ಕನ್ನಡದ ಅತೀ ಹೆಚ್ಚು ಪ್ರಸಿದ್ದಿ ಪಡೆದಿರುವ ಈ ನಟನ ತಂಗಿಯೂ ಕೂಡ ಸ್ಟಾರ್ ನಟಿ ಅವರು ಈಗ ಹೇಗಾಗಿದ್ದಾರೆ ಗೊತ್ತ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಭಾರತ ಚಿತ್ರರಂಗ 2019-2020 ರಲ್ಲಿ ಅದೆಷ್ಟು ನಷ್ಟವನ್ನು ಅನುಭವಿಸಿತ್ತು ಹೌದು ಚಿತ್ರರಂಗ ಮಾತ್ರವಲ್ಲ ಇಡೀ ಭಾರತ ಜನತೆಯೇ ಈ ಸಮಯದಲ್ಲಿ ನಲುಗಿಹೋಗಿತ್ತು ನ..ರಕ ಅನುಭವಿಸಿತ್ತು ಅಂದರೆ ತಪ್ಪಾಗುವುದಿಲ್ಲಾ. ಹೌದು ಲಾಕ್ ಡೌನ್ ಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು ಹಾಗೆ ಸರ್ಕಾರವೂ ಸಹ ಲಾಕ್ ಡೌನ್ ಮಾಡದೆ ವಿಧಿ ಇರಲಿಲ್ಲ ಜನರ ಪ್ರಾಣ ಉಳಿಸುವುದಕ್ಕೆ ಈ ನಿಯಮ ಪಾಲಿಸಲೇಬೇಕಾಗಿತ್ತು ಇದರಿಂದ ಜನರು ಬಡವರು ನಿರ್ಗತಿಕರು ಹಾಗೆ ಹಣ ಇರುವವರು ಕೂಡ ಈ ಸಮಯದಲ್ಲಿ ಹೆಚ್ಚು ಕಷ್ಟವನ್ನ ಎದುರಿಸಬೇಕಾಗಿತ್ತು. ಚಿತ್ರರಂಗವನ್ನೇ ನಂಬಿಕೊಂಡು ಜೀವನ ನಡೆಸುತ್ತಾ ಇದ್ದ ಹಲವು ಮಂದಿ ಟೆಕ್ನಿಷಿಯನ್ ಗಳು ನಟನಟಿಯರು ಜೊತೆಗೆ ಪೋಷಕ ಪಾತ್ರ ದಲ್ಲಿ ಅಭಿನಯ ಮಾಡುವವರು ಎನ್ನುವ ಸಿನಿಮಾ ರಂಗಕ್ಕೆ ಹೊಸ ಅವಕಾಶಗಳನ್ನು ಪಡೆದುಕೊಂಡು, ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಾ ಇದ್ದು ಅವರ ಜೀವನದ ಕಥೆ ಹೇಳುವುದೇ ಬೇಡ.

ಇದೇ ವೇಳೆ ಅದೆಷ್ಟು ಜನರು ಇಹಲೋಕ ತ್ಯಜಿಸಿದ್ದರು ಅದೆಷ್ಟೋ ಸಂಬಂಧಗಳು ಕಳೆದು ಹೋದವು ಇದನ್ನೆಲ್ಲಾ ಹೇಳ್ತಾ ಹೋದರೆ ಮತ್ತೆ ಆ ಹಳೆ ನೆನಪುಗಳು ಮೂಡುತ್ತದೆ. ಇದೇ ವೇಳೆ ಮತ್ತೊಂದು ಘಟನೆ ಸ್ಯಾಂಡಲ್ ವುಡ್ ನಲ್ಲಿ ನಡೆದಿತ್ತು ಅದೇನೆಂದರೆ ಒಬ್ಬ ಖ್ಯಾತ ನಟಿ ಕಾರ್ ಅಪಘಾತದಲ್ಲಿ ತಮ್ಮ ಕಾಲುಗಳನ್ನು ಪೆಟ್ಟು ಮಾಡಿಕೊಂಡು, ಇದೀಗ ಬೆಡ್ ರೆಸ್ಟ್ ನಲ್ಲಿ ಉಳಿದಿದ್ದಾರೆ. ಹೌದು ಆ ನಟಿ ಯಾರು ಇವತ್ತಿಗೆ ಅವರು ಹೇಗಿದ್ದಾರೆ ಅವರ ಪರಿಸ್ಥಿತಿ ಹೇಗಿದೆ ಇದನ್ನೆಲ್ಲ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ. ಹೌದು ಆ ಖ್ಯಾತ ನಟಿ ಮತ್ಯಾರೂ ಅಲ್ಲ ಕನ್ನಡ ಸಿನಿಮಾರಂಗದ ಖ್ಯಾತ ನಿರ್ದೇಶಕ ರಾಗಿರುವ ರಾಜೇಂದ್ರಸಿಂಗ್ ಬಾಬು ಅವರ ಮಗಳಾಗಿರುವ ರಿಷಿಕಾ ಸಿಂಗ್.

ಹೌದು ನಟಿ ರಿಷಿಕಾ ಸಿಂಗ್ ಅವರ ಬಗ್ಗೆ ನಿಮಗೆ ಗೊತ್ತೇ ಇದೆ ಇವರು ಮತ್ಯಾರೂ ಅಲ್ಲ, ಕನ್ನಡ ಸಿನಿಮಾರಂಗದ ಖ್ಯಾತ ನಟರಾಗಿರುವ ನಟ ಆದಿತ್ಯ ಅವರ ಸಹೋದರಿ ಕೂಡ ಹೌದು. ಕಳೆದ ವರುಷ ಸ್ನೇಹಿತರ ಬರ್ತಡೇ ಮುಗಿಸಿಕೊಂಡು ಕಾರಿನಲ್ಲಿ ಬರುವಾಗ, ರಿಷಿಕಾ ಸಿಂಗ್ ಅವರಿಗೆ ಅಪಘಾತವಾಗಿ ಈ ಅಪಘಾತದಲ್ಲಿ ಕಾಲಿಗೆ ಪೆಟ್ಟು ಆಗಿದ್ದು ವೈದ್ಯರು ಹೆಚ್ಚು ದಿವಸಗಳ ಕಾಲ ರೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ. ರಿಷಿಕಾ ಸಿಂಗ್ ನಡೆಯಲು ಪ್ರಯತ್ನ ಮಾಡುತ್ತಾ ಇದ್ದು ಇನ್ನೂ 6ತಿಂಗಳುಗಳ ಕಾಲ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ ವೈದ್ಯರು.

ಹೌದು ಇವತ್ತಿಗೂ ಕೂಡ ರಿಷಿಕಾ ಸಿಂಗ್ ಅವರಿಗೆ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲಾ, ತಂಗಿಯ ಈ ಸ್ಥಿತಿಯನ್ನು ನೋಡಿ ಬಹಳ ಬೇಸರ ಮಾಡಿಕೊಂಡಿರುವ ಅಣ್ಣಾ ಮೀಡಿಯಾ ಮುಂದೆ ಹೇಳಿಕೊಟ್ಟಿರುವುದೇನೆಂದರೆ 4ಗೋಡೆಗಳ ನಡುವೆ ಇರುವುದು ಅಷ್ಟು ಸುಲಭವಲ್ಲ. ಆದರೆ ನನ್ನ ಸಹೋದರಿ ಫೈಟರ್ ಇದ್ದಂತೆ ಆಕೆ ಮುಂದೊಂದು ದಿವಸ ನಾನು ನಡೆದೇ ನಡೆಯುತ್ತೆ ಎಂಬ ನಂಬಿಕೆ ಅಲ್ಲೇ ಇದ್ದಾಳೆ ಏನೋ ಆಕೆಗೆ ನಿರ್ದೇಶನದ ಮೇಲೆ ಬಹಳ ಆಸಕ್ತಿ ಇರುವುದರಿಂದ, ಆಕೆ ಕಥೆಯೊಂದನ್ನು ಸಹ ಸಿದ್ಧಪಡಿಸುತ್ತಾ ಇದ್ದಾಳೆ ಹಾಗೂ ನನ್ನ ಬಿಡುವಿನ ಸಮಯ ದಲ್ಲಿಯೂ ಸಹ ನಾನು ಆಕೆಯ ಜೊತೆ ಸಮಯ ಕಳೆಯುತ್ತೇನೆ ಎಂದು ಆದಿತ್ಯ ಅವರು ತಮ್ಮ ಸಹೋದರಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಇದೇ ವೇಳೆ ಮತ್ತೆ ನನ್ನ ತಂಗಿ ಬೇಗ ಮೊದಲಿನಂತೆ ಆಗುತ್ತಾಳೆ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುತ್ತಾಳೆ ಎಂದು ಹೇಳಿರುವ ನಟ ಆದಿತ್ಯ ಅವರು ನಟಿ ರಿಷಿಕಾ ಸಿಂಗ್ ಅವರು ಅಣ್ಣನಂತೆ ನಟನೆಯಲ್ಲೇ ಹೆಚ್ಚು ಯಶಸ್ಸು ಪಡೆದುಕೊಂಡಿದ್ದರೆ ಹಾಗೂ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ರಿಷಿಕಾ ಬಿಗ್ ಬಾಸ್ ಮನೆಗೂ ಸಹ ಬಂದಿದ್ದು ಕೆಲವೊಂದು ಕಾರ್ಯಕ್ರಮಗಳನ್ನು ನಿರೂಪಣೆ ಕೂಡ ಮಾಡಿದ್ದಾರೆ ಇವರು ಆದಷ್ಟು ಬೇಗ ಮೊದಲಿನಂತಾಗಲಿ ಎಂದು ನಾವು ಸಹ ದೇವರಲ್ಲಿ ಪ್ರಾರ್ಥಿಸೋಣ.

Leave a Reply

Your email address will not be published. Required fields are marked *