Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕಡಿಮೆ ಖರ್ಚಿನಲ್ಲಿ, ಬರದ ನಾಡಿನಲ್ಲಿ, ಪ್ರಾಣಿಗಳು ತಿನ್ನದ ,ಕಡಿಮೆ ನೀರಿನಲ್ಲಿ ಹಾಗು ಕಡಿಮೆ ಖರ್ಚಿನಲ್ಲಿ ಬೆಳೆದು ಲಕ್ಷ ಲಕ್ಷ ಆದಾಯ ಬರುವಂತಹ ಚಿಯಾ ಬೆಳೆ

ಚಿಯ ಸೀಡ್ಸ್ ಈ ಹೆಸರನ್ನು ಕೇಳಿದರೆ ಯಾರಿಗೂ ಕೂಡ ಅರ್ಥ ಆಗುವುದಿಲ್ಲ ಯಾಕೆಂದರೆ ಈ ಚಿಯಾ ಸೀಡ್ಸ್ ಅನ್ನುವುದು ನಮ್ಮ ದೇಶದ ತಳಿಯಲ್ಲ, ಮೆಕ್ಸಿಕನ್ ದೇಶದಲ್ಲಿ ಬೆಳೆಯುವಂತ ಈ ಬೆಳೆಯ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ, ಹಾಗೆ ಈ ಚಿಯಾ ಸೀಡ್ಸ್ ಬಗ್ಗೆ ಯಾಕೆ ಮಾಹಿತಿಯನ್ನು ತಿಳಿಯಬೇಕು

ಅಂದರೆ ಇದೀಗ ಈ ಚಿಯಾ ಸೀಡ್ಸ್ ಅನ್ನು ನಮ್ಮ ಭಾರತ ದೇಶದಲ್ಲಿಯೂ ಕೂಡ ರೈತರು ಬೆಳೆಯುತ್ತಿದ್ದಾರೆ, ಹಾಗೆ ಈ ಚಿಯಾ ಸೀಡ್ಸ್ ಬೆಳೆಗೆ ಉತ್ತಮ ಬೆಲೆ ಕೂಡ ಇರುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ನಮ್ಮ ರೈತರು ಇದೀಗ ಪಡೆದುಕೊಳ್ಳಬಹುದಾಗಿದೆ, ಕೇವಲ ಒಂದು ಎಕರೆಯಲ್ಲಿಯೆ ಲಕ್ಷ ಲಕ್ಷ ಸಂಪಾದಿಸಬಹುದಾದ ಈ ಬೆಳೆಯನ್ನು ಬೆಳೆದು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಿ ಪ್ರಿಯಾ ರೈತ ಬಾಂಧವರೆ.

ಹಾಗಾದರೆ ಈ ಬೆಳೆಯನ್ನು ಹೇಗೆ ಬೆಳೆಯುವುದು ಮತ್ತು ಇದನ್ನು ಬೆಳೆಯುವುದರಿಂದ ಆಗುವ ಪ್ರಯೋಜನಗಳೇನು, ಚಿಯಾ ಸೀಡ್ಸ್ ಇಂದ ನಾವು ಪಡೆದುಕೊಳ್ಳಬಹುದಾದ ಆರೋಗ್ಯಕರ ಲಾಭಗಳೇನು ಅನ್ನುವುದನ್ನು ಕೂಡ ಇವತ್ತು ತಿಳಿಯೋಣ,

ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಇದೊಂದು ಉತ್ತಮ ಆರೋಗ್ಯಕರ ಮಾಹಿತಿಯಾಗಿರುವುದರಿಂದ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಚಿಯ ಸೀಡ್ಸ್ ಅನ್ನು ರೈತರುಗಳು ಬೆಳೆಯುವುದರಿಂದ ಹೇಗೆ ಎಷ್ಟು ಲಾಭ ಪಡೆದುಕೊಳ್ಳಬಹುದು ಹಾಗೂ ಯಾವ ಕಾಲದಲ್ಲಿ ಈ ಚಿಯ ಸೀಡ್ಸ್ ಅನ್ನು ಬೆಳೆಯಬೇಕು ಅನ್ನೋದನ್ನು ತಿಳಿಯುವುದಕ್ಕಿಂತ ಮೊದಲು, ಈ ಚಿಯಾ ಸಿಡ್ಸ್ ಇಂದ ನಾವು ಪಡೆದುಕೊಳ್ಳಬಹುದಾದ ಆರೋಗ್ಯಕರ ಲಾಭಗಳೇನು ಅನ್ನುವುದನ್ನು ಮೊದಲು ತಿಳಿಯೋಣ,

