ಎಲೆಕೋಸು ತಿಂದರೆ ಏನಾಗುತ್ತೆ ಗೊತ್ತಾ .. ಇದು ಈ 5 ರೋಗಗಳಿಗೆ ರಾಮಬಾಣ ಅದು ಯಾವ ಯಾವ ರೋಗಗಳು ಎಂದು ತಿಳಿದುಕೊಳ್ಳಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ !!!!!

30

ನಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದರೆ ನಾವು ನಿತ್ಯ ಪೋಷಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸಬೇಕು .ಸೇವಿಸುವಂತಹ  ಆಹಾರ ಪದಾರ್ಥಗಳು ಹೇಗಿರಬೇಕು ಎಂದರೆ ಶುಚಿಯಾಗಿರಬೇಕು .

ಅದರ ಜೊತೆಯಲ್ಲಿ ಎಲ್ಲರೂ ಕೂಡ ಆಹಾರ ಪದಾರ್ಥ ರುಚಿಯಾಗಿರಬೇಕು ಎಂದು ಬಯಸುತ್ತಾರೆ ಹೆಚ್ಚು ರುಚಿ ಇರುವ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ತುಂಬಾ ಹಾನಿಯನ್ನು ಉಂಟುಮಾಡುತ್ತದೆ ಎಂಬ ಅಸಲಿ ಸತ್ಯ ಯಾರಿಗೂ ತಿಳಿದಿರುವುದಿಲ್ಲ.

ಅದರಲ್ಲೂ ಇತ್ತೀಚಿನ ದಿನಗಳಲ್ಲಂತೂ ತರಕಾರಿಯನ್ನು ತಿನ್ನದೇ ಇರುವವರೇ ಹೆಚ್ಚು ಸಣ್ಣ ಮಕ್ಕಳಿಂದ ಹಿಡಿದು ಯುವಕರವರೆಗೂ ಯಾರೂ ಕೂಡ ತರಕಾರಿಗಳನ್ನು ಹೆಚ್ಚು ಸೇವಿಸುವುದಿಲ್ಲ.

ಅದನ್ನು ಸೇವಿಸುವುದು ಒಂದು ರೀತಿ ವಿಷವನ್ನು ಸೇವಿಸಿದೆ ರೀತಿಯಲ್ಲಿ ಅವರ ಭಾವನೆ ಇರುತ್ತದೆ ಆದರೆ ತರಕಾರಿಯಲ್ಲಿರುವ ವಿಟಮಿನ್ಗಳು ಬೇರೆ ಯಾವುದರಿಂದ ನಿಮಗೆ ಸಿಗಲು ಸಾಧ್ಯವೇ ಇಲ್ಲ ಅಷ್ಟೊಂದು ವಿಟಮಿನ್ಗಳು ಹೇರಳವಾಗಿ ತರಕಾರಿಯಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ .

ಆದರೆ ಯಾವ ತರಕಾರಿಯಲ್ಲಿ ಯಾವ ರೀತಿಯ ದಂತಹ ವಿಟಮಿನ್ಗಳಿವೆ ಯಾವುದನ್ನು ಯಾವ ರೀತಿಯಲ್ಲಿ ಸೇವಿಸಬೇಕು ಎಂಬ ಅರಿವು ನಮಗಿರುವುದಿಲ್ಲ .ಆದರೆ ಈ ದಿನ ನಾವು ನಿಮಗೆ ಆ ಅರಿವನ್ನು ಮೂಡಿಸುವಲ್ಲಿ ಒಂದು ಹೆಜ್ಜೆಯನ್ನು ಇಡುತ್ತಾ ಎಲೆಕೋಸು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ .

ಎಲೆಕೋಸನ್ನು ಹೇಗೆ ತಿನ್ನಬೇಕು ಅದನ್ನು ಯಾವ ರೀತಿ ಬೇಯಿಸುವುದು ಅದರಿಂದ ಏನು ಉಪಯೋಗ ಮತ್ತು ಅದನ್ನು ಯಾವ ಸಮಯದಲ್ಲಿ ತಿನ್ನುವುದರಿಂದ ಏನೇನು ಅನುಕೂಲ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ .

ಈ ಮಾಹಿತಿ ನಿಮಗೆ ಇಷ್ಟ ಆದರೆ ನಿಮ್ಮ ಸ್ನೇಹಿತರಿಗೂ ಕೂಡ ಈ ಎಲೆ ಕೋಸಿನ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿ ಮತ್ತು ಅವರ ಆರೋಗ್ಯ ಸುಧಾರಣೆಗೆ ನೀವು ಕಾರಣರಾಗುತ್ತೀರಿ ಎಂಬುದು ನಿಮ್ಮ ಗಮನದಲ್ಲಿರಲಿ.

ಸ್ನೇಹಿತರೇ ಈ ಎಲೆಕೋಸು ಸಾಮಾನ್ಯವಾಗಿ ಎಲ್ಲ ಸಮಯದಲ್ಲೂ ಕೂಡ ನಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಆದರೆ ಇದನ್ನು ಬಳಸುವವರು ಕಡಿಮೆ ಏಕೆಂದರೆ ಇದರಲ್ಲಿ ಅಷ್ಟೊಂದು ವಿಟಮಿನ್ ಗಳಿಲ್ಲ ಇದರಿಂದ ನಮಗೆ ಏನು ಉಪಯೋಗ ಆಗುವುದಿಲ್ಲ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ.

ಈ ಎಲೆಕೋಸಿನ ಬೆಲೆ ಯಾವಾಗಲೂ ಹೆಚ್ಚಿರುವುದಿಲ್ಲ ಅತಿ ಕಡಿಮೆ ದರದಲ್ಲಿ ಜನರಿಗೆ ತಲುಪುವಂತ ತರಕಾರಿಗಳಲ್ಲಿ ಇದು ಒಂದು ಇದನ್ನು ಗೋಬಿ ಮಂಜೂರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ .ಆದರೆ ಅದರಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಅದು ದೇಹಕ್ಕೆ ಹಾನಿಕಾರಕ .

ಈ ಎಲೆಕೋಸಿನಲ್ಲಿ ಅತಿ ಹೆಚ್ಚಾಗಿ ವಿಟಮಿನ್ ಎ ಮತ್ತು ಸಿ ಇರುವುದರಿಂದ ಇದು ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ.

ಯಾರಿಗೆ ಒಣಚರ್ಮ ಇರುತ್ತದೆಯೋ ಅವರೆಲ್ಲ ನಿಯಮಿತವಾಗಿ ಈ ಎಲೆಕೋಸನ್ನು ಸೇವಿಸುತ್ತಾ ಬಂದರೆ ಸಾಧ್ಯವಾದಷ್ಟು ಬೇಗ ನಿಮ್ಮ ದೇಹದ ಚರ್ಮವೂ ಒಣ ಚರ್ಮದಿಂದ ಮುಕ್ತಿ ಪಡೆಯುವ ಎಲ್ಲ ಸಾಧ್ಯತೆಗಳು ಇದೆ .

ಈ ಎಲೆಕೋಸಿನಿಂದ ಇರುವಂತಹ ಮತ್ತೊಂದು ಪ್ರಮುಖವಾದ ಉಪಯೋಗವೆಂದರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಸ್ವಲ್ಪ ಹೆಚ್ಚು ಆಹಾರ ಸೇವಿಸಿದರೂ ಹೊಟ್ಟೆ ಬರುವ ಸಾಧ್ಯತೆ ಹೆಚ್ಚಿರುತ್ತದೆ ಹೊಟ್ಟೆ ಬಂದರೆ ಕರಗುತ್ತದೆ ಎನ್ನಬಹುದು.

ಆದರೆ ಹೊಟ್ಟೆ ಸುತ್ತ ಕೊಬ್ಬು ಸಂಗ್ರಹವಾಗುತ್ತದೆ ಈ ರೀತಿ ಕೊಬ್ಬು ಸಂಗ್ರಹವಾದಂತಹ ಸಂದರ್ಭದಲ್ಲಿ ನಿಯಮಿತವಾಗಿ ಎಲೆಕೋಸನ್ನು ತಿನ್ನುತ್ತಾ ಬರುವುದರಿಂದ ದೇಹದಲ್ಲಿ ಹೊಟ್ಟೆ ಸುತ್ತ ಇರುವ ಕೊಬ್ಬು ಕಡಿಮೆಯಾಗುತ್ತದೆ.

ಸಾಮಾನ್ಯವಾಗಿ ಈ ಎಲೆಕೋಸನ್ನು ತಿನ್ನುವ ವಿಧಾನ ತುಂಬಾ ಜನರಿಗೆ ತಿಳಿದಿರುವುದಿಲ್ಲ ಮೊದಲು ಇದನ್ನು ಕತ್ತರಿಸಿ ಬೇಯಿಸಿ ಒಂದು ಬಟ್ಟೆಯಲ್ಲಿ ಅದರ ನೀರನ್ನೆಲ್ಲಾ ಹಿಂಡಿ ಅದಾದ ನಂತರ ಇದನ್ನು ಒಗ್ಗರಣ್ಣೆ ಹಾಕಿ ತಿನ್ನಬೇಕು.

ಈ ರೀತಿ ತಿನ್ನುವುದು ದೇಹದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಮತ್ತು ಇದಕ್ಕೆ ಯಾವುದೇ ರಾಸಾಯನಿಕವನ್ನು ಸೇರಿಸಿ ತಿನ್ನಬಾರದು ಧನ್ಯವಾದಗಳು.

LEAVE A REPLY

Please enter your comment!
Please enter your name here