ಹೆಣ್ಣು ಮದುವೆಯಾದ ನಂತರ ಆಕೆಯ ಜೀವನ ಒಂದು ಹಂತದಲ್ಲಿ ಬದಲಾಗುತ್ತದೆ ಇನ್ನು ಆಕೆ ತಾಯಿ ಪಟ್ಟವನ್ನು ಪಡೆದುಕೊಂಡಾಗ ಈ ಸಮಾಜದಲ್ಲಿ ಆಕೆಯ ಜೀವನ ಮತ್ತೊಂದು ಹಂತದಲ್ಲಿ ಬದಲಾಗುತ್ತದೆ ಆಗ ಆಕೆಗೆ ತನ್ನ ಹೆಣ್ತನದ ಸಂಪೂರ್ಣವಾದ ತೃಪ್ತಿ ಆಕೆಗೆ ಆ ಹಂತದಲ್ಲಿ ಸಿಗುವುದು ಇನ್ನೂ ತಾಯಿ ಅಂದರೆ ಆಕೆಯನ್ನು ವರ್ಣಿಸಲು ಪದಗಳು ಸಾಲದು .

ಒಂಬತ್ತು ತಿಂಗಳು ಮಗುವನ್ನು ತನ್ನ ಹೊಟ್ಟೆಯಲ್ಲಿ ಹೆತ್ತು ಹೊತ್ತು ಜನ್ಮ ಕೊಡುವ ತಾಯಿಯ ಋಣವನ್ನು ಅದೆಷ್ಟು ಜನ್ಮ ಹುಟ್ಟಿ ಬಂದರೂ ಕೂಡ ತೀರಿಸೋಕೆ ಸಾಧ್ಯಾನೇ ಇಲ್ಲ , ಹೆಣ್ಣು ಇನ್ನೇನು ಗರ್ಭವತಿಯಾದಳು ಅಂದ ಕೂಡಲೇ ಆಕೆಗೆ ಹೆಚ್ಚು ಬಯಕೆ ಯಾಗುವುದು ತನ್ನ ಗಂಡ ತನ್ನ ಜೊತೆ ಇರಬೇಕು ಅನ್ನೋ ಒಂದು ಹೆಚ್ಚು ಆಸೆ ಆಕೆಯಲ್ಲಿರುತ್ತದೆ .

ಹಾಗೆಯೇ ಆಕೆ ಮಾತ್ರ ಮಗುವನ್ನು ಹೊತ್ತು ಹೆರುತ್ತಾಳೆ ಅಂದರೆ ಆ ಮಗು ಅವಳಿಗೆ ಮಾತ್ರ ಸೇರಿದ್ದಲ್ಲ ಆ ಮಗುವಿನ ಜವಾಬ್ದಾರಿ ತಂದೆಗೂ ಕೂಡ ಇರುತ್ತದೆ ಹಾಗೆ ಯಾವಾಗ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಆಗ ತಂದೆಯು ಕೂಡ ಆ ಹೆಣ್ಣಿನೊಂದಿಗೆ ಇದ್ದು ಪ್ರತಿ ಹೆಜ್ಜೆಯಲ್ಲಿಯೂ ಆಕೆಗೆ ಕಾವಲಿರಬೇಕು ಹಾಗೆಯೇ ಅದೊಂದನ್ನು ಮಾತ್ರ ಹೆಣ್ಣು ಆ ಗರ್ಭಾವಸ್ಥೆಯಲ್ಲಿ ಗಂಡನಿಂದ ಬಯಸೋದು .

ಹೆಣ್ಣು ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಗಂಡನಿಂದ ಬಯಸುವಂತಹ ವಿಚಾರಗಳ ಬಗ್ಗೆ ನಾವು ಈ ದಿನದ ಲೇಖನದಲ್ಲಿ ತಿಳಿಯೋಣ ಪ್ರತಿಯೊಬ್ಬ ತಂದೆ ತಾಯಿಗೂ ಈ ಮಾಹಿತಿ ತುಂಬಾನೇ ಉಪಯುಕ್ತವಾದುದು ಆದ್ದರಿಂದ ಸಂಪೂರ್ಣ ಮಾಹಿತಿಯನ್ನು ತಿಳಿದು ಈ ಗರ್ಭಾವಸ್ಥೆಯಲ್ಲಿ ನಿಮ್ಮ ಪತ್ನಿಗೆ ಕವಲಾಗಿರಿ .

ಮೊದಲನೆಯದ್ದು ಆಕೆಗೆ ಆಸರೆಯಾಗಬೇಕು ಯಾರಾದರೂ ಬೇಕು ಅನ್ನೋ ಒಂದು ಹಂಬಲ ಆಕೆಯಲ್ಲಿ ಆ ಸಂದರ್ಭದಲ್ಲಿ ಹೆಚ್ಚಾಗಿರುತ್ತದೆ ಆಗ ಗಂಡ ತನ್ನ ಪತ್ನಿಯನ್ನು ತುಂಬಾನೇ ಜೋಪಾನವಾಗಿ ನೋಡಿಕೊಳ್ಳುವುದರ ಜೊತೆಗೆ ಆಕೆಯಲ್ಲಿ ಆ ಸ್ಥಿತಿಯಲ್ಲಿದ್ದಾಗ ಸಾಕಷ್ಟು ಹಾರ್ಮೋನ್ಸ್ ಗಳು ಆಕೆಯಲ್ಲಿ ಉತ್ಪತ್ತಿಯಾಗುತ್ತಿರುತ್ತದೆ ಆಗ ಆಕೆ ಕೋಪಗೊಳ್ಳುವುದು ಅಥವಾ ಬೇಸರದಲ್ಲಿ ಇರಬಹುದ ಅಂತಹ ಸನ್ನಿವೇಶಗಳಲ್ಲಿ ಗಂಡ ಆಕೆಗೆ ಆಸರೆಯಾಗಿ ಆಕೆಯ ನೋವುಗಳನ್ನು ಹಂಚಿಕೊಳ್ಳಬೇಕು ಆಕೆ ಕೋಪಗೊಂಡು ಅಂತ ಆಕೆಯ ಮೇಲೆ ಪತಿ ಕೂಡಗೊಳ್ಳಬಾರದು .

