ನಮಸ್ಕಾರ ಸ್ನೇಹಿತರೆ ತುಂಬಾ ಕಡೆ ನೀವು ನೋಡಿರಬಹುದು ಬಹಳಷ್ಟು ಜನರು ಕಾಲಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಅದು ಯಾಕೆ ಕಟ್ಟುತ್ತಾರೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ.ಯಾಕೆ ಗೊತ್ತಿಲ್ಲವೆಂದರೆ ಒಬ್ಬರನ್ನು ನೋಡಿ ಒಬ್ಬರು ಕಟ್ಟಿಕೊಳ್ಳುತ್ತಿದ್ದಾರೆ ಕಾರಣದಿಂದ ಆ ಕಪ್ಪು ದಾರವನ್ನು ಕಟ್ಟಿ ಕೊಳ್ಳುವುದರ ಕಾರಣ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ.
ಸ್ನೇಹಿತರೆ ಹಿಂದಿನ ಮಾಹಿತಿಯಲ್ಲಿ ನಾನು ನಿಮಗೆ ಕಪ್ಪು ದಾರವನ್ನು ಕಾಲಿಗೆ ಯಾಕೆ ಕಟ್ಟುತ್ತಾರೆ ,ಕಾಲಿಗೆ ಕಪ್ಪು ದಾರವನ್ನು ಕಟ್ಟುವುದರಿಂದ ಆಗುವ ಪ್ರಯೋಜನಗಳ ಆದರೂ ಏನು ಅದರ ಬಗ್ಗೆ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಇತ್ತೀಚಿನ ದಿನಗಳಲ್ಲಿ ಕಾಲಿಗೆ ಕಪ್ಪು ದಾರವನ್ನು ಕಟ್ಟುವುದು ಒಂದು ರೀತಿಯ ಫ್ಯಾಷನ್ಆಗಿಬಿಟ್ಟಿದೆ. ಈ ರೀತಿಯ ಫ್ಯಾಷನ್ ಇಂದಾಗಿ ವಿಧವಿಧದ ಕಪ್ಪು ದಾರದ ಗೆಜ್ಜೆಗಳನ್ನು ನಾವು ನೋಡಬಹುದು. ಕಪ್ಪು ದಾರವನ್ನು ಕಾಲೆಯ ಕಟ್ಟುವುದು ಒಂದು ರೀತಿಯ ಫ್ಯಾಷನ್ ಇರಬಹುದು.
ಆದರೆ ಇದನ್ನು ಹಿಂದಿನ ಕಾಲದಿಂದಲೂ ತಂತ್ರಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ. ಈ ಕಪ್ಪುದಾರ ನಿಮ್ಮನ್ನು ಕೆಟ್ಟ ಕಣ್ಣುಗಳಿಂದ ಮತ್ತು ನಕಾರಾತ್ಮಕ ಅಂದರೆ ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲದೆ ಕಪ್ಪುದಾರ ನಿಮ್ಮ ಅದೃಷ್ಟವನ್ನು ಸಹ ಬದಲಾಯಿಸುತ್ತದೆ.
ಕಪ್ಪು ದಾರ ಎಂದರೆ ನಂಬಿಕೆ ಹೆಚ್ಚು. ಕಪ್ಪು ದಾರವನ್ನು ಧರಿಸುವುದರಿಂದ ಆರೋಗ್ಯಕ್ಕೆ ವೈಜ್ಞಾನಿಕವಾಗಿ ಅನೇಕ ಲಾಭಗಳಿವೆ. ಅದೇ ಅಲ್ಲದೆ ಸಾಂಪ್ರದಾಯಿಕವಾಗಿ ಹಲವಾರು ನಂಬಿಕೆಗಳಿವೆ.
ಕಪ್ಪು ದಾರವನ್ನು ಕೈಯಲ್ಲಿ ಕುತ್ತಿಗೆ ಮತ್ತು ಕಾಲಿಗೆ ಕಟ್ಟುವುದರಿಂದ ನಿಮ್ಮ ಕೆಲಸದಲ್ಲಿ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತವೆ. ಹಾಗೆಯೇ ಯಶಸ್ಸು ಕೂಡ ನಿಮ್ಮದು ಆಗುತ್ತದೆ. ಇನ್ನು ಕಪ್ಪು ದಾರವನ್ನು ಮಕ್ಕಳಿಗೆ ಕಟ್ಟುವುದರಿಂದ ಮಕ್ಕಳನ್ನು ದುಷ್ಟ ಶಕ್ತಿಯಿಂದ ರಕ್ಷಿಸಬಹುದು.
ಇದರಿಂದ ಮಗುವಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಕಪ್ಪು ದಾರವನ್ನು ಕಟ್ಟುವ ವೈಜ್ಞಾನಿಕ ಕಾರಣಗಳು ಹಿಂದಿನ ಕಾಲದಿಂದ ಕೂಡಿದೆ. ಭೂಮಿ ಗಾಳಿ ನೀರು ಮತ್ತು ಬೆಂಕಿ ಆಕಾಶ ಇವುಗಳಿಂದ ಬರುವ ಶಕ್ತಿ ನಮ್ಮ ದೇಹಕ್ಕೆ ಉಪಯುಕ್ತವಾದದ್ದು.
