ನಮಸ್ಕಾರ ಸ್ನೇಹಿತರೆ ,ನಾನು ಇಂದು ನಿಮಗೆ ಹೇಳುವ ಮಾಹಿತಿಯಲ್ಲಿ ನಿಮಗೆ ಇಷ್ಟವಾದ ದೇವರಿಗೆ ಯಾವ ರೀತಿಯಾದ ಹೂವುಗಳನ್ನು ಪೂಜೆ ಮಾಡುವಾಗ ಇಡಬಾರದು.ಹಾಗೆಯೇ ಯಾವ ರೀತಿಯ ಹೂವುಗಳನ್ನು ಪೂಜೆ ಮಾಡುವಾಗ ದೇವರಿಗೆ ಇಟ್ಟರೆ ನಿಮ್ಮ ಕೋರಿಕೆಗಳು ಈಡೇರುತ್ತವೆ ಎನ್ನುವ ಮಾಹಿತಿಯನ್ನು ಇಂದಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ನಾನು ತಿಳಿಸಿಕೊಡುತ್ತೇನೆ.
ಸಾಮಾನ್ಯವಾಗಿ ಎಲ್ಲರೂ ಕೂಡ ಅವರವರ ಇಷ್ಟ ದೇವರನ್ನು ಎಲ್ಲ ರೀತಿಯ ಹೂಗಳಿಂದ ಪೂಜೆಯನ್ನು ಮಾಡುತ್ತಾರೆ ಆದರೆ ಕೆಲವೊಂದು ಹೂಗಳಿಂದ ನಿಮ್ಮಷ್ಟು ದೇವರಿಗೆ ಪೂಜೆಗಳನ್ನು ಮಾಡಿದರೆ ನಿಮ್ಮ ದೇವರಿಗೆ ಪೂಜೆ ಇಷ್ಟವಾಗುವುದಿಲ್ಲ.ಇದರಿಂದ ದೇವರ ಕೋಪಕ್ಕೆ ಗುರಿ ಆಗುತ್ತೀರಾ ನಂಬಿಕೆ ಇದೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಪೂಜೆ ಮಾಡುವಾಗ ಎಲ್ಲವುಗಳನ್ನು ಅಥವಾ ಹೂವಿನ ಮಾಲೆಯನ್ನು ಮಾಡಿ ಪೂಜೆಯನ್ನು ಮಾಡುತ್ತಾರೆ.
ಆದರೆ ಕೆಲವೊಂದು ದೇವರಿಗೆ ಈ ರೀತಿಯಾದ ಹೂವುಗಳನ್ನು ಪೂಜೆ ಮಾಡುವಾಗ ಅವುಗಳನ್ನು ಸಮರ್ಪಿಸಿದರೆ ದೇವರಿಗೆ ಇಷ್ಟವಾಗುವುದಿಲ್ಲ ಎಂಬ ನಂಬಿಕೆಯನ್ನು ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ ಹೀಗೆ ಯಾವ ಹೂವುಗಳನ್ನು ಯಾವ ದೇವರಿಗೆ ಇಡಬಾರದು ಎಂಬ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ನಾನು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.ಸಾಮಾನ್ಯವಾಗಿ ಮೊದಲಿಗೆ ಪೂಜೆ ಮಾಡುವಾಗ ಯಾವಾಗಲೂ ಎಲ್ಲರೂ ಗಣಪತಿ ದೇವರನ್ನು ಆರಾಧನೆ ಮಾಡುತ್ತಾರೆ. ಹೀಗೆ ಗಣಪತಿ ದೇವರನ್ನು ಆರಾಧನೆಯನ್ನು ಮಾಡುವಾಗ ಯಾವುದೇ ಕಾರಣಕ್ಕೂ ಗಣಪತಿ ದೇವರಿಗೆ ತುಳಸಿಯಿಂದ ಪೂಜೆಯನ್ನು ಮಾಡಬಾರದು.