ಆರೋಗ್ಯಕರ ಗರ್ಭಧಾರಣೆ …. ಆರೋಗ್ಯಕರವಾದ ಗರ್ಭಧಾರಣೆಗಾಗಿ ಪತಿ ಪತ್ನಿಯ ಆರೋಗ್ಯದ ಕಡೆ ಹೆಚ್ಚು ಗಮನ ವಹಿಸಬೇಕು ಹಾಗೂ ತಿಂಗಳಿಗೊಮ್ಮೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಕೆಯ ಚಿಕಿತ್ಸೆಯ ಬಗ್ಗೆ ಹೆಚ್ಚು ಗಮನವನ್ನು ವಹಿಸಬೇಕು ಮತ್ತು ಆಕೆಯ ಬಯಕೆಗಳನ್ನು ತೀರಿಸಬೇಕು .

ಆರೋಗ್ಯಕರ ಮಗುವಿಗಾಗಿ …..
ಆರೋಗ್ಯಕರ ಮಗುವಿಗಾಗಿ ಪತ್ನಿ ಆರೋಗ್ಯದ ಬಗ್ಗೆ ಪತಿ ಹೆಚ್ಚು ಗಮನವನ್ನು ವಹಿಸಬೇಕು ಹಾಗೂ ಮಗುವಿನ ಉತ್ತಮ ಆರೋಗ್ಯ ಕಾಗೆ ಮೊದಲು ತಾಯಿಯ ಆರೋಗ್ಯವನ್ನು ಉತ್ತಮವಾಗಿರಬೇಕು ಆದ್ದರಿಂದ ಪತಿಯಾದವನು ಪತ್ನಿಯ ಆರೋಗ್ಯದ ಕಡೆ ಹೆಚ್ಚು ಗಮನವನ್ನು ವಹಿಸಿದರೆ ಆರೋಗ್ಯಕರ ಮಗುವನ್ನು ಪಡೆಯಬಹುದು .

ಒಂಬತ್ತು ತಿಂಗಳು ತಮಾಷೆ ಏನೂ ಅಲ್ಲ ….
ಉದಾಹರಣೆಯೊಂದಿಗೆ ಈ ವಿಚಾರವನ್ನು ತಿಳಿಯೋಣ ಕೆಲವೊಮ್ಮೆ ನಾವು ಒಂದು ಕೆಜಿ ಕಲ್ಲನ್ನು ಎತ್ತಿಕೊಳ್ಳುವುದಕ್ಕೆ ಕಷ್ಟ ಪಡುತ್ತೇವೆ ಆದರೆ ತಾಯಿಯಾದವಳು ಒಂಬತ್ತು ತಿಂಗಳು ತನ್ನ ಕಂದನನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಜೋಪಾನ ಮಾಡುತ್ತಾಳೆ ಈ ಸಂದರ್ಭದಲ್ಲಿ ಆಕೆಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುವುದು ಹಾಗೆಯೇ ಆಕೆಯ ನೋವುಗಳನ್ನು ಹಂಚಿಕೊಳ್ಳುವುದು ಆಕೆ ಅಡುಗೆ ಮಾಡುವಾಗ ಆಕೆಗೆ ಸಹಾಯಹಸ್ತವನ್ನು ನೀಡುವುದು ಹೀಗೆ ಪತಿ ತನ್ನ ಪತ್ನಿಗೆ ಮನೆ ಕೆಲಸಗಳಲ್ಲಿ ಸಹಭಾಗಿ ಆದರೆ ಆಕೆಗೂ ಕೂಡ ತನ್ನ ತಾಯ್ತನದ ಅನುಭವ ತುಂಬಾನೇ ಚೆನ್ನಾಗಿರುತ್ತದೆ .

ಇಷ್ಟೇ ಅಲ್ಲದೆ ಹೆಣ್ಣು ತನ್ನ ಗರ್ಭಾವಸ್ಥೆಯಲ್ಲಿ ತನ್ನ ಪತಿ ತನ್ನ ಬಳಿ ಚೆನ್ನಾಗಿ ಮಾತನಾಡಬೇಕು ಹಾಗೆ ತನ್ನನ್ನು ಮಗುವಿನ ಹಾಗೆ ಕೇರ್ ಮಾಡಬೇಕು ಜೋಪಾನ ಮಾಡಬೇಕು ಅನ್ನೋ ಆಸೆ ಹಂಬಲಗಳನ್ನು ಹೆಚ್ಚು ಎಕ್ಸ್ಪೆಕ್ಟ್ ಮಾಡುತ್ತಿರುತ್ತಾಳೆ .

LEAVE A REPLY

Please enter your comment!
Please enter your name here