ಆರೋಗ್ಯಕ್ಕೆ ಒಳ್ಳೆಯದಾಗುವ ಈ ಒಂದು ಕರಿಬೇವಿನ ಸೊಪ್ಪಿನ ಬಾತನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಹಾಗಾದರೆ ಈ ಕರಿಬೇವಿನ ಸೊಪ್ಪಿನ ಮಾತನ್ನು ಹೇಗೆ ಮಾಡುವುದು ಅನ್ನೋದನ್ನು ನಾವು ಈ ದಿನದ ಮಾಹಿತಿಯಲ್ಲಿ ಸುಲಭವಾಗಿ ತಿಳಿಯೋಣ .
ಇದೊಂದು ಆರೋಗ್ಯ ಮಾಹಿತಿ ಯಾಗಿರುವುದರಿಂದ ಉತ್ತಮ ಆರೋಗ್ಯಕ್ಕಾಗಿ ಈ ಮಾಹಿತಿಯನ್ನು ಬೇರೆಯವರೊಂದಿಗೂ ಕೂಡ ಶೇರ್ ಮಾಡುವ ಮುಖಾಂತರ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ .
ಸ್ನೇಹಿತರೆ ಇನ್ನೂ ಇಂತಹ ಅನೇಕ ಉಪಯುಕ್ತ ಆರೋಗ್ಯ ಮಾಹಿತಿಗೆ ತಪ್ಪದೇ ನಮ್ಮ ಪೇಜನ್ನು ಲೈಕ್ ಮಾಡಿ.
ಹಾಗೆಯೇ ಈ ದಿನದ ಲೇಖನದಲ್ಲಿ ಕರಿಬೇವಿನ ಸೊಪ್ಪಿನ ಬಾತನ್ನು ಮಾಡುವುದು ಹೇಗೆ ಮತ್ತು ಈ ಸೊಪ್ಪಿನ ಆಹಾರವನ್ನು ಸೇವನೆ ಮಾಡುವುದರಿಂದ ಏನೇನ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನು ಕೂಡ ತಿಳಿಯೋಣ . ಮೊದಲಿಗೆ ಇದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಕರಿಬೇವಿನ ಸೊಪ್ಪು ಕಡಲೆ ಬೇಳೆ ಉದ್ದಿನ ಬೇಳೆ ಸಾಸಿವೆ ಕಡಲೆ ಬೀಜ ಎಣ್ಣೆ ಗೋಡಂಬಿ ಒಣ ಮೆಣಸಿನಕಾಯಿ ತುಪ್ಪ ಹಾಗೆಯೇ ಅನ್ನವನ್ನು ಮಾಡಲು ಅಕ್ಕಿ .
ಮೊದಲಿಗೆ ಕರಿಬೇವಿನ ಸೊಪ್ಪಿನ ಪುಡಿಯನ್ನು ಮಾಡಿಕೊಳ್ಳಬೇಕು ಇದಕ್ಕಾಗಿ ಮಾಡಬೇಕಾಗಿರುವುದು ಏನು ಅಂದರೆ ಕರಿಬೇವಿನ ಸೊಪ್ಪನ್ನು ಹುರಿದುಕೊಳ್ಳಬೇಕು ನಂತರ ಕಡಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಒಣ ಮೆಣಸಿನಕಾಯಿಯನ್ನು ಕೂಡ ಬೇರೆ ಬೇರೆಯಾಗಿ ಹುರಿದಿಟ್ಟು ಕೊಳ್ಳಬೇಕು .
ಇದೀಗ ಹುರಿದಿಟ್ಟು ಕೊಂಡಂತಹ ಪದಾರ್ಥಗಳನ್ನು ಯಾವುದೇ ರೀತಿಯ ನೀರನ್ನು ಹಾಕದೆ ಪುಡಿ ಮಾಡಿಕೊಳ್ಳಬೇಕು ಇದೀಗ ಒಣ ಪುಡಿಯಾಗಿರುವ ಕಾರಾಣ ಎಷ್ಟು ದಿನ ಬೇಕಾದರೂ ಶೇಖರಿಸಿ ಇಟ್ಟುಕೊಳ್ಳಬಹುದು . ಇದೀಗ ಒಗ್ಗರಣೆ ಮಾಡಬೇಕು , ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಅದರಲ್ಲಿ ಗೋಡಂಬಿಯನ್ನು ಹುರಿದಿಟ್ಟುಕೊಳ್ಳಬೇಕು ಆ ನಂತರ ಗೋಡಂಬಿಯನ್ನು ಬೇರೆ ಇಟ್ಟುಕೊಂಡು ಶೇಂಗಾ ಬೀಜವನ್ನು ಕೂಡ ಹುರಿದಿಟ್ಟುಕೊಳ್ಳಬೇಕು .
ಇದೆಷ್ಟು ಆದ ಬಳಿಕ ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಳ್ಳಬೇಕು ಅದಕ್ಕೆ ಸಾಸಿವೆ ಒಣಮೆಣಸಿನಕಾಯಿ ಕರಿಬೇವಿನ ಸೊಪ್ಪನ್ನು ಹಾಕಿ ಸ್ವಲ್ಪ ಫ್ರೈ ಮಾಡಿದ ಬಳಿಕ ಇದಕ್ಕೆ ಕಡಲೆ ಬೇಳೆ ಉದ್ದಿನ ಬೇಳೆಯನ್ನು ಹಾಕಬೇಕು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ಬಣ್ಣ ಬದಲಾಗುವವರೆಗೂ ಫ್ರೈ ಮಾಡಿದ ಬಳಿಕ ಇದಕ್ಕೆ ಶೇಂಗಾ ಬೀಜವನ್ನು ಹಾಕಿ ಸ್ವಲ್ಪ ಸಮಯ ಬಾಡಿಸಬೇಕು .
ಇದಾದ ಬಳಿಕ ಇದಕ್ಕೆ ಉದುರಾಗಿ ಮಾಡಿಕೊಂಡಂತಹ ಅನ್ನವನ್ನು ಹಾಕಿ ಸ್ವಲ್ಪ ಸಮಯ ಮಿಕ್ಸ್ ಮಾಡಬೇಕು ನಂತರ ಪುಡಿ ಮಾಡಿ ಇಟ್ಟುಕೊಂಡಂತಹ ಕರಿಬೇವಿನ ಸೊಪ್ಪಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು . ಇದೀಗ ಕರಿಬೇವಿನ ಸೊಪ್ಪಿನ ಬಾತ್ ರೆಡಿಯಾಗಿದೆ ಇದು ಎಲ್ಲರಿಗೂ ಕೂಡ ಇಷ್ಟವಾಗುವಂತಹ ಒಂದು ಬೆಳಗಿನ ತಿಂಡಿಯಾಗಿದ್ದು ಇದನ್ನು ಮಕ್ಕಳಿಗೆ ನೀಡಿದರೆ ಮಕ್ಕಳಿಗೆ ಬೇಕಾಗಿರುವ ಸಾಕಷ್ಟು ಪೌಷ್ಟಿಕಾಂಶವೂ ದೊರೆಯುವುದರ ಜೊತೆಗೆ ನಾಲಿಗೆಗೂ ಕೂಡ ರುಚಿ ಕೊಡುತ್ತದೆ .
ಕರಿಬೇವಿನ ಸೊಪ್ಪನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಅಂತ ಹಿರಿಯರು ಹೇಳುತ್ತಲೇ ಇರುತ್ತಾರೆ ಆದರೂ ಕೂಡ ಆಹಾರ ಪದಾರ್ಥಗಳಲ್ಲಿ ಕರಿಬೇವಿನ ಸೊಪ್ಪು ಸಿಕ್ಕರೆ ಅದನ್ನು ತಿನ್ನುವುದರ ಬದಲು ಬದಿಗೆ ಇಡುವವರ ಸಂಖ್ಯೆ ಹೆಚ್ಚು , ಅದರ ಬದಲು ಈ ರೀತಿ ಕರಿಬೇವಿನ ಸೊಪ್ಪಿನಿಂದ ಪುಡಿ ಮಾಡಿ ಬಾತ್ ಮಾಡಿದರೆ ದೇಹಕ್ಕೆ ಬೇಕಾಗುವ ಎಷ್ಟೋ ಪ್ರಯೋಜನ ಕಾರ್ಯ ಅಂಶಗಳು ದೊರೆಯುತ್ತದೆ ಮತ್ತು ರುಚಿಯಾಗಿಯು ಇರುತ್ತದೆ .