Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ 12 ಕಾಯಿಲೆಗಳಿಂದ ನೀವೇನಾದರೂ ದೂರ ವಾಗಬೇಕಾದರೆ ಮಲೆನಾಡಿನಲ್ಲಿ ಸಿಗುವಂತಹ ಈ ಹಣ್ಣನ್ನು ತಿನ್ನಬೇಕು

ನೀವೇನಾದರೂ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೆ ನಿಮ್ಮ ಮನೆಯ ಮುಂದೆ ಅಥವಾ ನಿಮ್ಮ ಹಳ್ಳಿಯಲ್ಲಿ ಗೇರುಮರಗಳು ಕಂಡೆ ಕಾಣಿಸುತ್ತವೆ ಅದರಲ್ಲೂ ಮಲೆನಾಡಿನಲ್ಲಿ ಯಥೇಚ್ಛವಾಗಿ  ಗೇರು ಮರಗಳನ್ನು ನೀವು ನೋಡಬಹುದು,

ಆದರೆ ನಾವು ನೀವು ಎಲ್ಲರೂ ಗೇರು ಮರವನ್ನು ಬಳಕೆ ಮಾಡುವುದು ಕೇವಲ ಗೋಡಂಬಿ ಗೋಸ್ಕರ, ಆದರೆ ಗೋಡಂಬಿಯನ್ನು ತನ್ನೊಂದಿಗೆ ಬೆಳೆಸುವಂತಹ ಹಣ್ಣಿನ ಮಹತ್ವ ವನ್ನು ನೀವೇನಾದರೂ ಸ್ವಲ್ಪ ಹೊತ್ತು ಕಂಡುಕೊಂಡರೆ ನಿಜವಾಗಲೂ ಈ ಹಣ್ಣಿನಲ್ಲಿ ಕೂಡ ಈ ತರದ ಆರೋಗ್ಯದ ಗುಣಗಳು ಇದೆಯಾ ಎಂದು ನಿಮಗೆ ಅನಿಸುತ್ತದೆ.

ಹಾಗಾದರೆ ಬನ್ನಿ ಇವತ್ತು ಗೇರು ಹಣ್ಣಿನ ಮೂಲಕ ಈ 12  ಕಾಯಿಲೆಗಳಿಗೆ ಇದು ಒಂದು ಔಷಧಿ ರೂಪವಾಗಿ ಬಳಕೆ ಮಾಡಿಕೊಳ್ಳಬಹುದು ಎಂದು ಇವತ್ತು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇವೆ.

ನಾವು ಹೇಳುವ ಪ್ರಕಾರ ಕೆಳಗೆ ಕೊಟ್ಟಿರುವಂತಹ ಕಾಯಿಲೆಗಳನ್ನು ಗೇರು ಹಣ್ಣು ಗಳು ತಿನ್ನುವುದರ ಮುಖಾಂತರ ನೀವು ವಾಸಿ ಮಾಡಿಕೊಳ್ಳಬಹುದು ಹಾಗೂ ನಿಮ್ಮ ಮಕ್ಕಳಿಗೆ ಇರುವಂತಹ ತೊಂದರೆಗಳನ್ನು ನೀವು ಕಡಿಮೆ ಮಾಡಿಕೊಳ್ಳಬಹುದು.

ಮಕ್ಕಳ ಹೊಟ್ಟೆಯಲ್ಲಿ ಅಥವಾ  ಹೊಟ್ಟೆಯಲ್ಲಿ ಜಂತುಹುಳುಗಳ ಸಮಸ್ಯೆ ಹೆಚ್ಚಾಗಿ ಇದ್ದಲ್ಲಿ ನೀವು ಗೇರು ಹಣ್ಣನ್ನು ತಿನ್ನುವುದರಿಂದ ಹಾಗೂ ಅದರಲ್ಲಿ ಇರುವಂತಹ ಹೆಚ್ಚಿನ ಆಮ್ಲದಿಂದ ಜಂತುಹುಳುಗಳು ಹೊಟ್ಟೆಯಲ್ಲಿ ಸತ್ತು ಹೋಗುತ್ತವೆ.

ಹಾಗೆ ನಿಮಗೇನಾದರೂ ಹಲ್ಲಿನ ಸಮಸ್ಯೆ ಅಥವಾ ಬಾಯಿಯಲ್ಲಿ ಅವಾಗವಾಗ ಏನಾದರೂ ಹುಣ್ಣುಗಳು ಆಗುತ್ತ ಇದ್ದರೆ ನೀವು ಗೇರು ಹಣ್ಣನ್ನು ನೀಡುವುದರ ಮುಖಾಂತರ ಈ ಸಮಸ್ಯೆಗೆ ಕಡಿವಾಣ ಹಾಕಬಹುದು.  ಯಾಕೆ ಯಾಕೆಂದರೆ ಗೇರು ಹಣ್ಣಿನಲ್ಲಿ ಇರುವಂತಹ ಬ್ಯಾಕ್ಟೀರಿಯ ನಿರೋಧಕ ಶಕ್ತಿ ನಿಮ್ಮ ಬಾಯಿಯಲ್ಲಿ ಇರುವಂತಹ ಹುಣ್ಣುಗಳ ಹಾಗೂ ನಿಮ್ಮ ಬಾಯಿಯಲ್ಲಿ ಇರುವಂತಹ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ.

ಗೇರು ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಎಂದು ನಿಮ್ಮ ದೇಹದಲ್ಲಿ ಇರುವಂತಹ ಮೂಳೆಗಳ ಸವೆತ ವನ್ನು ಕೂಡ ಕಡಿಮೆ ಮಾಡಬಹುದು ಏಕೆಂದರೆ ಇದರಲ್ಲಿ ಇರುವಂತಹ ವಿಟಮಿನ್ ಬಿ ಸಿ ಹಾಗೂ ಬಿಸಿ ಎನ್ನುವಂತಹ  ವಿಟಮಿನ್ ಗಳು ಹೆಚ್ಚಾಗಿ ಇದರಲ್ಲಿ ಇರುತ್ತವೆ. ಗೇರು ಹಣ್ಣು ತಿನ್ನುವುದರಿಂದ ನಿಮ್ಮ ಕಣ್ಣುಗಳಿಗೆ ಕೂಡ ತುಂಬಾ ಒಳ್ಳೆಯದಾಗುತ್ತದೆ ಎಂದು ವೈಜ್ಞಾನಿಕವಾಗಿ ಹೇಳುತ್ತಾರೆ.

ಗೇರು ಹಣ್ಣು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಸಕ್ಕರೆಯಂಶವನ್ನು ಕಡಿಮೆ ಮಾಡಬಹುದು ಹಾಗೆ ನಿಮ್ಮ ದೇಹದಲ್ಲಿ ಏನಾದರೂ ಕೆಂಪು ರಕ್ತದ ಕಣಗಳು ಕಡಿಮೆ ಇದ್ದಲ್ಲಿ ಗೇರು ಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಗುಂಪು ಹೆಚ್ಚಾಗಿ ಆಗುತ್ತದೆ. ಹಾಗೂ ರಕ್ತದ ಸಮಸ್ಯೆ ಹಾಗೂ ಅದರ ಸಂಬಂಧಿ ಕಾಯಿಲೆಗಳಿಂದ ನೀವು ದೂರ ಇರಬಹುದು. ಅದಲ್ಲದೆ ಗೇರು ಹಣ್ಣನ್ನು ತಿನ್ನುವುದರಿಂದ ನಿಮ್ಮ ಹೃದಯಕ್ಕೆ ಸಂಬಂಧಿಸಿದ ಅಂತಹ ಕಾಯ್ದೆಗಳಿಂದ ದೂರವಿರಲು ತುಂಬಾ ಪ್ರಯೋಜನಕಾರಿ ಆಗುತ್ತದೆ. ಅದಲ್ಲದೆ ನಿಮ್ಮ ಹೃದಯದ ಸ್ನಾಯುಗಳ ಬಲವನ್ನು ಕೂಡ ಹೆಚ್ಚಾಗಿ ಮಾಡುತ್ತದೆ.

Leave a Reply

Your email address will not be published. Required fields are marked *