹಾಗೂ ಕೋರ್ಟಿಗೆ ಸಂಬಂಧಪಟ್ಟ ವಿಚಾರದಲ್ಲಿ ಟೆನ್ಶನ್ ಇದ್ದರೆ ಹಾಗೂ ನಿಮಗೆ ತುಂಬಾ ಕೋಪ ಬರುತ್ತಿದ್ದರೆ ಈ ಒಂದು ಪರಿಹಾರವನ್ನು ಮಾಡಿ ಕಷ್ಟಗಳ ಮೇಲೆ ಕಷ್ಟ ಬರುವುದನ್ನು ದೂರ ಮಾಡಿಕೊಳ್ಳಿ.ಸ್ನೇಹಿತರೆ ಈಗಿನ ಕಾಲದಲ್ಲಿ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಆಫೀಸ್ನಲ್ಲಿ ವರ್ಕರ್ಸ್ ಜೊತೆಗೆ ಜಗಳ ಹಾಗೆ ಗಂಡ ಹೆಂಡತಿಯ ಜಗಳ ಹೀಗೆ ಎಲ್ಲಾ ಕಡೆ ಜಗಳಗಳು ಆಗುವುದನ್ನು ನೋಡುತ್ತೇವೆ. ಇದರಿಂದಾಗಿ ನಾವು ತುಂಬಾ ಕೋಪವನ್ನು ಮಾಡಿಕೊಂಡು ನಮ್ಮ ತಲೆ ಹಾಳು ಮಾಡಿಕೊಳ್ಳುತ್ತೇವೆ ಅಂದರೆ ತುಂಬಾ ಟೆನ್ಶನ್ ಮಾಡಿಕೊಳ್ಳುವುದು ತುಂಬಾ ಸುಮ್ಮನೆ ಇರುವುದು ಕೆಟ್ಟ ಕೆಟ್ಟ ವಿಚಾರಗಳನ್ನು ಮಾಡುವುದು ಹೀಗೆ ಕೆಲವೊಬ್ಬರಿಗೆ ಆಗುತ್ತಿರುತ್ತದೆ. ಇನ್ನೂ ಮನೆಯಲ್ಲಿ ನಮ್ಮವರಿಂದಲೇ ನಮಗೆ ಮೋಸ ಆಗಿ ನಮ್ಮ ನಡುವೆ ಶತ್ರುತ್ವ ಬೆಳೆದು ಈ ಶತ್ರುತ್ವ ಆಸ್ತಿಗಾಗಿ ಅಥವಾ ಹಣಕ್ಕಾಗಿ ದೊಡ್ಡದಾಗಿ ಬೆಳೆದು ನಾವು ದೊಡ್ಡ ಸಂಕಷ್ಟಕ್ಕೆ ಸಿಲುಕುವಂತೆ ಆಗಿ ಬಿಡುತ್ತದೆ.

ಇನ್ನು ಮನೆಯಲ್ಲಿ ಹಣಕಾಸಿನ ತೊಂದರೆ ಹಾಗೂ ಆರೋಗ್ಯದ ತೊಂದರೆ ಮತ್ತು ಮನಸ್ಸಿಗೆ ನೆಮ್ಮದಿ ಇಲ್ಲದೆ ಇರುವುದು ಹೀಗೆ ನೂರಾರು ಕಷ್ಟಗಳು ತೊಂದರೆಗಳು ಬಂದರೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಸ್ನೇಹಿತರೆ ಇಂತಹ ತೊಂದರೆಗಳು ಯಾವಾಗ ಹೆಚ್ಚುತ್ತವೆ ಎಂದರೆ ನಮ್ಮ ಮೇಲೆ ಅಥವಾ ನಮ್ಮ ಮನೆಯ ಮೇಲೆ ಕುಜದೋಷ ಇದ್ದಾಗ. ಕುಜ ಎಂದರೆ ಮಂಗಳ ದೋಷ ಈ ದೋಷ ಇದ್ದಾಗ ಮನೆಯಲ್ಲಿ ಮೇಲೆ ನಾನು ಹೇಳಿದಂತೆ ಆಗುವ ಸಮಸ್ಯೆಗಳು ಉಂಟಾಗಬಹುದು. ಈ ಮಂಗಳ ದೋಷ ಅಥವಾ ಕುಜ ದೋಷಕ್ಕೆ ಪರಿಹಾರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡುವುದು. ಸುಬ್ರಹ್ಮಣ್ಯ ಸ್ವಾಮಿಯ ವಿಶೇಷತೆ ತುಂಬಾ ಮಹತ್ವವಾಗಿದೆ. ಯಾರಿಗೆ ದೋಷಗಳು ಹೆಚ್ಚಾಗಿರುತ್ತವೆ ಮತ್ತು ಯಾರು ದೋಷದಿಂದ ಕಷ್ಟವನ್ನು ಅನುಭವಿಸುತ್ತಾರೆ ಅವರು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು.