ಹೀಗೆ ಮಾಡಿದರೆ ಗಣಪತಿ ದೇವರಿಗೆ ತುಳಸಿಯಿಂದ ಪೂಜೆ ಮಾಡುವುದು ಇಷ್ಟವಾಗುವುದಿಲ್ಲ ಹಾಗಾಗಿ ನೀವು ಪೂಜೆ ಮಾಡುವಾಗ ಗಣಪತಿ ದೇವರಿಗೆ ಯಾವುದೇ ಕಾರಣಕ್ಕೂ ತುಳಸಿ ಎಲೆಗಳನ್ನು ಬಳಸಿ ಪೂಜೆಯನ್ನು ಮಾಡಬೇಡಿ.ಸಾಮಾನ್ಯವಾಗಿ ಎಲ್ಲರೂ ಕೂಡ ಮಹಾಶಿವನಿಗೆ ಆರಾಧನೆಯನ್ನು ಮಾಡಿ ಪೂಜೆಯನ್ನು ಮಾಡುತ್ತಾರೆ ಹೀಗೆ ಮಹಾಶಿವನಿಗೆ ಪೂಜೆಯನ್ನು ಮಾಡುವಾಗ ಸುಗಂಧಭರಿತವಾದ ಹೂವುಗಳನ್ನು ಇಟ್ಟು ಯಾವುದೇ ಕಾರಣಕ್ಕೂ ಪೂಜೆ ಮಾಡಬೇಡಿ.
ಹೀಗೆ ಮಾಡಿದರೆ ಮಹಾಶಿವನ ಕೆಂಗಣ್ಣಿಗೆ ಗುರಿಯಾಗುತೀರಾ. ಆದರೆ ಮಹಾಶಿವರಾತ್ರಿಯ ದಿನ ಮಹಾಶಿವನಿಗೆ ಯಾವ ಹೂಗಳನ್ನು ಇಟ್ಟು ಪೂಜೆ ಮಾಡಿದರೂ ಕೂಡ ಮಹಾಶಿವನು ಕೋಪಕ್ಕೆ ಒಳಗಾಗುವುದಿಲ್ಲ.ಅದರಲ್ಲಿ ಮುಖ್ಯವಾಗಿ ಕೇದಿಗೆ ಹೂವಿನಿಂದ ನೀವು ಶಿವನನ್ನು ಪೂಜೆ ಮಾಡಿದರೆ ಶಿವನ ಕೆಂಗಣ್ಣಿಗೆ ತುತ್ತಾಗುತ್ತೀರಿ .ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ ಆದರೆ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಉಮ್ಮತ್ತಿ ಹೂಗಳನ್ನು ಇಟ್ಟು ಪೂಜೆ ಮಾಡಿದರೆ ಲಕ್ಷ್ಮಿ ದೇವಿಗೆ ಈ ಪೂಜೆಯು ಇಷ್ಟವಾಗುವುದಿಲ್ಲ ಅಂದ್ರೆ ಹೂವುಗಳು ಇಷ್ಟವಾಗುವುದಿಲ್ಲ.
ಆದ್ದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಹಾಗೆಯೇ ಅಮ್ಮನವರ ದುರ್ಗಾದೇವಿಯ ಯಾವಾಗಲೂ ಗರಿಕೆಯಿಂದ ಪೂಜೆಯನ್ನು ಮಾಡಲೇಬೇಡಿ.ಹಾಗೆಯೇ ಸೂರ್ಯದೇವನಿಗೆ ಬಿಲ್ವಾರ್ಚನೆ ಯನ್ನು ಮಾಡಿದರೆ ಸೂರ್ಯನಿಗೆ ಇಷ್ಟವಾಗುವುದಿಲ್ಲ ಹಾಗಾಗಿ ಸೂರ್ಯದೇವನಿಗೆ ಈ ರೀತಿಯಾಗಿ ಬಿಲ್ವಾರ್ಚನೆ ನೀವು ಮಾಡಲು ಹೋಗಬೇಡಿ.
ಕಾಲಭೈರವನಿಗೆ ಯಾವುದೇ ಕಾರಣಕ್ಕೂ ಮಲ್ಲಿಗೆ ಹೂವಿನ ಹಾರವನ್ನು ಮಾಡಿ ಪೂಜೆಯನ್ನು ಮಾಡಬೇಡಿ ಇದರಿಂದ ಬೈರವನ ಕೋಪಕ್ಕೆ ನೀವು ಒಳಗಾಗುತ್ತೀರ. ಹೀಗೆ ನೀವು ಇಷ್ಟವಾದ ದೇವರಿಗೆ ಈ ರೀತಿಯಾದ ಹೂವುಗಳನ್ನು ಬಿಟ್ಟು ಬೇರೆ ರೀತಿಯಾದ ಅವುಗಳನ್ನು ನೀವು ಇಟ್ಟು ಪೂಜೆ ಮಾಡಿದ್ದೆ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತವೆ .ನೊಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.