ಒಂದು ಸಾರಿ ನೀವೇನಾದ್ರು ಈ ರೀತಿ ರೆಸಿಪಿ ಮಾಡಿ ತಿಂದರೆ ನಾನ್ವೆಜ್ ತಿನ್ನೋದನ್ನೇ ಮರೆತು ಬಿಡುತ್ತೀರಾ !!!!

37

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳಿಕೊಡುವ ರೆಸಿಪಿಯನ್ನು ನೀವು ಯಾವುದರ ಜೊತೆಯಲ್ಲಿ ಆದರೂ ಬರೆಸಿಕೊಂಡು ತಿನ್ನಬಹುದು ಅಷ್ಟು ರುಚಿಯಾಗಿ ಬರುತ್ತದೆ ಈ ರೆಸಿಪಿ.

ಅದು ಯಾವ ರೆಸಿಪಿ ಅಂದರೆ ಬದನೆಕಾಯಿ ಎಣ್ಣೆಗಾಯಿ.ಇದನ್ನು  ಎಲ್ಲದರ ಜೊತೆಯಲ್ಲಿಯೂ ಕೂಡ ತಿನ್ನಬಹುದು. ರೊಟ್ಟಿ ,ಚಪಾತಿ ಮತ್ತು ಎಲ್ಲದರ ಜೊತೆಯಲ್ಲಿಯೂ ಕೂಡ ತಿನ್ನಬಹುದು.

ಮೊದಲನೆಯದಾಗಿ ನಿಮಗೆ ಬೇಕಾದಷ್ಟು ಬದನೆಕಾಯಿ ಅನ್ನು ತೆಗೆದುಕೊಳ್ಳಿ. ನಂತರ ಅದನ್ನು ಚೆನ್ನಾಗಿ ತೊಳೆದುಕೊಂಡು ಒಂದು ಬದನೆಕಾಯಿ 4 ಭಾಗವಾಗುವಂತೆ ಬದನೆಕಾಯಿಯನ್ನು ಕಟ್ ಮಾಡಿಕೊಳ್ಳಿ.

ನಂತರ ಇದನ್ನು ಹೇಗೆ ಮಾಡುವುದೆಂದು ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಇದನ್ನು ಮಾಡಲು ಬೇಕಾದಂತಹ ಸಾಮಾಗ್ರಿಗಳು ಯಾವುದೆಂದರೆ.  4 ಹಸಿ ಮೆಣಸಿನಕಾಯಿ, ತೆಂಗಿನಕಾಯಿತುರಿ 3 ಟೇಬಲ್ ಸ್ಪೂನ್, ಒಂದು ಗೆಡ್ಡೆ ಬೆಳ್ಳುಳ್ಳಿ, ಒಂದು ಇಂಚಿನಷ್ಟು ಶುಂಠಿ, 2 ಟೀ ಸ್ಪೂನ್ ನಷ್ಟು ಎಳ್ಳು, ಕಡ್ಲೆಬೀಜ ಒಂದು ಟೇಬಲ್ ಸ್ಪೂನ್ ನಷ್ಟು, ನಂತರ ಅರಿಶಿಣ ಅರ್ಧ ಟೀ ಸ್ಪೂನ್, ದನಿಯ ಎರಡು ಟೀ ಸ್ಪೂನ್, ಜೀರಿಗೆ ಮತ್ತು ಸಾಸಿವೆ ಸ್ವಲ್ಪ  ಕಾಲ್ ಟೀಸ್ಪೂನ್ ನಷ್ಟು,

ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಹಾಕಿ ಕೊಳ್ಳಬೇಕು,ಹುಣಸೆಹಣ್ಣು ಇಲ್ಲಲ್ಲದಿದ್ದರೆ ನೀವು ಟಮೋಟೋ ಹಣ್ಣನ್ನು ಬಳಕೆ ಮಾಡಿಕೊಳ್ಳಬಹುದು, ಗರಂ ಮಸಾಲ 1 ಟೀ ಸ್ಪೂನ್, ಈರುಳ್ಳಿ 2 ಸಾಮಾನ್ಯ ಗಾತ್ರದ ಈರುಳ್ಳಿ, ಕರಿಬೇವು ಒಗ್ಗರಣೆಗೆ ಮತ್ತು ಕೊತ್ತುಂಬರಿಸೊಪ್ಪು. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಾಡಲು ಎಣ್ಣೆ.

ಇವಿಷ್ಟನ್ನು ಬಳಸಿಕೊಂಡು ಬದನೆಕಾಯಿ ಎಣ್ಣೆಗಾಯಿ ರುಚಿಕರವಾಗಿ ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಸ್ಟೌವ್ ಅನ್ನು ಆನ್ ಮಾಡಿಕೊಂಡು ನಂತರ ಬಾಣಲಿಗೆ 2 ಸ್ಪೂನ್ ಎಣ್ಣೆಯನ್ನು ಹಾಕಬೇಕು.

ನಂತರ ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ ಅದಕ್ಕೆ ನಾವು ತೆಗೆದುಕೊಂಡಿರುವ ಅಂತಹ ಕಡಲೆ ಬೀಜವನ್ನು ಎಣ್ಣೆಗೆ ಹಾಕಬೇಕು. ನಂತರ ಕಡಲೆಬೀಜ ಚೆನ್ನಾಗಿ ಫ್ರೈ ಆದಮೇಲೆ ಅದಕ್ಕೆ ಬೆಳ್ಳುಳ್ಳಿ ಶುಂಠಿ ಮೆಣಸಿನಕಾಯಿ ಕಾಯಿತುರಿ ಇವೆಲ್ಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.

ಅದು ಫ್ರೈ ಆದ ನಂತರ ಅದಕ್ಕೆ ಆಯ್ದುಕೊಂಡಿರುವ ಅಂತಹ ಎಳ್ಳನ್ನು ಒಂದು ಟೀ ಸ್ಪೂನ್ ನಷ್ಟು ಅದು ಚೆನ್ನಾಗಿ ಫ್ರೈ ಮೇಲೆ ನಂತರ ಅದಕ್ಕೆ ದನಿಯ, ಗರಂಮಸಾಲಾ ಮತ್ತು ಅರಿಶಿಣವನ್ನು ಮಿಕ್ಸ್ ಮಾಡಬೇಕು.

ಇವೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಫ್ರೈ ಮಾಡಿದ ನಂತರ ಈ ಮಸಾಲೆಯನ್ನು ತಣ್ಣಗಾಗಲು ಸ್ವಲ್ಪ ಹೊತ್ತು ಸೈಡಿಗೆ ಇಡಬೇಕು. ಇದು ತಣ್ಣಗಾದ ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು.

ರುಬ್ಬಿಕೊಂಡ ನಂತರ ಸ್ನೇಹಿತರೆ ತೊಳೆದುಕೊಂಡು ರೆಡಿಮಾಡಿಕೊಂಡು ಇರುವಂತಹ ಬದನೆಕಾಯಿಗೆ ಮಸಾಲೆಯನ್ನು ತುಂಬಬೇಕು. ಹಾಗೆ ಮಸಾಲೆಯನ್ನು ತುಂಬಿದ ನಂತರ ಬಾಣಲಿಯನ್ನು ಮತ್ತೆ ಸ್ಟೌವ್ ಮೇಲೆ ಇಟ್ಟು 3ರಿಂದ 4 ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಬೇಕು.

ಎಣ್ಣೆ ಬಿಸಿಯಾದ ನಂತರ ಒಗ್ಗರಣೆಗೆ ಅದಕ್ಕೆ ಜೀರಿಗೆ ಸಾಸಿವೆ ಮತ್ತು ಕರಿಬೇವು ಅನ್ನು ತೆಗೆದುಕೊಂಡ ಅಷ್ಟು ಹಾಕಬೇಕು. ನಂತರ ಅದಕ್ಕೆ ಮಸಾಲೆ ತುಂಬಿಕೊಂಡ ಅಂತಹ ಬದನೆಕಾಯಿಯನ್ನು ಎಣ್ಣೆಗೆ ಹಾಕಬೇಕು. ಹಾಕಿದ ನಂತರ ನಾಲ್ಕರಿಂದ ಐದು ನಿಮಿಷ ಚೆನ್ನಾಗಿ ಫ್ರೈ ಮಾಡಬೇಕು. ಹಾಗೆ ಬದನೆಕಾಯಿ ಸ್ವಲ್ಪ ಯಾಗುತ್ತಿದ್ದಂತೆ ಉಳಿದಂತಹ ಮಸಾಲೆಯನ್ನು ಬಾಣಲಿಗೆ ಹಾಕಬೇಕು.

ಕೊನೆಯದಾಗಿ ಮಸಾಲೆ ಚೆನ್ನಾಗಿ ಕುದಿಸಿದ ನಂತರ ಅದಕ್ಕೆ ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಬೇಕು. ಇದನ್ನು ಐದರಿಂದ ಹತ್ತು ನಿಮಿಷ ಫ್ರೇ ಯಾಗಲು ಬಿಡಬೇಕು. ಅದು ಸಾಮಾನ್ಯವಾಗಿ ಮಸಾಲೆ ತಣ್ಣಗಾದನಂತರ ತುಂಬಾನೇ ಗಟ್ಟಿಯಾಗುತ್ತದೆ.ಈ ರೀತಿಯಾಗಿ ರೆಸಿಪಿಯನ್ನು ನೀವು ಮಾಡಿಕೊಂಡು ತಿಂದರೆ ನಿಮಗೆ ಮಾಂಸಾಹಾರದ ಆಸೆ ಆಗುವುದಿಲ್ಲ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಾವು ಹೇಳಿಕೊಟ್ಟ ರೀತಿ ನೀವು ಬದನೆಕಾಯಿ ಎಣ್ಣೆಗಾಯಿ ಮಾಡಿಕೊಂಡು ನೀವು ತಿನ್ನಿ ನಿಮ್ಮ ಮನೆಯವರಿಗೂ ತಿನ್ನಿಸಿ. ಇದನ್ನು ಒಂದು ಬಾರದಿದ್ದರೆ ಮತ್ತೆ ಮತ್ತೆ ತಿನ್ನಬೇಕು ಎಂದು ಅನಿಸುವುದು ಗ್ಯಾರಂಟಿ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮಚ್ಚೆ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here