ಒಂದೇ ಒಂದು ಚಿಟಿಕೆ ಇದನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕು ಗ್ಯಾಸ್, ಮಲಬದ್ಧತೆ, ಎಸಿಡಿಟಿ, ಹೊಟ್ಟೆ ನೋವು & ಅಜೀರ್ಣ ನಿಮಿಷದಲ್ಲಿ ಮಾಯ ಇನ್ನು ಯಾಕೆ ತಡ ಈಗಲೇ ಟ್ರೈ ಮಾಡಿ !!!

17

ಗ್ಯಾಸ್ಟ್ರಿಕ್ ಅಸಿಡಿಟಿ ಅಂತಹ ಸಮಸ್ಯೆ ಬಂದರೆ ನಾವು ನಮ್ಮನ್ನು ಯಾವುದೇ ಕೆಲಸ ಕಾರ್ಯಗಳಲ್ಲಿ ಸಾಮಾನ್ಯವಾಗಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ, ಗಂಟಲಿನಲ್ಲಿ ಉರಿ, ಹುಳಿ ತೇಗು, ಹೊಟ್ಟೆ ನೋವು ಅಥವಾ ಎದೆ ನೋವು ಇಂತಹ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ,

ಆದ ಕಾರಣ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಬಂದ ಕೂಡಲೇ ಅದನ್ನು ಪರಿಹರಿಸಿಕೊಳ್ಳಿ, ಇನ್ನು ಕೆಲವರು ಈ ಅಸಿಡಿಟಿ ಸಮಸ್ಯೆಯನ್ನು ದೊಡ್ಡ ಸಮಸ್ಯೆ ಏನೂ ಅಲ್ಲ ಅಂತ ಅಂದುಕೊಂಡಿರುತ್ತಾರೆ.

ಫ್ರೆಂಡ್ಸ್ ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಈ ಆಸಿಡಿಟಿ ಸಮಸ್ಯೆ ಕಾಡುತ್ತಿದ್ದರೆ ಕೂಡಲೇ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಿ ಹಾಗೆ ಎಲ್ಲ ಪರಿಹಾರ ಹೋಗಿಲ್ಲವಾದರೆ ದೇಹ ಪ್ರಕೃತಿಗೆ ಹೊಂದಿಕೊಳ್ಳುವುದಿಲ್ಲ.

ಆದ ಕಾರಣ ನಿಮ್ಮ ದೇಹ ಪ್ರಕೃತಿಗೆ ಹೊಂದಿಕೊಳ್ಳುವ ಪರಿಹಾರವನ್ನು ಮಾಡಿ ಇದರಿಂದ ನಿಮ್ಮ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಇಂದಿನ ದಿನಗಳಲ್ಲಿ ಹೇಗೆ ಆಗಿಬಿಟ್ಟಿದೆ ಅಂದರೆ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮಾತ್ರೆಯೆ ಪರಿಹಾರ ಅಂತ ಅಂದುಕೊಂಡು ಬಿಡುತ್ತಾರೆ ಆದರೆ ಎಷ್ಟು ಅಂತ ಯಾವ ಸಮಸ್ಯೆಗೆ ಅಂತ ಮಾತ್ರೆ ತೆಗೆದುಕೊಳ್ಳುವುದಕ್ಕೆ ಸಾಧ್ಯ ಆಗುತ್ತದೆ ಹೇಳಿ.

ಆ್ಯಸಿಡಿಟಿ ಅಂತಹ ಸಮಸ್ಯೆಗೆ ಮನೆಯಲ್ಲಿಯೇ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು ಆದರೂ ಯಾಕೆ ಜನರು ಮಾರುಕಟ್ಟೆಯಲ್ಲಿ ಹೊಸ ಹೊಸದಾಗಿ ಬರುವ ಔಷಧೀಯ ಮೊರೆ ಹೋಗುತ್ತಾರೆ ಎಂಬುದು ಮಾತ್ರ ತಿಳಿಯುತ್ತಿಲ್ಲ.

ಅದೇನೇ ಇರಲಿ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಫ್ರೆಂಡ್ಸ್ ಒಂದು ಉಪಯುಕ್ತವಾದ ಮನೆ ಮದ್ದನ್ನು ತಿಳಿಸಿಕೊಡುತ್ತೇನೆ, ಇದನ್ನು ನೀವು ಪ್ರತಿ ದಿನ ಸೇವಿಸುವ ಅವಶ್ಯಕತೆ ಇಲ್ಲ, ಆದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ ಅಂದಾಗ ನೋಡಿ ಈ ಮನೆ ಮದ್ದು ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.

ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಓಮಿನ ಕಾಳು , ಸೋಂಪಿನ ಕಾಳು ಮತ್ತು ಜೀರಿಗೆ ಅಷ್ಟೇ , ಮೊದಲಿಗೆ ಒಂದು ತವಾವನ್ನು ತೆಗೆದುಕೊಂಡು ಅದರ ಮೇಲೆ ಜೀರಿಗೆ ಒಂದು ಚಮಚ ಒಂದು ಚಮಚ ಓಮಿನ ಕಾಳನ್ನು ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿಕೊಳ್ಳಬೇಕು,

ನಂತರ ಸೋಂಪಿನ ಕಾಳನ್ನು ಹಾಕಬೇಕು, ಇಲ್ಲಿ ಗಮನದಲ್ಲಿಡಿ ಕೊನೆಗೆ ಸೋಂಪಿನ ಕಾಳನ್ನು ಹಾಕಬೇಕಾಗುತ್ತದೆ, ಯಾಕೆಂದರೆ ಸೋಂಪಿನ ಕಾಳನ್ನು ಮೊದಲೇ ಹಾಕಿ ಫ್ರೈ ಮಾಡುವುದರಿಂದ ಇದು ಬೇಗಾನೆ ಸೀದು ಹೋಗುವ ಸಾಧ್ಯತೆ ಇರುತ್ತದೆ.

ಈ ಮೂರು ಪದಾರ್ಥಗಳನ್ನು ಫ್ರೈ ಮಾಡಿಕೊಂಡ ಬಳಿಕ ಸಣ್ಣದಾಗಿ ಪುಡಿ ಮಾಡಿ ಇಟ್ಟುಕೊಳ್ಳಿ ನೀವು ಈ ಪುಡಿಯನ್ನು ಹೆಚ್ಚು ದಿನ ಶೇಖರಣೆ ಮಾಡಿ ಇಡಲು ಹೋಗಬೇಡಿ, ಇದೀಗ ಈ ಪುಡಿಯನ್ನು ಹೇಗೆ ಬಳಸುವುದು ಎಂಬ ವಿಧಾನವನ್ನು ತಿಳಿಸಿಕೊಡುತ್ತೇನೆ.

ಮೊದಲಿಗೆ ಒಂದು ಲೋಟ ತೆಗೆದುಕೊಂಡು ಅದಕ್ಕೆ ಬಿಸಿ ನೀರನ್ನು ಹಾಕಿಕೊಳ್ಳಿ ಒಂದು ಚಮಚ ತಯಾರಿಸಿ ಇಟ್ಟುಕೊಂಡಂತಹ ಪುಡಿಯನ್ನು ಬೆರೆಸಿ ಊಟವಾದ ಬಳಿಕ ಅಥವಾ ಮಲಗುವ ಮುನ್ನ ಕುಡಿದು ಮಲಗುವುದರಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ, ಒಳ್ಳೆಯ ಫಲಿತಾಂಶವನ್ನು ಕೂಡ ನೀಡುತ್ತದೆ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.

ಈ ಪರಿಹಾರವನ್ನು ಕೇವಲ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರ ಬಳಸಬೇಕು ಅಂತ ಏನೂ ಇಲ್ಲ ಯಾರೂ ತೂಕವನ್ನು ಇಳಿಸಿಕೊಳ್ಳಲು ಇಚ್ಛಿಸುತ್ತಾರೋ, ಅಂತಹವರು ಊಟವಾದ ಅರ್ಧ ಗಂಟೆಯ ಬಳಿಕ ಈ ಪರಿಹಾರವನ್ನು ಪಾಲಿಸ ಬಹುದಾಗಿದೆ. ಇದರಿಂದ ತೂಕ ಮೂವತ್ತು ದಿನಗಳಲ್ಲಿಯೇ ಸ್ವಲ್ಪ ಕಡಿಮೆಯಾಗುವುದನ್ನು ನೀವು ಗಮನಿಸಬಹುದು.

LEAVE A REPLY

Please enter your comment!
Please enter your name here