ಸ್ನೇಹಿತರೆ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ನಿಮಗೆ ಮೇಲಿನ ಯಾವುದೇ ಸಮಸ್ಯೆಗಳು ಬರುವುದಿಲ್ಲ ಬಂದಿದ್ದರೆ ಎಲ್ಲವೂ ನಿವಾರಣೆಯಾಗುತ್ತದೆ. ಈ ಪರಿಹಾರಕ್ಕೆ ಕಣಗಲ ಹೂವು ಅಥವಾ ಕೆಂಪು ಹೂಗಳು ಬೇಕು. ಪ್ರತಿ ಮಂಗಳವಾರ ನೀವು ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಈ ಹೂಗಳನ್ನು ಕೊಟ್ಟು ಪೂಜೆ ಮಾಡಿಸಿ ಅಥವಾ ನೀವು ಮನೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಪೂಜೆಯನ್ನು ಮಾಡಿ ಚಪಾತಿಯನ್ನು ಶುದ್ಧವಾಗಿ ಮಾಡಿ ಅದಕ್ಕೆ ಬೆಲ್ಲವನ್ನು ಸೇರಿಸಿ ಎಡೆ ಹಿಡಿಯಬೇಕು. ಈ ರೀತಿಯಾಗಿ ನೀವು ಪ್ರತಿ ಮಂಗಳವಾರ ಪೂಜೆ ಮಾಡುತ್ತಾ ಬಂದರೆ ಯಾವುದೇ ಕಷ್ಟಗಳೂ ಅಥವಾ ದೋಷಗಳು ನಿಮಗೆ ಬರುವುದಿಲ್ಲ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡುವುದರಿಂದ ನಿಮಗೆ ಶತ್ರುತ್ವದ ಬಾದೆ ಎಂಬುದು ಬರುವುದಿಲ್ಲ.

ಹಾಗೆ ಸ್ನೇಹಿತರೆ ಒಂದು ಪರಿಹಾರವನ್ನು ನೀವು ಮಂಗಳವಾರ ಮಾಡಬೇಕು ಅಥವಾ ಮಂಗಳವಾರ ಷಷ್ಟಿ ಬಂದರೆ ಇನ್ನೂ ಒಳ್ಳೆಯದು ಇಂತಹ ದಿನದಂದು ನೀವು ಪೂಜೆಯನ್ನು ಪ್ರಾರಂಭ ಮಾಡಬಹುದು . ಸ್ನೇಹಿತರೇ ನೀವು ಮಾಡಿದ ಚಪಾತಿಯನ್ನು ಎಡೆ ಹಿಡಿದ ಮೇಲೆ ನೀವು ಕೂಡ ತಿಂದು ಹಸುವಿಗೂ ಕೂಡ ಪ್ರಸಾದವನ್ನು ಕೊಡಬೇಕು. ಆಗಿ ಪ್ರಸಾದಕ್ಕೆ ದಾಳಿಂಬೆ ಹಣ್ಣನ್ನು ಸಹ ಇಡಬಹುದು. ಸ್ನೇಹಿತರೆ ಪ್ರತಿ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಹೋಗಲು ನಿಮಗೆ ಆಗದಿದ್ದರೆ ಶಿವನ ದೇವಸ್ಥಾನಕ್ಕೆ ಹೋಗಬಹುದು ಇದು ಕೂಡ ಆಗದೆ ಹೋದರೆ ಆಂಜನೇಯಸ್ವಾಮಿ ಅಥವಾ ಅಮ್ಮನವರ ದೇವಾಲಯಕ್ಕೆ ಹೋಗಬಹುದು. ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಅಥವಾ ಕುಜ ದೋಷವನ್ನು ಪರಿಹಾರ ಮಾಡಿಕೊಳ್ಳಲು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮುಖ್ಯವಾಗಿದೆ.

ಕುಜದೋಷ ಬಂದವರು ಮನೆಯಲ್ಲಿ ನೆಮ್ಮದಿಯಾಗಿ ಇರಲು ಆಗುವುದಿಲ್ಲ ಹಾಗೆ ಮನೆಯಲ್ಲಿ ಶುಭಕಾರ್ಯಗಳು ತಡವಾಗುತ್ತದೆ. ಇನ್ನು ಶತ್ರುತ್ವ ಬಾದೆ ಹಾಗೂ ಕೋರ್ಟು ಕಚೇರಿ ಕೆಲಸದಲ್ಲಿ ತೊಂದರೆ ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಸ್ನೇಹಿತರೆ ಈ ಪರಿಹಾರವನ್ನು ನೀವು ಮಾಡುತ್ತಾ ಬಂದರೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಹಾಗಾದರೆ ಸ್ನೇಹಿತರೇ ಯಾರು ಕುಜ ದೋಷವನ್ನು ಹೊಂದಿರುತ್ತಾರೆ ಹಾಗೆ ಕೋಪ ಹೆಚ್ಚು ಮಾಡಿಕೊಳ್ಳುತ್ತಾರೆ ಹಾಗೂ ಶತ್ರುಬಾಧೆ ಇಂದ ನೋವನ್ನು ಅನುಭವಿಸುತ್ತಾರೆ ಅಂತವರಿಗೆ ನೀವು ಈ ಮಾಹಿತಿಯನ್ನು ತಿಳಿಸಿ ನಿಮ್ಮಿಂದ ಕೂಡ ಒಂದು ಒಳ್ಳೆಯ ಸಹಾಯ ಅವರಿಗೆ ಆಗುತ್ತದೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