Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಕರಿಕಟ್ಟಿದ ಹಲ್ಲುಗಳನ್ನು ಐದೇ ನಿಮಿಷದಲ್ಲಿ ಫಳ ಫಳ ಹೊಳೆಯುವಂತೆ ಮತ್ತು ಹಲ್ಲುಗಳು ಆರೋಗ್ಯವಾಗಿ ಇರುವಂತೆ ಮಾಡಬಹುದು ಅದು ಹೇಗೆ ಗೊತ್ತಾ !!!

ಹಳದಿ ಕಟ್ಟಿದ ಹಲ್ಲುಗಳನ್ನು ಬೀಳು ಬಾಗಿಸಿ ಕೊಳ್ಳಬೇಕು ಎಂದರೆ ನೀವು ಅದಕ್ಕಾಗಿ ಪ್ರತಿ ದಿನ ಎರಡು ಬಾರಿಯಲ್ಲ ಮೂರು ಬಾರಿ ಹಲ್ಲುಗಳನ್ನು ಬ್ರಶ್ ಮಾಡಿದರೂ ಆ ಒಂದು ಸಮಸ್ಯೆ ಪರಿಹಾರ ಆಗುವುದೇ ಇಲ್ಲ

ಆದರೆ ನೀವೇನಾದರೂ ಮನೆಯಲ್ಲಿಯೇ ದೊರೆಯುವಂತಹ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಹಲ್ಲುಗಳನ್ನು ಸ್ವಚ್ಛ ಪಡಿಸುತ್ತಾ ಬಂದರೆ ನಿಮ್ಮ ಹಲ್ಲುಗಳ ಮೇಲೆ ಎಷ್ಟೇ ಹಳದಿ ಪದರ ಕುಳಿತಿದ್ದರೂ ಸ್ವಚ್ಛವಾಗಿ ಹೊಳಪಾಗಿ ಕಾಣಿಸಿಕೊಳ್ಳುತ್ತದೆ

ಹಾಗಾದರೆ ಆ ಕೆಲವೊಂದು ಪದಾರ್ಥಗಳನ್ನು ಹೇಗೆ ಬಳಸುವುದು ಆ ಪದಾರ್ಥಗಳು ಯಾವುದು ಎಂಬುದನ್ನು ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ.ನಾವು ಈ ದಿನ ತಿಳಿಸುವಂತಹ ಮಾಹಿತಿಯಲ್ಲಿ ಯಾವ ಪದಾರ್ಥಗಳನ್ನು ಹಲ್ಲುಗಳ್ಳನ್ನು ಸ್ವಚ್ಚ ಪಡಿಸಿಕೊಳ್ಳುವುದಕ್ಕಾಗಿ ಬಳಸಬೇಕು ಅಂತ ಹೇಳ್ತೀವೊ,

ಅದನ್ನು ನೀವು ನಾವು ಹೇಳುವ ಪ್ರಮಾಣದಲ್ಲಿಯೆ ಬಳಸಿ ಸಾಕು, ಇದರಿಂದ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಪಳಪಳನೆ ಹೊಳೆಯುವ ಹಲ್ಲುಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಗುಂಪಿನಲ್ಲಿ ಇದ್ದಾಗ ನಮ್ಮ ಸ್ನೇಹಿತರೊಡನೆ ಇದ್ದಾಗ ಅನೇಕ ಮೋಜು ಮಸ್ತಿ ಇದ್ದೇ ಇರುತ್ತದೆ ಆ ಮೋಜು ಮಸ್ತಿಯಲ್ಲಿ ನಗು ಹಾಸ್ಯ ಎಲ್ಲವೂ ಕೂಡ ಇರುತ್ತದೆ, ಆಗ ಕೆಲ ವ್ಯಕ್ತಿಗಳು ಬಾಯಿ ಬಿಟ್ಟು ನಗುವುದಕ್ಕೆ ಮುಜುಗರ ಪಡ್ತಾರೆ,

ಇದಕ್ಕೆ ಕಾರಣ ನಮ್ಮ ಹಳದಿ ಕಟ್ಟಿದ ಹಲ್ಲು ಅಥವಾ ಬಾಯಿಂದ ಬರುವ ದುರ್ವಾಸನೆ. ಇಂತಹ ಮುಜುಗರ ಯಾಕೆ ಮನೆಯಲ್ಲಿಯೇ ದೊರೆಯುವ ಪದಾರ್ಥಗಳನ್ನು ನೀವು ಬೆಳಗ್ಗೆ ಬಾಯಿಯನ್ನು ಹೇಗೆ ಸ್ವಚ್ಛ ಪಡಿಸುತ್ತಿರ,

ಹಲ್ಲುಗಳನ್ನು ಹೇಗೆ ಸ್ವಚ್ಛ ಪಡಿಸುತ್ತಾರ, ಈ ಪದಾರ್ಥಗಳನ್ನು ಬಳಸಿ ಅದೆ ಕ್ರಮದಲ್ಲಿ ಸ್ವಚ್ಛ ಪಡಿಸಿ ಸಾಕು, ಇದರಿಂದ ನಿಮಗೆ ಮುಜುಗರ ಪಡುವ ಸಂದರ್ಭಗಳೆ ಬರುವುದಿಲ್ಲ.

