ದೇಹದ ಮೇಲೆ ವೈರಸ್ ಗಳು ಹೇಗೆ ಅಟ್ಯಾಕ್ ಮಾಡುತ್ತವೆ ಹಾಗೆಯೇ ಈ ವೈರಸ್ ಅಟ್ಯಾಕ್ ಮಾಡಿದಾಗ ನಮ್ಮ ದೇಹದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಅನ್ನೋದನ್ನ ತಿಳಿಯೋಣ ,
ಈ ಒಂದು ಆರೋಗ್ಯ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಯಾಕೆಂದರೆ ಪ್ರತಿಯೊಬ್ಬರು ಕೂಡಾ ಈ ವಿಚಾರದ ಬಗ್ಗೆ ತಿಳಿದಿದ್ದರೆ ಸಾಕಷ್ಟು ವೈರಸ್ಗಳು ಹೇಗೆ ದಾಳಿ ಮಾಡುತ್ತವೆ ಮತ್ತು ಆ ದಾಳಿಯಿಂದ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಅನ್ನುವುದನ್ನು ಕೂಡ ತಿಳಿಯೋಣ .
ವೈರಸ್ಗಳು ನಮ್ಮ ದೇಹಕ್ಕೆ ದಾಳಿ ಮಾಡುವುದು ಹೆಚ್ಚಾಗಿ ನಮ್ಮ ಮೂಗು ಮತ್ತು ಬಾಯಿಯ ಮೂಲಕ ಹಾಗೆ ಈ ವೈರಸ್ ಗಳು ನಮ್ಮ ದೇಹಕ್ಕೆ ದಾಳಿ ಮಾಡಿದಾಗ ಮೊದಲಿಗೆ ನಮ್ಮ ದೇಹ ಯಾವುದೇ ರೆಸ್ಪಾನ್ಸ್ ಮಾಡುತ್ತಿರುವುದಿಲ್ಲ ಆದರೆ ಈ ವೈರಸ್ ಯಾವಾಗ ನಮ್ಮ ದೇಹಕ್ಕೆ ದಾಳಿ ಮಾಡಿ ಮತ್ತಷ್ಟು ವೈರಸ್ಸನ್ನು ಹುಟ್ಟುಹಾಕುತ್ತದೆ ಆಗ ನಮ್ಮ ದೇಹ ಎಚ್ಚೆತ್ತುಕೊಳ್ಳುತ್ತದೆ .
ದಾಳಿ ಮಾಡಿದಂತಹ ವೈರಸ್ ಮೇಲೆ ನಮ್ಮ ದೇಹ ಅಟ್ಯಾಕ್ ಮಾಡಲು ಮುಂದಾಗುತ್ತದೆ ಆಗಲೇ ಈ ಶೀತದಂತಹ ಅಲರ್ಜಿಯಂತಹ ಸಮಸ್ಯೆಗಳು ನಮ್ಮಲ್ಲಿ ಕಂಡು ಬರುತ್ತವೆ . ಸೊಳ್ಳೆಯಂತಹ ಕೀಟಾಣುಗಳು ಕಚ್ಚಿದರೆ ಅವುಗಳನ್ನು ಓಡಿಸಿ ಅವುಗಳಿಂದ ಪಾರಾಗಬಹುದು ಆದರೆ ಕಣ್ಣಿಗೆ ಕಾಣದಂತಹ ಸಣ್ಣಪುಟ್ಟ ಕೀಟಾಣುಗಳು ನಮಗೆ ದಾರಿ ಮಾಡುವುದು ನಮಗೆ ತಿಳಿಯುವುದಿಲ್ಲ ಈ ಕಿಲಾಡಿ ಕೀಟಾಣುವನ್ನೇ ಕರೆಯುವುದು ವೈರಸ್ ಎಂದು .
ಈ ಕಿಲಾಡಿ ವೈರಸ್ ಕಳ್ಳನ ತರ ನಮ್ಮ ದೇಹವನ್ನು ಅಟ್ಯಾಕ್ ಮಾಡುತ್ತದೆ ನಂತರ ಜೀವಕೋಶದ ಮೇಲೆಯೂ ದಾಳಿ ಮಾಡಿ ಸಾಕಷ್ಟು ಸಮಸ್ಯೆಯನ್ನು ನಮ್ಮಲ್ಲಿಯೇ ಹುಟ್ಟುಹಾಕುತ್ತದೆ .ಆಗ ನಮ್ಮ ದೇಹದಲ್ಲಿರುವ ಭದ್ರತಾ ಸಿಬ್ಬಂದಿಗಳು ಅಟ್ಯಾಕ್ ಮಾಡಿದಂತಹ ವೈರಸ್ ಗಳ ಮೇಲೆ ಮತ್ತೆ ದಾಳಿ ಮಾಡುತ್ತವೆ , ಆ ಸಂದರ್ಭದಲ್ಲಿ ನಮಗೆ ಶೀತವಾಗುತ್ತದೆ ಮೂಗಿನಿಂದ ನೀರು ಮಳೆಯಂತೆ ಸುರಿಯುವುದು .
ನೀವೆಲ್ಲರೂ ಅಂದುಕೊಳ್ಳುತ್ತಿರುತ್ತೇನೆ ವಾತಾವರಣ ತಂಪಾದರೆ ಅದರಿಂದ ನಮ್ಮ ದೇಹವು ತಂಪಾಗಿ ಶೀತವಾಗುತ್ತದೆ ಎಂದು ಆದರೆ ನಿಮಗೆ ಮಾಹಿತಿಯಲ್ಲಿ ತಿಳಿಯುತ್ತದೆ ಪರಿಸರದಲ್ಲಿ ವಾತಾವರಣ ಬದಲಾದರೆ ಅದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ನಮಗೆ ವೈರಸ್ ದಾಳಿ ಮಾಡಿದರೆ ಅದರಿಂದ ಶೀತವಾಗುತ್ತದೆ ಎಂದು ವೈರಸ್ಗಳ ದಾಳಿಯಿಂದ ಆಗುವಂತಹ ಶೀತವಾಗಿರುತ್ತದೆ .
ನಮ್ಮ ದೇಹದ ಭದ್ರತಾ ಸಿಬ್ಬಂದಿಗಳು ವೈರಸ್ ಗಳನ್ನು ದೇಹದೊಳಗೆ ಬಿಟ್ಟುಕೊಳ್ಳಬಾರದು ಅನ್ನು ಕಾರಣಕ್ಕಾಗಿಯೇ ಶೀತದ ವೇಳೆಯಲ್ಲಿ ಮೂಗಿನಲ್ಲಿ ಮ್ಯೂಕಸ್ ಅನ್ನು ಉತ್ಪತ್ತಿ ಮಾಡುತ್ತದೆ ಈ ಮ್ಯೂಕಸ್ ವೈರಸ್ಗಳ ದಾಳಿಯಿಂದ ನಮ್ಮ ದೇಹವನ್ನು ಕಾಪಾಡುತ್ತದೆ .
ಯಾವಾಗ ವೈರಸ್ ವಿರುದ್ಧ ನಮ್ಮ ದೇಹದಲ್ಲಿ ಹೋರಾಟ ಶುರುವಾಗುತ್ತದೆಯೋ ಆಗ ನಮ್ಮ ಮೂಗಿನಲ್ಲಿ ಮ್ಯೂಕಸ್ ಉತ್ಪತ್ತಿ ಕೂಡ ಹೆಚ್ಚಾಗುತ್ತದೆ ಇದು ಸಾಮಾನ್ಯವಾಗಿಯೂ ಮೂಗಿನಲ್ಲಿ ಕಂಡುಬರುತ್ತದೆ ಆದರೆ ಶೀತದಂತಹ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಉತ್ಪತ್ತಿಯಾಗುವುದನ್ನು ನಾವು ಗಮನಿಸಬಹುದಾಗಿದೆ .
ಈ ವೈರಸ್ಗಳು ದೇಹವನ್ನು ಅಟ್ಯಾಕ್ ಮಾಡುತ್ತವೆ ಕೊನೆಗೆ ರಕ್ತದ ಮೇಲೆಯೂ ಕೂಡ ಅಟ್ಯಾಕ್ ಮಾಡಿಬಿಡುತ್ತದೆ ಆಗ ನಮ್ಮ ರಕ್ತ ಕಣಗಳು ಕೂಡ ಸೈನಿಕರನ್ನು ಸಪ್ಲೆ ಮಾಡುತ್ತದೆ ಅದೇ ವೈಟ್ ಬ್ಲಡ್ ಸೇಲ್ಸ್ ಎಂದು ಕರೆಯಲಾಗುತ್ತದೆ . ಈ ಹೋರಾಟ ನಡೆಯುವುದು ಮೂಗು ಮತ್ತು ಶ್ವಾಸಕೋಶದ ನಡುವೆ ಆ ನಡುವೆ ಇದ್ದಂತಹ ರಕ್ತ ಕಣಗಳು ಮೂಗಿನ ಬಳಿ ಬರುತ್ತದೆ ಆಗಲೇ ಮೂಗು ಊದಿಕೊಳ್ಳುತ್ತವೆ ನರ ಬ್ಲಾಕ್ ಆಗುತ್ತವೆ .
ಈ ರೀತಿಯಾಗಿ ನಮ್ಮ ದೇಹದ ಮೇಲೆ ವೈರಸ್ಗಳು ಅಟ್ಯಾಕ್ ಮಾಡಿದಾಗ ನಮ್ಮ ದೇಹ ನಮ್ಮನ್ನು ವೈರಸ್ ನಿಂದ ಯುದ್ಧ ಮಾಡಿ ಕಾಪಾಡುತ್ತದೆ , ಆಗಲೇ ನಮ್ಮ ದೇಹದಲ್ಲಿ ಈಶಾಳ ಬದಲಾವಣೆಗಳು ಆಗುವುದು .