ದುಷ್ಟ ಶಕ್ತಿಗಳ ಕಣ್ಣು ನಮ್ಮ ಮೇಲೆ ಬಿದ್ದಾಗ ಸಕಾರಾತ್ಮಕ ಶಕ್ತಿ ನಮ್ಮ ಮೇಲೆ ತಲುಪುವುದಿಲ್ಲ. ಅದಕ್ಕಾಗಿಯೇ ಕಪ್ಪು ದಾರವನ್ನು ಕಟ್ಟಲಾಗುತ್ತದೆ.ಇನ್ನು ಈ ಕಪ್ಪು ದಾರವನ್ನು ಕಟ್ಟುವುದರಿಂದ ಅಜೀರ್ಣ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
ತೂಕ ಹಾಗೂ ಸೊಂಟದ ಗಾತ್ರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಎಲ್ಲಿದೆ ಕಪ್ಪು ದಾರವನ್ನು ಕಾಲಿಗೆ ಕಟ್ಟುವುದಕ್ಕಿಂತ ಸೊಂಟಕ್ಕೆ ಕಟ್ಟಿದರೆ ಅಜೀರ್ಣ ಸಮಸ್ಯೆ ದೂರವಾಗುತ್ತದೆ. ಮೂಳೆಗಳಿಗೆ ಬಲ ನೀಡುತ್ತದೆ.
ಕಪ್ಪುದಾರ ಬೆನ್ನುಮೂಳೆ ದ್ರವವನ್ನು ಇರಿಸಿ ಕೊಳ್ಳುವುದರಿಂದ ಬೆನ್ನುಮೂಳೆಯನ್ನು ಆರೋಗ್ಯವಾಗಿರಲು ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೆ ಕಪ್ಪು ದಾರವನ್ನು ಸೊಂಟಕ್ಕೆ ಕಟ್ಟುವುದರಿಂದ ಸಂತಾನೋತ್ಪತ್ತಿ ಅಂಗಗಳನ್ನು ತಂಪಾಗಿರುವಂತೆ ನೋಡಿಕೊಳ್ಳುತ್ತದೆ.
ಇನ್ನು ದೇಹದ ಯಾವುದೇ ಭಾಗಕ್ಕೆ ಕಪ್ಪು ದಾರವನ್ನು ಕಟ್ಟುವುದರಿಂದ ಜೀರ್ಣಕ್ರಿಯೆ ಸಲೀಸಾಗಿ ಆಗುತ್ತದೆ. ಹಾಗೂ ರಕ್ತದೊತ್ತಡ ಉಂಟಾಗದಂತೆ ತಡೆಯುತ್ತದೆ. ಕಪ್ಪುಬಣ್ಣವು ನ್ಯಾಯ ಮತ್ತು ಶಿಕ್ಷೆಯ ದೇವರಾದ ಶನಿದೇವರಿಗೆ ಸಂಬಂಧಿಸಿದೆ. ಹಾಗಾಗಿ ಶನಿ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತಾರೆ.
ಕಾಲಿಗೆ, ಕುತ್ತಿಗೆಗೆ ಮತ್ತು ಸೊಂಟಕ್ಕೆ ಕಪ್ಪು ದಾರವನ್ನು ಧರಿಸುವವರು ದುಷ್ಟಶಕ್ತಿಯ ಕಣ್ಣುಗಳಿಂದ ಹಾಗೂ ನಕಾರಾತ್ಮಕ ಶಕ್ತಿಗಳಿಂದ ದೂರವಿರುತ್ತಾರೆ. ಇನ್ನೂ ನಿಮಗೆ ಕಾಲು ನೋವು ಇದ್ದರೆ ಈ ಕಪ್ಪು ದಾರವನ್ನು ಕಟ್ಟುವುದರಿಂದ ಕಾಲು ನೋವು ಕಡಿಮೆಯಾಗುತ್ತದೆ.
ಸ್ನೇಹಿತರೆ ಕಪ್ಪು ದಾರವನ್ನು ಕಟ್ಟುವುದಕ್ಕಿಂತ ಮೊದಲು ಅದನ್ನು ಶನಿ ಅಥವಾ ಹನುಮಂತ ದೇವರಿಗೆ ಅರ್ಪಿಸಿ ಆಮೇಲೆ ಅದನ್ನು ಕಟ್ಟಿಕೊಳ್ಳಬೇಕು. ಕೈಯಲ್ಲಿ ಬೇರೆ ಬಣ್ಣದ ದಾರವನ್ನು ಧರಿಸಿದವರು ಕಪ್ಪು ಬಣ್ಣದ ದಾರವನ್ನು ಅದರ ಜೊತೆಗೆ ಧರಿಸಬಾರದು.
ನೋಡಿದ್ರಲ್ಲ ಸ್ನೇಹಿತರೆ ಕಪ್ಪು ದಾರವನ್ನು ಧರಿಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ. ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಅದು ನಮಗೆ ತಿಳಿಸಿ.ಹಾಗೆಯೇ ಈ ನಮ್ಮ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.