ಸಹಜವಾಗಿ ಆರೋಗ್ಯ ವೃದ್ಧಿಸುತ್ತದೆ ಎಂದು ನಾವುಗಳು ಹಣ್ಣುಗಳನ್ನು ತಿನ್ನುತ್ತೇವೆ ಆದರೆ ನಾವು ಹಣ್ಣುಗಳನ್ನ ತಿನ್ನುವ ಮೊದಲು ಹಣ್ಣುಗಳನ್ನ ತಿನ್ನುವ ವಿಧಾನವನ್ನು ಕೂಡ ಸರಿಯಾದ ಕ್ರಮದಲ್ಲಿ ತಿಳಿದುಕೊಂಡಿರಬೇಕಾಗುತ್ತದೆ ಆಗ ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಾಧ್ಯ .
ಹಾಗಾದರೆ ಹಣ್ಣುಗಳನ್ನು ತಿನ್ನುವ ಸರಿಯಾದ ಕ್ರಮ ಹೇಗೆ ಎಂಬುದನ್ನು ಹೇಳುವುದಾದರೆ ಈ ದಿನದ ಮಾಹಿತಿಯಲ್ಲಿ ನಿಮಗೆ ಈ ಹಣ್ಣನ್ನು ತಿನ್ನುವ ಕ್ರಮ ಹೇಗೆ ಹಾಗೂ ಹಣ್ಣುಗಳನ್ನು ತಿಂದ ನಂತರ ನೀರನ್ನು ಕುಡಿಯಬೇಕು ಇಲ್ಲವೋ ಅನ್ನೋದನ್ನು ಕೂಡ ನಾವು ನಿಮಗೆ ತಿಳಿಸಿಕೊಡುತ್ತವೆ .
ಈ ಮಾಹಿತಿ ಉತ್ತಮ ಆರೋಗ್ಯಕ್ಕಾಗಿ ಆದ್ದರಿಂದ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಇನ್ನೂ ಇಂತಹ ಅನೇಕ ಆರೋಗ್ಯಕರ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ .
ಹಣ್ಣುಗಳನ್ನು ತಿಂದು ನೀರನ್ನು ಕುಡಿಯಬೇಕು ಬೇಡವೋ ? ಈ ಪ್ರಶ್ನೆಯನ್ನು ಎಂದಾದರೂ ನೀವು ನಿಮಗೆ ಹೇಳಿಕೊಂಡಿದ್ದೀರಿ.
ಅಥವಾ ಇಂತಹ ಸಂಶಯ ನಿಮ್ಮಲ್ಲಿ ಎಂದಾದರೂ ಬಂದಿದೆಯಾ ಹಾಗಾದರೆ ನಿಮ್ಮ ಆ ಸಂಶಯಕ್ಕೆ ಈ ದಿನ ನಾವು ಪರಿಹಾರವನ್ನು ತಿಳಿಸುತ್ತೇವೆ . ತಜ್ಞರು ಹೇಳುವ ಪ್ರಕಾರ ನಮ್ಮ ದೇಹಕ್ಕೆ ಹಣ್ಣುಗಳು ಹೆಚ್ಚು ಅವಶ್ಯಕವಾಗಿರುತ್ತದೆ ಯಾಕೆಂದರೆ ಈ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಮಿನರ್ ಪ್ರೊಟೀನ್ಸ್ ಗಳು ಹೇರಳವಾಗಿ ದೊರೆಯುತ್ತದೆ ಆದ್ದರಿಂದ ಹಣ್ಣುಗಳನ್ನು ತಿನ್ನುವುದರಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ .
ಅತಿಯಾದರೆ ಅಮೃತವೂ ಕೂಡ ವಿಷ ಎಂಬ ಮಾತನ್ನು ಕೇಳಿರುತ್ತೀರಿ ಹಾಗೆಯೇ ಅಣ್ಣನಾಗಿ ನೀರನ್ನಾಗಲಿ ಹೆಚ್ಚು ಸೇವಿಸಿದರೆ ಅದು ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು ಆದ್ದರಿಂದ ನಾವು ಪ್ರತಿದಿನ ಎಷ್ಟು ನೀರನ್ನು ಸೇವಿಸಬೇಕು ಅಥವ ಯಾವ ಕ್ರಮದಲ್ಲಿ ಹಣ್ಣನ್ನು ತಿನ್ನಬೇಕು ಅನ್ನೋದನ್ನು ತಿಳಿದಿರಬೇಕಾಗುತ್ತದೆ .
ಮಾಹಿತಿಗೆ ಬರುವುದಾದರೆ ಉತ್ತಮ ಜೀರ್ಣಕ್ಕಾಗಿ ಊಟವಾದ ಬಳಿಕ ಕೆಲವೊಂದು ಹಣ್ಣುಗಳನ್ನು ಸೇವಿಸುತ್ತೇವೆ ಹಾಗೆ ಊಟವಾದ ಬಳಿಕ ಹೇಗೆ ಹಣ್ಣನ್ನು ಸೇವಿಸುತ್ತೇವೆ ಹಾಗೆ ಹಣ್ಣುಗಳನ್ನು ತಿಂದ ನಂತರ ನೀರನ್ನು ಸೇವಿಸಬಾರದು ಇದರಿಂದ ಸಮಸ್ಯೆಗಳು ಬರುತ್ತವೆ .
ಅದು ಹೇಗೆ ಅಂದರೆ ಊಟವಾದ ಬಳಿಕ ಸೌತೆಕಾಯಿ ಅಥವಾ ಬಾಳೆಹಣ್ಣು ಸೇಬು ಇಂತಹ ಹಣ್ಣುಗಳನ್ನು ಸೇವಿಸುತ್ತೇವೆ ಆಗ ನಮ್ಮ ಜಠರದಲ್ಲಿ ಈ ಹಣ್ಣಿನಲ್ಲಿರುವ ಆಮ್ಲದ ಅಂಶವು ಇರುತ್ತದೆ ನಾವು ಹಣ್ಣನ್ನು ತಿಂದ ನಂತರ ನೀರನ್ನು ಕುಡಿದರೆ ನೀರು ಹಣ್ಣಿನ ಆಮ್ಲದ ಜೊತೆ ಸೇರಿ ನಮ್ಮ ಪಚನ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ .
ಕೆಲವೊಮ್ಮೆ ಊಟವಾದ ಬಳಿಕ ಕಲ್ಲಂಗಡಿ ಹಣ್ಣು ಅಥವಾ ಸೌತೆಕಾಯಿ ಅನ್ನು ತಿಂದ ನಂತರ ನೀರನ್ನು ಕುಡಿದರೆ ಲೂಸ್ ಮೋಷನ್ ಆಗುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ .ಇನ್ನು ಈ ರೀತಿಯ ಹಣ್ಣುಗಳನ್ನು ತಿಂದು ನೀರನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಅಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ ಅದರಿಂದ ಹಣ್ಣುಗಳನ್ನು ತಿನ್ನುವ ಕ್ರಮ ಹೇಗೆ ಎಂದರೆ ಊಟವಾದ ಬಳಿಕ ಹತ್ತು ನಿಮಿಷಗಳ ನಂತರ ಹಣ್ಣನ್ನು ತಿನ್ನಬೇಕು ನಂತರ ಸ್ವಲ್ಪ ಸಮಯದ ಬಳಿಕ ನೀರನ್ನು ಕುಡಿದರೆ ಒಳ್ಳೆಯದು .
ಹಾಗೆಯೇ ದಿನಕ್ಕೆ ಎರಡರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು ಇದಕ್ಕಿಂತ ಹೆಚ್ಚು ನೀರನ್ನು ಕುಡಿದರೆ ದೇಹದಲ್ಲಿರುವ ಸೋಡಿಯಂ ಅಂಶವು ಕಡಿಮೆಯಾಗಿ ಇನ್ನೂ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು .