ಎಲ್ಲರೂ ಕೂಡ ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆಯನ್ನು ಯಾಕೆ ಮಾಡುತ್ತಾರೆ ಗೊತ್ತ ಈ ಕಾರಣಕ್ಕೆ ಪ್ರದಕ್ಷಿಣೆ ಮಾಡಲೇಬೇಕು….!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾವ ಕಾರಣಕ್ಕಾಗಿ ಹಾಗೂ ಪ್ರದಕ್ಷಿಣೆ ಹಾಕುವುದರಿಂದ ಯಾವೆಲ್ಲ ಪ್ರಯೋಜನಗಳು ದೊರೆಯುತ್ತದೆ ಜೊತೆಗೆ ಪ್ರದಕ್ಷಿಣೆ ಹಾಕುವುದರಿಂದ ನಮಗೆ ಏನು ಉಪಯೋಗ ಅನ್ನೋದರ ಪ್ರತಿ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ ಈ ಮಾಹಿತಿಯನ್ನು ನೀವು ಕೂಡ ತಿಳಿದ ನಂತರ ಈ ಮಾಹಿತಿಯನ್ನು ತಪ್ಪದೇ ಬೇರೆಯವರೊಂದಿಗೂ ಕೂಡ ಶೇರ್ ಮಾಡಿ.ಹೌದು ನಾವು ದೇವಸ್ಥಾನಗಳಿಗೆ ಹೋದಾಗ ಗರ್ಭಗುಡಿಗೆ ಪ್ರದಕ್ಷಿಣೆ ಹಾಕುತ್ತೇವೆ ಹಾಗೆಯೇ ತುಳಸಿ ಗಿಡ ಅಥವಾ ಅರಳಿ ವೃಕ್ಷಕ್ಕೂ ಕೂಡ ಪ್ರದಕ್ಷಿಣೆ ಹಾಕುತ್ತವೆ ಆದರೆ ಈ ರೀತಿ ಪ್ರದಕ್ಷಿಣೆ ಹಾಕುವುದರಿಂದ ಏನು ಪ್ರಯೋಜನ.

 

ಹಾಗೂ ನಮ್ಮ ಹಿರಿಯರ ಕಾಲದಿಂದಲೂ ಕೂಡ ಯಾಕೆ ಜನರು ಈ ರೀತಿ ಪ್ರದಕ್ಷಿಣೆ ಹಾಕುತ್ತಾರೆ ಎಂಬುದಕ್ಕೆ ನಿಮಗೇನಾದರೂ ಕಾರಣ ಗೊತ್ತಾ ಹೌದು ಈ ಪ್ರದಕ್ಷಿಣೆ ಹಾಕುವುದರ ಹಿಂದೆ ವೈಜ್ಞಾನಿಕವಾಗಿಯೂ ಕೂಡ ಕಾರಣವಿದೆ ಹಾಗೂ ಪ್ರದಕ್ಷಿಣೆ ಹಾಕುವುದರಿಂದ ನಮಗೆ ಇನ್ನೂ ಹಲವಾರು ರೀತಿಯ ಪ್ರಯೋಜನಗಳಿವೆ.ಈ ರೀತಿ ಪ್ರದಕ್ಷಿಣೆ ಹಾಕುವುದರಿಂದ ನಮಗೆ ಸಿಗುವಂತಹ ಲಾಭವಾದರೂ ಏನು ಅನ್ನೋದನ್ನು ತಿಳಿಯೋಣ ಬನ್ನಿ ಸ್ನೇಹಿತರೇ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿ ನಿಮ್ಮ ಗೆಳೆಯರೊಂದಿಗು ಕೂಡ ಮಾಹಿತಿಯನ್ನು ಹಂಚಿಕೊಳ್ಳಿ.

ನಮ್ಮ ಪೂರ್ವಜರು ನಂಬುತ್ತಿದ್ದ ಈ ಪ್ರದಕ್ಷಿಣೆ ಎಂಬ ಪದ್ಧತಿಯಲ್ಲಿ ನಾವು ಇಡುವಂತಹ ಮೊದಲನೇ ಹೆಜ್ಜೆ ಮಾನಸಿಕವಾಗಿ ಮಾಡಿದಂತಹ ತಪ್ಪುಗಳನ್ನು ನಾಶ ಮಾಡುವುದಕ್ಕಾಗಿ, ಪ್ರದಕ್ಷಿಣೆ ಹಾಕುವ ವೇಳೆಯಲ್ಲಿ ನಾವು ಇಡುವಂತಹ ಎರಡನೇ ಹೆಜ್ಜೆ ಮಾತಿನಲ್ಲಿ ಸಂಪಾದಿಸಿದಂತೆ ಪಾಪವನ್ನು ನಾಶ ಮಾಡುವುದಕ್ಕಾಗಿ, ಹಾಗೆಯೇ ಮೂರನೇ ಹೆಜ್ಜೆ ನಾವು ದೈಹಿಕವಾಗಿ ಮಾಡಿದಂತಹ ಪಾಪದ ನಾಶಕ್ಕಾಗಿ.

ಪ್ರದಕ್ಷಿಣೆ ಹಾಕುವ ಸಂದರ್ಭದಲ್ಲಿ ನಾವು ಈ ಮೂರು ಹೆಜ್ಜೆಯನ್ನು ಇಟ್ಟ ನಂತರ ಇಡುವಂತಹ ಹೆಜ್ಜೆಯೂ ನಮ್ಮ ಪುಣ್ಯ ಸಂಪಾದನೆಗಾಗಿ ಎಂದು ನಮ್ಮ ಹಿರಿಯರು ನಂಬುತ್ತಿದ್ದರು ಆದರೆ ಈ ಪ್ರದಕ್ಷಿಣೆ ಎಂಬುದು ಹಾಕುವುದು ಯಾವುದಕ್ಕಾಗಿ ಹಾಗೂ ನಾವು ಪ್ರದಕ್ಷಿಣೆ ಹಾಕುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ಲಾಭಗಳು ದೊರೆಯುತ್ತದೆ ಅನ್ನೋದನ್ನ ತಿಳಿಯೋಣ, ಇದರಿಂದಾಗಿ ನಮಗೆ ಮಾನಸಿಕವಾಗಿಯೂ ಕೂಡ ಸಾಕಷ್ಟು ಲಾಭಗಳು ದೊರೆಯುತ್ತವೆ.

ದೇವಸ್ಥಾನದ ಗರ್ಭಗುಡಿಯ ಸುತ್ತ ಹಾಕುವ ಪ್ರದಕ್ಷಿಣೆಯ ಹಿಂದೆ ವೈಜ್ಞಾನಿಕವಾದ ಕಾರಣವೇನು ಎಂದರೆ ಈ ರೀತಿ ಪ್ರದಕ್ಷಿಣೆ ಹಾಕುವ ಸಂದರ್ಭದಲ್ಲಿ ನಾವು ನಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತೇವೆ ಆಗ ನಮ್ಮ ಏಕಾಗ್ರತೆ ವೃದ್ಧಿಸುತ್ತದೆ ಹಾಗೂ ನಾವು ಆರಾಧಿಸುವ ಮನೋಭಾವವನ್ನು ಇಟ್ಟುಕೊಂಡು ಪ್ರದಕ್ಷಿಣೆ ಹಾಕುವುದರಿಂದ ನಮ್ಮ ಮಾನಸಿಕ ತುಮುಲಗಳು ದೂರವಾಗಿ ನಾವು ಮಾನಸಿಕವಾಗಿಯೂ ಬಲಿಷ್ಠಗೊಳ್ಳುತ್ತೇವೆ.ಇನ್ನು ತುಳಸಿ ಗಿಡ ಮತ್ತು ಅರಳಿ ವೃಕ್ಷದ ಸುತ್ತ ಪ್ರದಕ್ಷಿಣೆ ಹಾಕುವುದು ಯಾವ ಕಾರಣಕ್ಕಾಗಿ ಅಂದರೆ ಈ ಗಿಡ ಮತ್ತು ಮರದ ಕೆಳಗೆ ಪ್ರದಕ್ಷಿಣೆ ಹಾಕುವುದರಿಂದ ನಮಗೆ ಶುದ್ಧ ಗಾಳಿ ದೊರೆಯುತ್ತದೆ ಸಾಕಷ್ಟು ಆಮ್ಲಜನಕ ದೊರೆತ ಕಾರಣದಿಂದಾಗಿಯೇ ನಮ್ಮ ರಕ್ತವೂ ಶುದ್ಧಿಯಾಗುತ್ತದೆ.

 

ಹಾಗೂ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ ಇದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ ಈ ಕಾರಣಕ್ಕಾಗಿಯೇ ಅರಳಿ ವೃಕ್ಷ ಮತ್ತು ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕಬೇಕು ಎಂಬ ಪದ್ಧತಿಯನ್ನು ನಮ್ಮ ಹಿರಿಯರು ಪಾಲಿಸುತ್ತಿದ್ದದ್ದು.ಈ ಕಾರಣದಿಂದಾಗಿ ನಾವು ದೇವಸ್ಥಾನಗಳಿಗೆ ಹೋದಾಗ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುವುದು ಹಾಗೂ ನಾವು ನಮ್ಮ ಮನಸ್ಸನ್ನು ಕೇಂದ್ರೀಯಗೊಳಿಸಿ ಪ್ರದಕ್ಷಿಣೆ ಹಾಕುವುದರಿಂದ ನಮ್ಮ ಬೇಸರ ದೂರವಾಗುತ್ತದೆ ಹಾಗೂ ದೇವಸ್ಥಾನಕ್ಕೆ ಹೋಗೋದ್ರಿಂದ ಏಕಾಗ್ರತೆ ಕೂಡ ವೃದ್ಧಿಸುತ್ತದೆ.

Leave a Reply

Your email address will not be published. Required fields are marked *