ಅರಿಶಿಣ ಮತ್ತು ಕೊಬ್ಬರಿ ಎಣ್ಣೆ :
ಚಿಟಿಕಿ ಅರಿಶಿಣಕ್ಕೆ ಅರ್ಧ ಚಮಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಸಾಕು, ಈ ಅರಿಶಿಣದ ಬಗ್ಗೆ ನಿಮ್ಮಗೆಲ್ಲರಿಗು ಗೊತ್ತೆ ಇದೆ, ಅರಿಶಿಣ ಆ್ಯಂಟಿ ಇನ್ಫ್ಲಮೇಟರಿ ಗುಣವನ್ನು ಹೊಂದಿದೆ ಹಾಗೆ ಆ್ಯಂಟಿ ಬ್ಯಾಕ್ಟೀರಿಯಾ ಗುಣವನ್ನು ಕೂಡ ಹೊಂದಿದೆ,

ಇದರೊಂದಿಗೆ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಹಲ್ಲನ್ನು ಸ್ವಚ್ಛ ಪಡಿಸಿದರೆ ಹಲ್ಲಿನ ಸಂಧಿ ಇರುವ ಬ್ಯಾಕ್ಟೀರಿಯಾಗಳು ನಾಶ ಆಗುವುದಲ್ಲದೆ, ಬಾಯಿಯಿಂದ ಬರುವ ದುರ್ವಾಸನೆ ಕೂಡ ದೂರವಾಗುತ್ತದೆ ಮತ್ತು ಹಳದಿ ಕಟ್ಟಿದ ಹಲ್ಲು ಕೂಡ ಸ್ವಚ್ಛವಾಗುತ್ತದೆ.

ಅಡುಗೆ ಸೋಡಾ ಈ ಅಡುಗೆ ಸೋಡ ಚಿಟಿಕಿ ತೆಗೆದುಕೊಳ್ಳಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಬೇಕಾದರೆ ಉಪ್ಪನ್ನು ಕೂಡ ನೀವು ಚಿಟಿಕಿ ಹಾಕಿ ಇದರಿಂದ ನೀವು ಬ್ರಷ್ ಮಾಡಿಕೊಳ್ಳಿ ಎರಡು ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಕೂಡಲೆ ಬಾಯಿಯನ್ನು ಸ್ವಚ್ಛ ಪಡಿಸಿಕೊಳ್ಳಿ ನೆನಪಿನಲ್ಲಿ ಇಡಿ,

ಚೆನ್ನಾಗಿ ಬಾಯಿಯನ್ನು ಸ್ವಚ್ಛ ಪಡಿಸಿಕೊಳ್ಳಿ, ಇದನ್ನು ನೀವು ವಾರದಲ್ಲಿ ಒಂದು ದಿನ ಮಾಡಿದರೆ ಸಾಕು, ಈ ರೀತಿ ವಾರಕ್ಕೆ ಒಮ್ಮೆ ಮಾಡುತ್ತಾ ಬನ್ನಿ ಹಳದಿ ಹಲ್ಲು ಹೊಳಪಾಗುವುದಲ್ಲದೆ, ನಿಮಗೆ ಜೀವನದಲ್ಲಿ ಹಳದಿ ಕಟ್ಟಿದ ಹಲ್ಲಿನ ಸಮಸ್ಯೆ ಬರುವುದಿಲ್ಲ.

ಆ್ಯಪಲ್ ಸೈಡರ್ ವಿನೆಗರ್ :
ಇದೀಗ ಈ ಆಪಲ್ ಸೈಡರ್ ವಿನೆಗರ್ ಇಲ್ಲ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಎಲ್ಲ ಶಾಪ್ ಗಳಲ್ಲಿಯೂ ದೊರೆಯುತ್ತದೆ, ಇದನ್ನು ನೀವು ಮನೆಯಲ್ಲಿ ತಂದು ಇಟ್ಟುಕೊಳ್ಳಿ, ಆಗಾಗ ಆ್ಯಪಲ್ ಸೈಡರ್ ವಿನೆಗರ್ನಿಂದ ಹಲ್ಲುಗಳನ್ನು ಸ್ವಚ್ಛ ಪಡಿಸಿಕೊಳ್ಳುತ್ತಾ ಇರಿ, ಇದರಿಂದ ಬಾಯಿಯ ದುರ್ವಾಸನೆ ಕೂಡಾ ಬರುವುದಿಲ್ಲ, ಹಾಗೆ ಹಲ್ಲುಗಳು ಹಳದಿ ಕಟ್ಟುವುದಿಲ್ಲ

Leave a Reply

Your email address will not be published. Required fields are marked *