ಕರ್ನಾಟಕದಲ್ಲಿ ನೀವು ನೋಡಲೇಬೇಕಾದಂತಹ 7 ಗಣಪತಿ ದೇವಸ್ಥಾನಗಳು ಯಾವುವು ಗೊತ್ತಾ ? ಎರಡು ನಿಮಿಷ ನಿಮ್ಮ ಹತ್ತಿರ ಟೈಮ್ ಇದ್ದರೆ ಒಂದು ರೌಂಡ್ ಹಾಕ್ಕೊಂಡು ಬನ್ನಿ …

747

ಗಣೇಶ ಎಂದರೆ ವಿಘ್ನ ನಿವಾರಕ ಗಣಪತಿಯ ನೀವು ನಂಬಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕೆಟ್ಟ ಕಾರ್ಯಗಳು ನಡೆಯುವುದಿಲ್ಲ ಹಾಗೂ ನಿಮ್ಮ ಜೀವನದಲ್ಲಿ ಯಾವುದೇ ಕಾರ್ಯಗಳಿಗೆ ವಿಘ್ನ ಬರುವುದಿಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಂತಹ ವಿಚಾರ.

ಹಾಗಾದ್ರೆ ಗಣಪತಿಯನ್ನು ನಾವು ನೋಡಬೇಕಾದರೆ ಹಲವಾರು ರೀತಿಯ ದೇವಸ್ಥಾನಗಳು ನಮ್ಮ ಕರ್ನಾಟಕದಲ್ಲಿ ಸುಪ್ರಸಿದ್ಧ ಸ್ಥಳಗಳಲ್ಲಿವೆ. ಹಾಗಾದ್ರೆ ಬನ್ನಿ ನಮ್ಮ ಕರ್ನಾಟಕದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಗಣಪತಿಯ ದೇವಸ್ಥಾನಗಳು ಇದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತೆಗೆದುಕೊಳ್ಳೋಣ ಬನ್ನಿ.

ಮೊದಲನೇದಾಗಿ ದೊಡ್ಡಗಣಪತಿ ಇದು ಬಸವನಗುಡಿ ಬೆಂಗಳೂರಿನಲ್ಲಿ ಇದೆ , ಬೆಂಗಳೂರು ನಲ್ಲಿ ಇರುವಂತಹ ಎಲ್ಲಾ ದೇವಸ್ಥಾನಗಳಿಗೆ ಹೋಲಿಸಿದರೆ ಈ ದೇವಸ್ಥಾನ ತುಂಬಾ ಹಳೆಯ ದೇವಸ್ಥಾನವಾಗಿದೆ.

ಬೆಂಗಳೂರಿನಲ್ಲಿ ಸ್ಥಳ ದೊರಕುವುದೇ ಕಡಿಮೆ ಅದರಲ್ಲೂ ಈ ದೇವಸ್ಥಾನ ಇರಬಹುದು ಒಂದು ವಿಶಾಲವಾದ ಸ್ಥಳದಲ್ಲಿ, ಈ ಗರ್ಭಗುಡಿಯನ್ನು ಒಂದೇ ಕಲ್ಲಿನಲ್ಲಿ ಕಟ್ಟಲಾಗಿದೆ ಅದು ಇರುವುದು ಏಳು ಅಡಿ ಎತ್ತರ ಹಾಗೂ ಎರಡು ಅಡಿ ಅಗಲ. ಈ ಗಣಪತಿ ದೇವಸ್ಥಾನದಲ್ಲಿ ಇರುವಂತಹ ಗಣಪನನ್ನು ಸ್ವಯಂ ಉದ್ಭವ ಗಣಪ ಎಂದು ಕೂಡ ಕರೆಯುತ್ತಾರೆ ಈತನಿಗೆ ವಿಶೇಷ ಶಕ್ತಿ ಇದೆ.

ಎರಡನೆಯದಾಗಿ ಶರವು ಗಣಪತಿ , ಈ ಗಣಪತಿ ದೇವಸ್ಥಾನ ಇರುವುದು ಮಂಗಳೂರಿನಲ್ಲಿ. ಇಲ್ಲಿ ಇರುವಂತಹ ಎಲ್ಲ ದೇವಸ್ಥಾನಗಳಿಗೆ ಹೋಲಿಸಿದರೆ ಈ ದೇವಸ್ಥಾನ ತುಂಬಾ ಫೇಮಸ್ ಆಗಿದೆ, ಇದನ್ನು ತುಳು ರಾಜನೊಬ್ಬಕಟ್ಟಿಸಿದ್ದಾನೆ ಎಂದು ಒಂದು ಮಾತು ಕೂಡ ಇದೆ. ಈ ದೇವಸ್ಥಾನವನ್ನು ಸ್ವಯಂ ಉದ್ಭವ ಗಣಪ ಎಂದು ಕರೆಯುತ್ತಾರೆ.