ಮೊದಲಿಗೆ ಈ ಚಿಯಾ ಸೀಡ್ಸ್ ಅನ್ನು ನಾವು ಯಾವ ರೂಪದಲ್ಲಾದರೂ ಸೇವಿಸಬಹುದು, ಯಾಕೆ ಅಂದರೆ ಇದನ್ನು ಯಾವ ಪದಾರ್ಥದೊಂದಿಗೆ ಬೆರೆಸಿದರು ಆ ಪದಾರ್ಥದ ರುಚಿಯನ್ನು ಪಡೆಯುತ್ತದೆಯೊ ಹೊರತು ಇದಕ್ಕೆ ತನ್ನದೇ ಆದಂತಹ ರುಚಿ ಇಲ್ಲ ಎಂದೇ ಹೇಳಬಹುದಾಗಿದೆ.

ಇದರ ಮೊಟ್ಟ ಮೊದಲ ಪ್ರಯೋಜನವೇನು ಅಂದರೆ ಚಿಯಾ ಸೀಡ್ಸ್ ಅನ್ನು ವಿಟಮಿನ್ ಇ ಟ್ಯಾಬ್ಲೆಟ್ ಮತ್ತು ಬೇಬಿ ಪ್ರೊಡಕ್ಟ್ಸ್ ನಲ್ಲಿ ಬಳಸುವುದರಿಂದ ಇದಕ್ಕೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದೆ ಹಾಗೂ ಇದರಲ್ಲಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ಅಂಶವು ದೇಹಕ್ಕೆ ಬೇಕಾಗಿರುವಂತಹ ಅಗತ್ಯ ಅಂಶವಾಗಿದ್ದು ಮಾಂಸಾಹಾರಿಗಳು ಮಾಂಸ ಪದಾರ್ಥಗಳನ್ನು ತಿನ್ನುವುದರಿಂದ ಈ ಅಂಶವನ್ನು ಪಡೆದುಕೊಳ್ಳಬಹುದಾಗಿದೆ,

ಆದರೆ ಸಸ್ಯಾಹಾರಿಗಳು ಒಮ್ಮೆ ರಾತ್ರಿ ಫ್ಯಾಟಿ ಆಸಿಡ್ ಅಂಶವನ್ನು ಹೇರಳವಾಗಿ ಪಡೆದುಕೊಳ್ಳಬೇಕು ಅಂದರೆ ಈ ಚಿಯಾ ಸಿಡ್ಸ್ ಅನ್ನು ಯಾವುದಾದರೂ ರೂಪದಲ್ಲಿ ಸೇವಿಸುವುದರಿಂದ ಪಡೆದುಕೊಳ್ಳಬಹುದಾಗಿದೆ.

ಚಿಯಾ ಸೀಡ್ಸ್ ನಲ್ಲಿ ಕ್ಯಾಲ್ಸಿಯಂ ಕಾಪರ್ ಝಿಂಕ್ ಫಾಸ್ಫರಸ್ ಈ ಎಲ್ಲ ಅಂಶಗಳು ಹೇರಳವಾಗಿದ್ದು ಇದನ್ನು ಸೇವಿಸುವುದರಿಂದ ನಮ್ಮ ಇಮ್ಯೂನಿಟಿ ಪವರ್ ಕೂಡ ಹೆಚ್ಚುತ್ತದೆ ಹಾಗೆಯೇ ಇದನ್ನು ರಿಚ್ ಫುಡ್ ಅಂತ ಕರೆಯುವುದರ ಜೊತೆಗೆ ಸೂಪರ್ ಫುಡ್ ಅನ್ನೋ ಒಂದು ಕ್ಯಾಟಗರಿಗೆ ಕೂಡ ಸೇರಿಸಲಾಗಿದ್ದು ಈ ಸಿರಿಧಾನ್ಯವನ್ನು ರೈತರುಗಳು ಬೆಳೆಯುವುದರಿಂದ ಹೆಚ್ಚು ಲಾಭವನ್ನು ಹೇಗೆ ಪಡೆದುಕೊಳ್ಳುವುದು ಅಂತ ಈಗಾಗಲೆ ನಿಮಗೆ ತಿಳಿದಿರುತ್ತದೆ.

ಹೌದು ಇಷ್ಟೆಲ್ಲ ಉತ್ತಮ ಅಂಶಗಳು ಚಿಯಾ ಸೀಡ್ಸ್ ನಲ್ಲಿ ಇರುವುದರಿಂದ ರೈತರುಗಳು ಈ ಬೆಳೆಯನ್ನು ಬೆಳೆಯಬಹುದಾಗಿದೆ ಹಾಗೂ ನಮ್ಮ ಭಾರತ ದೇಶದಲ್ಲಿ ಇದರ ಸಪ್ಲೈ ಅತ್ಯಂತ ಕಡಿಮೆ ಇರುವುದರಿಂದ ಇಂತಹ ಸಮಯದಲ್ಲಿ ರೈತರುಗಳು ಈ ಚಿಯಾ ಸಿಡ್ಸ್ ಅನ್ನು ಬೆಳೆದರೆ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು.

ಹಾಗೂ ಈ ಬೆಳೆಗೆ ಅನ್ನೋ ಯಾವುದೇ ಕಾಡು ಪ್ರಾಣಿಯಾಗಲಿ ನಾಡು ಪ್ರಾಣಿಯಾಗಲಿ ತಿನ್ನಲು ಮುಂದಾಗುವುದಿಲ್ಲ ಹಾಗೂ ಇದನ್ನು ಬೆಳೆಯುವುದಕ್ಕಾಗಿ ಹೆಚ್ಚು ನೀರಿನ ಅವಶ್ಯಕತೆ ಕೂಡ ಇರುವುದಿಲ್ಲ.

ಇನ್ನು ಸ್ನೇಹಿತರೆ ಚಿಯಾ ಸೀಡ್ಸ್ ಬೆಳೆಯನ್ನು ಒಂದು ಎಕರೆಯಲ್ಲಿ ಬೆಳೆಯಬೇಕೆಂದರೆ ಸುಮಾರು ಮೂರೂವರೆ ಕೆಜಿಯಷ್ಟು ಈ ಬೀಜದ ಅವಶ್ಯಕತೆಯಿದ್ದು, ಇದನ್ನು ಅಕ್ಟೋಬರ್ ನಿಂದ ನವೆಂಬರ್ ತಿಂಗಳಿನಲ್ಲಿ ಬೆಳೆದರೆ ಉತ್ತಮ.

ಹಾಗೂ ಇದನ್ನು ಬೆಳೆಯುವುದಕ್ಕಾಗಿ ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಜೈವಿಕ ಗೊಬ್ಬರದ ಅವಶ್ಯಕತೆ ಇರುವುದಿಲ್ಲ, ಈ ಬೆಳೆಯನ್ನು ಬೆಳೆಯುವುದಕ್ಕೆ ಅವಶ್ಯಕತೆ ಇರುವಂತಹ ಉಷ್ಣಾಂಶ ಎಷ್ಟು ಅಂದರೆ ಸುಮಾರು ಹದಿನಾರು ಡಿಗ್ರಿ ಸೆಲ್ಷಿಯಸ್ ನಿಂದ ಮೂವತ್ತಾರು ಡಿಗ್ರಿ ಸೆಲ್ಸಿಯಸ್ ನಲ್ಲಿ ಈ ಬೆಳೆಯನ್ನ ಬೆಳೆಯಲಾಗುತ್ತದೆ.

ರೈತರುಗಳು ಚಿಯಾ ಸೀಡ್ಸ್ ಅನ್ನು ಬೆಳೆದ ನಂತರ ಅದನ್ನು ತಾವೇ ಹೋಗಿ ಮಾರುಕಟ್ಟೆಯಲ್ಲಿ ಮಾರಬೇಕು ಅನ್ನ ಅವಶ್ಯಕತೆ ಕೂಡ ಇಲ್ಲ ಯಾಕೆಂದರೆ ಇದನ್ನು ಹೆಚ್ಚಾಗಿ ಔಷಧೀಯ ಕಂಪೆನಿಗಳಲ್ಲಿ ಬಳಸುವುದರಿಂದ ಕಂಪನಿಗಳಿಗೆ ಟ್ಯಾಪ್ ಮಾಡಿಕೊಂಡರೆ ಸಾಕು ಅವರೆ ಅವರೇ ಬಂದು ತಮಗೆ ಬೇಕಾಗಿರುವಂತಹ ಈ ರಾಮೆಟೀರಿಯಲ್ ಅನ್ನು ತೆಗೆದುಕೊಂಡು ಹೋಗುತ್ತಾರೆ.

Leave a Reply

Your email address will not be published. Required fields are marked *