ಕಣ್ಣಿನ ದೃಷ್ಟಿಯನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಈ ರೀತಿ ಮಾಡಿ ನೋಡಿ ನಿಜಕ್ಕೂ ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗುವುದಲ್ಲದೆ ನೀವು ಹೆಚ್ಚು ಹೊತ್ತು ಕಂಪ್ಯೂಟರ್ ಟಿವಿ ನೋಡಿದರೂ ಕೂಡ ನಿಮ್ಮ ಕಣ್ಣಿನ ದೃಷ್ಟಿ ಏನು ಆಗುವುದಿಲ್ಲ ಜೊತೆಗೆ ನಿಮ್ಮ ಕಣ್ಣಿನ ದೃಷ್ಟಿ ಕೂಡ ಹಾಳಾಗುವುದಿಲ್ಲ.
ಹಾಗಾದರೆ ಕಣ್ಣಿನ ದೃಷ್ಟಿ ಹಾಳಾಗಬಾರದು ಅಂದರೆ ಯಾವ ಟಿಪ್ಸ್ಗಳನ್ನು ಫಾಲೋ ಮಾಡಬೇಕು ಅನ್ನೋದನ್ನು ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ಓದಿ.ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಮೊಬೈಲ್ನ್ನು ಬಳಸುತ್ತಾರೆ ಸಾಫ್ಟ್ ವೇರ್ ಯುಗ ಆಗಿರುವ ಕಾರಣದಿಂದಾಗಿ ಇನ್ನು ಹೆಚ್ಚು ಮಂದಿ ,
ಕೆಲಸ ಮಾಡೋದು ಕಂಪ್ಯೂಟರ್ ಮುಂದೆಯೇ ಈ ಕಂಪ್ಯೂಟರ್ ಲ್ಯಾಪ್ ಟಾಪ್ ಮುಂದೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಕಣ್ಣಿನ ದೃಷ್ಟಿ ಇನ್ನೂ ಹಾಳಾಗುತ್ತದೆ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತವೆ .
ಆದ್ದರಿಂದ ನಾವು ಈ ಮಾಹಿತಿಯಲ್ಲಿ ತಿಳಿಸುವಂತಹ ಕೆಲವೊಂದು ವಿಚಾರಗಳನ್ನು ತಿಳಿದು ಅದನ್ನು ಪ್ರತಿದಿನ ಪಾಲಿಸಿ ಈ ರೀತಿ ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ವೃದ್ಧಿಸುವುದರ ಜೊತೆಗೆ ನಿಮ್ಮ ಕಣ್ಣಿನ ದೃಷ್ಟಿ ಕೂಡ ಹಾಳಾಗುವುದಿಲ್ಲ ಎನ್ನುವ ಕಣ್ಣಿನ ಸಮಸ್ಯೆಗಳು ಕೂಡ ಸುಳಿಯುವುದಿಲ್ಲ .
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಕಣ್ಣಿನ ದೃಷ್ಟಿ ವೃದ್ಧಿ ಆಗಬೇಕೆಂದರೆ ಪ್ರತಿದಿನ ನಾಲ್ಕರಿಂದ ಐದು ಲೀಟರ್ ನೀರನ್ನು ಕುಡಿಯಲೇಬೇಕು . ಹಾಗೆಯೇ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಚರ್ಮವೂ ಒಣಗುತ್ತದೆ ಈ ಚರ್ಮವು ಒಣಗುವುದರಿಂದ ಇದರ ನೇರ ಪರಿಣಾಮ ಕಣ್ಣಿನ ಮೇಲೆ ಬೀರುತ್ತದೆ ಆಗ ಕಣ್ಣಿನ ದೃಷ್ಟಿ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ .
ಇನ್ನು ವೈದ್ಯರುಗಳು ಸಲಹೆ ನೀಡುವ ಹಾಗೆ ಕಣ್ಣಿನ ದೃಷ್ಟಿ ವೃದ್ಧಿ ಆಗಬೇಕೆಂದರೆ ಆಹಾರ ಪದ್ಧತಿಯಲ್ಲಿ ಕೆಲವೊಂದು ತರಕಾರಿಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕಣ್ಣಿನ ದೃಷ್ಟಿ ವೃದ್ದಿ ಆಗುತ್ತದೆ , ಕ್ಯಾರೆಟ್ ಅನ್ನು ಪ್ರತಿ ದಿನ ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿ ವೃದ್ಧಿಯಾಗುವುದರ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ ಕಣ್ಣಿನ ನರಗಳು ಕೂಡ ಬಲವಾಗುತ್ತವೆ .
ಕಣ್ಣಿಗೆ ಎಕ್ಸಸೈಸ್ ಮಾಡಿಸುವುದು , ಹೌದು ಕಣ್ಣುಗಳಿಗೆ ಎಕ್ಸಸೈಸ್ ಮಾಡಿಸುವುದರಿಂದ ಕಣ್ಣಿನಲ್ಲಿರುವ ನರಗಳು ಬಲಗೊಳ್ಳುತ್ತದೆ ಜೊತೆಗೆ ಕಣ್ಣಿನ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಕಣ್ಣಿನ ದೃಷ್ಟಿ ಕೂಡ ಚೆನ್ನಾಗುತ್ತದೆ . ಇನ್ನು ನೀವೇನಾದರೂ ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡುತ್ತಿದ್ದರೆ ಸಾಫ್ಟ್ವೇರ್ ಕಂಪನಿಗಳಲ್ಲಿ ಹೆಚ್ಚಾಗಿ ಕಂಪ್ಯೂಟರ್ ಮುಂದೆಯೇ ಕುಳಿತು ಕೆಲಸ ಮಾಡಬೇಕಾಗಿರುತ್ತದೆ ಆಗ ಕಣ್ಣುಗಳು ಹೆಚ್ಚು ಹೊತ್ತು ಕಂಪ್ಯೂಟರನ್ನೇ ನೋಡುವ ಕಾರಣದಿಂದಾಗಿ ಕಣ್ಣಿನ ದೃಷ್ಟಿ ಹಾಳಾಗುತ್ತದೆ .
ಈ ರೀತಿ ಕಂಪ್ಯೂಟರ್ಗಳ ಮುಂದೆ ಕುಳಿತು ಕೆಲಸ ಮಾಡುವವರಾದರೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವಾಗ ಅದಕ್ಕೆ ತಕ್ಕ ಸ್ಪೆಕ್ಸ್ ಗಳನ್ನು ಬಳಸುವುದು ಒಳ್ಳೆಯದು . ಒಂದೇ ಸಮನೆ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಅಥವಾ ಮೊಬೈಲ್ ಗಳನ್ನು ವೀಕ್ಷಿಸುವುದು ಕೂಡ ತಪ್ಪು ಆಗಾಗ ಕಣ್ಣುಗಳಿಗೆ ರೆಸ್ಟ್ ನೀಡುತ್ತಾ ಕೆಲಸ ಮಾಡಿದರೆ ಇನ್ನೂ ಒಳ್ಳೆಯದು ಹಾಗೂ ಗಂಟೆಗೊಮ್ಮೆ ಕಣ್ಣನ್ನು ತಣ್ಣೀರಿನಿಂದ ಒರೆಸುವುದು ಇನ್ನು ಉತ್ತಮ .
ಈ ರೀತಿಯ ವಿಚಾರಗಳನ್ನು ತಿಳಿದು ನೀವು ಕಣ್ಣಿನ ಬಗ್ಗೆ ಹಾರೈಕೆ ಮಾಡುವುದರಿಂದ ಕಣ್ಣಿನ ಬಗ್ಗೆ ಗಮನ ವಹಿಸುವುದರಿಂದ ಯಾವ ಸಮಸ್ಯೆ ಕೂಡ ಬರದೇ ನಿಮ್ಮ ಕಣ್ಣಿನ ದೃಷ್ಟಿ ಕೂಡ ಏನು ಚೆನ್ನಾಗುತ್ತದೆ .ಕಣ್ಣುಗಳು ಕೂಡ ನಮ್ಮ ದೇಹದಲ್ಲಿ ಒಂದು ಮುಖ್ಯವಾದ ಅಂಗ ಆದ್ದರಿಂದ ಕಣ್ಣಿನ ಬಗ್ಗೆಯೂ ಕೂಡ ಸ್ವಲ್ಪ ಗಮನವಹಿಸಿದರೆ ಕಣ್ಣಿಗೆ ಸಂಬಂಧಪಟ್ಟ ಯಾವ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ .