Categories
ಭಕ್ತಿ ಮಾಹಿತಿ

ಒಂದು ಫೋಟೋ ಬದಲಿಸುತ್ತೆ ನಿಮ್ಮ ಅದೃಷ್ಟ | ಗೋಡೆಗೆ ತಗುಲಿಸಿದ್ದ ಫೋಟೋ ಅವಾಂತರ

ನಮ್ಮ ಹಿರಿಯರು ನಮಗೆ ಸಾಕಷ್ಟು ವಿಷಯಗಳನ್ನು ಧಾರೆ ಎರೆದು ಹೋಗಿದ್ದಾರೆ ಹಾಗೂ ಅವರು ಹಾಕಿ ಕೊಟ್ಟಿರುವ ಚೌಕಟ್ಟಿನಲ್ಲಿ ಬದುಕುವುದರಿಂದ ನಮಗೆ ಒಳ್ಳೆಯದೇ ಆಗುತ್ತದೆ ಆದರೆ ಇಂದಿನ ವ್ಯವಸ್ಥೆಯಲ್ಲಿ ಆಂಗ್ಲರ ವ್ಯವಸ್ಥೆಯನ್ನು ನಾವು ಪಾಲಿಸುತ್ತಿರುವುದರಿಂದ ನಮ್ಮಲ್ಲಿ ಆರೋಗ್ಯಕರ ಸಮಸ್ಯೆ ಹಾಗೂ ಇನ್ನೂ ಹಲವಾರು ಸಮಸ್ಯೆಗಳನ್ನು ನಾವು ಅನುಭವಿಸಬೇಕಾಗುತ್ತದೆ .

ಇದರ ಜೊತೆಗೆ ವಾಸ್ತು ದೋಷದ ಸಮಸ್ಯೆಯನ್ನು ಸಹ ನಾವು ಎದುರಿಸಬೇಕಾಗುತ್ತದೆ . ಇನ್ನು ಮನೆಯೊಳಗೆ ಕಣ್ಣಿಗೆ ಚೆಂದ ಕಾಣುವ ಫೋಟೊ ಫ್ರೇಮ್ ಗಳನ್ನು ಹಾಕುವುದು ಎಂದು ಟ್ರೆಂಡ್ ಆಗಿದೆ ಆದರೆ ಈ ತರಹ ಸಿಕ್ಕ ಸಿಕ್ಕ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಇದು ಮನೆಯ ಜನರ ಮೇಲೆ ಹಲವು ಸಮಸ್ಯೆಯನ್ನು ಸಹ ಬೀರುತ್ತದೆ .

ಇನ್ನು ಮನೆಯಲ್ಲಿ ಮಹಾಭಾರತದ ಫೋಟೋಗಳನ್ನು ಇಡಬಾರದು ಏಕೆಂದರೆ ಇದನ್ನು ಇಡುವುದರಿಂದ ಮನೆಯಲ್ಲಿ ಜಗಳಗಳು ಆಗುತ್ತದೆ .
ಮನೆಯಲ್ಲಿ ಅಪ್ಪ ಅಮ್ಮನ ಫೋಟೋ ಅನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ಹಾಗೂ ಮೃತಪಟ್ಟವರ ಫೋಟೊ ಫ್ರೇಮ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು .

ಇನ್ನು ಊಟದ ಕೋಣೆಯಲ್ಲಿ ಯಾವುದಾದರು ಹೂವಿನ ಫೋಟೋ ಅನ್ನು ಇಡಬೇಕು ಹಾಗೂ ಬೆಡ್ ರೂಂನಲ್ಲಿ ಮದುವೆಯಾದ ಸಂದರ್ಭ ದಲ್ಲಿ ತೆಗೆಸಿದ ದಂಪತಿಗಳ ಫೋಟೊ ಅನ್ನು ಇಡಬೇಕು ಇನ್ನು ದೇವರ ಮನೆಯಲ್ಲಿ ಸಿಕ್ಕ ಸಿಕ್ಕ ಫೋಟೋಗಳನ್ನು ಇಡಬಾರದು ಇದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ .

ಇನ್ನು ದೇವರ ಮನೆಯಲ್ಲಿ ನಮ್ಮ ಕಣ್ಣಿಗೆ ನೆರವಾದ ಫೋಟೋಗಳನ್ನು ಇಡಬೇಕು ಅದರ ಬದಲು ಉದ್ದದ ಫೋಟೋ ಅಥವಾ ಗಿಡ್ಡದ ಫೋಟೋಗಳನ್ನು ಇಡುವುದರಿಂದ ಇದು ಮನೆಯವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಹಾಗೂ ಸುಖ ಶಾಂತಿ ಕಡಿಮೆಯಾಗುತ್ತದೆ . ಸಂತಾನ ಭಾಗ್ಯಕ್ಕಾಗಿ ಮಲಗುವ ಕೋಣೆಯಲ್ಲಿ ಕಮಲದ ಫೋಟೋ ಅನ್ನು ಹಾಕಬೇಕು .

ಇನ್ನು ಮನೆಯಲ್ಲಿ ನಾಯಿ ಮತ್ತು ಕುದುರೆಯ ಫೋಟೋ ಅನ್ನು ಹಾಕಬಹುದು ಆದರೆ ಸಮುದ್ರ ಉಕ್ಕುವ ಫೋಟೋವನ್ನು ಹಾಕಬಾರದು ಇದು ಮನಸ್ಸಿನ ಶಾಂತಿಯನ್ನು ಹಾಳು ಮಾಡುತ್ತದೆ .ಇನ್ನು ವಾಸ್ತು ಪ್ರಕಾರ ಮನೆಯನ್ನು ಕಟ್ಟುವುದರಿಂದ ಸುಖ ಶಾಂತಿ ನೆಮ್ಮದಿಯ ಮನೆಯಲ್ಲಿ ನೆಲೆಸಿರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ .

ಆದ್ದರಿಂದ ನಮ್ಮ ಹಿರಿಯರು ಹೇಳಿದಂತೆ ವಾಸ್ತು ಪ್ರಕಾರ ಮನೆ ಕಟ್ಟಿಸಿ ಸಮೃದ್ಧಿಯಾಗುವಂತೆ ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಬೇಕು ಇದರಿಂದ ಆರೋಗ್ಯಕರ ಜೀವನ ನಮ್ಮದಾಗುತ್ತದೆ ನೋಡಿದ್ರಲ್ಲ ಸ್ನೇಹಿತರೇ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ .

ನಮ್ಮ ಹಿರಿಯರು ಮಾಡಿ ಇಟ್ಟಿರುವ ಪದ್ಧತಿ ಶಾಸ್ತ್ರ ಸಂಪ್ರದಾಯಗಳನ್ನು ಆದಷ್ಟು ಮರೆಯದೆ ಪಾಲಿಸಿ ಇದರಿಂದ ಎಲ್ಲರಿಗೂ ಒಳಿತಾಗುತ್ತದೆ .ನಮ್ಮ ಹಿರಿಯರು ಏನೇ ಹೇಳಿದರೂ ಏನೇ ಒಂದು ಪದ್ಧತಿ ಶಾಸ್ತ್ರ ಸಂಪ್ರದಾಯಗಳನ್ನು ಮಾಡಿದ್ದರೂ ಅದು ಅವರ ಅನುಭವದ ಮೇರೆಯ ಮೇಲೆ ಆದ್ದರಿಂದ ನಾವು ಅದನ್ನು ಪಾಲಿಸಬೇಕು ಪಾಲಿಸುವುದರಿಂದ ಸುಗಮ ಜೀವನ ನಮ್ಮದಾಗುತ್ತದೆ ಎಲ್ಲರಿಗೂ ಒಳ್ಳೆಯದಾಗಲಿ ಸ್ನೇಹಿತರೇ ಶುಭ ದಿನ ಶುಭವಾಗಲಿ ಧನ್ಯವಾದಗಳು.

 

Leave a Reply

Your email address will not be published. Required fields are marked *