Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಲ್ಲ ರೀತಿಯ ಸಂಕಷ್ಟಗಳನ್ನು ನಿವಾರಣೆಮಾಡುವ ಈ ದೇವಿಯ ಪವಾಡವನ್ನು ನೀವು ತಿಳಿದರೆ ಒಂದು ಭಾರಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟೆ ಕೊಡ್ತೀರಾ …!!!

ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಆಗಿರುವಂತಹ ದೇವಸ್ಥಾನ ವಿಶ್ವ ಪ್ರಖ್ಯಾತಿಯನ್ನು ಹೊಂದಿದೆ, ಇಲ್ಲಿಗೆ ಕೇವಲ ಕರ್ನಾಟಕದ ಭಕ್ತರು ಮಾತ್ರವೇ ಅಲ್ಲದೆ  ಭಾರತ ದೇಶದಲ್ಲಿ ಇರುವಂತಹ ಹಲವಾರು ರಾಜ್ಯಗಳಿಂದ ಭಕ್ತರು ಈ ಸೌದತ್ತಿ ಯಲ್ಲಮ್ಮನ ದರ್ಶನಕ್ಕೆ ಬರುತ್ತಾರೆ,ಅದರಲ್ಲೂ ಆಂಧ್ರ ಕೇರಳ ಹಾಗೂ ತಮಿಳುನಾಡು ಗೋವಾ ಮಹಾರಾಷ್ಟ್ರ ಹಾಗೂ ನನ್ನ ಕಡೆಯಿಂದ ಈ ದೇವಿಯ ದರ್ಶನ ಕೋಸ್ಕರ ಜನರು ತಂಡೋಪತಂಡವಾಗಿ ಇಲ್ಲಿಗೆ ಬರುವುದುಂಟು.ಈ ದೇವಸ್ಥಾನಕ್ಕೆ ಒಂದು ಒಳ್ಳೆಯ ವಿಶೇಷತೆ ಇದೆ ಆ ವಿಶೇಷತೆಯೇ ಒಂದು ವರ್ಷದಲ್ಲೇ 7 ಜಾತ್ರೆಯನ್ನು ಮಾಡುವಂತಹ ವಿಶ್ವದಲ್ಲೇ ಒಂದು ಪ್ರಖ್ಯಾತಿಯನ್ನು ಹೊಂದಿರುವಂತಹ ದೇವಸ್ಥಾನ ಇದು.

ಏನು ಜಾತ್ರೆಯಲ್ಲಿ  2 ಜಾತ್ರೆಗಳು ತುಂಬಾ ಪ್ರಖ್ಯಾತಿ ಹೊಂದಿದ್ದು ಅವುಗಳು ಬನದ ಹಾಗೂ ಭರತ ಹುಣ್ಣಿಮೆಯಲ್ಲಿ ನಡೆಯುವಂತಹ ಜಾತ್ರೆ ಗಳು ಆಗಿವೆ. ಹೀಗೆ ನಡೆಯುವಂತಹ ಜಾತ್ರೆಗೆ ಹಲವಾರು ಜನರು ಇಲ್ಲಿಗೆ ಬಂದು ಬಯಲಿನಲ್ಲಿ ಅಡುಗೆಯನ್ನು ಮಾಡಿ ದೇವಿಗೆ ನೈವೇದ್ಯ ಮಾಡುತ್ತಾರೆ.ಸೌದತ್ತಿ ಎಲ್ಲಮ್ಮ ದೇವಿಯ ಇತಿಹಾಸ? ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿಯನ್ನು ಹೊಂದಿರುವ ಅಂತಹ  ಸೌದತ್ತಿ ಎಲ್ಲಮ್ಮ ದೇವಿಗೆ ಮೂರರಿಂದ ನಾಲ್ಕು ಸಾವಿರ ಹಿಂದಿನ ಇತಿಹಾಸ ಇದೆ,

ಪುರಾಣದ ಪ್ರಕಾರ ಹಲವಾರು ವರ್ಷಗಳ ಹಿಂದೆ ಕಾಶ್ಮೀರದ ರಾಜನ ಆಗಿರುವಂತಹ ರೇಣುಕರಾಜ ಅವನಿಗೆ ಒಂದು ಅಶರೀರವಾಣಿ ಬರುತ್ತದೆ, ಹಾಗೆ ಬಂದಂತಹ ಅಶರೀರವಾಣಿಯ ಮುಖಾಂತರ ನನಗೆ ಒಂದು ಯಜ್ಞಯಾಗ ಮಾಡು ಎಂದು .ಈ ರೀತಿಯ ಬೇಡಿಕೆ  ಇಟ್ಟಂತಹ ಅಶರೀರವಾಣಿಯ ಪ್ರಭಾವಿತವಾದ ಅಂತಹ ದೊರೆಯು ಯಾಗವನ್ನು ಮಾಡಲು ಮುಂದಾಗುತ್ತಾನೆ, ಹೀಗೆ ಯಾಗವನ್ನು ಮಾಡುತ್ತಿರುವ ಸಂದರ್ಭದಲ್ಲಿ ಬೆಂಕಿಯ ಕುಂಡದಲ್ಲಿ ಒಂದು ಹೆಣ್ಣು ಮಗುವು ಪ್ರತ್ಯಕ್ಷವಾಗುತ್ತದೆ ಆ ಮಗುವೇ ಶ್ರೀ ರೇಣುಕಾದೇವಿ. ಈ ರೀತಿಯ ಕಥೆಯು ನಮ್ಮ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ.