ಹಾಗೂ ಶಕ್ತಿ ಗಣಪ ಎಂದು ಕೂಡ ಕರೆಯುತ್ತಾರೆ. ಆನೆಗುಡ್ಡೆ ವಿನಾಯಕ ನಿಮಗೆ ಗೊತ್ತಿರುವ ಹಾಗೆ ಆನೆಗುಡ್ಡೆ ವಿನಾಯಕ ಇರುವುದು ಉಡುಪಿ ಜಿಲ್ಲೆಯಲ್ಲಿ, ನಮ್ಮ ಪುರಾಣದ ಪ್ರಕಾರ ನಾವು ಗಮನಿಸಿದರೆ ಪುರಾಣದ ಪ್ರಕಾರ ಈ ಸ್ಥಳವನ್ನು ಕುಂಬ ಕಾಶಿ ಎಂದು ಕೂಡ ಕರೆಯುತ್ತಿದ್ದರು. ಈ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ ಹಾಗೂ ಇದನ್ನು ಕುಂಭ ಕಾಶಿ ಎಂದು ಕೂಡ ಕರೆಯುತ್ತಾರೆ.

ನಂತರದ್ದು ಹಟ್ಟಿಅಂಗಡಿ ವಿನಾಯಕ ಈ ದೇವಾಲಯ ಕೂಡ ಉಡುಪಿಯಲ್ಲಿ ಇದೆ ಇದನ್ನು ಕೂಡ ಒಂದೇ ವಿಗ್ರಹದಲ್ಲಿ ಕೆತ್ತಲಾಗಿದೆ  ಹಾಗೂ ಇದನ್ನು ಅಳುಪ  ರಾಜರ ಕಾಲದಲ್ಲಿ ಕಟ್ಟಲಾಗಿದೆ ಎನ್ನುವಂತಹ ನಂಬಿಕೆ ಇದೆ. ನಂತರದ ದೇವಸ್ಥಾನದ ವಿಷಯಕ್ಕೆ ಬಂದರೆ ಇಡಗುಂಜಿ ದೇವಸ್ಥಾನ ಇದಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ, ನೀವು ಹೊನ್ನಾವರಕ್ಕೆ ಹೋದ ಈ ದೇವಸ್ಥಾನವನ್ನು ಭೇಟಿ ನೀಡದೆ ಬರಬೇಡಿ, ಒಂದು ದೇವಸ್ಥಾನಕ್ಕೆ ಸಾಕಷ್ಟು ಶಕ್ತಿ ಇದೆ ಅಂತ ಅಲ್ಲಿನ ಜನರು ಹೇಳುತ್ತಾರೆ.

ನಂತರ ದೇವಸ್ಥಾನದ ವಿಷಯಕ್ಕೆ ಬಂದರೆ ಸೌತಡ್ಕ ವಿನಾಯಕ ದೇವಸ್ಥಾನ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಂತಹ ಒಂದು ಧಾರ್ಮಿಕ ಕ್ಷೇತ್ರವಾಗಿದೆ, ಇದು ಬೆಳ್ತಂಗಡಿ ತಾಲೂಕಿನಿಂದ ಮೂರು ಕಿಲೋಮೀಟರ್ ಕ್ರಮಿಸಿದರೆ ನಿಮಗೆ ಈ ದೇವಸ್ಥಾನ ದೊರಕುತ್ತದೆ. ಇಲ್ಲಿಗೆ ಈ ದೇವಸ್ಥಾನದ ಒಂದು ಮಹಿಮೆ ಏನಪ್ಪಾ ಅಂದರೆ ಈ ದೇವಸ್ಥಾನಕ್ಕೆ ಯಾವುದೇ ರೀತಿಯ ಬಾಗಿಲು ಸಹ ಇಲ್ಲ ಈ  ದೇವಸ್ಥಾನಕ್ಕೆ ಗರ್ಭಗುಡಿ ಇಲ್ಲವೇ ಇಲ್ಲ,

ಗೊತ್ತಾಯಿತಲ್ಲ ಸ್ನೇಹಿತರೆ ಈ ರೀತಿಯ ಶಕ್ತಿಶಾಲಿ ಗಣಪತಿ ದೇವಸ್ಥಾನಗಳು ನಮ್ಮ ಕರ್ನಾಟಕ ರಾಜ್ಯದಲ್ಲಿ ತುಂಬಾ ಫೇಮಸ್ ಆಗಿರುವಂತಹ ಒಂದು ದೇವಸ್ಥಾನಗಳು ಈ ದೇವಸ್ಥಾನಗಳಿಗೆ ಹೋಗುವಂತಹ ನಿಮಗೆ ಅವಕಾಶ ದೊರಕಿದರೆ ಯಾವುದೇ ಕಾರಣಕ್ಕೂ ಮರೆಯಬೇಡಿ.

 

LEAVE A REPLY

Please enter your comment!
Please enter your name here