ಇಲ್ಲಿರುವಂತಹ ಸೌದತ್ತಿ ಯಲ್ಲಮ್ಮ ರಟ್ಟ ಅರಸರ ಕಾಲದಲ್ಲಿ ನಿರ್ಮಾಣ ಆಗಿದೆ ಎಂದು ಹೇಳುತ್ತಾರೆ, ರೇಣುಕಾ ದೇವಿಯು ತಾನು ಪ್ರೌಢ ವ್ಯವಸ್ಥೆಯಲ್ಲಿ ಬಂದಾಗ ಈ ದಿನ ಮಲಬಾರಿ ಯನ್ನುವ ದೇವಸ್ಥಾನಕ್ಕೆ ಹೋಗುತ್ತಿರುವ, ಅಲ್ಲಿ  ಸಪ್ತ ಋಷಿ ಆಗಿರುವಂತಹ ಜಮದಗ್ನಿ ಋಷಿಯನ್ನು ಅವಳು ನೋಡುತ್ತಾಳೆ.ಹಾಗೆ ಅವನು ಮಾಡುತ್ತಿರುವಂತಹ ಸಂಧ್ಯಾವಂದನೆಯನ್ನು ನೋಡಿ ಅವಳು ಮದುವೆಯಾದರೆ ಜಮದಗ್ನಿಯ ನೇ ಮದುವೆ ಆಗಬೇಕು ಎಂದು ಸೌದತ್ತಿ ಯಲ್ಲಮ್ಮ ದೇವಿ ಅಂದುಕೊಳ್ಳುತ್ತಾಳೆ.

ಕೆಲವು ದಿನಗಳ ಬಳಿಕ ಸೌದತ್ತಿ ಎಲ್ಲಮ್ಮ ಹಾಗೂ ಜಮದಗ್ನಿಯ ಮದುವೆಯೂ ಆಗುತ್ತದೆ, ಪರಶುರಾಮನು ಜಮದಗ್ನಿಯ ಹಾಗೂ ರೇಣುಕಾದೇವಿಯ ಮಗನಾಗಿದ್ದು ವಾಗ್ದಾನದಂತೆ 7 ಕೊಳಗಳು ಇರುವಂತಹ ಪ್ರದೇಶದಲ್ಲಿ ಪ್ರತಿಷ್ಠಾಪನೆ ಆಗಬೇಕು ಎನ್ನುವುದು ಅವರ ಬಯಕೆಯಾಗಿರುತ್ತದೆ. ಹೀಗೆ ಮಗನ ವಾಗ್ದಾನದ ಮೇರೆಗೆ ಇಲ್ಲಿ ಸೌದತ್ತಿ ಎಲ್ಲಮ್ಮ ಬಂದು ನೆಲೆಸಿದ್ದಾಳೆ.ಸೌದತ್ತಿ ಎಲ್ಲಮ್ಮ ನ ದೇವಸ್ಥಾನದಲ್ಲಿ ಕೇವಲ ಸೌದತ್ತಿ ಎಲ್ಲಮ್ಮನ ಮೂರ್ತಿ ಮಾತ್ರವೇ ಅಲ್ಲದೆ, ಸೌದತ್ತಿ ಜಮದಗ್ನಿ ಋಷಿ, ಪರಶುರಾಮ್,ಮಲ್ಲಿಕಾರ್ಜುನ ಹಾಗೂ ದತ್ತಾತ್ರೇಯ ದೇವಸ್ಥಾನ ಗಳು ನೀವು ಕೂಡ ಇಲ್ಲಿ ನೋಡಬಹುದು. ಇಲ್ಲಿನ ಸೌದತ್ತಿ ಎಲ್ಲಮ್ಮ ದೇವಿಗೆ ಅರಿಶಿನ ಎಂದರೆ ತುಂಬಾ ಇಷ್ಟ, ಇಲ್ಲಿಗೆ ಬರುವಂತಹ ಭಕ್ತರು ಈ ದೇವಿಯ ಮೂರ್ತಿಯ ಮೇಲೆ ಅರಿಶಿನವನ್ನು ಎರಚುವ ಮುಖಾಂತರ ಈ ದೇವಿಯನ್ನು ಹೆಚ್ಚಾಗಿ ಪೂಜೆ ಮಾಡುತ್ತಾರೆ.

ಹಾಗೂ ಈ ದೇವಸ್ಥಾನಕ್ಕೆ ಸಂತಾನ ಆಗದೇ ಇರುವಂಥ ಅವರು ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ, ಈ ತಾಯಿಗೆ ತೊಟ್ಟಿಲು ಕೊಡುವುದಾಗಿ ,ಅಂದರೆ ತಮಗೆ ಹುಟ್ಟಿದಂತಹ ಮಗುವಿನ ತೂಕದಷ್ಟು ತೊಟ್ಟಿಲನ್ನು ಕೊಡುವುದಾಗಿ ಪೂಜೆ ಮಾಡಿಕೊಂಡರೆ ಅವರಿಗೆ ಇರುವಂತಹ ಕಷ್ಟ ನೋವುಗಳು ಪರಿಹಾರವಾಗುತ್ತವೆ ಎಂಬುದು ಇಲ್ಲಿನ ಜನರ ಒಂದು ಗಾಢವಾದ ನಂಬಿಕೆಯಾಗಿದೆ.ಈ ಕ್ಷೇತ್ರಕ್ಕೆ ಬರುವಂತಹ ಎಲ್ಲಾ ಭಕ್ತಾದಿಗಳಿಗೂ ಅಲ್ಲಿ ಉಳಿದುಕೊಳ್ಳುವುದಕ್ಕೆ ಒಳ್ಳೆಯ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೆ ಸ್ಥಾನ ನೀರು ಕುಡಿಯುವುದಕ್ಕೆ ,ಇಲ್ಲಿ ತುಂಬಾ ಚೆನ್ನಾಗಿ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ದೇವಸ್ಥಾನಕ್ಕೆ ಕೇವಲ ಭಾರತದ ಮಾತ್ರವಲ್ಲ ದೇಶ ವಿದೇಶಗಳಿಂದಲೂ ಕೂಡ ಇಲ್ಲಿಗೆ ಬರುವುದುಂಟು ಅದರಲ್ಲೂ ಅಮೆರಿಕದವರು ಎಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಈ ದೇವಸ್ಥಾನಕ್ಕೆ ಏಕೆ ಕಾಲದಲ್ಲಿ 10 ರಿಂದ 15 ಲಕ್ಷ ಜನರು ಬರುವುದು ಉಂಟು.ಒಟ್ಟಾರೆ ಹೇಳಬೇಕು ಎಂದರೆ ಇಲ್ಲಿನ ದೇವಸ್ಥಾನ ಜಗತ್ಪ್ರಸಿದ್ಧಿ ಹೋದದ್ದಕ್ಕೆ ಕಾರಣ ಏನಪ್ಪ ಅಂದರೆ ಇಲ್ಲಿ ನಡೆದಿರುವಂತಹ ಪವಾಡಗಳು ಹಾಗೂ ಜನರು ಹೊತ್ತುಕೊಂಡು ಅಂತ ಹರಕೆಗಳು ನಿವಾರಣೆಯಾಗಿರುವುದು,

ಈ ದಿನ ದೇವಸ್ಥಾನ ದಿನದಲ್ಲಿ ಎರಡು ಸಾರಿ ತೆರೆಯುತ್ತದೆ ಹಾಗೂ ಎರಡು ಬಾರಿ ಪೂಜೆಯನ್ನು ಪೂಜೆಯನ್ನು  ಇಲ್ಲಿ ಮಾಡಲಾಗುತ್ತದೆ. ಸಂಜೆ 4 ರಿಂದ 6:00 ಹೇಗೆ ಪೂಜೆ ನಡೆದರೆ ಬೆಳಗ್ಗೆ 1 ಗಂಟೆ ಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಪೂಜೆಯನ್ನು ಮಾಡಲಾಗುತ್ತದೆ.ಈ ಕ್ಷೇತ್ರ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ನೀವು ಬೆಳಗಾವಿಯಿಂದ 70 ಕಿಲೋ ಮೀಟರ್ ದೂರ ನೀವೇನಾದರೂ ಕ್ರಮಿಸಿದರೆ ನಿಮಗೆ ಪವಾಡ ರೂಪದಲ್ಲಿ ನಿವಾರಣೆ ಮಾಡುವಂತಹ ಸೌದತ್ತಿ ಎಲ್ಲಮ್ಮ ನಕ್ಷತ್ರ ನಿಮಗೆ ದೊರಕುತ್ತದೆ.

ಇದು ಉತ್ತರ ಕರ್ನಾಟಕದ ಪ್ರಸಿದ್ಧ ದೇವಾಲಯವಾಗಿದ್ದು ನೀವು ಯಾರನ್ನು ಬೇಕಾದರೂ ಕೇಳಿದರೂ ಕೂಡ ನಿಮಗೆ ಅಡ್ರೆಸ್ ದೊರಕುತ್ತದೆ. ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು  ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ ಕೊಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